Blog Archive

‘ಮತದಾನ ಮಾಡಿ ನಿಮ್ಮ ಹಕ್ಕು ಚಲಾಯಿಸಿ’… ಕೆಎಸ್‌ಆರ್‌ಟಿಸಿ ಟಿಕೆಟ್‌ ವಿಶೇಷ!

Saturday, April 21st, 2018
KSRTC-bus

ಬೆಂಗಳೂರು: ಮತದಾನದ ಬಗ್ಗೆ ಅರಿವು ಮೂಡಿಸಲು ಮುಂದಾದ ಕೆಎಸ್‌ಆರ್‌ಟಿಸಿ ತನ್ನ ಬಸ್ ಟಿಕೆಟ್‌ನಲ್ಲೂ ಮತದಾನ ಮಾಡುವಂತೆ ಮುದ್ರಿಸಿದೆ. ಜನರಲ್ಲಿ ಸಾಧ್ಯವಾದಷ್ಟು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಐಡಿಯಾ ಮಾಡಲಾಗಿದೆ. ಮೇ 12 ರಂದು ‘ಮತದಾನ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ’ ಎಂಬ ವಾಕ್ಯ ಮುದ್ರಣ ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯ ಈ ಐಡಿಯಾಗೆ ಸಾರ್ವಜನಿಕರಿಂದಲೂ ಪ್ರಶಂಸೆ ದೊರೆತಿದೆ. ಇಂದಿನಿಂದ ಎಲ್ಲ ಡಿವಿಷನ್‌ನಲ್ಲು ಮತದಾನ ಒಳಗೊಂಡ ಟಿಕೆಟ್ ಸಿಗಲಿದೆ.

ಊಟಕ್ಕೆ ಕೈಕೊಟ್ಟ ಸಿಎಂ : ಕುತೂಹಲ ಮೂಡಿಸಿದ ಅಂಬರೀಶ್‍ ಮುಂದಿನ ನಡೆ

Tuesday, April 3rd, 2018
ambarish

ಬೆಂಗಳೂರು : ಅಂಬರೀಶ್‍ ನಿವಾಸಕ್ಕೆ ರಾತ್ರಿ ಡಿನ್ನರ್‌ಗೆ ಬರಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಟ, ಮಾಜಿ ಶಾಸಕ ಅಂಬರೀಶ್‌ಗೆ ಮತ್ತೆ ಚುನಾವಣೆ ಟಿಕೆಟ್‌ ಕೈತಪ್ಪುವ ಭೀತಿ ಎದುರಾಗಿದೆ. ಬೆಂಗಳೂರಿನ ಗಾಲ್ಫ್‌ ಕ್ಲಬ್‌ ಬಳಿ ಇರುವ ಅಂಬಿ ನಿವಾಸದಲ್ಲಿ ಮುಖ್ಯಮಂತ್ರಿ ಅವರಿಗೆಂದು ಅಯೋಜನೆ ಮಾಡಿದ್ದ ಔತಣಕೂಟ ದಿಢೀರ್‌ ರದ್ದಾಗಿದೆ. ಮೈಸೂರು ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರ ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ಸೀದಾ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ತೆರಳಿದ್ದಾರೆ. ಈ ಬಗ್ಗೆ […]

ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಂಬಿ ಹೇಳಿದ್ದೇನು!?

Saturday, March 31st, 2018
ambareesh

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಏಪ್ರಿಲ್ 2 ರಂದು ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ತಿಳಿಸಿದ್ದಾರೆ. ನಗರದಲ್ಲಿ ಇಂದು ನಡೆದ ಬೆಂಬಲಿಗರ ಸಭೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜಕೀಯ ಎಲ್ಲ ಗೌರವಗಳನ್ನು ಸಿಗುವಂತೆ ಮಾಡಿದೆ. ಸಿನಿಮಾ ಮತ್ತು ರಾಜಕೀಯದಲ್ಲಿ ಸೋಲು, ಗೆಲುವು ಕಂಡಿದ್ದೇನೆ. ಹಾಗಾಗಿ ಎಲ್ಲವನ್ನು ಸಮಚಿತ್ತದಿಂದ ಕಾಣುವುದಾಗಿ ಹೇಳಿದರು. ನನ್ನನ್ನು ನಾಯಿ, ಕತ್ತೆ ಎಂದೆಲ್ಲ ಹೇಳಿದರು. ನಾಯಿಯ […]

ಬಿಗಿ ಭದ್ರತೆಯೊಂದಿಗೆ ನಾಳೆಯಿಂದ ಎಸ್‌ಎಸ್‌ಎಲ್‌‌ಸಿ ಪರೀಕ್ಷೆ ಆರಂಭ

Thursday, March 22nd, 2018
examination

ಬೆಂಗಳೂರು: ಯಾವುದೇ ಗೊಂದಲ ಇಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ಣಗೊಂಡಿದ್ದು, ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌‌ಎಲ್‌‌‌‌‌‌‌‌ಸಿ ಪರೀಕ್ಷೆ ಆರಂಭವಾಗಲಿದೆ. ರಾಜ್ಯದ 2,817 ಕೇಂದ್ರಗಳಲ್ಲಿ ನಡೆಯುವ ಎಸ್‌‌ಎಸ್‌‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ 8,54,424 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ ಮೂಲಕವೇ ಪಡೆದಿದ್ದು, ಪರೀಕ್ಷೆಯ ಪ್ರವೇಶ ಪತ್ರವನ್ನು ಆನ್‌ಲೈನ್‌ ಮೂಲಕವೇ ಹಂಚಿಕೆ ಮಾಡಲಾಗಿದೆ. ವಿದ್ಯಾರ್ಥಿಗಳ ಸಾಧನೆ ಮತ್ತು ಟ್ರ್ಯಾಕಿಂಗ್‌ ವ್ಯವಸ್ಥೆ(ಎಸ್‌ಎಟಿಎಸ್‌) ಜಾರಿಗೆ ಬಂದ ನಂತರ ನಡೆಯುತ್ತಿರುವ ಮೊದಲ ಪರೀಕ್ಷೆ ಇದಾಗಿದೆ. ಖಾಸಗಿ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ನೋಂದಾಣಿ […]

ಚೆಕ್ ಬೌನ್ಸ್ ಕೇಸ್‌: ನಿರ್ಮಾಪಕಿ ಜಯಶ್ರೀ ದೇವಿ ಬಂಧನ

Wednesday, March 21st, 2018
jaishreee

ಬೆಂಗಳೂರು: ಚೆಕ್ ಬೌನ್ಸ್ ಕೇಸ್‌ನಲ್ಲಿ ಚಿತ್ರ ನಿರ್ಮಾಪಕಿ ಜಯಶ್ರೀ ದೇವಿಯನ್ನು ಬೆಂಗಳೂರಿನ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಮುಕುಂದ ಮುರಾರಿ ಸೇರಿದಂತೆ 25 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದ್ದ ಜಯಶ್ರೀ ದೇವಿ ಹಳೆಯ ಚೆಕ್ ಬೌನ್ಸ್ ಕೇಸ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. 50ಕ್ಕೂ ಹೆಚ್ಚು ಲಕ್ಷ ರೂ. ಸಾಲಕ್ಕಾಗಿ ನೀಡಿದ್ದ ಚೆಕ್ ಬೌನ್ಸ್ ಆಗಿರುವುದಲ್ಲದೆ, ಸುಮಾರು ವರ್ಷಗಳಿಂದ ಸಾಲದ ಹಣ ನೀಡದೆ ವಂಚಿಸಿದ ಆರೋಪದ ಮೇಲೆ ಜಯಶ್ರೀ ದೇವಿ ಅವರನ್ನು ಬಂಧಿಸಲಾಗಿದೆ. ಜಯಶ್ರೀ ದೇವಿ “ಹಬ್ಬ” ಸಿನಿಮಾ ನಿರ್ಮಾಣಕ್ಕೆ ಅಶ್ವಿನಿ […]

ನಲಪಾಡ್‌‌ಗೆ ಸುಪ್ರೀಂಕೋರ್ಟ್‌ನಲ್ಲೂ ಜಾಮೀನು ಸಿಗುವುದು ಡೌಟ್‌‌!

Wednesday, March 21st, 2018
nalapad-harris

ಬೆಂಗಳೂರು: ವಿದ್ವತ್ ಕೊಲೆ ಯತ್ನದ ಕೇಸ್‌‌ನಲ್ಲಿ ಜೈಲು ಸೇರಿರುವ ನಲಪಾಡ್ ಹ್ಯಾರಿಸ್‌‌ಗೆ ಸುಪ್ರೀಂಕೋರ್ಟ್‌ನಲ್ಲೂ ಜಾಮೀನು ಸಿಗದಂತೆ ಮಾಡುವ ನಿಟ್ಟಿನಲ್ಲಿ ಸಿಸಿಬಿ ಅಧಿಕಾರಿಗಳು ಇಂದು ಕೇವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ನಲಪಾಡ್ ಪರ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋಗುವ ಮುನ್ನವೇ ಸಿಸಿಬಿ ಅಧಿಕಾರಿಗಳು ಕೇವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ನಲಪಾಡ್ ಹ್ಯಾರಿಸ್ ಜಾಮೀನು ಅರ್ಜಿ ಸಲ್ಲಿಸಿದರೆ ಆದೇಶ ನೀಡುವ ಮುನ್ನ ನಮ್ಮ ಅಭಿಪ್ರಾಯ ಪಡೆಯುವಂತೆ ಕೋರಿ […]

ನಟಿ ಚೈತ್ರ ದಾಂಪತ್ಯದಲ್ಲಿ ಬಿರುಕು… ಪತಿಯ ವಿರುದ್ಧ ದೈಹಿಕ ಕಿರುಕುಳ ಆರೋಪ

Tuesday, March 20th, 2018
chaitra-pothraj

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಚೈತ್ರ ಪೋತ್‌ರಾಜ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತಿಯ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚೈತ್ರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪತಿ ಬಾಲಾಜಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿರುವ ನಟಿ ಚೈತ್ರ, ಇದೇ ತಿಂಗಳು 14 ರಂದು ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ನಟಿ ಚೈತ್ರ ಹಾಗೂ ಬಾಲಾಜಿ ಪೋತ್‌ರಾಜ್‌ 2006 ರಂದು ಮದುವೆಯಾಗಿದ್ದರು. ಅಂದಿನಿಂದಲೂ ಬಾಲಾಜಿ ತನ್ನ […]

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ

Monday, March 12th, 2018
bangaluru

ಬೆಂಗಳೂರು: ಬಿರುಬೇಸಿಗೆಯಲ್ಲಿ ಬೆಂದು ಹೋಗಿರುವ ಬೆಂಗಳೂರಿಗರಿಗೆ ಸದ್ಯದಲ್ಲೇ ವರುಣನ ಸ್ಪರ್ಶವಾಗಲಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಂಗಾಳಕೊಲ್ಲಿಯ ತಮಿಳುನಾಡು ಹಾಗೂ ಶ್ರೀಲಂಕಾ ನಡುವಿನ ಕೊಮರಿನೇರಿಯಾವರೆಗೆ ವಾಯುಭಾರ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೆರಡು ದಿನ ಬೆಂಗಳೂರು ಸೇರಿದಂತೆ ಎಲ್ಲೆಡೆ ಮಂಗಳವಾರ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ. ಪ್ರಸಕ್ತ ಉಂಟಾಗಿರುವ ವಾಯುಭಾರ […]

ಬೆಂಗಳೂರು ರಕ್ಷಿಸಿ ಯಾತ್ರೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

Friday, March 9th, 2018
bjp-yatre

ಬೆಂಗಳೂರು: “ಬೆಂಗಳೂರಿನಲ್ಲಿ ಹಾಡುಹಗಲೇ ದರೋಡೆ, ಕೊಲೆ ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದಕ್ಕೆಂದೇ ಬೆಂಗಳೂರು ಸುರಕ್ಷಾ ಯಾತ್ರೆ ನಡೆಸುತ್ತಿದ್ದೇವೆ” ಎಂದು ಸಂಸದ ಪಿ.ಸಿ.ಮೋಹನ್ ಹೇಳಿದರು. ಬೆಂಗಳೂರಿನ ಹತ್ತು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಕ್ಷದ ಮುಖಂಡರು ಆರಂಭಿಸಿರುವ ಬೆಂಗಳೂರು ರಕ್ಷಿಸಿ ಯಾತ್ರೆಯಲ್ಲಿ ಅವರು ಮಾತನಾಡುತ್ತಿದ್ದರು. ಯಾತ್ರೆ 7 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು(ಮಾ.09) ಸರ್ವಜ್ಞನಗರದಲ್ಲಿ ಬಿಜೆಪಿ ಮುಖಂಡರು ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ, ಹೆಣ್ಣೂರು ಮೇಲೂ ಸೇತುವೆ ಕಟ್ಟೋದಕ್ಕೆ ಯಡಿಯೂರಪ್ಪ […]

ಬೆಂಗಳೂರು ಪೊಲೀಸರಿಂದ ಸುನಾಮಿ ಕಿಟ್ಟಿ ಬಂಧನ

Saturday, March 3rd, 2018
sunami-kitty

ಬೆಂಗಳೂರು: ಕಿಡ್ನಾಪ್, ಕೊಲೆ ಬೆದರಿಕೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್‌ ರಿಯಾಲಿಟಿ ಶೋ ವಿನ್ನರ್‌ ಸುನಾಮಿ ಕಿಟ್ಟಿ ಮತ್ತು ಆತನ ಸ್ನೇಹಿತರನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಸುನಾಮಿ ಕಿಟ್ಟಿ ಗೆಳೆಯ ಸುನಿಲ್ ಪತ್ನಿ ತೌಶೀಕ್ ಎಂಬುವನನ್ನು ಪ್ರೀತಿಸುತ್ತಿದ್ದು ಇಬ್ಬರೂ ಮರಿಯಪ್ಪನ ಪಾಳ್ಯದಲ್ಲಿರುವ ರೆಸ್ಟೋರೆಂಟ್‌‌ಗೆ ಆಗಾಗ್ಗೆ ಊಟಕ್ಕೆಂದು ಹೋಗುತ್ತಿದ್ದರು. ರೆಸ್ಟೋರೆಂಟ್‌‌ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್‌‌‌ಗೆ ತೌಶೀಕ್ ಮತ್ತು ಸುನಿಲ್ ಪತ್ನಿ ಪರಿಚಿತರಾಗಿದ್ದರು. ಫೆಬ್ರವರಿ 25 ರಂದು ತೌಶೀಕ್ ಮತ್ತು ಸುನಿಲ್ ಪತ್ನಿ ಊಟಕ್ಕೆಂದು ಅದೇ ರೆಸ್ಟೋರೆಂಟ್‌‌‌ಗೆ […]