Blog Archive

ಮಂಗಳೂರು : ಜಿಸಿಸಿ ಮೆಡಿಕಲ್ ಸೆಂಟರ್ ಗಳಲ್ಲಿ ನಡೆಯುವ ಅವ್ಯವಹಾರಗಳ ವಿರುದ್ಧ ಪ್ರತಿಭಟನೆ

Wednesday, September 18th, 2019
GCC

ಮಂಗಳೂರು : ಸೌತ್ ಕರ್ನಾಟಕ ಟ್ರಾವಲ್ ಏಜೆಂಟ್ಸ್ ಅಸೋಸಿಯೇಷಿಯನ್ಸ್ ವತಿಯಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳಲು ಮುಖ್ಯವಾದ ಆರೋಗ್ಯ ತಪಾಸಣೆಯ ಸಂದರ್ಭ ಜಿಸಿಸಿ ಮೆಡಿಕಲ್ ಸೆಂಟರ್ ಗಳಲ್ಲಿ ನಡೆಯುವ ಅವ್ಯವಹಾರಗಳ ವಿರುದ್ಧ ಪ್ರತಿಭಟನೆಯು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬುಧವಾರದಂದು ನಡೆಯಿತು. ಪ್ರತಿಭಟನೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಸೌತ್ ಕರ್ನಾಟಕ ಟ್ರಾವಲ್ ಏಜೆಂಟ್ಸ್ ಅಸೋಸಿಯೇಷಿಯನ್ಸ್ನ ಗೌರವಾಧ್ಯಕ್ಷ ರಮೇಶ್ ಪೂಜಾರಿ, ಅಧ್ಯಕ್ಷ ಇಬ್ಬುನ್ ಅಬ್ಬಾಸ್, ಕಾರ್ಯದರ್ಶಿ ಉಮ್ಮರುಲ್ ಪಾರೂಕ್ ಹಾಜರಿದ್ದರು.  

ತುಳುನಾಡ ರಕ್ಷಣಾ ವೇದಿಕೆ (ರಿ) ದಶ ಸಂಭ್ರಮ- ಮಾರ್ಚ್ 29,30,31 ತೌಳವ ಉಚ್ಚಯ

Friday, March 15th, 2019
Tulu-Uchaya

ಮಂಗಳೂರು :  ತುಳುನಾಡ ರಕ್ಷಣಾ ವೇದಿಕೆಯ ದಶಮ ಸಂಭ್ರಮದ ಅಂಗವಾಗಿ ಮಾರ್ಚ್ 29,30,31 ರಂದು ತೌಳವ ಉಚ್ಚಯ (ವಿಶ್ವ ತುಳುವರ ಸಮ್ಮಿಲನ) ನಡೆಯಲಿದೆ. ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ತುರವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ ಸಿರಾಜ್ ಅಡ್ಕರೆ ತುಳುನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ರಾಜಕಿಯೇತರ ಸಂಘಟನೆ ತುಳುನಾಡ ರಕ್ಷಣಾ ವೇದಿಕೆಯಾಗಿದೆ. ಜನಪರ ಹೋರಾಟಗಾರ ಯೋಗೀಶ ಶೆಟ್ಟಿ ಜಪ್ಪು ಇವರ ಸಮರ್ಥ ಸಾರಥ್ಯದಲ್ಲಿ 2009 ರಲ್ಲಿ ಸ್ಥಾಪನೆಗೊಂಡ ಸಂಘಟನೆ 2019 ಜನವರಿ […]

ವೀರ ಯೋಧರ ಮೇಲೆ ನಡೆದ ಅಮಾನುಷ ದಾಳಿಗೆ ತುಳುನಾಡ ರಕ್ಷಣಾ ವೇದಿಕೆ ಖಂಡನೆ

Tuesday, February 19th, 2019
TRV

ಮಂಗಳೂರು  : ಪುಲ್ವಾಮದಲ್ಲಿ ನಮ್ಮ ದೇಶದ ವೀರ ಯೋಧರ ಮೇಲೆ ನಡೆದ ಅಮಾನುಷ ದಾಳಿ ಮತ್ತು ಹತ್ಯಾಕಾಂಡವನ್ನು ತುಳುನಾಡ ರಕ್ಷಣಾ ವೇದಿಕೆ( ರಿ) ತೀವ್ರವಾಗಿ ಖಂಡಿಸುತ್ತದೆ. ನಮ್ಮ ದೇಶವನ್ನು ಕಾಯುವ ಸೈನಿಕರು ಯಾವುದೇ ಕಷ್ಟ ನಷ್ಟವನ್ನು ಲೆಕ್ಕಿಸದೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡುತ್ತಿರುವುದರಿಂದ ನಾವೆಲ್ಲ ಇಂದು ಸುಖ ಸಮೃದ್ಧಿಯಿಂದ ಬದುಕನ್ನು ಸಾಗಿಸುತ್ತಿದ್ದೇವೆ.ನಮ್ಮ ದೆಶದ ಅಸ್ಥಿತ್ವಕ್ಕೆ ಕಂಟಕಪ್ರಾಯವಾಗಿರುವ ಉಗ್ರವಾದಿಗಳಿಗೆ ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನವು ಸಕಲ ನೆರವನ್ನು ನೀಡುತ್ತಿರುವುದು ಕಟುಸತ್ಯ ಸಂಗತಿಯಾಗಿದೆ.ಇಂತಹ ನರಭಕ್ಷಕ ಉಗ್ರಗಾಮಿಗಳಿಂದ ನಮ್ಮ ಹೆಮ್ಮೆಯ ಸೈನಿಕರು […]

ತುಳುನಾಡ ರಕ್ಷಣಾ ವೇದಿಕೆಯಿಂದ ಗಾಯಕ ಗಿರೀಶ್ ರವರಿಗೆ ಸನ್ಮಾನ

Sunday, November 4th, 2018
Yogish-shetty

ಮಂಗಳೂರು  : ತುಳುನಾಡ ರಕ್ಷಣಾ ವೇದಿಕೆ (ರಿ) ಇದರ  ಕಲಾವಿದರ ಘಟಕ  ಸಭೆಯು ತುರವೇ ಕೇಂದ್ರ ಕಛೇರಿಯಲ್ಲಿ ದಿನಾಂಕ 4-11-2018 ಆದಿತ್ಯವಾರ ಬೆಳಿಗ್ಗೆ 10:00 ಕ್ಕೆ ಸರಿಯಾಗಿ ನಡೆಯಿತು, ಈ ಸಭೆಯಲ್ಲಿ 2018-19 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಸುಭಾಷ್ ಶೆಟ್ಟಿ, ಅಧ್ಯಕ್ಷರಾಗಿ ದಿನೇಶ್ ಕಾಪಿಕಾಡ್, ಉಪಾಧ್ಯಕ್ಷರಾಗಿ ದಿನೇಶ್ ಧರ್ಮಸ್ಥಳ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಕುಡ್ಲ, ಜೊತೆ ಕಾರ್ಯದರ್ಶಿಗಳಾಗಿ ಪ್ರಮೋದ್ ಭಟ್, ನಮಿತ ಕೂಳೂರು,ಸಂಘಟನಾ ಕಾರ್ಯದರ್ಶಿಯಾಗಿ ಸುಪ್ರೀತ್ ಕುತ್ತಾರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆಶೀಶ್ […]

ತುಳುನಾಡ ರಕ್ಷಣಾ ವೇದಿಕೆ ಸದಸ್ಯರಿಂದ ಸಂಪಾಜೆ ನಿರಾಶ್ರೀತರಿಗೆ ಅಗತ್ಯ ಸಾಮಾಗ್ರಿ ವಿತರಣೆ

Friday, August 31st, 2018
TRV-sampaje

ಮಂಗಳೂರು : ತುಳುನಾಡ ರಕ್ಷಣಾ ವೇದಿಕೆ ಆಂಬ್ಯುಲೆನ್ಸ್ ಚಾಲಕ ಮಾಲಕರ  ಘಟಕದ ವತಿಯಿಂದ , ಘಟಕದ ಪ್ರಧಾನ ಕಾರ್ಯದರ್ಶಿ ರಾಧಿಕಾರವರ ನೇತ್ರತ್ವದಲ್ಲಿ ಸಂಪಾಜೆ ನಿರಾಶ್ರಿತರ ತಾಣದಲ್ಲಿ ಅಗತ್ಯ ಸಾಮಾಗ್ರಿಗಳಾದ ಬಟ್ಟೆ , ಅಕ್ಕಿ ತರಕಾರಿ ಹಾಗೂ ಇತರ ಸಾಮಾಗ್ರಿಗಳನ್ನು ಗುರುವಾರ ನೀಡಲಾಯಿತು. ಸ್ಥಾಪಕಾದ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ಶಿವ್ ಶೆಟ್ಟಿ, ಭಾರ್ಗವಿ , ಸುನಿಲ್, ಸುಳ್ಯ ಘಟಕ ದ ಅದ್ಯಕ್ಷರಾದ ಪ್ರಶಾಂತ್ ರೈ ಮರವಂಜ, ಶ್ರೀಮತಿ ಪ್ರವೀಣ  ರೈ, ಮತ್ತಿತರ ತುರವೇ ಪ್ರಮುಖರು ಉಪಸ್ಥಿತರಿದ್ದರು.  

ತುಳುನಾಡ ರಕ್ಷಣಾ ವೇದಿಕೆ ವೆಬ್ ಸೈಟ್ ಲೋಕಾರ್ಪಣೆ

Monday, June 25th, 2018
trv website

ಮಂಗಳೂರು :  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿ ಸಭಾಂಗಣದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧಿಕೃತ ಅಂತರ್ಜಾಲ ತಾಣ (ವೆಬ್ ಸೈಟ್) ಸೋಮವಾರ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ. ಭಂಡಾರಿ ಮಾತನಾಡಿ ತುರವೇ ಸಮಾಜದ ನಾಡಿ ಮಿಡಿತವಾಗಿ ಬೆಳೆಯುತ್ತಿದೆ, ಇದರ ಕಾರ್ಯಚಟುವಟಿಕೆಗಳು ಬಹುತೇಕ ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿದ್ದು ತುಳುವರಾದ ನಮಗೆ ಹೆಮ್ಮೆಯ ಸಂಗತಿಯಾಗಿದೆ, ಇದೀಗ ದಶಮಾನೋತ್ಸವದ ಸುಸಂಧರ್ಭದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದರ ವೆಬ್ ಸೈಟ್ ಲೋಕಾರ್ಪಣೆಗೊಳಿಸಿದ್ದು ಶ್ಲಾಘನೀಯ […]

ಕರ್ನಾಟಕ ಬಂದ್: ಮಂಗಳೂರಿನಲ್ಲಿ ‘ಕರವೇ’ ಕಾರ್ಯಕರ್ತರ ಬೆವರಿಳಿಸಿದ ‘ತುರವೇ’

Thursday, January 25th, 2018
strike-mangaluru

ಮಂಗಳೂರು: ಮಹಾದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ಮಂಗಳೂರಿನಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಇಂದಿನ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಯಾವೊಂದು ಸಂಘಟನೆಗಳೂ ಬೆಂಬಲ ಘೋಷಿಸಿರದ ಹಿನ್ನೆಲೆಯಲ್ಲಿ ಬಂದ್ ಬಿಸಿ ಕರಾವಳಿ ಭಾಗಕ್ಕೆ ತಟ್ಟಿಲ್ಲ. ಜಿಲ್ಲೆಯಲ್ಲಿ ಬಂದ್ ಇಲ್ಲದಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಮುಂಜಾನೆ ಸಂಚಾರ ಸ್ಥಗಿತಗೊಳಿಸಿದ್ದವು. ಇದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ಜನಿಕರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ […]

ನಟ ಇಳೈಕಟ್ಟು ನಂಬೂದರಿ ತುಳುನಾಡ ರಕ್ಷಣಾ ವೇದಿಕೆ ಕಛೇರಿಗೆ ಭೇಟಿ

Tuesday, January 2nd, 2018
Namboothri Mangalore

ಮಂಗಳೂರು : ಮಾಲಯಾಳಂ ಚಲನಚಿತ್ರ ಹಾಗೂ ಕಿರುತೆರೆ ನಟ ಇಳೈಕಟ್ಟು ನಂಬೂದರಿ ಮಂಗಳವಾರ ಮಂಗಳೂರಿನ ಸ್ಟೇಟ್ ಬ್ಯಾಂಕ್  ಬಳಿ ಇರುವ ತುಳುನಾಡ ರಕ್ಷಣಾ ವೇದಿಕೆಯ ಕಛೇರಿಗೆ ಭೇಟಿ ನೀಡಿದರು. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೊಗೀಶ್ ಶೆಟ್ಟಿ ಜಪ್ಪು ಸಾಲು ಹೊದಿಸಿ, ಮಾಲೆ ಹಾಕಿ ಸಮ್ಮಾನಿಸಿದರು. ಬಳಿಕ ಮಾತನಾಡಿದ ನಂಬೂದರಿ ತುಳುನಾಡ ರಕ್ಷಣಾ ವೇದಿಕೆಯ ಬಗ್ಗೆ ಇಂಟರ್ನೆಟ್ ಮೂಲಕ ತಿಳಿದು ಸಂತೋಷವಾಯಿತು. ಸಂಘನೆಯ ಜನಪರ ಕೆಲಸಗಳು ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸಿದರು. ಇಳೈಕಟ್ಟು ನಂಬೂದರಿ ಮಲಯಾಳಂನಲ್ಲಿ ಇಪ್ಪತ್ತಕ್ಕೂ […]

ತುಳುನಾಡ ಕಬ್ಬಡಿ 2018 ಕರಪತ್ರ ಬಿಡುಗಡೆ

Saturday, December 23rd, 2017
Tulunad Kabbadi 2018

ಮಂಗಳೂರು  : ತುಳುನಾಡ ರಕ್ಷಣಾ ವೇದಿಕೆಯ ಯುವ ಘಟಕ ಇದರ ವತಿಯಿಂದ ಫೆಬ್ರವರಿ 24, 2018ರಂದು ನಡೆಯುವ ತುಳುನಾಡ ಕಬ್ಬಡಿ 2018 ಇದರ ಕರಪತ್ರ ಬಿಡುಗಡೆಯ ಕಾರ್ಯಕ್ರಮವನ್ನು ಮಂಗಳೂರಿನ  ಪ್ರಸಿದ್ಧ ಮಂಗಳದೇವಿ ದೇವಾಲಯ ದಲ್ಲಿ  ಹಮ್ಮಿಕೊಳ್ಳಲಾಯಿತು. ದೇಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀಯುತ ರಮಾನಾಥ ಹೆಗ್ಡೆ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜೆಪ್ಪು,  ಜ್ಯೋತಿ ಜೈನ್,  ಹರೀಶ್ ಶೆಟ್ಟಿ ಶಕ್ತಿ ನಗರ, ಆನಂದ್ ಅಮಿನ್ ಅಡ್ಯಾರ್, ಪ್ರಸಾದ್ , ರೇಷ್ಮೆ ಉಳ್ಲಾಲ್, ರಕ್ಷಿತ್ ಬಂಗೇರ […]

ಗೂಡ್‌ಶೆಡ್ ಬಳಿ ಅವೈಜ್ಞಾನಿಕ ರೈಲ್ವೇ ಟ್ರಾಕ್ ನಿರ್ಮಾಣ ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

Tuesday, December 5th, 2017
trv

ಮಂಗಳೂರು  : ಗೂಡ್‌ಶೆಡ್ ರಸ್ತೆ ಹಾಗೂ ರೊಸಾರಿಯೋ ಚರ್ಚ್ ಕಂಪೌಂಡ್ ನಿವಾಸಿಗಳು ಈ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದು, ಈ ಪ್ರದೇಶದ ಸುತ್ತ ಧಾರ್ಮಿಕ ಕೇಂದ್ರಗಳಾದ ಸೋಮನಾಥ ಮಂದಿರ, ರಾಜಲಕ್ಷ್ಮಿ ಮಂದಿರ, ಚಿನ್ಮಯ ಮಿಷನ್, ರೊಸಾರಿಯೋ ಚರ್ಚ್ ಇನ್ನಿತರ ಧಾರ್ಮಿಕ ಕೇಂದ್ರಗಳು ಹಾಗೂ ವಿದ್ಯಾಸಂಸ್ಥೆಗಳಾದ ರೊಸಾರಿಯೋ ಶಾಲೆ, ಸೈಂಟ್ ಆನ್ಸ್ ಶಾಲೆ, ದ.ಕ.ಜಿ.ಪ ನೀರೇಶ್ವಾಲ್ಯ ಅದಲ್ಲದೆ ಶಿಕ್ಷಕಿಯರ ತರಬೇತಿ ಸಂಸ್ಥೆಗಳಿದ್ದು, ಅದರೊಂದಿಗೆ ಕೆನರಾ ಬ್ಯಾಂಕ್, ಮಹಾಲಕ್ಷ್ಮಿ ಕೋ-ಅಪರೇಟಿವ್ ಸೊಸೈಟಿಗಳೊಂದಿಗೆ ಹಿರಿಯ ನಾಗರಿಕರ ವಸತಿ ನಿಲಯಗಳೊಂದಿಗೆ ಇಲ್ಲಿನ ಜನರು […]