Blog Archive

ನರೇಶ್ ಶೆಣೈ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧಿಶರು

Wednesday, August 10th, 2016
Naresh Shenoy

ಮಂಗಳೂರು: ನಗರದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಆರ್‌‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನರೇಶ್ ಶೆಣೈ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಮಂಗಳವಾರ ನರೇಶ್ ಶೆಣೈ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧಿಶರು ತಿರಸ್ಕರಿಸಿದ್ದಾರೆ. ಕೊಲೆ ನಡೆದ ಕೆಲ ತಿಂಗಳುಗಳಾದ ಬಳಿಕ ಪೊಲೀಸರಿಗೆ ಶರಣಾದ ನರೇಶ್, ತಲೆಮರೆಸಿಕೊಂಡಿದ್ದ ವೇಳೆ ಜಿಲ್ಲಾ ಮತ್ತು ಹೈಕೋರ್ಟ್‍ನಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಿದ್ದರೂ ದೊರೆತಿರಲಿಲ್ಲ. ಬಂಧಿತ 7 ಮಂದಿ ಪೈಕಿ […]

ಸೆಂಟ್ ಥಾಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀರಾಮಸೇನೆ ಕಾರ್ಯಕರ್ತರ ದಾಳಿ

Wednesday, August 3rd, 2016
Thomas-Kannada-Medium-School

ಮಂಗಳೂರು: ನೀರುಮಾರ್ಗ ಸಮೀಪದ ಬೊಂಡಂತಿಲ ಸೆಂಟ್ ಥಾಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅರೇಬಿಕ್ ಭಾಷೆ ಕಲಿಸುವುದನ್ನು ವಿರೋಧಿಸಿ ದಾಳಿ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ಸುಮಾರು 30 ಮಂದಿ ಶಾಲೆಗೆ ನುಗ್ಗಿ ಮಕ್ಕಳ ಪುಸ್ತಕಗಳನ್ನು ಕಿತ್ತುಕೊಂಡಿದ್ದಲ್ಲದೆ, ಮಕ್ಕಳಿಗೆ ಅರೇಬಿಕ್ ಕಲಿಸದಂತೆ ಶಿಕ್ಷಕರಿಗೆ ಧಮ್ಕಿ ಹಾಕಿದ್ದರು. ಈ ಸಂಬಂಧ ಶಿಕ್ಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬೊಂಡಂತಿಲ ನಿವಾಸಿಗಳಾದ ಸುನಿಲ್, ನಿತಿನ್, ರಾಜೇಶ್, ರಾಘವೇಂದ್ರ, ರವಿ, ನಿತಿನ್ ಶೆಟ್ಟಿ, ಕಿಶೋರ್, ಸನಿಲ್, […]

ಮೋಹನ್ ರಾಣ್ಯ ಎಂಬವರನ್ನು ಹತೈಗೈದ ಆರೋಪಿ ಮೊಹಮ್ಮದ್ ಆಸೀಫ್ ಚಿಕ್ಕಮಗಳೂರು ಬಳಿ ಸೆರೆ

Saturday, October 19th, 2013
Mohammed-Asif

ಮೂಲ್ಕಿ: ಕಿನ್ನಿಗೋಳಿ ಮೂರು ಕಾವೇರಿ ಬಳಿಯ ನಿವಾಸಿ ಮೋಹನ್ ರಾಣ್ಯ ಎಂಬವರನ್ನು ಹತೈಗೈದ ಆರೋ ಪಿಯನ್ನು ಮೂಲ್ಕಿ ಪೊಲೀಸರು ಚಿಕ್ಕಮಗಳೂರು ಬಳಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಬಜ್ಪೆ ನಿವಾಸಿ ಯಾಗಿರುವ ಮೊಹಮ್ಮದ್ ಆಸೀಫ್(26) ಬಂಧಿತ ಆರೋಪಿಯಾಗಿದ್ದಾನೆ. 2009ರ ಸುರತ್ಕಲ್ ಕೋಮುಗಲಭೆಯ ಸಂದರ್ಭ ಕಿನ್ನಿಗೋಳಿ ಮೂರುಕಾವೇ ರಿಯ ಬಳಿ ರಾತ್ರಿ ಮನೆಗೆ ತೆರಳುತ್ತಿದ್ದ ಮೋಹನ್ ರಾಣ್ಯ ಎಂಬವರನ್ನು ಮಾರಕಾಯುಧದಿಂದ ಹೊಡೆದು ಕೊಲೆಗೈಯಲಾಗಿತ್ತು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖ ಲಾಗಿ ತನಿಖೆ ನಡೆಯುತ್ತಿತ್ತು. ಪರಿಶಿಷ್ಟ ಜಾತಿಯ ಬಡ ಕುಟುಂಬದ […]

ಉಡುಪಿ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ, ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

Tuesday, July 30th, 2013
udupi rape accused

ಉಡುಪಿ : ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಯೋಗೇಶ, ಹರಿಪ್ರಸಾದ್ ಮತ್ತು ಆನಂದನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೆ ನ್ಯಾಯಾಧೀಶರು ಆಗಸ್ಟ್ 12 ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ. ಈ ಮೂವರೂ ಆರೋಪಿಗಳನ್ನು  ಜುಲೈ 15 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲಿ ನ್ಯಾಯಾಧೀಶರ ತೀರ್ಪಿನಂತೆ ಜುಲೈ 29 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು . ಕಾನೂನಿನಂತೆ ಆರೋಪಿಗಳನ್ನು ಪ್ರತೀ 15 ದಿವಸಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ನ್ಯಾಯಾಧೀಶರು ಸೂಚಿಸುತ್ತಾರೆ. ಅವರನ್ನು ಇಂದು ಈ […]

ಮೂಡಬಿದಿರೆ ಬಸದಿ ವಿಗ್ರಹ ಕಳವು, ಬಂಧಿತ ಆರೋಪಿಗಳಿಗೆ ಜುಲೈ30ರವರೆಗೆ ನ್ಯಾಯಾಂಗ ಬಂಧನ

Wednesday, July 17th, 2013
jain basadi theft

ಮಂಗಳೂರು: ಮಂಗಳೂರು ಮತ್ತು  ಭುವನೇಶ್ವರ ಪೊಲೀಸರು ಜಂಟಿಯಾಗಿ ಮೂಡಬಿದಿರೆ ಬಸದಿಯಲ್ಲಿ ನಡೆದ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಸ್ಸಾದ ಭುವನೇಶ್ವರದಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರನ್ನು ಬುಧವಾರ ನಗರಕ್ಕೆ ಕರೆತಂದಿದ್ದು, ಆರೋಪಿಗಳನ್ನು ನ್ಯಾಯಾದೀಶರ ಮುಂದೆ ಹಾಜರು ಪಡಿಸಿದ್ದು ಅವರಿಗೆ ಜುಲೈ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಗ್ರಹ ಕಳವು ಮಾಡಿರುವ ಸಂತೋಷ್ ದಾಸ್ ನ ಪತ್ನಿ ದೀಪ್ತಿಮಯಿ ಮೋಹಂತಿ ಮತ್ತು ಆಕೆಯ ತಂದೆ ದಿಗಂಬರ್ ಮೋಹಂತಿಯನ್ನು ಭುವನೇಶ್ವರದಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿಗಳು ಪ್ರಮುಖ ಆರೋಪಿಯ ಮಾಹಿತಿ ನೀಡಲು ನಿರಾಕರಿಸಿದ್ದುದರಿಂದ ಪೊಲೀಸರು […]

ಮಣಿಪಾಲ ರಿಕ್ಷಾದಲ್ಲಿ ಗ್ಯಾಂಗ್ ರೇಪ್ ; ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

Monday, July 15th, 2013
Gang Rapist

ಉಡುಪಿ: ಜೂನ್ 20ರ ರಾತ್ರಿ ನಡೆದ ಮಣಿಪಾಲ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಾದ ಯೋಗೀಶ, ಹರಿಪ್ರಸಾದ್ ಮತ್ತು ಆನಂದ ನನ್ನು ಶಿವಮೊಗ್ಗ ಜೈಲಿನಿಂದ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಸೋಮವಾರ ಬೆಳಗ್ಗೆ ಆರೋಪಿಗಳನ್ನು  ಉಡುಪಿಯ ಜಿಲ್ಲಾ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 29ರ ತನಕ ವಿಸ್ತರಿಸಿದರು. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದೆಯೆಂದು ತನಿಖಾಧಿಕಾರಿಗಳು ಹೇಳಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಯೋಗೀಶ ಮತ್ತು ಹರಿಪ್ರಸಾದ್ ನ ಸೋದರರಾದ ಹರೀಂದ್ರ […]

ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ ರೇಪ್, ಆನಂದ ಶಿವಮೊಗ್ಗ ಜೈಲಿಗೆ

Friday, July 5th, 2013
Ananda poojary

ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ  ರೇಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಆನಂದನ ಐದು ದಿನಗಳ ಪೊಲೀಸ್‌ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಕಾರಣ ಶುಕ್ರವಾರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಬ್ಬ ಆರೋಪಿ ಹರಿಪ್ರಸಾದ್ ನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆತನನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಯೋಗೀಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭದ್ರತಾ ಕಾರಣಗಳಿಂದಾಗಿ ಆನಂದನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಬೇಕೆಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಮಣಿಪಾಲ ಅತ್ಯಾಚಾರ ಆರೋಪಿ ಹರಿಪ್ರಸಾದ್ ಮತ್ತು ಸಹೋದರರಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ

Wednesday, July 3rd, 2013
Udupi Rape

ಉಡುಪಿ: ಮಣಿಪಾಲ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹರಿಪ್ರಸಾದ್ ನ ಇಂದು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶೆಯಾಗಿರುವ ನಾಗಜ್ಯೋತಿಯವರು ಆರೋಪಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಜೈಲಿನಲ್ಲಿ ಹರಿಪ್ರಸಾದ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವ ಕಾರಣಕ್ಕೆ ಭದ್ರತಾ ಕಾರಣಗಳಿಗಾಗಿ ಆತನನ್ನು ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ. ಆರೋಪಿಗಳ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಯೋಗೀಶ ಮತ್ತು ಹರಿಪ್ರಸಾದ್ ಸೋದರರಾದ ಬಾಲಚಂದ್ರ ಮತ್ತು ಹರೀಂದ್ರ ನನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೂ ಜುಲೈ 15ರ ತನಕ ನ್ಯಾಯಾಂಗ […]

ಗಣಿ ಧಣಿ ಜನಾರ್ದನ ರೆಡ್ಡಿಗೆ ಸೆಪ್ಟೆಂಬರ್ 19ರವರೆಗೆ ನ್ಯಾಯಾಂಗ ಬಂಧನ

Tuesday, September 6th, 2011
Reddy-Arest

ಬೆಂಗಳೂರು : ಶಾಸಕ ಜನಾರ್ದನ ರೆಡ್ಡಿ ಮತ್ತು ಅವರ ಓಬಳಾಪುರಂ ಎಂಡಿ ಶ್ರೀನಿವಾಸ ರೆಡ್ಡಿ ಅವರನ್ನು ಸೋಮವಾರ ಮುಂಜಾನೆ ಬಳ್ಳಾರಿಯಲ್ಲಿ ಬಂಧಿಸುವ ಜೊತೆಗೆ, ಸಿಬಿಐ ಒಂದಷ್ಟು ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಂಡಿದೆ. ರೆಡ್ಡಿಗಳಿಗೆ ಸೆಪ್ಟೆಂಬರ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.7ಕ್ಕೆ ನಿಗದಿಪಡಿಸಲಾಗಿದೆ ಜನಾರ್ದನ ರೆಡ್ಡಿ ಬ್ಯಾಂಕ್ ಖಾತೆಗಳು ಜಫ್ತಿ ಮಾಡಲಾಗಿದ್ದು ಮನೆಯಲ್ಲಿದ್ದ 3 ಕೋಟಿ ರೂಪಾಯಿಗೂ ಹೆಚ್ಚು ನಗದು ಹಾಗೂ 30 ಕೆಜಿಗೂ ಹೆಚ್ಚು ಚಿನ್ನವನ್ನೂ ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ.ಇಷ್ಟೇ […]