Blog Archive

ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್, ಬಷೀರ್ ಮನೆಗೆ ಸಿಎಂ ಭೇಟಿ

Monday, January 8th, 2018
deepak-rao

ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾದ ದೀಪಕ್ ರಾವ್ ಮತ್ತು ಅಬ್ದುಲ್ ಬಷೀರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಮೊದಲಿಗೆ ಸುರತ್ಕಲ್ ಕಾಟಿಪಳ್ಳದಲ್ಲಿರುವ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಸಂಜೆ ವೇಳೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು. ಸಿ‌.ಎಂ ಅವರೊಂದಿಗೆ ಸಚಿವ ರಮನಾಥ್ ರೈ, ಯು.ಟಿ ಖಾದರ್, ಮಂಗಳೂರು ಮೇಯರ್ ಕವಿತಾ ಸನಿಲ್ ಕೂಡ ದೀಪಕ್ ಮನೆಗೆ ಭೇಟಿ ನೀಡಿದರು. ಸಂಕಷ್ಟಕ್ಕೆ ಸ್ಪಂದಿಸಿದ […]

ದೀಪಕ್‌ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಜನತೆ

Saturday, January 6th, 2018
support

ಮಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ದೀಪಕ್‌ ರಾವ್‌ ಅವರ ಕುಟುಂಬದ ಆರ್ಥಿಕ ನೆರವಿಗೆ ಸಾರ್ವಜನಿಕರು ಸ್ಪಂದಿಸಿದ್ದು, ಅವರ ತಾಯಿ ಪ್ರೇಮಾರ ಬ್ಯಾಂಕ್‌ ಖಾತೆಗೆ ಶನಿವಾರ ಮಧ್ಯಾಹ್ನದ ವೇಳೆಗೆ 24 ಲಕ್ಷ ರೂಪಾಯಿ ಜಮೆಯಾಗಿದೆ.ಶುಕ್ರವಾರ ಸಂಜೆವರೆಗೆ 17,43,859 ರೂ. ಜಮೆಯಾಗಿತ್ತು. ಈ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಸಹಾಯಹಸ್ತ ನೀಡಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ. ದೀಪಕ್‌ ಸ್ನೇಹಿತರು ಅವರ ತಾಯಿಯ ಖಾತೆಗೆ ಹಣ ಜಮೆ ಮಾಡುವಂತೆ ವಿನಂತಿಸಿ ಫೇಸ್‌ಬುಕ್‌ ಮತ್ತು […]

ದೀಪಕ್‌ ಹತ್ಯೆಗೆ 2 ದಿನ ಮೊದಲೇ ಹೊಂಚು

Saturday, January 6th, 2018
supari

ಮಂಗಳೂರು: ಕಾಟಿಪಳ್ಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಅವರನ್ನು ಹತ್ಯೆ ಮಾಡಲು ದುಷ್ಕರ್ಮಿಗಳು ಎರಡು ದಿನ ಮೊದಲೇ ಹೊಂಚು ಹಾಕಿದ್ದರಾದರೂ ಕೊನೆಯ ಗಳಿಗೆಯಲ್ಲಿ ವಿಫಲವಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಬುಧವಾರ ಮಧ್ಯಾಹ್ನ 1.15ಕ್ಕೆ ದೀಪಕ್‌ ರಾವ್‌ ಕೊಲೆಯಾಗಿದ್ದಾರೆ. ಆದರೆ ಅದಕ್ಕೆ ಎರಡು ದಿನ ಹಿಂದೆಯೇ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳು ವಾಹನದಲ್ಲಿ ಆಯುಧಗಳನ್ನು ಹಿಡಿದು ಕೊಂಡು ಕಾಟಿಪಳ್ಳ, ಕೈಕಂಬ ಪ್ರದೇಶದಲ್ಲಿ ಓಡಾಡುತ್ತಿದ್ದರು ಎಂಬ ವಿಚಾರ ನೌಶಾದ್‌ ಮತ್ತು ಮಹಮದ್‌ ಇಶಾìನ್‌ ವಿಚಾರಣೆಯ ವೇಳೆ ಪೊಲೀಸರಿಗೆ […]

ದೀಪಕ್‌ ನಿವಾಸಕ್ಕೆ ಸಂಸದ ನಳಿನ್‌ ಭೇಟಿ

Saturday, January 6th, 2018
Nalin-kumar

ಮಂಗಳೂರು: ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಶುಕ್ರವಾರ ಸಂಜೆ ದೀಪಕ್‌ ರಾವ್‌ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ದೀಪಕ್‌ ರಾವ್‌ ಕುಟುಂಬದ ದುಃಖ ದಲ್ಲಿ ಪಕ್ಷ ಭಾಗಿಯಾಗುತ್ತದೆ. ಇಡೀ ಸಮಾಜ ಅವರ ಜತೆಗಿದೆ. ಕುಟುಂಬದ ಏಕೈಕ ಆಸರೆಯಾಗಿದ್ದ ಅಮಾಯಕ ಯುವಕನ ಬಲಿಯಾಗಿದೆ. ಕುಟುಂಬದ ಜೀವನಾಧಾರಕ್ಕೆ ಪಕ್ಷದ ವತಿಯಿಂದ 5 ಲಕ್ಷ ರೂ. ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಸಹಕಾರ ದಿಂದ 5 ಲಕ್ಷ ರೂ. […]

ಮಂಗಳೂರಿನಲ್ಲಿ ಬಶೀರ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ನಾಲ್ವರ ಬಂಧನ

Saturday, January 6th, 2018
karavali

ಮಂಗಳೂರು: ದೀಪಕ್ ಹತ್ಯೆಯಾದ ದಿನವೇ ಕೊಟ್ಟಾರ ಚೌಕಿ ಬಳಿ ಬಶೀರ್ ಎಂಬುವವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಲ್ಲಿ ಇಬ್ಬರು ಪಡೀಲ್ ನಿವಾಸಿಗಳಾಗಿದ್ದು, ಒಬ್ಬ ಮಂಜೇಶ್ವರ ಹಾಗೂ ಇನ್ನೊಬ್ಬ ಕಾಸರಗೋಡಿನವರು. ನಾಲ್ವರೂ ಕೂಡ ಕ್ರಿಮಿನಲ್ ಹಿನ್ನೆಲೆಯವರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಟ್ಟಾರದಲ್ಲಿ ಫಾಸ್ಟ್‌ಫುಡ್ ವ್ಯಾಪಾರ ಮಾಡುತ್ತಿದ್ದ ಬಶೀರ್ (48) ಎಂಬುವವರು ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಹೊಡೆದು ಪರಾರಿಯಾಗಿದ್ದರು. ಬಶೀರ್ ಎದೆಯ ಕೆಳಭಾಗ, ಗಂಟಲು […]

ಶಾಸಕರ ಪರಿಹಾರ ನಿಧಿ ಬೇಡ: ದೀಪಕ್‌ ತಾಯಿ ಪ್ರೇಮಾ

Friday, January 5th, 2018
deepak

ಮಂಗಳೂರು: ಮೃತ ದೀಪಕ್ ಕುಟುಂಬಕ್ಕೆ ಶಾಸಕ ಮೊಯ್ದಿನ್ ಬಾವ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಆದರೆ ತಮಗೆ ಶಾಸಕರ ಪರಿಹಾರ ನಿಧಿ ಬೇಡ, ನನ್ನ ಮಗನಿಗಿಂತ ಅವರ ಪರಿಹಾರದ ಹಣ ದೊಡ್ಡದಲ್ಲ. ಸರ್ಕಾರದಿಂದ ಬರುವ ಪರಿಹಾರವೇ ಸಾಕು ಎಂದು ದೀಪಕ್ ತಾಯಿ ಪ್ರೇಮಾ ಹೇಳಿದ್ದಾರೆ. ಮಗನನ್ನು ಕಳೆದುಕೊಂಡ ದುಃಖವನ್ನು ಸಂಬಂಧಿಕರಲ್ಲಿ ತೋಡಿಕೊಂಡ ಪ್ರೇಮಾ, ಮಗ ದೀಪು ಮಧ್ಯಾಹ್ನ ಮನೆಗೆ ಊಟಕ್ಕೆ ಬರುತ್ತಿದ್ದ. ನಿನ್ನೆಯೂ ಎಂದಿನಂತೆ ಬರುವ ಸಮಯದಲ್ಲೇ ಅವನನ್ನು ಕೊಲೆ ಮಾಡಿದ್ದಾರೆ. ಆತನನ್ನು ಕೊಂದವರಿಗೆ ದೇವರು […]

ದೀಪಕ್ ಹತ್ಯೆ ಪ್ರಕರಣ…ಪೊಲೀಸರ ಕ್ಷೀಪ್ರ ಕಾರ್ಯಾಚರಣೆಗೆ ನಗದು ಬಹುಮಾನ

Friday, January 5th, 2018
nagara-police

ಮಂಗಳೂರು: ಜಿಲ್ಲೆಯ ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಸಂಬಂಧ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್‌ ಮಾಡಿ ಬಂಧಿಸಿದ್ದು, ಪೊಲೀಸರ ಕ್ಷೀಪ್ರ ಕಾರ್ಯಾಚರಯನ್ನು ಎಡಿಜಿಪಿ ಕಮಲ್‌ ಪಂತ್‌ ಶ್ಲಾಘಿಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಈ ಕ್ಷೀಪ್ರ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್‌ ತಂಡಕ್ಕೆ 1.20 ಲಕ್ಷ ರೂ. ಬಹುಮಾನ ಘೋಷಿಸಿದರು. ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಕಾವೇರಿ ರಸ್ತೆಯ ಚೆಕ್‌ಪೋಸ್ಟ್ ಬಳಿ ವೇಗವಾಗಿ ಹೋಗುತ್ತಿದ್ದಾಗ […]

ದೀಪಕ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಸಿಟಿ ರವಿ ಆಗ್ರಹ

Thursday, January 4th, 2018
C-T-Ravi

ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ನ ಕಾಟಿಪಳ್ಳದಲ್ಲಿ ದುರ್ಷರ್ಮಿಗಳಿಂದ ಹತ್ಯೆಗೇಡಾದ ದೀಪಕ್ ರಾವ್ ಅವರ ಕುಟುಂಬಕ್ಕೆ ಪರಿಹಾರವಾಗಿ ರಾಜ್ಯ ಸರಕಾರ 25 ಲಕ್ಷ ರೂಪಾಯಿ ನೀಡಬೇಕೆಂದು ಬಿಜೆಪಿ ಮುಖಂಡ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ದೀಪಕ್ ಕೊಲೆ ಪ್ರಕರಣ, ಸಿನಿಮೀಯ ರೀತಿಯಲ್ಲಿ 4 ಶಂಕಿತರ ಬಂಧನ ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟ ದೀಪಕ್ ರಾವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ಎ.ಜೆ.ಆಸ್ಪತ್ರೆಗ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಎ.ಜೆ. ಆಸ್ಪತ್ರೆಗೆ ಭೇಟಿ ನೀಡಿದ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ […]

ದೀಪಕ್ ಕೊಲೆ ಪ್ರಕರಣ, ಸಿನಿಮೀಯ ರೀತಿಯಲ್ಲಿ 4 ಶಂಕಿತರ ಬಂಧನ

Thursday, January 4th, 2018
Deepak-rao

ಮಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ನಾಲ್ವರು ಯುವಕರನ್ನು ಮಂಗಳೂರು ನಗರ ಪೊಲೀಸರು ಸಿನಿಮೀಯ ರೀತಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಯುವಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಶಂಕಿತ ಆರೋಪಿಗಳಿದ್ದ ಕಾರನ್ನು ಸುರತ್ಕಲ್ ಬಳಿಯಿಂದ ಬೆನ್ನಟ್ಟಿದ್ದ ಪೊಲೀಸರು ಮಂಗಳೂರು- ಮೂಡುಬಿದಿರೆ ಹೆದ್ದಾರಿಯಲ್ಲಿರುವ ಮಿಜಾರು ಬಳಿ ಗುಂಡು ಹಾರಿಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನ 1.30ಕ್ಕೆ ಮಂಗಳೂರಿನ ಕಾಟಿಪಳ್ಳದಲ್ಲಿ ಕೊಲೆ ನಡೆದಿತ್ತು. ಕೆಲವೇ ಸಮಯದಲ್ಲಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಅವರೇ ಕೊಲೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ವಿಚಾರಣೆ […]