Blog Archive

ಸಿದ್ದರಾಮಯ್ಯ ತಾಕತ್ತಿದ್ದರೆ ಬೇರೆ ಸಮುದಾಯದ ಧಾರ್ಮಿಕ ಕೇಂದ್ರಗಳಿಗೆ ಕೈಹಾಕಲಿ

Wednesday, March 7th, 2018
ananth-kumar

ಮಂಗಳೂರು: ಜನಸುರಕ್ಷಾ ಯಾತ್ರೆ ಬೆಂಗಳೂರು ತಲುಪುವಾಗ ಸಿಎಂ ಕುರ್ಚಿ ಖಾಲಿಯಾಗಬೇಕು. ನಾವು ಯಡಿಯೂರಪ್ಪ ಅವರಿಗೆ ಸಿಎಂ ಪಟ್ಟ ಕಟ್ಟುತ್ತೇವೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. ಸುರತ್ಕಲ್‌ನ ಕುಳಾಯಿಯಲ್ಲಿ ಬಿಜೆಪಿಯ ಜನಸುರಕ್ಷಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯ ಜನಸುರಕ್ಷಾ ಯಾತ್ರೆ ಎಂಬ ಸುನಾಮಿಗೆ ಸಿಎಂ ಸಿದ್ದರಾಮಯ್ಯ ಹೊರಟು ಹೋಗಬೇಕು. ಇಲ್ಲದಿದ್ದರೆ ಈ ಸುನಾಮಿಯೇ ನಿಮ್ಮನ್ನು ಎಳೆದು ತರುತ್ತದೆ ಎಂದರು ಎಚ್ಚರಿಸಿದ್ದಾರೆ. ಸಿಎಂ ಸಿದ್ಧರಾಮಯ್ಯರನ್ನು ಕೆಳಗಿಳಿಸಲು ಬಿಜೆಪಿಯೇ ಬೇಕೆಂದಿಲ್ಲ. ಅವರ ಪಕ್ಷದವರೇ ಸಾಕು. ಖರ್ಗೆ, […]

ಸಿಎಂ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ: ಸಂಸದ ಕಟೀಲು ವಿವಾದಾತ್ಮಕ ಹೇಳಿಕೆ

Tuesday, March 6th, 2018
nalin-kumar

ಮಂಗಳೂರು: ಬಿಜೆಪಿ ಆಯೋಜನೆಯ ಜನಸುರಕ್ಷಾ ಯಾತ್ರೆಯಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾಡುವ ಟೀಕಾ ಪ್ರಹಾರಗಳು ಕರಾವಳಿಯಲ್ಲೂ ಮುಂದುವರಿದಿವೆ. ಈ ಬಾರಿ ಸಂಸದ ನಳಿನ್ ಕುಮಾರ್ ಕಟೀಲು `ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಂಟ್ವಾಳದಲ್ಲಿ ನಡೆದ `ಮಂಗಳೂರು ಚಲೋ’ ಜನ ಸುರಕ್ಷಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಭಯೋತ್ಪಾದನೆ ಮಾಡುವ ಶಕ್ತಿಗಳ ಹಿಂದಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಬಳಿ ಭಯ ಉತ್ಪಾದನೆ ಮಾಡುವ ಶಕ್ತಿ ಇದೆ ಎಂದ ಸಂಸದ […]

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಲೆ ಇಲ್ಲ: ಸಿದ್ದರಾಮಯ್ಯ

Monday, March 5th, 2018
narendra-modi

ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇಲ್ಲ ಹಾಗೂ ತ್ರಿಪುರಾ ಚುನಾವಣಾ ಫಲಿತಾಂಶ ಇಲ್ಲಿ ಪರಿಣಾಮ ಬೀರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಒಂದು ವೇಳೆ ಕೇಸರಿ ಪಕ್ಷ ರಾಜ್ಯದ ಚುನಾವಣೆಯಲ್ಲಿ ಜಯಸಿದ್ದೇ ಆದರೆ, ಅಕ್ರಮ ಭೂ ಡಿನೋಟಿಫಿಕೇಷನ್ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸ್ಥಿರ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವ ಬಗ್ಗೆ ಜನರಿಗೆ ಹೇಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬ ಬಗ್ಗೆ ಬಿಜೆಪಿ ಚಿಂತಿಸಬೇಕಾಗಿದೆ ಎಂದು ಸಿಎಂ ಟ್ವಿಟ್ಟರ್‌‌ನಲ್ಲಿ […]

ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ: ಸುಳ್ಯದಲ್ಲಿ ಪಾದಯಾತ್ರೆ

Monday, March 5th, 2018
chalo

ಮಂಗಳೂರು : ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆಯು ಇಂದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಪ್ರವೇಶಿಸಿದ್ದು ಇಲ್ಲಿ ಪಾದಯಾತ್ರೆ ನಡೆಸಲಾಯಿತು. ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಯಿಂದಾಗಿ ಕರ್ನಾಟಕದಲ್ಲಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ವ್ಯವಸ್ಥಿತ ಹತ್ಯೆಯಾಗುತ್ತಿದೆ ಎಂದು ಆಪಾದಿಸಿ ಬಿಜೆಪಿ ಮಾ. 3 ರಿಂದ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಆರಂಭಿಸಿದೆ. ಮಾ. 3 ರಂದು ಅಂಕೋಲಾ ಮತ್ತು ಕುಶಾಲನಗರದಿಂದ ಹೊರಟ ಜನಸುರಕ್ಷಾ ಯಾತ್ರೆ ಮಾ. 6 ರಂದು ಮಂಗಳೂರು ತಲುಪಲಿದೆ. ಮಂಗಳೂರಿನಲ್ಲಿ ನಡೆಯುವ […]

ಸಿದ್ದರಾಮಯ್ಯ ಉಳುಮೆ ಮಾಡಿ ತೋರಿಸಲಿ: ಯಡಿಯೂರಪ್ಪ ಸವಾಲು

Saturday, March 3rd, 2018
congress

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರ ಅಕ್ರಮಗಳ ದಾಖಲೆಗಳನ್ನು ಶೀಘ್ರವೇ ಬಯಲುಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೇರಳ ತಳಿಪರಂಬ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ರೈಲು ಮೂಲಕ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮೊದಲು ಚಾರ್ಜ್‌ಶೀಟ್ ಮೊದಲು ಬಿಡುಗಡೆಗೊಳಿಸಲಿ. ಮುಖ್ಯಮಂತ್ರಿ ನಡೆಸಿದ ಅಕ್ರಮಗಳ ದಾಖಲೆ ನಮ್ಮ ಬಳಿಯೂ ಇದೆ. ಅದನ್ನು ನಾವು ಕೂಡಾ ಬಿಡುಗಡೆಗೊಳಿಸುತ್ತೇವೆ ಎಂದರು. ಮುಖ್ಯಮಂತ್ರಿ ತಲೆ ತಿರುಕನಂತೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಕೇಳುವ ಪ್ರಶ್ನೆಗೆ ಚುನಾವಣೆಯಲ್ಲಿ ರಾಜ್ಯದ ಜನತೆ […]

ಸಿದ್ದರಾಮಯ್ಯನವರಿಗೆ ನೇಗಿಲು ಹಿಡಿಯುವ ಸವಾಲು ಹಾಕಿದ ಯಡಿಯೂರಪ್ಪ

Saturday, March 3rd, 2018
yedeyorappa

ಮಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ . ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಲೆ ತಿರುಕನಂತೆ ಮಾತನ್ನಾಡುವ ಭ್ರಷ್ಟ ಮುಖ್ಯಮಂತ್ರಿಗೆ ರಾಜ್ಯದ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ. “ಯಾರು ಮಣ್ಣಿನ ಮಕ್ಕಳು, ಯಾರು ಅಲ್ಲ ಎಂಬುದಕ್ಕಿಂತ, ರೈತ ಪರವಾಗಿ ನಾವು ಹೋರಾಟ ಮಾಡಿದ್ದೇವೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ, ರೈತರ ಸಾಲ ಮನ್ನಾ ಮಾಡಿದ್ದೇವೆ. ಹಲವು ರೈತಪರ ಯೋಜನೆಗಳನ್ನು ರಾಜ್ಯದಲ್ಲಿ ತಂದಿದ್ದೇವೆ,” ಎಂದು ಅವರು […]

ಸರ್ಕಾರಿ ಕಾರ್ಯಕ್ರಮ ದುರ್ಬಳಕೆ ಆರೋಪ: ಕೇಸ್‌ ದಾಖಲಿಸಲು ಅನುಮತಿಗೆ ಮನವಿ

Friday, March 2nd, 2018
government

ಮಂಗಳೂರು: ಸರ್ಕಾರಿ ಸಮಾರಂಭ ಹಮ್ಮಿಕೊಂಡು ರಾಜಕೀಯ ಉದ್ದೇಶಕ್ಕೆ ಬಳಸುವ ರಾಜಕೀಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಶಶಿಧರ ಶೆಟ್ಟಿ ರಾಜ್ಯಪಾಲರನ್ನು ವಿನಂತಿಸಿ, ದಾಖಲೆ ಪತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ಅ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸರ್ಕಾರಿ ಸಮಾರಂಭ ಹಮ್ಮಿಕೊಂಡು ಆ ಸಮಾರಂಭವನ್ನು ಪಕ್ಷದ ಉದ್ದೇಶಕ್ಕೆ ಬಳಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ 197ರ ಅಡಿಯಲ್ಲಿ ಸ್ವಯಂ ಆಗಿ ಕೇಸು ದಾಖಲಿಸಬೇಕು. […]

ನವಶಕ್ತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಆಕ್ರೋಶ

Tuesday, February 20th, 2018
congress

ಮಂಗಳೂರು: ಕುಲ್ಕುಂದದಲ್ಲಿ ಆಯೋಜಿಸಿರುವ ನವಶಕ್ತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರಿಗಳಿದ್ದಾರೆ ಎಂದು ಸಿಎಂ ಅವರ 40 ಲಕ್ಷ ರೂ. ಬೆಲೆಯ ವಾಚ್‌ ವಿಷಯವನ್ನು ಶಾ ಪ್ರಸ್ತಾಪಿಸಿದರು. ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಬಗ್ಗೆ ಮಾತನಾಡಿದ ಅವರು, ಸರ್ಕಾರ ತುಷ್ಟೀಕರಣ ಮಾಡುತ್ತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಸರ್ಕಾರ ಬದಲಿಸಬೇಕೆನ್ನುವುದು ಜನರ ಆಶಯವಾಗಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಹಾಗೂ ರಾಜ್ಯ ಬಿಜೆಪಿ ಗೆಲುವು […]

ಪುಟ್ಟಣ್ಣಯ್ಯ ಸಾವಿನ ಸುದ್ದಿ ದಿಗ್ಭ್ರಮೆ ಮೂಡಿಸಿದೆ: ಸಿಎಂ ಸಂತಾಪ

Monday, February 19th, 2018
siddaramaih

ಮಂಡ್ಯ : ಪುಟ್ಟಣ್ಣಯ್ಯ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಸರ್ವೋದಯ ಪಕ್ಷದ ಶಾಸಕರಾದ ಹಿರಿಯ ರೈತ ಹೋರಾಟಗಾರ ಕೆ.ಎಸ್. ಪುಟ್ಟಣ್ಣಯ್ಯ ಅವರ ಸಾವಿನ ಸುದ್ದಿ ದಿಗ್ಭ್ರಮೆ ಉಂಟು ಮಾಡಿದೆ. ರೈತ ಚಳುವಳಿ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ಬಹುಕಾಲದ ಸ್ನೇಹಿತನ ಅಗಲಿಕೆ ನನಗೆ ಅತೀವ ದು:ಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇನ್ನು ಪುಟ್ಟಣ್ಣಯ್ಯರಿಗೆ ಪ್ರಥಮ ಚಿಕಿತ್ಸೆ ನೀಡಿದ್ದ ವೈದ್ಯ ಡಾ.ರಾಘವೇಂದ್ರ ಮಾತನಾಡಿ, ರಾತ್ರಿ 10.10ರ ಸುಮಾರಿಗೆ ಪುಟ್ಟಣ್ಣಯ್ಯ […]

ಸಿದ್ದು ಬಜೆಟ್‌‌ಗೆ ಮಂಗಳೂರು ರಾಜಕೀಯ ಮುಖಂಡರ ಮಿಶ್ರ ಪ್ರತಿಕ್ರಿಯೆ

Saturday, February 17th, 2018
nalin-kumar

ಮಂಗಳೂರು: ಚುನಾವಣೆಯ ದೃಷ್ಟಿಯಿಂದ ಜನಪ್ರಿಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯರದ್ದು ಚುನಾವಣಾ ಗಿಮಿಕ್ ಬಜೆಟ್ ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಟೀಕಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಘೋಷಣೆಯಾದ ಅನುದಾನಗಳಿಗೆ ಹಣ ಎಲ್ಲಿಂದ ಸಂಗ್ರಹಿಸುತ್ತಾರೆ ಎಂಬುದಕ್ಕೆ ಯಾವುದೇ ಪ್ರಸ್ತಾಪವಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಎಂದರು. ರೈತರ, ಕಾರ್ಮಿಕರ, ಯುವಕರ ಮೀನುಗಾರರ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬಜೆಟ್‌ನ ಪ್ರಯೋಜನವನ್ನು ದೊರಕಿಸಿಕೊಟ್ಟ ಬಜೆಟ್ ಅಭಿವೃದ್ಧಿಯ ದಿಕ್ಷೂಚಕ. ಕರಾವಳಿ ಕರ್ನಾಟಕ ಮೀನುಗಾರರಿಗೆ, […]