Blog Archive

ಕಾಂಗ್ರೆಸ್‌ ಗೆಲ್ಲಿಸಲು ಪ್ರಾಮಾಣಿಕವಾಗಿ ದುಡಿಯಿರಿ: ಅಭಯಚಂದ್ರ ಜೈನ್‌

Friday, April 20th, 2018
abhaychandra-jain

ಮೂಡಬಿದಿರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳಲ್ಲಿ ಕರ್ನಾಟಕವನ್ನು ಹಸಿವು ಮುಕ್ತ, ಸ್ವಾಭಿಮಾನಿ ಬದುಕಿನ ರಾಜ್ಯವನ್ನಾಗಿ ರೂಪಿಸಿದವರು. ಅವರ ಕೈ ಬಲಪಡಿಸಲು ಈ ಬಾರಿಯ ಚುನಾವಣೆಯಲ್ಲಿ ಜನರನ್ನು ಪ್ರೇರೇಪಿಸುವ ಕಾರ್ಯದಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯಬೇಕಾಗಿದೆ ಎಂದು ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು. ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಐದನೇ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ಅಭಯಚಂದ್ರ ಅವರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್‌ ಮಾತನಾಡಿದರು. […]

ಮಿಥುನ್‌ ರೈಗೆ ಟಿಕೆಟ್‌ ಮಿಸ್‌‌: ಯೂತ್‌ ಕಾಂಗ್ರೆಸ್‌ನ 80 ಸದಸ್ಯರ ರಾಜೀನಾಮೆ ನಿರ್ಧಾರ

Wednesday, April 18th, 2018
mithun-rai

ಮಂಗಳೂರು: ಮೂಡಬಿದ್ರೆ ಕ್ಷೇತ್ರದಲ್ಲಿ ಮಿಥುನ್ ರೈಗೆ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಮೂಡಬಿದ್ರೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಿಥುನ್ ರೈಗೆ ಟಿಕೆಟ್ ನೀಡದ್ದರಿಂದ ಆಕ್ರೋಶ ವ್ಯಕ್ತಪಡಿಸಿರುವ NSUI ನ ಸುಮಾರು 80 ಸದಸ್ಯರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಮೂಡಬಿದ್ರೆ ಕ್ಷೇತ್ರದಲ್ಲಿ ಅಭಯಚಂದ್ರ ಜೈನ್‌ಗೆ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್‌ ಆಗುತ್ತಿದ್ದಂತೆ ಮಿಥುನ್‌ ರೈ ಬೆಂಬಲಿಗರಲ್ಲಿ ಅಸಮಾಧಾನ ಉಂಟಾಗಿದ್ದು, ಇಂದು ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡಲು ಕಾರ್ಯಕರ್ತರು ನಿರ್ಧರಿಸಿದ್ದಾಗಿ […]

ಶಾಸಕ ಅಭಯಚಂದ್ರ ಜೈನ್‌ ವಿರುದ್ಧ ವಿಹೆಚ್‌ಪಿ ಪ್ರತಿಭಟನಾ ಸಭೆ

Tuesday, March 20th, 2018
abhaychandra-jain

ಮಂಗಳೂರು: ಕರಿಂಜೆ ಶ್ರೀಗಳ ಬಗ್ಗೆ ಮಾತನಾಡಿದ್ದ ಅಭಯಚಂದ್ರ ಜೈನ್‌ ಅವರು ಹಿಂದೂ ವಿರೋಧಿ ಶಾಸಕ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್‌ ಸೋಮವಾರ ಸ್ವರಾಜ್ಯ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿತು. ಹಿಂಸೆಯನ್ನು ಮಾಡದಂತಹ ಸಮಾಜದಿಂದ ಬಂದವರು ಶಾಸಕ ಅಭಯಚಂದ್ರ ಜೈನ್‌. ಸಂತರನ್ನು ಒಬ್ಬ ಸಾಮಾನ್ಯ ವ್ಯಕ್ತಿ ನಿಂದಿಸಿದರೆ ಕ್ಷಮಿಸಬಹುದು. ಆದರೆ ಶಾಸಕರಂತಹ ವ್ಯಕ್ತಿ ನಿಂದಿಸಿದರೆ ಕ್ಷಮಿಸಲಾರೆವು. ನಾವು ಕಾವಿ ತೊಡುವವರು, ಸಂತರಲ್ಲಿ ನಿಮ್ಮ ದರ್ಪ ತೋರಿಸಿದರೆ ಕಾವಿ ಅಗ್ನಿ ವಸ್ತ್ರವಾಗಿ ನಿಮ್ಮನ್ನು ಸುಡಬಹುದು. ಆದ್ದರಿಂದ ನೀವು ರಾಜಕೀಯ […]

ಶಾಸಕದ್ವಯರ ಮಧ್ಯೆ ಕಿತ್ತಾಟ ತಂದಿಟ್ಟ ಹಾಸ್ಯ ಚಟಾಕಿ!

Friday, March 2nd, 2018
mohiuddin-bava

ಮಂಗಳೂರು: ತಾರಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರು ಸಿಡಿಸಿದ ಹಾಸ್ಯ ಚಟಾಕಿಯೊಂದು ಗಂಭೀರ ರೂಪ ತಾಳಿ ಶಾಸಕದ್ವಯರಾದ ಅಭಯಚಂದ್ರ ಜೈನ್ ಹಾಗೂ ಮೊಯ್ದಿನ್ ಬಾವ ನಡುವೆ ತಳ್ಳಾಟ, ಚೀರಾಟ ನಡೆಯಿತು. ಪಿಲಿಕುಳದಲ್ಲಿ ತಾರಾಲಯ ವೀಕ್ಷಣೆಗೂ ಮುನ್ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಂ.ಆರ್. ಸೀತಾರಾಂ ಅವರನ್ನು ಮಾತಿಗೆಳೆದ ಶಾಸಕ ಮೊಯ್ದಿನ್ ಬಾವ, ಮೇಯರ್ ಕವಿತಾ ಅವರ ಅಧಿಕಾರವಧಿ ಮುಗಿಯುತ್ತಾ ಬಂತು ಎಂದರು. ಅದಕ್ಕೆ ಪ್ರತಿಯಾಗಿ ಸಚಿವರು, ಹಾಗಂತ ಅವರನ್ನು ಸುಮ್ಮನೆ ಇರಲು ಬಿಡಬೇಡಿ. ಏನಾದರೂ ಅವಕಾಶ ಕಲ್ಪಿಸಿಕೊಡಿ. ನಾವೆಲ್ಲಾ […]

ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರೂ. ವಿನಿಯೋಗಿಸಲಾಗಿದೆ

Thursday, February 15th, 2018
moodbidre

ಮೂಡಬಿದಿರೆ: ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರೂ. ವಿನಿಯೋಗಿಸಲಾಗಿದೆ. ಗ್ರಾಮದ ಅಭಿವೃದ್ಧಿಯೇ ಸರಕಾರದ ಮೂಲ ಉದ್ದೇಶವಾಗಿದ್ದು, ಜನಪರ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್‌ ಹೇಳಿದರು. ಅವರು ಫೆ. 13 ರಂದು ಬಳ್ಕುಂಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಬಳ್ಕುಂಜೆ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ, ಬಳ್ಕುಂಜೆ ಸಂತ ಪೌಲರ ರಸ್ತೆ ಕವತ್ತಾರು, ಎಸ್‌ಟಿ ಕಾಲನಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಜಂಯ […]

ಕಾಂಗ್ರೆಸ್‌ ಹಾಲಿ ಶಾಸಕರು ನಿರಾಳ, ಆಕಾಂಕ್ಷಿಗಳ ತಳಮಳ

Tuesday, January 16th, 2018
congress

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರಾವಳಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿನ ಹಾಲಿ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಖಾತ್ರಿ ಬಗ್ಗೆ ನೀಡುತ್ತಿರುವ ಅಭಯ ಕಾಂಗ್ರೆಸ್‌ ಶಾಸಕರಲ್ಲಿ ನಿರಾಳ ಭಾವ ಮೂಡಿಸಿದೆ. ಇನ್ನೊಂದೆಡೆ ಟಿಕೇಟು ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುತ್ತಿರುವ 10 ವಿಧಾನ ಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಜ. 7 ಹಾಗೂ 8ರಂದು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ […]

ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜೋಕಟ್ಟೆ ಶಾಖೆ ಉದ್ಘಾಟನೆ

Saturday, December 16th, 2017
co-operative-society

ಮಂಗಳೂರು: ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜೋಕಟ್ಟೆ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ಜೋಕಟ್ಟೆಯ ಸನ್‌ರೈಸ್ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ನಡೆಯಿತು. ಕರ್ನಾಟಕ ಸಹಕಾರ ಮಹಾಮಂಡಳಿಯ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿ ಇಡಬೇಕು. ಠೇವಣಿಗೆ ಸೂಕ್ತ ಭದ್ರತೆ ನೀಡುವ ಹೊಣೆ ತನ್ನದಾಗಿದೆ ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಜೋಕಟ್ಟೆ ಪರಿಸರ ಸಾಕಷ್ಟು ಅಭಿವೃದ್ಧಿ ಹೊಂದುತ್ತಿವೆ. ಇಲ್ಲಿ ಇಂತಹ ಸೊಸೈಟಿಯ […]

ಆಳ್ವಾಸ್ ಕೃಷಿಸಿರಿ ಉದ್ಘಾಸಿದ  ಮಾಜಿಸಚಿವ ಅಭಯಚಂದ್ರ ಜೈನ್

Friday, December 1st, 2017
krisi Siri

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಪ್ರಯುಕ್ತ ನಡೆದ ಆಳ್ವಾಸ್ ಕೃಷಿಸಿರಿಯನ್ನು ಮಾಜಿ ಸಚಿವ ಅಮರನಾಥ ಶೆಟ್ಟಿ ಉದ್ಘಾಟಿಸಿದರರು. ಮುಂಡ್ರುದೆಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಪಂಚದೀವಟಿಗೆಗಳನ್ನು ಬೆಳಗಿಸುವ ಮೂಲಕ ಹಾಗೂ ತೆಂಗು ಹೂವನ್ನು ಅರಳಿಸುವದರ ಮೂಲಕ ಕೃಷಿಸಿರಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿಸಚಿವ ಅಭಯಚಂದ್ರ ಜೈನ್ ಮಾತನಾಡಿ, ‘ಹಿಂದಿನ ಹಾಗೂ ಇಂದಿನ ಕೃಷಿವ್ಯವಸ್ಥೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಕೃಷಿ ಬದುಕಿನ ನೋವು ನಲಿವುಗಳು ಒಬ್ಬ ಕೃಷಿಕನಿಗೆ ಮಾತ್ರ ಗೊತ್ತಾಗಲು ಸಾಧ್ಯ. ಕೃಷಿಯಲ್ಲಿ ಲಾಭವೂ ಇದೆ, […]

ಕಂಬಳದ ಮೇಲಿನ ನಿಷೇಧ ವಿರೋಧಿಸಿ ಬೃಹತ್‌ ಪ್ರತಿಭಟನೆ

Saturday, January 28th, 2017
Kambala-Protest

ಮಂಗಳೂರು : ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲಿನ ನಿಷೇಧ ವಿರೋಧಿಸಿ ಕಡಲ ನಗರಿಯಲ್ಲಿ ಪ್ರತಿಭಟನೆಗಳು ಪ್ರಬಲಗೊಂಡಿವೆ. ಇಂದು ಸಹ ಸಚಿವ ಅಭಯಚಂದ್ರ ಜೈನ್‌ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ( ಹಕ್ಕೊತ್ತಾಯ ಜಾಥಾ ) ನಡೆಯಿತು. ನೂರಾರು ಕೋಣಗಳ ಸಮೇತ ಬೀದಿಗಳಿದ ಸಾವಿರಾರು ಸಂಖ್ಯೆಯ ಕಂಬಳ ಪ್ರಿಯರು ಮೂಡಬಿದರೆಯ ಸ್ವರಾಜ್ ಮೈದಾನದಿಂದ ಪ್ರತಿಭಟನೆ ಜಾಥಾ ಪ್ರಾರಂಭಿಸಿದರು. ಈ ಜಾಥಾ ಸ್ವರಾಜ್‌ ಮೈದಾನದಿಂದ ಕಡಲಕೆರೆವರೆಗೆ ಸಾಗಲಿದೆ. ಪ್ರತಿಭಟನಾ ಮೆರವಣೆಗೆಯಲ್ಲಿ ಕಂಬಳದ ಮೇಲಿನ ನಿಷೇಧಕ್ಕೆ ವಿರೋಧ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು, […]

ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ರಚನೆ

Monday, November 15th, 2010
ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ಸ್ಥಾಪನೆ

ಮಂಗಳೂರು: ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಒಕ್ಕೂಟವನ್ನು ಸೋಮವಾರ ಸಂಜೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೋಟ ಎಂ.ಎಲ್.ಸಿ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಪಂಚಾಯತ್ ಗಳಿಗೆ ಹೆಚ್ಚಿನ ಅಧಿಕಾರಕ್ಕಾಗಿ ಹಾಗೂ ಕೆಲವೊಂದು ಸವಲತ್ತುಗಳನ್ನು ಪಡೆಯಲು ಮತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕಲು ಸಮೂಹಿಕ ತೀರ್ಮಾನಕ್ಕಾಗಿ ಮಂಗಳೂರು ತಾಲೂಕಿನ 49 ಗ್ರಾಂ ಪಂಚಾಯತ್  ಗಳ ಅಧ್ಯಕ್ಷ  ಮತ್ತು ಉಪಾಧ್ಯಕ್ಷರುಗಳ ಒಕ್ಕೂಟವನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ಉದ್ಘಾಟನೆ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ […]