Blog Archive

ಯುವಕರ ದಾರಿ ತಪ್ಪಿಸುತ್ತಿದೆ ಬಿಜೆಪಿ: ಬಸನಗೌಡ

Thursday, February 1st, 2018
basangowda

ಉಡುಪಿ: ರಾಜ್ಯದಲ್ಲಿ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಬಿಜೆಪಿ ಪಕ್ಷವು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಕೋಮು ಗಲಭೆ ಸೃಷ್ಟಿಸಿ ಯುವಕರನ್ನು ದಾರಿ ತಪ್ಪಿಸುತ್ತಿದೆ. ಇದಕ್ಕೆ ತಕ್ಕ ಪಾಠವನ್ನು ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್‌ ಕಲಿಸಲಿದೆ ಎಂದು ಕರ್ನಾ ಟಕ ಪ್ರದೇಶ ಯುವಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಬಸನಗೌಡ ಬಾದ್ರಳ್ಳಿ ಅವರು ಹೇಳಿದರು. ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಉಡುಪಿಯ ಕಿದಿಯೂರು ಹೊಟೇಲ್‌ ಶೇಷಶಯನ ಸಭಾಂಗಣದಲ್ಲಿ ಜ. 31ರಂದು ನಡೆದ “ಯುವ ದೃಷ್ಟಿ’ ಮಂಗಳೂರು ವಲಯ ಯುವಕಾಂಗ್ರೆಸ್‌ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು […]

ಸಮಗ್ರ ಮೀನುಗಾರಿಕಾ ನೀತಿಗೆ ಒತ್ತಾಯ

Tuesday, January 30th, 2018
mogaveera

ಉಡುಪಿ: ಮತ್ಸ್ಯ ಸಂಪತ್ತು ನಾಶವಾಗುತ್ತಿದೆ. ಮೀನುಗಾರಿಕ ಮುಖಂಡರೆಲ್ಲಾ ಒಂದಾಗಿ ಚರ್ಚಿಸಿ, ಬೇಡಿಕೆ ಪಟ್ಟಿಯನ್ನು ಒಂದು ವಾರದ ಒಳಗೆ ಸಿದ್ಧಪಡಿಸಿ ಅದನ್ನು ಮುಂದಿನ ಬಜೆಟ್‌ನಲ್ಲಿ ಮೀನುಗಾರಿಕಾ ಸಮಗ್ರ ನೀತಿಯಾಗಿ ಘೋಷಿಸಲು ಮುಖ್ಯಮಂತ್ರಿ ಹಾಗೂ ಮೀನುಗಾರಿಕ ಸಚಿವರಿಗೆ ಒತ್ತಾಯ ಮಾಡಲಾಗುತ್ತದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ.ಶಂಕರ್‌ ಭರವಸೆ ನೀಡಿದ್ದಾರೆ. ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮತ್ತು ಮೋಗವೀರರ ಯುವ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಗುರಿಕಾರಿಕ ಸಮಾವೇಶ, ಗೌರವಧನ ವಿತರಣೆ ಹಾಗೂ ಮತ್ಸ್ಯ ಜ್ಯೋತಿ ಮೀನುಗಾರ ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮವನ್ನು […]

ಜ. 31: ತಾಮ್ರವರ್ಣದ ಸೂಪರ್‌ಮೂನ್‌ ಚಂದ್ರಗ್ರಹಣ

Monday, January 29th, 2018
moon

ಉಡುಪಿ:ನಡೆಯುವ ಚಂದ್ರಗ್ರಹಣ ವಿಶೇಷವಾದುದು. ಅದು ಕೇವಲ ಹುಣ್ಣಿಮೆಯಲ್ಲ, ಸೂಪರ್‌ಮೂನ್‌ ಹುಣ್ಣಿಮೆ. ಜತೆಗೆ ಖಗ್ರಾಸ ಗ್ರಹಣದೊಂದಿಗೆ ಚಂದ್ರೋದಯ ವಾಗಲಿದೆ. ಹೀಗಾಗುವುದು ಸುಮಾರು 150 ವರ್ಷಕ್ಕೊಮ್ಮೆ ಎನ್ನುತ್ತಾರೆ ಖಗೋಳ ಪರಿಣತರು. ವರ್ಷದಲ್ಲಿ ಎರಡು ಮೂರು ಹುಣ್ಣಿಮೆಗಳು ಸೂಪರ್‌ಮೂನ್‌ ಆಗುತ್ತವೆ. ಅಂದು ಚಂದ್ರ ಸಹಜಕ್ಕಿಂತ ಸುಮಾರು 14 ಪಟ್ಟು ದೊಡ್ಡದಾಗಿ ಕಂಡು 28 ಪಟ್ಟು ಹೆಚ್ಚು ಪ್ರಭೆಯಿಂದ ಕೂಡಿರುತ್ತಾನೆ. ಚಂದ್ರ ದೀರ್ಘ‌ವೃತ್ತದಲ್ಲಿ ಭೂಮಿಯನ್ನು ಪರಿ ಭ್ರಮಿಸುತ್ತಿರುವುದರಿಂದ 28 ದಿನಗಳಿಗೊಮ್ಮೆ ಸಮೀಪವಿರುತ್ತಾನೆ (ಪೆರಿಜಿ) ಹಾಗೂ ಇನ್ನೊಮ್ಮೆ ದೂರದಲ್ಲಿರುತ್ತಾನೆ (ಎಪೊಜಿ). ಭೂಮಿ ಹಾಗೂ ಚಂದ್ರನ […]

ಉಡುಪಿ ಪೇಜಾವರ ಹಿರಿಯ ಶ್ರೀಗಳಿಗೆ ‘ಯತಿಕುಲ ಚಕ್ರವರ್ತಿ’ ಬಿರುದು

Thursday, January 18th, 2018
pejavara

ಉಡುಪಿ: ವಾದಿರಾಜ ಗುರುಗಳ ನಂತರ, ಐದು ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದ ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಗಳಿಗೆ ‘ ಯತಿಕುಲ ಚಕ್ರವರ್ತಿ’ ಬಿರುದು ಪ್ರಧಾನ ಮಾಡಿ ಗೌರವಿಸಲಾಗಿದೆ. ಪರ್ಯಾಯಕ್ಕೆ ಮುನ್ನಾದಿನವಾದ ಬುಧವಾರ (ಜ 17) ರಥಬೀದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಪೇಜಾವರ ಶ್ರೀಗಳಿಗೆ ಬಿರುದನ್ನು ಪ್ರಧಾನ ಮಾಡಿದರು. 2ನೇ ಬಾರಿ ಸರ್ವಜ್ಞ ಪೀಠವನ್ನೇರಿದ ಪಲಿಮಾರು ಶ್ರೀಗಳು ಬಿರುದು ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಪೇಜಾವರ ಶ್ರೀಗಳು, ಕೃಷ್ಣನನ್ನು ಐದು […]

ಥೇಟ್ ಮೋದಿಯಂತೆಯೇ ಕಾಣುವ ಉಡುಪಿಯ ಸದಾನಂದ್ ನಾಯಕ್

Friday, January 12th, 2018
Udupi-modi

ಉಡುಪಿ: ದೇಶದಲ್ಲಿ ಎಲ್ಲಿ ನೋಡಿದರೂ ಮೋದಿ ಹವಾ. ಚುನಾವಣೆ ಬಂದರೆ ಪ್ರಧಾನಿ ಮೋದಿನೇ ಸ್ಟಾರ್ ಪ್ರಚಾರಕರು. ಹಾಗಂತ ಎಲ್ಲ ಕಡೆಯೂ ಅವರೇ ಹೋಗೋಕಾಗುತ್ತಾ? ಹಾಗಾಗಿ ಈಗ ಮೋದಿ ಅವರಂತೆ ಕಾಣುವವರಿಗೆ ಭಾರೀ ಬೇಡಿಕೆ ಇದೆ. ಉಡುಪಿಯ ಸದಾನಂದ ನಾಯಕ್ ಎಂಬ ಮೋದಿ ತದ್ರೂಪಿನಂತೆ ಇರುವವರಿಗೆ ಭಾರೀ ಬೇಡಿಕೆ. ಗುಜರಾತ್ ಚುನಾವಣೆಯಲ್ಲಿ ಭಾಗವಹಿಸಿ ಬಂದ ಸದಾನಂದ ನಾಯಕ್ ಈಗ ಕರ್ನಾಟಕ ಚುನಾವಣೆಯತ್ತ ಮುಖ ಮಾಡಿದ್ದಾರೆ. ಬಿಜೆಪಿಯ ಅಭಿಮಾನಿ ಆಗಿರುವ ಅವರನ್ನು ನೋಡಿದರೆ, ಎಂಥವರೂ ಅರೆಕ್ಷಣ ಅವಾಕ್ ಆಗುತ್ತಾರೆ. ಕೆಲವರಂತೂ […]

ಆಮಂತ್ರಣ ಪತ್ರಿಕೆಯಲ್ಲಿ ಶ್ರೀಕೃಷ್ಣ ಮಠ ವೈಭವ ಅನಾವರಣ

Thursday, January 11th, 2018
Paryaya

ಉಡುಪಿ: ನವಗ್ರಹ ಕಿಂಡಿಯಲ್ಲಿ ಶ್ರೀಕೃಷ್ಣನನ್ನು ನೋಡಬಹುದು, ಜಯ ವಿಜಯ ದೇವರ ಸುಂದರ ಮೂರ್ತಿ ಯನ್ನು ಕಣ್ತುಂಬಿಸಿ ಕೊಳ್ಳಬಹುದು, ಮೂರು ಕಲಶಗಳ ಸಹಿತ ಚಿನ್ನದ ಹೊದಿಕೆಯ ಗರ್ಭಗುಡಿಯ ಅಪೂರ್ವ ಬಿಂಬವನ್ನೇ ನೋಡಿ ಧನ್ಯರಾಗ ಬಹುದು. ಮಾತ್ರವಲ್ಲ ಗರ್ಭಗುಡಿಯ ಹಿಂಭಾಗದ ಸುಂದರ ಚಿತ್ರಣವನ್ನು ಕೂಡ ನೋಡಬಹುದು. ಹೌದು. ಇದಕ್ಕೆ ಶ್ರೀಕೃಷ್ಣನ ಸನ್ನಿಧಾನಕ್ಕೆ ತೆರಳಬೇಕಾಗಿಲ್ಲ. ಈ ಬಾರಿಯ ಸರ್ವಜ್ಞ ಪೀಠವೇರಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಂಡರೆ ಸಾಕು. ಹಲವು ವೈಶಿಷ್ಟ, ಆಕರ್ಷಣೆಗಳಿಂದ ಭಕ್ತ […]

ವ್ಯಾಪ್ತಿ ಮೀರಿ ಸೇವೆ ನೀಡುತ್ತಿರುವ ಆಸ್ಪತ್ರೆ

Thursday, January 11th, 2018
Hospital

ಮೂಲ್ಕಿ : ಜಿಲ್ಲೆ ಬದಲಾಯ್ತು, ತಾಲೂಕು ಬದಲಾಯ್ತು ಆದರೆ ಪಶುಸಂಗೋಪನಾ ಇಲಾಖೆಯ ಪಶು ವೈದ್ಯಾಲಯ ಮಾತ್ರ ಅದೇ ಇದೆ. ಹೌದು ಸುಮಾರು ಆರು ದಶಕಗಳ ಹಿಂದೆ ಅವಿಭಜಿತ ದ.ಕ. ಜಿಲ್ಲೆಯ ವ್ಯಾಪ್ತಿಗೆ ಸೇರಿದ್ದ ಮೂಲ್ಕಿ ಸಮೀಪದ ಕಾರ್ನಾಡಿನಲ್ಲಿದ್ದ ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಲಯ ಮಂಗಳೂರು ತಾಲೂಕು ಹಾಗೂ ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ, ಉಡುಪಿ ಜಿಲ್ಲೆಯ ಜನರಿಗೆ ಸೇವೆಯನ್ನು ಒದಗಿಸುತ್ತಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿ, ಹೆಜಮಾಡಿ ಮತ್ತು ಪಲಿಮಾರು ಪ್ರದೇಶದ ಜನರು ತಮ್ಮ ಸಾಕು ಪ್ರಾಣಿ, ಜಾನುವಾರುಗಳಿಗೆ ಚಿಕಿತ್ಸೆ […]

ಪಲಿಮಾರು ಪರ್ಯಾಯ: ಮಂಗಳೂರಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಉದ್ಘಾಟನೆ

Wednesday, January 10th, 2018
paryaya-udupi

ಉಡುಪಿ: ಪಲಿಮಾರು ಮಠದ ಪರ್ಯಾಯದ ಅಂಗವಾಗಿ ಮಂಗಳೂರಿನ ಶರವು ಶ್ರೀ ಮಹಾಗಣಪತಿದೇವಸ್ಥಾನದಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಇಂದು ಉದ್ಘಾಟನೆಗೊಂಡಿತು. ಶ್ರೀ ಕ್ಷೇತ್ರಕಟೀಲಿನ ಲಕ್ಷ್ಮೀ ನಾರಾಯಣಆಸ್ರಣ್ಣಕೇಂದ್ರವನ್ನು ದೀಪಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಪರ್ಯಾಯ ಮಹೋತ್ಸವಕ್ಕೆ ಸರ್ವರ ಸಹಕಾರವನ್ನು ಯಾಚಿಸಿದರು, ಕಟೀಲುಅನಂತಆಸ್ರಣ್ಣ ಮಾತನಾಡಿ ಪರ್ಯಾಯ ಶ್ರೀಗಳ ಹುಟ್ಟೂರುಕಟೀಲು ಸಮೀಪದ ಶಿಬರೂರು ಆದ್ದರಿಂದ ಹುಟ್ಟೂರು ನೆಲೆಯಲ್ಲಿ ಭಕಾದಿಗಳು ಈ ನಾಡಹಬ್ಬದ ಯಶಸ್ವಿನಲ್ಲಿ ಪೂರ್ಣರೀತಿಯಲ್ಲಿ ಸಹಕರಿಸಬೇಕೆಂದು ವಿನಂತಿಸಿದರು. ಶರವುಕ್ಷೇತ್ರದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶ್ರೀ ರಾಘವೇಂದ್ರ ಶಾಸ್ತ್ರಿ ಶುಭ ಹಾರೈಸಿದರು. ಈ […]

‘ಕನ್ನಭಾಗ್ಯ ಎಂದು ಟೀಕಿಸಿದ ಬಿಜೆಪಿಯವರು ಈಗ ಅನ್ನಭಾಗ್ಯ ನಮ್ಮದೆನ್ನುತ್ತಿದ್ದಾರೆ’

Tuesday, January 9th, 2018
gujurat-bjp

ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರೀಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದರು. ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬರುವಾಗ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರಿಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ. ಅದ್ಯಾಕೆ ಗುಜರಾತ್ ಸೇರಿ ಬಿಜೆಪಿ ಆಡಳಿತದ ರಾಜ್ಯದಲ್ಲಿ ಅನ್ನಭಾಗ್ಯ ಈವರೆಗೆ ಜಾರಿಗೆ ತಂದಿಲ್ಲ. ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಏನೂ ಕೆಲಸ ಮಾಡದೇ ಈಗ ಎಲ್ಲವೂ […]

ಉಡುಪಿ ಜಿಲ್ಲೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

Monday, January 8th, 2018
Baindoor

ಬೈಂದೂರು: ಹೆಲಿಕಾಪ್ಟರ್ ಮೂಲಕ ಮಂಗಳೂರಿನಿಂದ ಉಡುಪಿಯ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೈಂದೂರು, ಕಾಪು, ಉಡುಪಿ ಕ್ಷೇತ್ರಗಳಲ್ಲಿ ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿಯ ಸದ್ಯದ ಪರಿಸ್ಥಿತಿಗೆ ಕೋಮುವಾದಿಗಳು‌ ಕಾರಣ. ಇದಕ್ಕೆಲ್ಲ ಸಂಘ ಪರಿವಾರದ ‌ಕುಮ್ಮಕ್ಕು ಅವರು ಬಿಟ್ರೆ ಯಾರೂ ಇಲ್ಲಿ ಗಲಭೆ ಮಾಡಲ್ಲ, ಆದ್ದರಿಂದ ಬಿಜೆಪಿ‌ ಕೋಮುವಾದ ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪಿಎಫ್ ಐ, ಬಜರಂಗದಳ, ಶ್ರೀ ರಾಮಸೇನೆ ಮೇಲೆ ನಿಗಾ ಇಡಲು […]