Blog Archive

ಅಜಿತ್ ಕುಮಾರ್ ರೈ ಮಾಲಾಡಿಯಿಂದ ಚುನಾವಣಾಧಿಕಾರಿ, ಪೊಲೀಸ್ ಇಲಾಖೆಗೆ ದೂರು

Wednesday, March 20th, 2019
Ajith Kumar

ಮಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದ್ವೇಷದಿಂದ ಅಥವಾ ರಾಜಕೀಯ ಲಾಭಗಳನ್ನು ಪಡೆಯುವ ಉದ್ದೇಶಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಪಸರಿಸುತ್ತಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದ್ದಾರೆ. ತನ್ನನ್ನು ಎಲ್ಲ ರಾಜಕೀಯ ಪಕ್ಷದ ಅಭ್ಯರ್ಥಿಗಳೂ ಸಂಪರ್ಕಿಸಿದ್ದಾರೆ. ಆದರೆ, ಚುನಾವಣೆಯಲ್ಲಿ ತಾನು ತಟಸ್ಥ ಧೋರಣೆಯನ್ನು ಅನುಸರಿಸುವುದಾಗಿ ಸ್ಪಷ್ಟಪಡಿಸಿದ್ದೇನೆ. ಸಂಘವು ಯಾವುದೇ ವ್ಯಕ್ತಿ, ಪಕ್ಷ ಅಥವಾ […]

ಪೊಲೀಸ್​​​ ಇಲಾಖೆಗೆ ಮತ್ತೆ ಸರ್ಜರಿ… 29 ಪಿಎಸ್ಐಗಳ ವರ್ಗಾವಣೆ

Tuesday, December 4th, 2018
police

ಬೆಂಗಳೂರು: ಕರ್ನಾಟಕ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು 29 ಪಿಎಸ್ಐಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಯಲ್ಲಿ‌ ಕಾರ್ಯನಿರ್ವಹಿಸುತ್ತಿದ್ದ 29 ಪಿಎಸ್ಐಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ವರ್ಗಾವಣೆಗೊಂಡ ಪಿಎಸ್ಐಗಳು ಆದಷ್ಟು‌ ಬೇಗ‌ ತಮಗೆ ನೀಡಿದ ಠಾಣಾ ವ್ಯಾಪ್ತಿಯಲ್ಲಿ ಕೆಲಸ‌ ನಿರ್ವಹಿಸಬೇಕೆಂದು ತಿಳಿಸಲಾಗಿದೆ.

ಪೊಲೀಸ್ ಪ್ರಶ್ನೆಪತ್ರಿಕೆ ಲೀಕ್​ ಪ್ರಕರಣ: ತನಿಖೆ ಮತ್ತಷ್ಟು ಚುರುಕು

Wednesday, November 28th, 2018
bangaluru

ಬೆಂಗಳೂರು: ಪೊಲೀಸ್ ಪೇದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ಬೃಹತ್ ಜಾಲವೇ ಅಡಗಿದೆ ಎಂಬ ಅನುಮಾನ ಸಿಸಿಬಿ ಪೊಲೀಸರನ್ನು ಕಾಡುತ್ತಿದೆ. ಪ್ರಕರಣದ ಕಿಂಗ್ಪಿನ್ ಶಿವಕುಮಾರ್ ಹಿಂದೆ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಎಲ್ಲಿಂದ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಇರುವಂತಹ ಆ ಕಾಣದ ಕೈ ಯಾರದ್ದು ಎಂದು ಪ್ರಶ್ನೆ‌ ಮೂಡಿದೆ. ಆರೋಪಿಗೆ ಬಲವಾದ ಲಿಂಕ್ ಇರುವುದರಿಂದಲೇ ಈ ಕೃತ್ಯ ಎಸಗಿರುವುದು‌ ಗಮನಕ್ಕೆ ಬಂದಿದೆ ಎನ್ನಲಾಗ್ತಿದೆ. […]

ಪೊಲೀಸ್ ಇಲಾಖೆ: ಒಂದೇ ಬಾರಿಗೆ 25 ಸಾವಿರ ಕಾನ್ಸ್​ಟೇಬಲ್ಸ್​ಗಳಿಗೆ ಹೆಡ್​ ಪಿಸಿಯಾಗಿ ಬಡ್ತಿ

Tuesday, October 9th, 2018
police-u-p

ನವದೆಹಲಿ: ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಇತಿಹಾಸವೇ ಸೃಷ್ಟಿಯಾಗಿದೆ. ಒಂದೇ ಬಾರಿಗೆ 25 ಸಾವಿರ ಕಾನ್ಸ್ಟೇಬಲ್ಸ್ಗಳಿಗೆ ಹೆಡ್ ಪಿಸಿಯಾಗಿ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಮಾಸ್ ಪ್ರಮೋಷನ್ ನೀಡಿ ಹೊಸ ಇತಿಹಾಸವನ್ನೇ ಬರೆದಿದೆ. ಇದು 25091 ಪೊಲೀಸ್ ಪೇದೆಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಇದೇ ಖುಷಿಗೆ ಹೆಡ್ ಪಿಸಿಯಾಗಿ ಬಡ್ತಿ ಪಡೆದಿರುವವರು ಸ್ಪೀಟ್ ಹಂಚಿ ಸಂತಸ ಪಡುತ್ತಿದ್ದಾರೆ. ಇದು ಉತ್ತರ ಪ್ರದೇಶ ಇತಿಹಾಸದಲ್ಲಿ ಮೊದಲು ಎನ್ನಲಾಗುತ್ತಿದೆ. ಈ ವಿಷಯವನ್ನ ಉತ್ತರಪ್ರದೇಶ ಪೊಲೀಸ್ ಇಲಾಖೆ ತನ್ನ […]

ಪೊಲೀಸ್​​ ಇಲಾಖೆ ವತಿಯಿಂದ ಮಾದಕ ದ್ರವ್ಯ ವ್ಯಸನ ವಿರೋಧಿ ಅಭಿಯಾನ

Friday, September 28th, 2018
parameshwar

ಬೆಂಗಳೂರು: ಡ್ರಗ್ಸ್ ಚಟಕ್ಕೆ ಬಿದ್ದ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜೀವಕ್ಕೆ ಮಾರಕವಾಗಿರುವ ಡ್ರಗ್ಸ್ ತ್ಯಜಿಸುವಂತೆ ಯುವ ಪಿಳಿಗೆಯ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆ ವೈಟ್ ಫೀಲ್ಡ್ ವಿಭಾಗದ ವತಿಯಿಂದ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಡ್ರಗ್ಸ್ ತಡೆಗೆ ಮುಂದಾಗಿದ್ದಾರೆ. ಹೀಗೆ ಒಂದೆಡೆ ಸೇ ನೋ ಟು ಡ್ರಗ್ಸ್ ಎಂಬ ಬಿತ್ತಿ ಪತ್ರ ಹಿಡುದು ಜನರು ಕೂಗುತ್ತಿದ್ದರು. ಮತ್ತೊಂದೆಡೆ ಡ್ರಗ್ಸ್ ನಿರ್ಮೂಲನೆ ಮಾಡುವುದಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ […]

ಕೊನೆಗೂ ಸಂಕಷ್ಟದಿಂದ ಪಾರಾದ ಕೌರ್‌… ಇನ್ಮುಂದೆ ಡಿಎಸ್‌ಪಿ ಹರ್ಮನ್‌ಪ್ರೀತ್!

Thursday, March 1st, 2018
harmanpreeth-kaur

ದೆಹಲಿ: ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ರವರೆಗೆ ಕೊಂಡೊಯ್ಯಲು ಪ್ರಮುಖ ಪಾತ್ರ ನಿರ್ವಹಿಸಿದ ಹರ್ಮನ್‌ಪ್ರೀತ್ ಕೌರ್ ಡಿಎಸ್‌ಪಿ ಆಗಿದ್ದಾರೆ. ಹೌದು, ಮಹಿಳಾ ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಹರ್ಮನ್‌ಪ್ರಿತ್‌ ಕೌರ್‌ಗೆ ಪಂಜಾಬ್‌ ರಾಜ್ಯ ಸರ್ಕಾರ ಉದ್ಯೋಗ ನೀಡಿತ್ತು. ಆದ್ರೆ ಇಲ್ಲಿಯವರೆಗೆ ಕೌರ್‌ ಉದ್ಯೋಗಕ್ಕೆ ಸೇರಲು ಸಾಧ್ಯವಾಗಿಲ್ಲ. ಕಾರಣ ಇದಕ್ಕೂ ಮೊದಲು ಉದ್ಯೋಗ ಮಾಡುತ್ತಿದ್ದ ಸಂಸ್ಥೆಯಿಂದ ಅವರಿಗೆ ರಿಲಿವಿಂಗ್‌ ಲೆಟರ್‌ ನೀಡಿಲ್ಲ. ಹೀಗಾಗಿ ಅವರು ಹೊಸ ಉದ್ಯೋಗಕ್ಕೆ ಸೇರಲು ಕಷ್ಟ ಎದರುಸಿದ್ದರು. ಮೂರು ವರ್ಷದ ಹಿಂದೆ ಕೌರ್‌ […]

ಕುಡುಪು ಬ್ರಹ್ಮಕಲಶ ಆಡಳಿತ ಮಂಡಳಿಯಿಂದ ಕೃತಜ್ಞತೆ

Monday, February 26th, 2018
kudupu

ಮಂಗಳೂರು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆಬ್ರವರಿ 18 ರಿಂದ 25ರವರೆಗೆ ವಿಜೃಂಭನೆಯಿಂದ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಅಭೂತಪೂರ್ವ ರೀತಿಯಲ್ಲಿ ಯಶಸ್ವಿಯಾಗಿ ನಡೆಯಲು ಸಹಕರಿಸಿದ ದೇವಳದ ತಂತ್ರಿಯವರಿಗೆ, ಅರ್ಚಕ ವರ್ಗದವರಿಗೆ. ನೌಕರರಿಗೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರಿಗೆ, ಹೊರೆಕಾಣಿಕೆ ನೀಡಿದ ಎಲ್ಲಾ ಭಕ್ತ ವೃಂದದವರಿಗೆ, ದೇಣಿಗೆ ನೀಡಿ ಸಹಕರಿಸಿದ ಸರ್ವಭಕ್ತಾಭಿಮಾನಿಗಳಿಗೆ, ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರಿಗೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಭಕ್ತರಿಗೂ, ಪೊಲೀಸ್ ಇಲಾಖೆ, ಮಾಧ್ಯಮದವರಿಗೆ, ಆರೋಗ್ಯ ಇಲಾಖೆ, […]

ರಸ್ತೆ ಸುರಕ್ಷಾ ಪ್ರಾಧಿಕಾರದ ಕಟ್ಟುನಿಟ್ಟಿನ ಕ್ರಮ

Wednesday, February 7th, 2018
traffic-police

ಮಂಗಳೂರು: ವಾಹನ ಚಾಲನೆ ಮಾಡುವಾಗ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷಾ ಪ್ರಾಧಿಕಾರ ಕಟ್ಟು ನಿಟ್ಟಿನ ಕಾನೂನು ಜಾರಿಗೆ ತರುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಸುರಕ್ಷೆಯ ದೃಷ್ಟಿಯಿಂದ ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ರೋಡ್‌ ಸೇಫ್ಟಿ ಕಮಿಟಿಯನ್ನು ರಚನೆ ಮಾಡಿತ್ತು. ಈ ಕಮಿಟಿಯ ಪ್ರಕಾರ ಸಂಚರಿಸುವ ವಾಹನಗಳು ಸಾರಿಗೆ ನಿಯಮವನ್ನು ಚಾಚೂ ತಪ್ಪದೆ ಪಾಲಿಸಲೇಬೇಕು. ಇಲ್ಲವಾದರೆ ಚಾಲಕನ ಮೇಲೆ ಸಾರಿಗೆ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು. ಈ ನಿಯಮದ ಪ್ರಕಾರ ವಾಹನ ಚಾಲನೆಯ […]

ಯಕ್ಷಗಾನಕ್ಕೂ ಕೋಮು ಬಣ್ಣ- ದ್ವೇಷ ಹಬ್ಬೋದು ನಿಲ್ಲಿಸ್ರಣ್ಣ

Friday, January 12th, 2018
yakshagana

ಮಂಗಳೂರು: ಯಕ್ಷಗಾನ ಪ್ರದರ್ಶನದ ಪ್ರಸಂಗ ಒಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದೆ, ಕೀಳಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ, ಹಳೆಯ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಇದಕ್ಕೆ ಮುಸ್ಲಿಂ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತ ಪಡಿಸುತ್ತಿವೆ. ಈ ಯಕ್ಷಗಾನ ಪ್ರಸಂಗವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರಸಂಗದಲ್ಲಿ ಅಭಿನಯಿಸಿದ ಕಲಾವಿದರು ದಾರಿ ಹೆಣವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾದ ಪೋಸ್ಟ್ ಗಳು ಹರಿದಾಡುತ್ತಿವೆ. ಉಡುಪಿಯ ಸಾಲಿಗ್ರಾಮ ಗುರುಪ್ರಸಾಧಿತ ಯಕ್ಷಗಾನ […]

ಬಶೀರ್, ದೀಪಕ್ ಕೊಲೆ : ಆರೋಪಿಗಳ ಪರ ವಾದಿಸದಂತೆ ವಕೀಲರಿಗೆ ಮನವಿ

Wednesday, January 10th, 2018
basheer

ಮಂಗಳೂರು: ಬಶೀರ್ ಹಾಗೂ ದೀಪಕ್ ಕೊಲೆ ಪ್ರಕರಣಗಳ ಆರೋಪಿಗಳ ಪರ ಯಾವುದೇ ಕಾರಣಕ್ಕೂ ದ.ಕ. ಜಿಲ್ಲೆಯ ಯಾವ ವಕೀಲರೂ ವಕಾಲತ್ತು ಮಾಡಬಾರದು. ಈ ಕುರಿತು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ವಕೀಲರ ಸಂಘಕ್ಕೆ ನಾಳೆ ಮನವಿ ಸಲ್ಲಿಸಲಾಗುವುದು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ವಕೀಲರು ಆರೋಪಿಗಳ ಪರ ನಿಂತರೆ ಅವರು ದ.ಕ. ಜಿಲ್ಲೆಯ ಕೋಮು ಸೌಹಾರ್ದತೆಯ ವಿರುದ್ಧವಿದ್ದಾರೆ ಎಂದರ್ಥ ಎಂದರು. ದೀಪಕ್ ರಾವ್ […]