ಕಲ್ಲಾಪು : ಹಾಸಿಗೆಯ ಗೋಡಾನ್ ನಲ್ಲಿ ಅಗ್ನಿ ದುರಂತ
Saturday, October 19th, 2019ಉಳ್ಳಾಲ : ಕಲ್ಲಾಪು ಪಟ್ಲದಲ್ಲಿ ಹಾಸಿಗೆ ಶೇಖರಿಸಿಟ್ಟಿದ್ದ ಗೋಡಾನ್‌ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಸಂಭವಿಸಿದೆ. ತೊಕ್ಕೊಟ್ಟಿನ ಸಪ್ನಾ ಎಂಟರ್ ಪ್ರೈಸಸ್‌ಗೆ ಸೇರಿದ ಗೋಡಾನ್ ಇದಾಗಿದೆ. ಬೆಂಕಿಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.