Blog Archive

ಪಶ್ಚಿಮ ಘಟ್ಟ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ ನೆಹರೂ ಮಂಟಪ

Friday, February 7th, 2020
neharu-mantapa

ಮಡಿಕೇರಿ : ಕೊಡಗು ಎಂದರೆ ಅದು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿದೆ. ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯೂ ಸಹ ಇದೇ ಪುಣ್ಯ ಭೂಮಿಯಲ್ಲಿದೆ. ಇದರೊಂದಿಗೆ ಹಲವಾರು ಪ್ರವಾಸಿ ತಾಣಗಳೂ ಸಹ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ತನ್ನ ಹಸಿರ ಮೈಸಿರಿಯಿಂದಲೇ ಕೊಡಗು ರಾಜ್ಯದಲ್ಲೇ ವಿಶೇಷವಾದ ಸ್ಥಾನ ಹೊಂದಿದೆ. ಅಷ್ಟೇ ಅಲ್ಲದೆ ಐತಿಹಾಸಿಕ ಕಟ್ಟಡಗಳು ಮತ್ತು ಭಾರತೀಯ ಸೈನ್ಯಕ್ಕೆ ಕೊಡುಗೆ ಕೊಟ್ಟಂತಹ ಪ್ರಮುಖ ಸೇನ ನಾಯಕರ ನೆಲೆಬೀಡು ಎಂಬ ವಿಶ್ವಖ್ಯಾತಿಯನ್ನೂ ಸಹ ನಮ್ಮ […]

ಕೊರೊನಾ ವೈರಸ್ ಬಗ್ಗೆ ಆತಂಕ ಬೇಡ : ಮಡಿಕೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅಭಯ

Thursday, February 6th, 2020
sriramulu

ಮಡಿಕೇರಿ : ರಾಜ್ಯದಲ್ಲಿ ಕೊರೊನಾ ವೈರಸ್ ಸಂಬಂಧಿಸಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತೀ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳನ್ನು ಕೊರೊನಾ ಸಂಬಂಧಿಸಿದ ಪ್ರಕರಣಗಳಿಗೆ ಮೀಸಲಿಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಅವರು, ರಾಜ್ಯದ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಂದರುಗಳೂ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಕೊರೊನಾ ವೈರಾಣು ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು. ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸಂಬಂಧಿತ […]

ಮಡಿಕೇರಿಯಲ್ಲಿ ಮುಂದುವರಿದ ಎಲ್‌ಐಸಿ ಪ್ರತಿನಿಧಿಗಳ ಪ್ರತಿಭಟನೆ

Wednesday, February 5th, 2020
madikeri-lic-protest

ಮಡಿಕೇರಿ : ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಸ್ಪಲ್ವ ಪಾಲನ್ನು ಐಪಿಒ ಮೂಲಕ ಷೇರು ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಭಾರತೀಯ ಜೀವವಿಮಾ ನಿಗಮ ಮಡಿಕೇರಿ ಶಾಖೆಯ ಸಿಬ್ಬಂದಿಗಳ ಪ್ರತಿಭಟನೆ ಎರಡನೇ ದಿನವೂ ನಡೆಯಿತು. ನಗರದ ಎಲ್‌ಐಸಿ ಪ್ರಧಾನ ಕಚೇರಿ ಎದುರು ಒಂದು ಗಂಟೆ ಕಾಲ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟಿಸಿದ ಸಿಬ್ಬಂದಿ ವರ್ಗ ಹಾಗೂ ಪ್ರತಿನಿಧಿಗಳು ಎಲ್‌ಐಸಿ ಖಾಸಗೀಕರಣ ಮಾಡದಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಭಾರತೀಯ ಜೀವವಿಮಾ […]

ಇಂದು ಮಡಿಕೇರಿಯಲ್ಲಿ ಶ್ರೀಜಗನ್ನಾಥ ರಥಯಾತ್ರೆ

Thursday, January 30th, 2020
Iskon

ಮಡಿಕೇರಿ : ನಗರದ ಶ್ರೀ ಜಗನ್ನಾಥ ಮಂದಿರ (ಇಸ್ಕಾನ್) ವತಿಯಿಂದ ಜ.30 ರಂದು ಶ್ರೀ ಜಗನ್ನಾಥ ರಥಯಾತ್ರೆ ನಡೆಯಲಿದೆ. ಅಂದು ಸಂಜೆ 4.30 ಗಂಟೆಗೆ ಪೇಟೆ ಶ್ರೀರಾಮ ಮಂದಿರದಿಂದ ಶ್ರೀಜಗನಾಥ ಸ್ವಾಮಿಯ ರಥಯಾತ್ರೆ ಪ್ರಾರಂಭಗೊಂಡು ನಗರದ ಮುಖ್ಯ ಬೀದಿಗಳಲ್ಲಿ ಸಾಗಲಿದೆ. ರಾತ್ರಿ 8 ಗಂಟೆಗೆ ಗಾಂಧಿ ಮೈದಾನದಲ್ಲಿ ಶ್ರೀಜಗನ್ನಾಥ ಕಥಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಲಿವೆ. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗವಾಗಲಿದೆ.  

ಪಡಿತರ ವ್ಯವಸ್ಥೆಯಲ್ಲಿ ನ್ಯೂನತೆ : ಮಡಿಕೇರಿಯಲ್ಲಿ ಸಿಪಿಐಎಂ ಪ್ರತಿಭಟನೆ; ಜನಸಾಮಾನ್ಯರಿಗೆ ಕಿರುಕುಳ ನೀಡದಂತೆ ಒತ್ತಾಯ

Thursday, January 30th, 2020
CPIM

ಮಡಿಕೇರಿ : ಪಡಿತರ ವ್ಯವಸ್ಥೆಯಲ್ಲಿ ಕಂಡು ಬಂದಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ನಗರದಲ್ಲಿ ಪತ್ರಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಹಾರ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಜನಸಾಮಾನ್ಯರಿಗೆ ವಂಚನೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಇ.ರಾ.ದುರ್ಗಾಪ್ರಸಾದ್, ನಕಲಿ ರೇಷನ್ ಕಾರ್ಡ್‌ಗಳ ಸೃಷ್ಟಿಗೆ ಸರ್ಕಾರ […]

ಮಡಿಕೇರಿಯಲ್ಲಿ ಜೀವ ವಿಮಾ ನಿಗಮದ ಪ್ರತಿನಿಧಿಗಳ ಪ್ರತಿಭಟನೆ

Wednesday, January 22nd, 2020
LIC-Protest

ಮಡಿಕೇರಿ : ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸೇವಾ ತೆರಿಗೆಯನ್ನು ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೀವವಿಮಾ ನಿಗಮದ ಪ್ರತಿನಿಧಿಗಳ ಒಕ್ಕೂಟದ ಮಡಿಕೇರಿ ಖಾಖೆ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಎಲ್‌ಐಸಿ ಪ್ರಧಾನ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಪ್ರತಿನಿಧಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪ್ರತಿನಿಧಿಗಳ ಮತ್ತು ಪಾಲಿಸಿದಾರರ ಹಿತಕ್ಕಾಗಿ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಅದರಂತೆ ಎಜೆಂಟ್ ರೆಸ್ಟ್ ಡೇ ಘೋಷಣೆಯೊಂದಿಗೆ […]

ಮಡಿಕೇರಿಯಲ್ಲಿ ಜ.30 ರಂದು ಶ್ರೀ ಜಗನ್ನಾಥ ರಥಯಾತ್ರೆ

Thursday, January 16th, 2020
iskon

ಮಡಿಕೇರಿ : ನಗರದ ಶ್ರೀ ಜಗನ್ನಾಥ ಮಂದಿರ (ಇಸ್ಕಾನ್) ವತಿಯಿಂದ ಜ.30 ರಂದು ಶ್ರೀ ಜಗನ್ನಾಥ ರಥಯಾತ್ರೆ ನಡೆಯಲಿದೆ. ಅಂದು ಸಂಜೆ 4.30 ಗಂಟೆಗೆ ಪೇಟೆ ಶ್ರೀರಾಮ ಮಂದಿರದಿಂದ ಶ್ರೀಜಗನಾಥ ಸ್ವಾಮಿಯ ರಥಯಾತ್ರೆ ಪ್ರಾರಂಭಗೊಂಡು ನಗರದ ಮುಖ್ಯ ಬೀದಿಗಳಲ್ಲಿ ಸಾಗಲಿದೆ. ರಾತ್ರಿ8 ಗಂಟೆಗೆ ಗಾಂಧಿ ಮೈದಾನದಲ್ಲಿ ಶ್ರೀಜಗನ್ನಾಥ ಕಥಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಲಿವೆ. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗವಾಗಲಿದೆ.  

ಮಡಿಕೇರಿ : ಬೈಕ್ – ಬಸ್ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

Saturday, January 11th, 2020
madikeri

ಮಡಿಕೇರಿ : ಬೈಕ್ -ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಮಡಿಕೇರಿ ಹೊರವಲಯದ ಮಂಗಳೂರು ಹೆದ್ದಾರಿಯ ಕೊಯನಾಡು ದೇವರಕೊಲ್ಲಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಇಂದು ಬೆಳಿಗ್ಗೆ8.30 ಘಂಟೆಗೆ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತಿದ್ದ ಬಸ್‌ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ ನಲ್ಲಿದ್ದ ಇಬ್ಬರು ಪ್ರವಾಸಿಗರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಮೃತರ ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ. ಸ್ಥಳಕ್ಕೆ ಕೊಡಗು ಎಸ್ಪಿ, ಸುಮನ್‌ ಪನ್ನೇಕರ್‌ ಭೇಟಿ ನೀಡಿದ್ದರು. ಮಡಿಕೇರಿ‌ […]

ಮಡಿಕೇರಿಯಲ್ಲಿ ಕಾರು ಚಾಲಕ ಆತ್ಮಹತ್ಯೆಗೆ ಶರಣು

Monday, January 6th, 2020
Dakshath

ಮಡಿಕೇರಿ : ನಗರದಲ್ಲಿ ಟ್ಯಾಕ್ಸಿ ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಯುವಕನೊಬ್ಬ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತೈ ಮಾಡಿಕೊಂಡ ಘಟನೆ ನಡೆದಿದೆ. ಹಾಕತ್ತೂರು ನಿವಾಸಿ ದಕ್ಷತ್(28) ಎಂಬಾತನೇ ನೇಣಿಗೆ ಶರಣಾದ ಕಾರು ಚಾಲಕ. ಶುಕ್ರವಾರ ಸಂಜೆ ದಕ್ಷತ್ ಲಾಡ್ಜ್‌ನ ರೂಂ ಬುಕ್ ಮಾಡಿದ್ದ. ಬಳಿಕ ವಾಟ್ಸಪ್ ಟ್ಟೇಟಸ್‌ನಲ್ಲಿ ತಂದೆ ತಾಯಿಯ ಫೋಟೊ ಹಾಕಿ ಮಿಸ್ ಯು ಡ್ಯಾಡಿ ಅಮ್ಮ ಎಂದು ಬರೆದುಕೊಂಡಿದ್ದ. ರಾತ್ರಿ 9 ಗಂಟೆಯ ವೇಳೆಗೆ ದಕ್ಷತ್‌ನ ಗೆಳೆಯನೊಬ್ಬ ಲಾಡ್ಜ್‌ಗೆ ಬಂದು ರೂಂನ ಬಾಗಿಲು ಬಡಿದರೂ, ದಕ್ಷತ್ […]

ಎನ್‌ಆರ್‌ಸಿ, ಸಿಎಎ ಕಾಯ್ದೆ ವಿರುದ್ಧ ಮಡಿಕೇರಿಯಲ್ಲಿ ಸಿಪಿಐಎಂ ಪ್ರತಿಭಟನೆ

Friday, January 3rd, 2020
CPIM

ಮಡಿಕೇರಿ : ಕೇಂದ್ರ ಸರ್ಕಾರದ ಎನ್‌ಆರ್‌ಸಿ ಮತ್ತು ಸಿಎಎ ಕಾಯ್ದೆಯನ್ನು ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಡಾ.ಇ.ರ.ದುರ್ಗಾಪ್ರಸಾದ್, ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಮೂಲ ಆಶಯಗಳಿಗೆ ವಿರೋಧವಾಗಿದ್ದು, ದೇಶದ ಐಕ್ಯತೆಗೆ ಧಕ್ಕೆ ತಂದರುವಂತಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಅನುಸರಿಸುತ್ತಿರುವ […]