Blog Archive

ಅಕ್ರಮವಾಗಿ ದನ ಕರುಗಳನ್ನು ವಧೆಗೆ ಸಾಗಿಸುತ್ತಿದ್ದಾಗ ರಸ್ತೆಗೆ ಬಿದ್ದ ಆರು ಕರುಗಳು, ಬೆನ್ನಟ್ಟಿದ ವಿಹೆಚ್ ಪಿ ಕಾರ್ಯಕರ್ತರು

Sunday, October 4th, 2020
vhp-protest

  ಮಂಗಳೂರು: ಅಕ್ರಮವಾಗಿ 30-35 ದನದ ಕರುಗಳನ್ನು 407 ವಾಹನವೊಂದರಲ್ಲಿ ಕುದ್ರೋಳಿಯ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಆರು ಕರುಗಳು ವಾಹನದಿಂದ ಬಿದ್ದು  ಗಂಭೀರ ಗಾಯಗೊಂಡ ಘಟನೆಯನ್ನು ಖಂಡಿಸಿ ನಗರದ ಮಣ್ಣಗುಡ್ಡ ಗುರ್ಜಿ ಬಳಿ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನೇತ್ರಾವತಿ ಎಂಬ ಹೆಸರಿನ 407 ವಾಹನವೊಂದರಲ್ಲಿ ನಸುಕಿನ ಜಾವದಲ್ಲಿ 30-35 ದನದ ಕರುಗಳನ್ನು ಅಮಾನವೀಯವಾಗಿ ತುಂಬಿಸಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕೆಎಸ್ಆರ್ ಟಿಸಿ ಬಳಿ ಹಂಪ್ಸ್ ನಲ್ಲಿ ವಾಹನದಿಂದ 2 ದನದ ಕರುಗಳು ಬಿದ್ದಿವೆ. […]

ತುರ್ತುಸೇವೆ ಪಾಸ್ ಪಡೆದು ಪಿಕಪ್ ವಾಹನ ದಲ್ಲಿ ಅಕ್ರಮ ದನ ಸಾಗಾಟ, ತಡೆದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ

Monday, July 20th, 2020
cow smuggler

ಬೆಳ್ತಂಗಡಿ : ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದವರನ್ನ ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಬೆಳ್ತಂಗಡಿಯ ಸುರ್ಯಪಡ್ಪು ಎಂಬಲ್ಲಿ ನಡೆದಿದೆ ನಡೆದಿದೆ. ಆಟೋ ಚಾಲಕ ರಾಜೇಶ್ ಎಂಬವ ಮನೆಯಲ್ಲಿ ಗೋವುಗಳನ್ನು ಸಾಕಿ  ಅವುಗಳನ್ನು ಕಸಾಯಿ ಖಾನೆಗೆ ಮಾರುತ್ತಿದ್ದರು. ಇಂದು ಸಹ  ರಾಜೇಶ್ ಮನೆಯಿಂದ ಪಿಕಪ್ ವಾಹನದಲ್ಲಿ ಮೂರು ದನ, ಎರಡು ಕರುವನ್ನು ಅಮಾನುಷವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದರು. ಗೋವುಗಳನ್ನು ಪಿಕಪ್ ವಾಹನದಲ್ಲಿ ಕಳುಹಿಸಿ ರಾಜೇಶ್ ಮತ್ತು ಆತನ ಸಹಚರರು ಬೆಂಗಾವಲು ವಾಹನ ಆಲ್ಟೋ ಕಾರಿನಲ್ಲಿಹೋಗುತ್ತಿದ್ದರು. ಸಂಪೂರ್ಣ ಲಾಕ್ ಡೌನ್ ವೇಳೆ […]

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಗಡಿಪಾರು ಮಾಡಬೇಕು

Wednesday, December 11th, 2019
vhp-putturu

ಪುತ್ತೂರು: ಕೆಯ್ಯೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ವಿಎಚ್‍ಪಿ ಮತ್ತು ಬಜರಂಗದಳ ವತಿಯಿಂದ ಪುತ್ತೂರು ವಿಧಾನಸೌಧ ಮುಂಭಾಗದ ಮಂಗಳವಾರ  ಪ್ರತಿಭಟನೆ ನಡೆಯಿತು. ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಮಾತನಾಡಿ, ಕೆಯ್ಯೂರು ಗ್ರಾಮದಲ್ಲಿ ಮನೆಗೆ ನುಗ್ಗಿ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಉಗ್ರ ಶಿಕ್ಷೆ ನೀಡಬೇಕು. ಕಾನೂನು ಹಿಡಿತದಿಂದ ತಪ್ಪಿಸಿಕೊಳ್ಳುವ ಇಂತಹ ವ್ಯಕ್ತಿಗಳಿಗೆ ಗಡಿಪಾರಿನಂತಹ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ […]

ನಾಪೋಕ್ಲು ಹಿಂದೂ ರುದ್ರಭೂಮಿ ವಿವಾದ : ಪ್ರತಿಭಟನೆಯ ಎಚ್ಚರಿಕೆ

Wednesday, November 6th, 2019
Pratibhatane

ಮಡಿಕೇರಿ : ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದಲ್ಲಿರುವ ಹಿಂದೂ ರುದ್ರಭೂಮಿಗೆ ಅತಿಕ್ರಮ ಪ್ರವೇಶ ಮಾಡಿ, ಅಲ್ಲಿ ಕಸ ವಿಲೇವಾರಿಗಾಗಿ ಗುಂಡಿ ತೋಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಗ್ರಾಮಸ್ಥರು ಹಾಗೂ ಬಜರಂಗದಳದ ಪದಾಧಿಕಾರಿಗಳು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳದ ನಾಪೋಕ್ಲು ಘಟಕದ ಸಂಚಾಲಕ ಬಿ.ಎಂ.ಪ್ರತೀಪ್ ಹಾಗೂ ಇತರರು, ನಾಪೋಕ್ಲು ಪಂಚಾಯಿತಿಯವರು ಯಾರ ಗಮನಕ್ಕೂ ತಾರದೆ, ಪಂಚಾಯಿತಿಯಲ್ಲಿ ನಿರ್ಣಯವನ್ನೂ ಮಾಡದೆ ಏಕಾಏಕಿ ರುದ್ರಭೂಮಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಅಲ್ಲಿ ಹಿರಿಯರು ಬೆಳೆಸಿದ್ದ […]

ಗೋವಂಶ ರಕ್ಷಣೆಗೆ ಜು.3ರಂದು ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ

Saturday, June 29th, 2019
Go vamsa

ಮಂಗಳೂರು : ಗೋಕಳ್ಳತನ, ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ, ಗೋಹತ್ಯೆ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಗೋಕಳ್ಳರು ಮನೆಗೇ ನುಗ್ಗಿ ಹಟ್ಟಿಗಳಿಂದ ಕಳವು ಮಾಡುತ್ತಿರುವುದು ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಸಂಪೂರ್ಣ ಗೋವಂಶ, ಗೋರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಜು.3ರಂದು ದ.ಕ. ಹಾಗೂ ಉಡುಪಿ ಜಿಲ್ಲೆಯ ತಾಲೂಕಿನಾದ್ಯಂತ ಧರಣಿ ಪ್ರತಿಭಟನಾ ಸಭೆ ನಡೆಯಲಿದೆ  ಎಂದು ವಿಹಿಂಪ ಪ್ರಾಂತ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ. ವಿಹಿಂಪ, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ  ಪ್ರತಿಭಟನಾ ಸಭೆ ನಡೆಯಲಿದೆ. ಜು.3ರಂದು ಮಂಗಳೂರಿನ ಡಿಸಿ ಕಚೇರಿ ಮುಂಭಾಗದಲ್ಲಿ […]

ಬಜರಂಗದಳ ಮುಖಂಡನ ಇರಿದು ಕೊಲೆಗೆತ್ನ: ಓರ್ವನ ಸೆರೆ

Tuesday, June 11th, 2019
siddiq

ಉಪ್ಪಳ: ಬಜರಂಗದಳ ಬಾಯಾರು ಮಂಡಲ ಸಂಚಾಲಕ ಬಾಯಾರು ಕೊಜಪ್ಪೆ ನಿವಾಸಿ ಪ್ರಸಾದ್ (28)ರನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಾಯಾರು ದಳಿಕುಕ್ಕು ನಿವಾಸಿ ಅಬೂಬಕ್ಕರ್ ಸಿದ್ದಿಕ್ (27) ಸೆರೆಗೀಡಾದ ವ್ಯಕ್ತಿ.  ಬಾಯಾರು ಪರಿಸರದಿಂದ ಎಸ್.ಐ ಸುಭಾಶ್ಚಂದ್ರನ್ ನೇತೃತ್ವದಲ್ಲಿ ಈತನನ್ನು ಸೆರೆ ಹಿಡಿಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ 2 ವಾರಗಳ ರಿಮಾಂಡ್ ವಿಧಿಸಿ ಉಳಿದ ಐದು ಮಂದಿ ಆರೋಪಿಗಳು ಕರ್ನಾಟಕಕ್ಕೆ ಪರಾರಿಯಾಗಿರುವುದಾಗಿ ಸಂಕಿಸಲಾಗಿದ್ದು, ಪೊಲೀಸರ ತಂಡ ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದೆ. ಉಳಿದ ಆರೋಪಿಗಳನ್ನು ಶೀಘ್ರ […]

ಪ್ರೇಮಿಗಳ ದಿನ ವಿರೋಧಿಸಿ ಗುಲಾಬಿ ಅಂಗಡಿಗೆ ದಾಳಿ ಇಟ್ಟ ಬಜರಂಗದಳದ ಕಾರ್ಯಕರ್ತರ 

Friday, February 15th, 2019
ಪ್ರೇಮಿಗಳ ದಿನ ವಿರೋಧಿಸಿ ಗುಲಾಬಿ ಅಂಗಡಿಗೆ ದಾಳಿ ಇಟ್ಟ ಬಜರಂಗದಳದ ಕಾರ್ಯಕರ್ತರ 

ಮಂಗಳೂರು : ಪ್ರೇಮಿಗಳ ದಿನವನ್ನು ವಿರೋಧಿಸಿ ಬಜರಂಗದಳದ ಕಾರ್ಯಕರ್ತರು ಅಂಗಡಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಬೈಕಿನಲ್ಲಿ ಬಂದ ಬಜರಂಗದಳದ ಕಾರ್ಯಕರ್ತರು ಎಂದು ಹೇಳಲಾಗುವ ಯುವಕರ ಗುಂಪೊಂದು ಹೂ ಗುಚ್ಛ ಮಾರಾಟ ಮಾಡುವ ಅಂಗಡಿಯೊಂದರ ಮೇಲೆ ದಾಳಿ ನಡೆಸಿದೆ. ನಗರದ ಕರಂಗಲಪಾಡಿ ಬಳಿ ಈ ಘಟನೆ ನಡೆದಿದೆ. ಕರಂಗಲಪಾಡಿ ವೃತ್ತದ ಬಳಿಯೇ ಇರುವ ಐರೀಶ್ ಹೂ ಗುಚ್ಛ ತಯಾರಿಸಿ ಕೊಡುವ ಅಂಗಡಿ ಮೇಲೆ ದಾಳಿ ನಡೆಸಲಾಗಿದೆ. ವ್ಯಾಲೆಂಟೈನ್ ಡೇ ವಿರೋಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದು, ಗುಲಾಬಿ […]

ವಿವಾದಾತ್ಮಕ ಹೇಳಿಕೆ ಆರೋಪ: ವಿಶ್ವ ಹಿಂದ್ ಪ್ರಮುಖ್ ಜಗದೀಶ ಶೇಣವ ವಿರುದ್ಧ ಪ್ರಕರಣ ದಾಖಲು

Wednesday, October 31st, 2018
shanava

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಇತ್ತೀಚಿಗೆ ನಡೆದ ಪ್ರತಿಭಟನೆಯೊಂದರಲ್ಲಿ ವಿಶ್ವ ಹಿಂದ್ ಪ್ರಮುಖ್ ಜಗದೀಶ ಶೇಣವ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯೊಂದರ ವಿರುದ್ಧ ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದೇ ಸಂದರ್ಭದಲ್ಲಿ ಶೇಣವ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುದ್ರೋಳಿಯ ಕಸಾಯಿಖಾನೆ ಮುಚ್ಚುವಂತೆ ಹಾಗೂ ವಿವಿಧ ಭೇಡಿಕೆಗಳಿಗೆ ಆಗ್ರಹಿಸಿ ವಿಎಚ್‌ಪಿ ಹಾಗೂ ಬಜರಂಗದಳದ ವತಿಯಿಂದ ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯೊಂದರಲ್ಲಿ ವಿಶ್ವ ಹಿಂದ್ ಪ್ರಮುಖ್ […]

ಬಜರಂಗದಳ ಕಾರ್ಯಕರ್ತ ಹರೀಶ್ ಶೆಟ್ಟಿ ಕೊಲೆ ಪ್ರಕರಣ: ಮೂವರ ಬಂಧನ

Thursday, October 4th, 2018
harish

ಮಂಗಳೂರು: ಮಂಗಳೂರು ಹೊರವಲಯದ ಸೂರಲ್ಪಾಡಿ ಬಳಿ ಸೆ.24ರಂದು ನಡೆದ ಬಜರಂಗದಳ ಕಾರ್ಯಕರ್ತ ಹರೀಶ್ ಶೆಟ್ಟಿ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಲಾಯಿ ಮದೀನಾ ಮಸೀದಿಯ ಬಳಿ ನಿವಾಸಿ ಮೊಹಮ್ಮದ್ ಶರೀಫ್ ಅಲಿಯಾಸ್ ಶರೀಫ್ (24), ಮಂಗಳೂರು ತಾಲೂಕು ಬಜಪೆ ಕಂದಾವರ ಗ್ರಾಮದ ಕಂದಾವರ ಪಂಚಾಯತ್ ಬಳಿ ನಿವಾಸಿ ಶಿಫಾಜ್ (21), ಬಜಪೆ ಕಂದಾವರ ಗ್ರಾಮದ ಚರ್ಚ್ ರಸ್ತೆ ನಿವಾಸಿ ಮೊಹಮ್ಮದ್ ಆರಿಫ್ (28) […]

ದಸರಾ ರಜೆ ಕಡಿತಗೊಳಿಸಿರುವುದಕ್ಕೆ ಬಜರಂಗದಳ ವಿರೋಧ

Tuesday, September 25th, 2018
bajarangdal

ಮಂಗಳೂರು: ನಮ್ಮ ಜಿಲ್ಲೆಯಲ್ಲಿ ದಸರಾ ಸಮಯದಲ್ಲಿ ಮಕ್ಕಳಿಗೆ ರಜೆ ನೀಡುವುದು ಹಿಂದಿನ ಕಾಲದಿಂದ ನಡೆದುಬಂದ ಪದ್ದತಿಯಾಗಿದ್ದು, ಮಳೆಗಾಲದ ಪ್ರಕೃತಿ ವಿಕೋಪಕ್ಕೆ ನೀಡಿದ ರಜೆಯನ್ನು ಈ ರಜೆಯಲ್ಲಿ ಕಡಿತಗೊಳಿಸಲು ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ನಾವು ಖಂಡಿಸುವ ಮೂಲಕ ಅಕ್ಟೋಬರ್ 7 ರಿಂದ 21 ರ ವರಗೆ ನಿಗದಿಗೊಳಿಸಿದ ರಜೆಯನ್ನು ನೀಡಬೇಕೆಂದು ವಿಶ್ವಹಿಂದೂ ಪರಿಷದ್ ಬಜರಂಗದಳ ಆಗ್ರಹಿಸಿದೆ ನವರಾತ್ರಿಗೆ ನೀಡುವ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದೆಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣಾಧಿಕಾರಿಯವರಿಗೆ ಮನವಿ ನೀಡಿತು ಮಕ್ಕಳ […]