Blog Archive

ಬಿಬಿಎಂಪಿ ವಿರುದ್ಧ ಬೃಹತ್ ಹಗರಣದ ಆರೋಪ!

Saturday, September 1st, 2018
BBMP

ಬೆಂಗಳೂರು: ಬಿಬಿಎಂಪಿ ವಿರುದ್ಧ ಬೃಹತ್ ಹಗರಣದ ಆರೋಪ ಕೇಳಿ ಬಂದಿದ್ದು, ಆರ್ಟಿಐ ಕಾರ್ಯಕರ್ತ ಡಿ.ವಿ ಚಕ್ರವರ್ತಿ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎಸ್ ನಟರಾಜ್ ಶರ್ಮಾ ಈ ಆರೋಪ ಮಾಡಿದ್ದಾರೆ. 150 ಕೋಟಿ ರೂ. ಭ್ರಷ್ಟಾಚಾರ ಆರೋಪ ನಡೆದಿದೆ ಎಂದು ಆರೋಪಿಸಿರುವ ಇವರು, 2017 ರಲ್ಲಿ ನಗರದಲ್ಲಿ ಎಲ್ಇಡಿ ಬಲ್ಬ್ ಅಳವಡಿಸಲು ಯೋಜನೆ ರೂಪಿಸಿತ್ತು. ಈ ಯೋಜನೆಗೆ ಸಲಹಾ ಸಂಸ್ಥೆಯನ್ನು ನೇಮಿಸುವಾಗ ಇರಬೇಕಾದ ನೀತಿ ನಿಂಬಂಧನೆಗಳನ್ನು ಗಾಳಿಗೆ ತೂರಿರುವ ಪಾಲಿಕೆ, ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಎಂಬ […]

ಬಿಬಿಎಂಪಿಯಿಂದ ಕೊಡಗು-ಕೇರಳಕ್ಕೆ ಮೂರುವರೆ ಕೋಟಿ ರೂ. ಸಹಾಯಧನ

Saturday, August 18th, 2018
bengaluru

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊಡಗು ಹಾಗೂ ಕೇರಳಕ್ಕೆ ಅಗತ್ಯ ವಸ್ತುಗಳು, ಶೆಡ್ ನಿರ್ಮಾಣ ಸೇರಿದಂತೆ ಹಣದ ರೂಪದಲ್ಲಿ ಸಹಾಯ ಮಾಡಲು ಮುಂದಾಗಿದೆ. ಬಿಬಿಎಂಪಿ ವತಿಯಿಂದ 2 ಕೋಟಿ ಪರಿಹಾರ ನಿಧಿ, ಹಾಗೂ ಪಾಲಿಕೆ ಸದಸ್ಯರ ಒಂದು‌ ತಿಂಗಳ ಗೌರವಧನ, ನೌಕರರ ಒಂದು ದಿನದ ವೇತನ ನೀಡಲು ತೀರ್ಮಾನಿಸಿದ್ದು ಒಟ್ಟು ಮೂರುವರೇ ಕೋಟಿ ರುಪಾಯಿ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಲ್ಲಿ ಕೇರಳಕ್ಕೆ ಒಂದು ಕೋಟಿ, ಕೊಡಗಿಗೆ ಎರಡೂವರೆ ಕೋಟಿ ನೀಡಲು ತೀರ್ಮಾನಿಸಲಾಗಿದೆ. ಇನ್ನು ಪಾಲಿಕೆ ಕೇಂದ್ರ […]

ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಘೋಷಣೆ ಮಾಡಲಾಗಿದೆ: ಡಾ.ಜಿ. ಪರಮೇಶ್ವರ್

Tuesday, July 10th, 2018
g-parameshwar

ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕ ಸುಬ್ರಮಣಿ ಸಾವು ಬೇಸರ ತರಿಸಿದೆ. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಪರಿಹಾರದ ಭರವಸೆ ನೀಡಿದ್ದಾರೆ. ಪೌರಕಾರ್ಮಿಕರ ಸಂಬಳದ ಸಮಸ್ಯೆ ಬಗ್ಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಪ್ರತಿಭಟನಾ ನಿರತ ಕಾರ್ಮಿಕರು ಸಹಕರಿಸಬೇಕು ಎಂದಿದ್ದಾರೆ. ಸುಬ್ರಮಣಿ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು […]

ಬಿಬಿಎಂಪಿ ವಿಭಜನೆ ಬಗ್ಗೆ ಶೀಘ್ರವೇ ನಿರ್ಧಾರ: ಎಚ್ ಡಿ ಕುಮಾರಸ್ವಾಮಿ

Friday, June 29th, 2018
kumarswamy

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಹಾಗೂ ಆಡಳಿತ ವಿಕೇಂದ್ರಿಕರಣ ಕುರಿತಂತೆ ಬಿಬಿಎಂಪಿ ಪುನರ್ ವಿಂಗಡಣಾ ಸಮಿತಿಯು ತನ್ನ ಅಂತಿಮ‌ ವರದಿ ಸಲ್ಲಿಸಿದೆ. ಈ ವರದಿ ಪರಿಶೀಲಿಸಿ, ಅಧ್ಯಯನ ನಡೆಸಿದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಬಿಬಿಎಂಪಿಯನ್ನು ಐದು ಕಾರ್ಪೋರೇಷನ್ಗಳಾಗಿ ವಿಭಜಿಸಬೇಕೆಂಬ ಕುರಿತು ಬಿ.ಎಸ್. ಪಾಟೀಲ್ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಅಂತಿಮ ವರದಿ ಸಲ್ಲಿಸಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ […]

ಬಿಬಿಎಂಪಿ ಟ್ರಕ್ ಚಾಲಕನ ಎಡವಟ್ಟಿಗೆ ವಿದ್ಯಾರ್ಥಿಯೋರ್ವಳು ಬಲಿ

Tuesday, January 23rd, 2018
sahitya

ಬೆಂಗಳೂರು: ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಟ್ರಕ್ ಚಾಲಕನ ಎಡವಟ್ಟಿಗೆ ವಿದ್ಯಾರ್ಥಿಯೋರ್ವಳು ಬಲಿಯಾದ ಘಟನೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಜ.22 ರಂದು ಬೆಳಿಗ್ಗೆ ನಡೆದಿದೆ. ಖಾಸಗಿ ಕಾಲೇಜೊಂದರಲ್ಲಿ ಆರ್ಕಿಟೆಕ್ಚರ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಸಾಹಿತ್ಯ(24) ಮೃತ ದುರ್ದೈವಿ. ರಾಜಾಜೀನಗರದಲ್ಲಿ ವಾಸವಿರುವ ಸಾಹಿತ್ಯ, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಆರ್ಚಿಟೆಕ್ಟ್ ಕಂಪನಿಯೊಂದರಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದರು. ಬೆಳಿಗ್ಗೆ ಕಂಪನಿಗೆ ತಮ್ಮ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬಿಬಿಎಂಪಿ ಟ್ರಕ್ ಆಕೆಯ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. […]

ಬಾರ್ ಹಾಗೂ ರೆಸ್ಟೋರೆಂಟ್: ರೂಫ್ ಟಾಪ್ ಬಂದ್ ಗೆ ಬಿಬಿಎಂಪಿ ನೋಟಿಸ್

Saturday, January 6th, 2018
BBMP

ಬೆಂಗಳೂರು: ಮುಂಬೈನಲ್ಲಿ ಕಳೆದ ವಾರ ಸಂಭವಿಸಿದ ಅಗ್ನಿ ಅನಾಹುತದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲೂ ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಜಯನಗರ 4ನೇ ಹಂತದಲ್ಲಿರುವ ಕೇಕ್ವಾಲಾ ಸೇರಿದಂತೆ ಮೂರು ರೂಫ್ ಟಾಪ್ ಬಾರ್ ಗಳನ್ನು ಬಂದ್ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಮುದ್ರಣ ಮಳಿಗೆಗಳ ಮೇಲೆ ದಾಳಿ ನಗರದ ಹಲವು ರೂಫ್ ಟಾಪ್ ಮಳಿಗೆಗಳಿಗೆ ಶುಕ್ರವಾರ(ಜ.05 )ರಂದು ಭೇಟಿ ನೀಡಿದ್ದ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು, […]

ಬಿಬಿಎಂಪಿಯ ನೂತನ ಮೇಯರ್ ಆಗಿ ಮೂಡಲಪಾಳ್ಯ ಕಾರ್ಪೊರೇಟರ್ ಎನ್. ಶಾಂತಕುಮಾರಿ

Friday, September 5th, 2014
BBMP Myor

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ನೂತನ ಮೇಯರ್ ಆಗಿ ಮೂಡಲಪಾಳ್ಯ ಕಾರ್ಪೊರೇಟರ್ ಎನ್. ಶಾಂತಕುಮಾರಿ ಹಾಗೂ ಉಪ ಮೇಯರ್ ಆಗಿ ಕಾಮಾಕ್ಷಿಪಾಳ್ಯ ಕಾರ್ಪೊರೇಟರ್ ಕೆ.ರಂಗಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಬಿಎಂಪಿಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಶಾಂತಕುಮಾರಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ರಂಗಣ್ಣ ಅವರು ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದರು. ಬೆಳಗ್ಗೆ 9ರಿಂದ 11 ಗಂಟೆಯವರೆಗ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು. 1 ಗಂಟೆಯವರೆಗೆ ನಾಮಪತ್ರ ಪರಿಶೀಲನೆ ನಡೆಯಿತು. ಆದರೆ ಒಂದು ಹುದ್ದೆಗೆ ಒಂದೇ ನಾಮಪತ್ರ […]

ಒಂದು ಇಲಿ ಹಿಡಿಯೋಕ್ಕೆ 10,000 ರೂ.

Wednesday, July 9th, 2014
Rat

ಬೆಂಗಳೂರು : ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಯಲ್ಲೂ ಇಲಿಗಳ ಹಾವಳಿ ಹೆಚ್ಚಾಗಿದೆ. 6 ತಿಂಗಳಿಂದ ಇಲಿಗಳ ಕಾಟವನ್ನು ತಡೆಯಲು ಸಾಧ್ಯವಾಗದೇ ಬಿಬಿಎಂಪಿ ಅಧಿಕಾರಿಗಳು ತತ್ತರಿಸಿಹೋಗಿದ್ದಾರೆ. ಇಲಿಗಳನ್ನು ಹಿಡಿಯಲು ಬೆಕ್ಕುಗಳನ್ನು ಸಾಕುವುದಂತೂ ಬಿಬಿಎಂಪಿಗೆ ಸಾಧ್ಯವಾಗದ ಕೆಲಸ. ಹೀಗಾಗಿ ಇಲಿಗಳನ್ನು ಹಿಡಿಯಲು ಮೂರು ಕಂಪನಿಗಳಿಗೆ ಟೆಂಡರ್ ನೀಡಲಾಗಿದ್ದು, ಒಂದು ಇಲಿ ಹಿಡಿಯಲು 10 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. 6 ತಿಂಗಳಲ್ಲಿ ಹಿಡಿಯಲಾದ ಇಲಿಗಳ ಸಂಖ್ಯೆ ಕೇವಲ 20 ಎಂದು ಹೇಳಲಾಗುತ್ತಿದೆ. 20 ಇಲಿಗಳನ್ನು ಹಿಡಿಯಲು ಸುಮಾರು […]

ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಟೌನ್ ಹಾಲ್ ಅಡವು

Thursday, January 2nd, 2014
townhall

ಬೆಂಗಳೂರು : ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಬಿಬಿಎಂಪಿ ಟೌನ್ ಹಾಲ್ ಅಡ ಇಡುವುದಕ್ಕೆ ತೀರ್ಮಾನಿಸಿದೆ. ಹಳೆಯ ಸಾಲ ತೀರಿಸುವುದಕ್ಕೆ ಬಿಬಿಎಂಪಿ ಪಾರಂಪರಿಕ ಕಟ್ಟಡವನ್ನು ಅಡ ಇಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ನವರು ಟೌನ್‌ಹಾಲ್ ಬದಲಿಗೆ ಬೇರೆ ಕಟ್ಟಡವನ್ನು ಅಡವಿಡುವಂತೆ ಸೂಚನೆ ನೀಡಿದ್ದಾರೆ. ಶೇ. 14 ರಂತೆ ಮುಂಚೆ ಪಡೆದ ಸಾಲದ ಮೊತ್ತ ಬಿಬಿಎಂಪಿಯಲ್ಲಿ 200 ಕೋಟಿ. ರೂ. ಮೀರಿದೆ. ಆ ಸಾಲ ತೀರಿಸುವುದಕ್ಕೆ ಈಗ ಇನ್ನೊಂದು […]

ಬಿಬಿಎಂಪಿಯ ನೂತನ ಮೇಯರ್ ಆಗಿ ಕಟ್ಟೆ ಸತ್ಯನಾರಾಯಣ, ಉಪ ಮೇಯರ್ ಆಗಿ ಇಂದಿರಾ ಅವಿರೋಧ ಆಯ್ಕೆ

Wednesday, September 4th, 2013
satyanarayan

ಬೆಂಗಳೂರು:  ಬಿಬಿಎಂಪಿಯ ನೂತನ ಮೇಯರ್ ಆಗಿ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ, ಉಪಮೇಯರ್ ಆಗಿ  ಬ್ಯಾಟರಾಯನಪುರ ವಾರ್ಡ್ ನ  ಎನ್. ಇಂದಿರಾ ಅವಿರೋಧವಾಗಿ  ಬುಧವಾರ ನಡೆದ ಚುನಾವಣೆಯಲ್ಲಿ  ಆಯ್ಕೆಯಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸ್ಥಾನಗಳನ್ನು ಹಂಚಿಕೊಂಡವು. ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ್ ಅವರ ಹೆಸರನ್ನು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಘೋಷಿಸಿದರು. ಬೇರೆ  ಅಭ್ಯರ್ಥಿಗಳು ಸ್ಪರ್ಧಿಸದ ಕಾರಣ ಅವರು ಮೇಯರ್ […]