Blog Archive

ಧರ್ಮಸ್ಥಳ: 15ನೇ ವರ್ಷಕ್ಕೆ ಸಂಪೂರ್ಣ ಸುರಕ್ಷಾ

Friday, March 30th, 2018
veerendra-hegde

ಬೆಳ್ತಂಗಡಿ: ಸಂಪೂರ್ಣ ಸುರಕ್ಷಾ ಯೋಜನೆಯು ಜನರಲ್ಲಿ ವಿಶೇಷ ಚೈತನ್ಯ ಉಂಟು ಮಾಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಗುರುವಾರ ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಸದಸ್ಯರ ಸಹಭಾಗಿತ್ವದಲ್ಲಿ ಮಾಡಿಕೊಳ್ಳಲಾದ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆ 2018-19ರ ಸಾಲಿನ ವಿಮಾ ಪ್ರೀಮಿಯಂ ಮೊತ್ತವನ್ನು ವಿವಿಧ ವಿಮಾ ಕಂಪೆನಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. ಧರ್ಮಸ್ಥಳ ಯೋಜನೆಯ ಅನುದಾನದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಈ ವಿಮಾ ಯೋಜನೆಯ 2018-19ನೇ ಸಾಲಿಗೆ ಸುಮಾರು 10 […]

ಬೆಳ್ತಂಗಡಿ ಬಳಿ ಟ್ಯಾಂಕರ್‌‌ನಿಂದ ಗ್ಯಾಸ್ ಸೋರಿಕೆ…ಹೆದ್ದಾರಿ ಸಂಚಾರ, ವಿದ್ಯುತ್‌ ವ್ಯತ್ಯಯ

Friday, March 9th, 2018
tanker

ಮಂಗಳೂರು: ಗ್ಯಾಸ್ ಟ್ಯಾಂಕರ್‌‌ನಿಂದ ಗ್ಯಾಸ್ ಸೋರಿಕೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಸಬರಬೈಲು ಎಂಬಲ್ಲಿ ನಡೆದಿದೆ. ಗ್ಯಾಸ್ ಸೋರಿಕೆಯಾದ ಹಿನ್ನೆಲೆಯಲ್ಲಿ ಮಂಗಳೂರು-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಗ್ಯಾಸ್ ಸೋರಿಕೆ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಸಿದರು. ಅಲ್ಲದೆ ಎಂಆರ್‌‌‌ಪಿಎಲ್‌‌ ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿದೆ.

ಸಂಘಗಳ ಸಮಾರೋಪ ಸಮಾರಂಭ

Wednesday, February 28th, 2018
dharmastala

ಧರ್ಮಸ್ಥಳ: ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿವಿಧ ಸಂಘಗಳನ್ನು ರಚಿಸಿದ್ದು, ಅವುಗಳು ಹಮ್ಮಿಕ್ಕೊಂಡಂತಹ ವಿವಿಧ ಚಟುವಟಿಕೆಗಳನ್ನು ಮೆಲುಕು ಹಾಕುವಂತಹ ಕಾರ್ಯಕ್ರಮವನ್ನು ದಿನಾಂಕ 24/02/2018 ರಂದು ಹಮ್ಮಿಕ್ಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾವಾಣಿ ದಿನಪತ್ರಿಕೆಯ ಹಿರಿಯ ವರದಿರರಾಗಿರುವ ಶ್ರೀಯುತ ನಾಗರಾಜ್ ಪೂವಣಿಯವರು ವಹಿಸಿದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳು ಬರೇ ಪಾಠ ಪ್ರವಚನದಿಂದ ಜ್ನಾನವಂತರಾಗಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಗಳು ಕೂಡ ಅಗತ್ಯ ಎಂದು ನುಡಿದರು. ಈ ಂದರ್ಭದಲ್ಲಿ ಶಾಲಾ ಮುಖ್ಯೋಪದ್ಯಾಯಿನಿ […]

ಉಪ ಸಭಾಪತಿ ತಂಬಿದೊರೈ ಧರ್ಮಸ್ಥಳ ಭೇಟಿ

Tuesday, February 27th, 2018
veerendra-hegade

ಉಜಿರೆ: ಲೋಕಸಭೆಯ ಉಪ ಸಭಾಪತಿ ತಂಬಿ ದೊರೈ ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದರು. ದೇವರ ದರ್ಶನದ ಬಳಿಕ ಅವರು ಸುಬ್ರಹ್ಮಣ್ಯಕ್ಕೆ ಪ್ರಯಾಣ ಬೆಳೆಸಿದರು.

ಧರ್ಮಸ್ಥಳದಲ್ಲಿ ರಥೋತ್ಸವ

Thursday, February 15th, 2018
dharmastala

ಉಜಿರೆ: ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಬುಧವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು.ನಾಡಿನೆಲ್ಲಡೆಯಿಂದ ಬಂದ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಮಾಡ ಧನ್ಯತೆಯನ್ನು ಹೊಂದಿದರು.

ಮುಂದಿನ ವರ್ಷ ಧರ್ಮಸ್ಥಳದಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ

Monday, February 5th, 2018
shravanabelagola

ಮಂಗಳೂರು: ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮಾಧಿಕಾರಿ ಹಾಗೂ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕ ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ. ಧರ್ಮಸ್ಥಳದ ರತ್ನಗಿರಿಯಲ್ಲಿ ನಡೆದ ಬಾಹುಬಲಿ ಸ್ವಾಮಿ ಮೂರ್ತಿಯ 36ನೇ ವರ್ಷದ ಪ್ರತಿಷ್ಠಾ ಮಹೋತ್ಸವ ವರ್ಧಂತ್ಯುತ್ಸವ ಹಾಗೂ 216 ಕಲಶಗಳಿಂದ ಪಾದಾಭಿಷೇಕದ ಬಳಿಕ ಅವರು ಹೇಳಿದ್ದಾರೆ. ಪೂಜ್ಯ ಆಚಾರ್ಯ ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರ ನೇತೃತ್ವ ಹಾಗೂ ಉಪಸ್ಥಿತಿಯೊಂದಿಗೆ ಶ್ರವಣಬೆಳಗೊಳದ ಕರ್ಮಯೋಗಿ ಚಾರುಕೀರ್ತಿ […]

ಚಂದ್ರಗ್ರಹಣ: ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಇಲ್ಲ

Tuesday, January 30th, 2018
dharmastala

ಉಡುಪಿ: ಖಗ್ರಾಸ ಚಂದ್ರ ಗ್ರಹಣ ನಿಮಿತ್ತ ಜ. 31ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಧ್ಯಾಹ್ನ 2.30 ಗಂಟೆಯಿಂದ ರಾತ್ರಿ 9ರ ವರೆಗೆ ಶ್ರೀ ಮಂಜುನಾಥ ದೇವರ ದರ್ಶನ ಹಾಗೂ ಪೂಜಾದಿ ಸೇವೆಗಳು ಇರುವುದಿಲ್ಲ. ರಾತ್ರಿ 9.30ರಿಂದ 10.30ರ ವರೆಗೆ ಭಕ್ತರಿಗೆ ಹೊರಾಂಗಣದಿಂದ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 31ರಂದು ಚಂದ್ರ ಗ್ರಹಣ ನಿಮಿತ್ತ ದೇವರ ದರ್ಶನದ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು […]

ಮುನಿಸಂಘ ಧರ್ಮಸ್ಥಳ ಪುರ ಪ್ರವೇಶ : ಭವ್ಯ ಸ್ವಾಗತ

Monday, January 22nd, 2018
dharmastala

ಉಜಿರೆ: ಧರ್ಮಸ್ಥಳ ಬಸದಿಯಲ್ಲಿರುವ ಐತಿಹಾಸಿಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯು ಹವಳದ ಬಣ್ಣ ಹೊಂದಿರುವುದು ವಿಶಿಷ್ಟವಾಗಿದೆ. ಶಾಂತಚಿತ್ತರಾಗಿ ಈ ಮೂರ್ತಿಯ ದರ್ಶನ ಮಾಡಿ ಪ್ರಾರ್ಥನೆ ಮತ್ತು ಧ್ಯಾನ ಮಾಡಿದರೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಪರಮಪೂಜ್ಯ ಆಚಾರ್ಯ ಶ್ರೀ 108 ದೇವನಂದಿ ಮಹಾರಾಜ್ ಹೇಳಿದರು. ಧರ್ಮಸ್ಥಳಕ್ಕೆ ತಮ್ಮ ಸಂಘದೊಂದಿಗೆ ಭಾನುವಾರ ಸಂಜೆ ಪುರ ಪ್ರವೇಶ ಮಾಡಿದಾಗ ಅವರಿಗೆ ಭವ್ಯ ಸ್ವಾಗತ ಕೋರಿ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೇವರ ದರ್ಶನದ […]

ಧರ್ಮಸ್ಥಳಕ್ಕೆ ಮಂಗಲ ಪುರ ಪ್ರವೇಶ, ಧರ್ಮದ ಅನುಷ್ಠಾನದ ಅಕ್ಷಯ ನಿಧಿ ಧರ್ಮಸ್ಥಳ :ಮುನಿಸಂಘ

Thursday, January 18th, 2018
munisanga

ಉಜಿರೆ: ಪರಮಪೂಜ್ಯ ಆಚಾರ್ಯ ಶ್ರೀ ವೈರಾಗ್ಯ ನಂದಿಜಿ ಮುನಿ ಮಹಾರಾಜರು ಹಾಗೂ ಮುನಿಸಂಘದವರು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಮಂಗಲ ಪುರ ಪ್ರವೇಶ ಮಾಡಿದಾಗ ಪ್ರವೇಶ ದ್ವಾರದಿಂದ ಭಕ್ತಿ ಪೂರ್ವಕ ಸ್ವಾಗತ ಮಾಡಿ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೇವರ ದರ್ಶನದ ಬಳಿಕ ಮಂಗಲ ಪ್ರವಚನ ನೀಡಿದ ಪರಮಪೂಜ್ಯ ಆಚಾರ್ಯ ಶ್ರೀ ವೈರಾಗ್ಯ ನಂದಿಜಿ ಮುನಿ ಮಹಾರಾಜರು ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ ನಿತ್ಯವೂ ಅನುಷ್ಠಾನದಲ್ಲಿದ್ದು ಧರ್ಮದ ಅಕ್ಷಯ […]

ಆಮಂತ್ರಣ ಪತ್ರಿಕೆಯಲ್ಲಿ ಶ್ರೀಕೃಷ್ಣ ಮಠ ವೈಭವ ಅನಾವರಣ

Thursday, January 11th, 2018
Paryaya

ಉಡುಪಿ: ನವಗ್ರಹ ಕಿಂಡಿಯಲ್ಲಿ ಶ್ರೀಕೃಷ್ಣನನ್ನು ನೋಡಬಹುದು, ಜಯ ವಿಜಯ ದೇವರ ಸುಂದರ ಮೂರ್ತಿ ಯನ್ನು ಕಣ್ತುಂಬಿಸಿ ಕೊಳ್ಳಬಹುದು, ಮೂರು ಕಲಶಗಳ ಸಹಿತ ಚಿನ್ನದ ಹೊದಿಕೆಯ ಗರ್ಭಗುಡಿಯ ಅಪೂರ್ವ ಬಿಂಬವನ್ನೇ ನೋಡಿ ಧನ್ಯರಾಗ ಬಹುದು. ಮಾತ್ರವಲ್ಲ ಗರ್ಭಗುಡಿಯ ಹಿಂಭಾಗದ ಸುಂದರ ಚಿತ್ರಣವನ್ನು ಕೂಡ ನೋಡಬಹುದು. ಹೌದು. ಇದಕ್ಕೆ ಶ್ರೀಕೃಷ್ಣನ ಸನ್ನಿಧಾನಕ್ಕೆ ತೆರಳಬೇಕಾಗಿಲ್ಲ. ಈ ಬಾರಿಯ ಸರ್ವಜ್ಞ ಪೀಠವೇರಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಂಡರೆ ಸಾಕು. ಹಲವು ವೈಶಿಷ್ಟ, ಆಕರ್ಷಣೆಗಳಿಂದ ಭಕ್ತ […]