ಮಲಗಿದ್ದ ಮಗುವಿಗೆ ಹಾವು ಕಡಿತ : ಮಗು ಸಾವು

Saturday, September 14th, 2019
Deepak

ಕಾಸರಗೋಡು : ಗಾಢ ನಿದ್ರೆಯಲ್ಲಿ ಕನಸು ಕಾಣುತ್ತ ಮಲಗಿದ್ದ ಎಳೆಯ ಕಂದಮ್ಮನಿಗೆ ನಾಗರ ಹಾವು ಕಡಿದು ಸಾವನ್ನಪ್ಪಿರುವ ಘಟನೆ ಪೆರ್ಲ ಸಮೀಪದ ಕಜಂಪಾಡಿಯಲ್ಲಿ ಸೆಪ್ಟೆಂಬರ್ 14 ರ ಶನಿವಾರ ನಡೆದಿದೆ. ವಾಸಿಸಲು ಮನೆಯೂ ಇಲ್ಲದೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಕಾಂತಪ್ಪ, ಕುಸುಮ ದಂಪತಿ ಪುತ್ರ ಮೃತ ದೀಪಕ್ (3). ತಂದೆ ತಾಯಂದಿರ ನಡುವೆ ಮಲಗಿ ಗಾಢವಾಗಿ ನಿದ್ರಿಸುತ್ತಿದ್ದ ಈ ಮಗು, ಒಂದೇ ಸಮನೆ ಅಳುತ್ತಿರುವುದು ಕೇಳಿ ಎಚ್ಚರಗೊಂಡ ದಂಪತಿ, ಗಮನಿಸಿದಾಗ ಕಪಾಟಿನಡಿಯಿಂದ ಹಾವು ಕಂಡುಬಂದಿದೆ. ಕೇರೆ ಹಾವು […]

ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು!

Friday, March 23rd, 2018
deepak

ಮೈಸೂರು: ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ. ಕ್ಯಾತಮಾರನಹಳ್ಳಿಯ ದೀಪಕ್ (23) ಎಂಬಾಥನೇ ಆತ್ಮಹತ್ಯೆ ಮಾಡಿಕೊಂಡವ. ದೀಪಕ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಹುಡುಗಿಯ ಮನೆಯವರಿಗೆ ಗೊತ್ತಾಗಿತ್ತು. ನೀನು ಪ್ರೀತಿಸುತ್ತಿರುವ ಹುಡುಗನನ್ನೇ ಮದುವೆಯಾಗು ಎಂದು ಯುವತಿಗೆ ಅವಳ ಮನೆಯವರು ಒಪ್ಪಿಗೆ ನೀಡಿದ್ದರು. ಈ ವಿಚಾರವನ್ನ ಯುವತಿ ದೀಪಕ್‌ಗೆ ತಿಳಿಸಿ, ಮದುವೆಯಾಗೋಣ ಎಂದು ಒತ್ತಾಯಿಸಿದ್ದಳು. ಆದರೆ ಈಗಲೇ ಮದುವೆ ಬೇಡ ಎಂದು ದೀಪಕ್ ನಿರಾಕರಿಸಿದ್ದ ಎನ್ನಲಾಗಿದೆ. ಇದರಿಂದ ಯುವತಿಯ ಪೋಷಕರು […]

ಹತ್ಯೆಗೀಡಾದ ದೀಪಕ್‌ ನಿವಾಸಕ್ಕೆ ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ಭೇಟಿ

Friday, January 19th, 2018
deepak

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಮನೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ‌ ಸಚಿವ ಅನಂತ ಕುಮಾರ್ ಹೆಗಡೆ ಭೇಟಿ ನೀಡಿ ಕುಟುಂಬದ ಜತೆ ಮಾತುಕತೆ ನಡೆಸಿದರು. ಮಾತುಬಾರದ ದೀಪಕ್ ಸಹೋದರ ಸತೀಶ್‌ಗೆ ಕೆಐಒಸಿಎಲ್‌ನಲ್ಲಿ ಕೆಲಸದ ಭರವಸೆ ನೀಡಿದ ಸಚಿವರು, ಕೆಐಒಸಿಎಲ್‌ನ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದೇನೆ. ಯಾವುದೇ ಕ್ಷಣದಲ್ಲಿ ದೀಪಕ್ ಸಹೋದರ ಸತೀಶ್ ಕೆಲಸಕ್ಕೆ ಸೇರಿಕೊಳ್ಳಬಹುದು ಎಂದರು. ಮೃತರಾದ ದೀಪಕ್‌ರನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ದೀಪಕ್ ಸಹೋದರ ಸತೀಶ್‌ಗೆ ಕೆಲಸದ ವ್ಯವಸ್ಥೆ ಮಾಡಲಾಗಿದೆ. ಹಿಂದೂ ಸಮಾಜದ ಜತೆ ನಾನಿದ್ದೇನೆ […]

ಡಿವೈಎಫ್ ಐ ಉಳ್ಳಾಲ: ದೀಪಕ್, ಬಶೀರ್ ಅವರ ಗೌರವಾರ್ಥ ಶ್ರದ್ಧಾಂಜಲಿ ಸಭೆ

Friday, January 12th, 2018
deepak

ಮಂಗಳೂರು: ಕೋಮುವಾದ, ಮತೀಯವಾದದ ಹೆಸರಿನಲ್ಲಿ ದಾಳಿ, ದಬ್ಬಾಳಿಕೆಗಳು ನಿರಂತರವಾಗಿ ನಡೆದು ಜಿಲ್ಲೆಯ ಹೆಸರನ್ನು ಹಾಳು ಮಾಡುತ್ತಿದೆ. ಧರ್ಮಗಳ ನಡುವಿನ ಸಂಬಂಧಗಳಿಗೆ ಹುಳಿ ಹಿಂಡಿ, ಅಧಿಕಾರದ ಖುರ್ಚಿಗೆ ಅಮಾಯಕರ ಕೊಲೆ ನಡೆಸಿ ಸಮಾಜದ ಅಶಾಂತಿಗೆ ಹಲವರು ಕಾರಣ ರಾಗುತ್ತಿದ್ದಾರೆ. ಇದರಿಂದಾಗಿ ಜನರ ನಡುವೆ ಅಪನಂಬಿಕೆ ಸೃಷ್ಟಿ ಮಾಡುವ ತುಳುನಾಡಿನ ಸೌಹಾರ್ದತೆಗೆ ಏಟನ್ನು ನೀಡುವ ಕೆಲಸ ಆಗಿದೆ. ಮತೀಯವಾ ದದ ಹೆಸರಿನಲ್ಲಿ ನಡೆಯುವ ಕೊಲೆಗಳಿಂದಾಗಿ ಭಾವೈಕ್ಯತೆಯನ್ನು ನಾಶ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ […]

ದೀಪಕ್‌ ಕೊಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಯತ್ನಿಸಿದ ಪೊಲೀಸರಿಗೆ ಸನ್ಮಾನ

Friday, January 12th, 2018
T-R-Suresh

ಮಂಗಳೂರು: ಕಾಟಿಪಾಳ್ಳ ದೀಪಕ್‌ ಕೊಲೆ ಪ್ರಕರಣದಲ್ಲಿ ಕರ್ತವ್ಯ ನಿಷ್ಠೆ ಮೆರೆದ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತರು ಸನ್ಮಾನಿಸಿದರು. ಜ. 3 ರಂದು ನಗರದ ಸುರತ್ಕಲ್‌ನ ಕಾಟಿಪಾಳ್ಳದಲ್ಲಿ ನಡೆದಿದ್ದ ದೀಪಕ್‌ ರಾವ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಆರೋಪಿಗಳನ್ನು ಹಿಡಿಯಲು ಯತ್ನಿಸಲಾಗಿತ್ತು. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಂಜೆ ಎಂಬ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ವಾಹನವನ್ನು ತಪಾಸಣೆ ಮಾಡುತ್ತಿದ್ದ ಸಮಯ ಆರೋಪಿಗಳು ಸಂಚರಿಸಿದ ಕಾರನ್ನು ತಡೆಯಲು ಪ್ರಯತ್ನಿಸಿದರು. ಪ್ರಕರಣದ ಆರೋಪಿಗಳ ಪತ್ತೆಗೆ […]

ಬಶೀರ್, ದೀಪಕ್ ಕೊಲೆ : ಆರೋಪಿಗಳ ಪರ ವಾದಿಸದಂತೆ ವಕೀಲರಿಗೆ ಮನವಿ

Wednesday, January 10th, 2018
basheer

ಮಂಗಳೂರು: ಬಶೀರ್ ಹಾಗೂ ದೀಪಕ್ ಕೊಲೆ ಪ್ರಕರಣಗಳ ಆರೋಪಿಗಳ ಪರ ಯಾವುದೇ ಕಾರಣಕ್ಕೂ ದ.ಕ. ಜಿಲ್ಲೆಯ ಯಾವ ವಕೀಲರೂ ವಕಾಲತ್ತು ಮಾಡಬಾರದು. ಈ ಕುರಿತು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ವಕೀಲರ ಸಂಘಕ್ಕೆ ನಾಳೆ ಮನವಿ ಸಲ್ಲಿಸಲಾಗುವುದು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ವಕೀಲರು ಆರೋಪಿಗಳ ಪರ ನಿಂತರೆ ಅವರು ದ.ಕ. ಜಿಲ್ಲೆಯ ಕೋಮು ಸೌಹಾರ್ದತೆಯ ವಿರುದ್ಧವಿದ್ದಾರೆ ಎಂದರ್ಥ ಎಂದರು. ದೀಪಕ್ ರಾವ್ […]

ದೀಪಕ್ ಹತ್ಯೆ ಪ್ರಕರಣ: ಸಾಮಾಜಿಕ ಜಾಲತಾಣ ಬದಲು ಪೊಲೀಸರಿಗೆ ಮಾಹಿತಿ ನೀಡಿ -ಸಚಿವ ಖಾದರ್

Tuesday, January 9th, 2018
U-T-kader

ಮಂಗಳೂರು: ಕಾಟಿಪಳ್ಳದ ದೀಪಕ್ ರಾವ್ ಹತ್ಯೆಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮತ್ತು ಹೇಳಿಕೆ ನೀಡುವ ಬದಲು ವಿಷಯ ಗೊತ್ತಿದ್ದರೆ ಅದನ್ನು ಪೊಲೀಸರಿಗೆ ನೀಡಬಹುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು. ಮಂಗಳವಾರ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹಿತ ಘಟನೆಯ ಬಗ್ಗೆ ವಿವರ ಇರುವವರು ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಬದಲು ಅಥವಾ ನೇರ ಹೇಳಿಕೆ ನೀಡುವ ಬದಲು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ತನಿಖೆಗೆ ಸಹಕಾರಿಯಾಗಲಿದೆ […]

ದೀಪಕ್ ಕೊಲೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಕೈವಾಡದ ಆರೋಪದಿಂದ ಕುಮಾರಸ್ವಾಮಿ ಯೂಟರ್ನ್ ಹೊಡೆದರೆ ?

Tuesday, January 9th, 2018
Kumaraswamy

  ಮಂಗಳೂರು: ಕಾಟಿಪಳ್ಳದ ದೀಪಕ್ ರಾವ್ ಕೊಲೆ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದವಾಗಿ ಬೆಳೆದಿದೆ. ಮೈಸೂರಲ್ಲಿ ಸೋಮವಾರ ಬೆಳಗ್ಗೆ ಮಾತನಾಡಿದ ಕುಮಾರಸ್ವಾಮಿ, ದೀಪಕ್ ಕೊಲೆ ಕೇಸಲ್ಲಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡವಿದೆ ಎಂದು ಹೇಳಿದ್ದು ವರದಿಯಾಗಿತ್ತು. ಬಳಿಕ ಈ ಬಗ್ಗೆ ಕುಮಾರಸ್ವಾಮಿ ಯೂಟರ್ನ್ ಹೊಡೆದು ತನಗೆ ಬಂದಿರುವ ಮಾಹಿತಿ ತಪ್ಪಿರಬಹುದು ಎಂದು ಹೇಳಿದ್ದಾರೆ ಎಂದು ಸುದ್ದಿಯಾಯಿತು. ಕುಮಾರಸ್ವಾಮಿ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ […]

ದೀಪಕ್‌ ಮನೆಗೆ ಚರ್ಕವರ್ತಿ, ಪ್ರಥಮ್‌ ಭೇಟಿ ಸಾಂತ್ವನ

Monday, January 8th, 2018
pratham

ಮಂಗಳೂರು: ದುಷ್ಕರ್ಮಿಗಳ ದಾಳಿಗೊಳಗಾಗಿ ಹತ್ಯೆಗೀಡಾಗಿದ್ದ ದೀಪಕ್‌ ರಾವ್‌ ಅವರ ಮನೆಗೆ ಭಾನುವಾರ ಚಿಂತಕ,ವಾಗ್ಮಿ ಚರ್ಕವರ್ತಿ ಸೂಲಿಬೆಲೆ ಮತ್ತು ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಚಕ್ರವರ್ತಿ ಅವರು ದೀಪಕ್‌ ಅವರ ತಾಯಿ ಪ್ರೇಮಲತಾ ಅವರೊಂದಿಗೆ ಕೆಲ ಕಾಲ ಮಾತನಾಡಿ ಸಾಂತ್ವನ ಹೇಳಿದರು. ಪ್ರಥಮ್‌ ವೈಯಕ್ತಿಕವಾಗಿ 25 ಸಾವಿರ ರೂಪಾಯಿ ಸಹಾಯಧನ ವಿತರಿಸಿದರು. ಭೇಟಿ ಮಾಡಿ ಹೊರ ಬಂದ ಬಳಿಕ ಕಿಡಿ ಕಾರಿದ ಪ್ರಥಮ್‌ ‘ಮಂಗಳೂರನ್ನು ಯಾಕೆ ಕ್ಲೀನ್‌ ಸಿಟಿ ಎನ್ನುತ್ತೀರಿ […]

ದೀಪಕ್‌ ಆಸೆ ಈಡೇರಿದಾಗ ಆತನ ಆತ್ಮಕ್ಕೆ ಶಾಂತಿ: ನಳಿನ್‌

Monday, January 8th, 2018
Nalin-kmar

ಸುರತ್ಕಲ್: ದೀಪಕ್ ರಾವ್ ದೇಶ ಸೇವೆಗಾಗಿ ಸಂಘಟನೆಗೆ ಬಂದಿದ್ದರು, ಅವರು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಅವರ ಆಸೆಗಳು ಬತ್ತಬಾರದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್ ಹೇಳಿದರು. ಭಾನುವಾರ ಸುರತ್ಕಲ್‌ ಸಮೀಪದ ಕೃಷ್ಣಾಪುರ 3ನೇ ಬ್ಲಾಕ್‌ನ ನಾರಾಯಣ ಗುರು ಶಾಲಾ ಮೈದಾನದಲ್ಲಿ ಮೃತ ದೀಪಕ್‌ ಅವರಿಗೆ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ದೀಪಕ್‌ ಅವರ ಆಸಗಳನ್ನು ಈಡೇರಿಸಲು ನಾವು ಮುಂದಾಗಬೇಕು. ಅಗಲೇ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಂಘರ್ಷಗಳಿಂದ ಸಾಮರಸ್ಯ ಕದಡುತ್ತದೆಯೇ ಹೊರತು ಬಾಂಧವ್ಯಗಳು […]