Blog Archive

ಕ್ರಿಕೆಟರ್​ ಪತ್ನಿ ಹಸಿನ್ ಜಹಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ..!

Wednesday, October 17th, 2018
mohammed-shami

ಮುಂಬೈ: ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಇಂದು ಮುಂಬೈ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಸಂಜಯ್ ನಿರುಪಮ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮೊಹಮ್ಮದ್ ಶಮಿ ವಿರುದ್ಧ ಸರಣಿ ಆರೋಪ ಮಾಡುತ್ತಲೇ ಸುದ್ದಿಕೇಂದ್ರಕ್ಕೆ ಬಂದಿದ್ದ ಹಸಿನ್ ಜಹಾನ್ ಅವರ ಏಕಾಏಕಿ ರಾಜಕೀಯ ಎಂಟ್ರಿ ಕುತೂಹಲಕ್ಕೆ ಕಾರಣವಾಗಿದೆ. ಶಮಿ ತನಗೆ ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಜೊತೆಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದಾರೆ ಎಂದು ಪತಿ ಶಮಿ ಮೇಲೆ ಹಸಿನ್ ಆರೋಪ ಮಾಡಿದ್ದಳು. […]

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸಾಧನೆ, ಕೃತಿ ಮತ್ತು ಕೊಡುಗೆಗಳು.

Saturday, September 15th, 2018
sir-m-vishveshwaraia

ಬೆಂಗಳೂರು:ಆಧುನಿಕ ಭಾರತ ನಿರ್ಮಾತೃಗಳಲ್ಲಿ ಅಗ್ರಗಣ್ಯ ಮಹಾನುಭಾವರಲ್ಲಿ ನಿಲ್ಲುವ ಕರ್ನಾಟಕದ ಪುತ್ರ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ದೇಶದ ನೀರಾವರಿ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರು.ಅದುಅಲ್ಲದೇ ದಖನ್ ಪ್ರಸ್ಥಭೂಮಿಯಲ್ಲಿ ನೀರಾವರಿ ಕ್ರಾಂತಿಗೆ ಕಾರಣೀಕರ್ತರಾಗಿ ಅಣೆಕಟ್ಟು ನಿರ್ಮಾಣದ ವಿನ್ಯಾಸದ ಆವಿಷ್ಕಾರ ಮಾಡಿದ ದೇಶಕಂಡ ಅಪರೂಪದ ಎಂಜಿನಿಯರ್. ಇಂತಹ ಅಪ್ರತಿಮ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಇಂದು 158ನೇ ಜನ್ಮ ದಿನ, ಭಾರತ ಮಾತ್ರವಲ್ಲದೆ ವಿಶ್ವದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಜೀವನವೇ ಒಂದು ಸ್ಫೂರ್ತಿದಾಯಕ. ಸೆಪ್ಟೆಂಬರ್ 15, 1861ರಂದು ಜನಿಸಿದ […]

ಗಗನದತ್ತ ಮುಖ ಮಾಡಿದ ಪೆಟ್ರೋಲ್​-ಡೀಸೆಲ್​​​​… ಇಂದು ಮತ್ತೆ ದರ ಏರಿಕೆ!

Friday, September 14th, 2018
petrol-disel

ಮುಂಬೈ: ತೈಲ ಬೆಲೆಗೆ ನಿಯಂತ್ರಣಕ್ಕಾಗಿ ಆಡಳಿತ ಪಕ್ಷ, ಪ್ರತಿಪಕ್ಷ, ಜನಸಾಮಾನ್ಯರು ಏನಲ್ಲಾ ಮಾಡುತ್ತಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ಮೌಂಟ್ ಎವರೆಸ್ಟ್ ಎತ್ತರಕ್ಕೆ ಏರುತ್ತಲೇ ಇದೆ. ಇಂದೂ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, ಅಚ್ಚೆ ದಿನ್ ಕಬ್ ಆಯೇಂಗೆ ಎಂದು ಜನರು ಪ್ರಶ್ನಿಸುವಂತಾಗಿದೆ. ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 81.28 ರೂ. ಹಾಗೂ ಡೀಸೆಲ್ ಬೆಲೆ 73.30 ರೂ. ಆಗಿದೆ. ನಿನ್ನೆಗಿಂತ ಕ್ರಮವಾಗಿ 28 ಪೈಸೆ ಹಾಗೂ 22 ಪೈಸೆಯಷ್ಟು ಏರಿಕೆಯಾಗಿದೆ. ಅಂತೆಯೆ, ಮುಂಬೈನಲ್ಲಿ ಪೆಟ್ರೋಲ್ 28 ಪೈಸೆ […]

ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ..!

Tuesday, July 3rd, 2018
priyanka-chaturvedy

ಮುಂಬೈ: ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಅವರ ಪುತ್ರಿಗೆ ಟ್ವಿಟ್ಟರ್ ನಲ್ಲಿ ಕಿಡಿಗೇಡಿಯೊಬ್ಬ ಅತ್ಯಾಚಾರದ ಬೆದರಿಕೆ ಒಡ್ಡಿದ್ದು, ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಿಯಾಂಕಾ ಚತುರ್ವೇದಿ ಅವರ 10 ವರ್ಷದ ಮಗಳನ್ನು ಅತ್ಯಾಚಾರ ಮಾಡುವುದಾಗಿ @GirishK1605 ಎಂಬ ಖಾತೆಯಿಂದ ಬೆದರಿಕೆ ಬಂದಿದೆ. ‘ನಾವು ರಾಜಕಾರಣಿಗಳು ಪ್ರತಿದಿನ ಟ್ರೋಲ್ ಆಗುತ್ತೇವೆ. ಅದೇನು ಹೊಸತಲ್ಲ. ಆದರೆ ನನ್ನ ಮಗಳ ಬಗ್ಗೆ ಮಾತನಾಡುವುದು ಸರಿಯೇ? ಅದೂ ಇಷ್ಟು ಅವಾಚ್ಯವಾಗಿ? ಅದಕ್ಕೆಂದೇ ನಾನು ಅವರ ವಿರುದ್ಧ ದೂರು ನೀಡಬೇಕೆಂದು ನಿರ್ಧರಿಸಿದ್ದೇನೆ’ […]

ಮುಂಬೈನಲ್ಲಿ ಸಣ್ಣ ವಿಮಾನ ಪತನ..ಐವರ ದುರ್ಮರಣ!

Thursday, June 28th, 2018
mumbai

ಮುಂಬೈ: ಪರಿಕ್ಷಾರ್ಥ ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವೊಂದು ಮುಂಬೈನ ಜನನಿಬಿಡ ಪ್ರದೇಶದ ನಿರ್ಮಾಣ ಹಂತದ ಬಿಲ್ಡಿಂಗ್ ಬಳಿ ಅಪ್ಪಳಿಸಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಐವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಜುಹು ಏರ್ ಪೋರ್ಟ್ ನಿಂದ ಟೇಕ್ ಆಫ್ ಆಗಿದ್ದ ವಿಮಾನ ಘಾಟ್ಕೋಪರ್ದ ಸರ್ವೋದಯ ನಗರದ ಬಳಿ ಲ್ಯಾಂಡಿಂಗ್ ಆಗುವ ವೇಳೆ ನೆಲಕ್ಕೆ ಅಪ್ಪಳಿಸಿದೆ. ಮಧ್ಯಾಹ್ನ 1.15ಕ್ಕೆ ಅಪಘಾತ ಸಂಭವಿಸಿದ್ದು, ನಾಲ್ವರ ಮೃತದೇಹಗಳನ್ನು ಹೀಗಾಗಲೇ ಹೊರ ತರಲಾಗಿದೆ. ಬೀಚ್ಕ್ರಾಫ್ಟ್ ಕಿಂಗ್ ಏರ್ C90 ಟರ್ಬೊಪ್ರೊಪ್ ನ ವಿಮಾನ ಅಪಘಾತಕ್ಕೀಡಾಗಿದೆ ಎಂದು ಗುರುತಿಸಲಾಗಿದೆ. ಈ […]

ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ..ಡಾಲರ್​ ಎದುರು ಸಾರ್ವಕಾಲಿಕ ಇಳಿಕೆ!

Thursday, June 28th, 2018
dollers

ಮುಂಬೈ: ದೇಶದ ರೂಪಾಯಿ ಮೌಲ್ಯ ಇಂದು ಸಾರ್ವಕಾಲಿಕ ಕುಸಿತ ಕಂಡಿದೆ. ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಡಾಲರ್ವೊಂದಕ್ಕೆ 69 ರೂಪಾಯಿ ಏರಿಕೆ ಆಗುವ ಮೂಲಕ ಸಾರ್ವಕಾಲಿಕ ಕುಸಿದಿದೆ. ಗುರುವಾರ ಬೆಳಗಿನ ಟ್ರೆಂಡ್ ಪ್ರಕಾರ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 69 ರೂಪಾಯಿ ಆಗಿದೆ. ಇಂದು ಬೆಳಗ್ಗೆ 49 ಪೈಸೆ ಕುಸಿತ ಕಂಡು 69.10 ರೂಪಾಯಿಗಳ ಪಾತಾಳಕ್ಕಿಳಿತು. ಬುಧವಾರ ರೂಪಾಯಿ ಮೌಲ್ಯ ಡಾಲರ್ ಮುಂದೆ 37 ಪೈಸೆ ಕುಸಿದು 68.61 ರೂಪಾಯಿಗೆ ನಿಂತಿತ್ತು. ಇಂದು ಮತ್ತಿಷ್ಟು […]

ಕರ್ನಾಟಕ ಸೇರಿ 2 ಕಡೆ ಹೆಚ್ಚುವರಿ ಪೆಟ್ರೋಲಿಯಂ ಸಂಗ್ರಹಾಗಾರ ಸ್ಥಾಪನೆಗೆ ಅಸ್ತು

Thursday, June 28th, 2018
cabinet

ಮುಂಬೈ: ದೇಶದಲ್ಲಿ ಹೆಚ್ಚುವರಿಯಾಗಿ ಎರಡು ಪೆಟ್ರೋಲಿಯಂ ಸಂಗ್ರಹಾಗಾರ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಕರ್ನಾಟಕ ಮತ್ತು ಒಡಿಶಾದಲ್ಲಿ 6.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಸಂಗ್ರಹಾಗಾರ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕದ ಪಾದೂರಿನಲ್ಲಿ 2.5 ಮಿಲಿಯನ್ ಮೆಟ್ರಿಕ್ ಟನ್ ಹಾಗೂ ಒಡಿಶಾದ ಚಂಡಿಕೋಲ್ನಲ್ಲಿ 4.4 ಮಿಲಿಯನ್ ಮೆಟ್ರಿಕ್ ಟನ್ ಪೆಟ್ರೋಲಿಯಂ ಸಂಗ್ರಹಾಗಾರ ಸ್ಥಾಪನೆ ಮಾಡಲಾಗುತ್ತಿದೆ. ಈಗಾಗಲೇ ಭಾರತ 5.33 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಮೂರು ಪೆಟ್ರೋಲಿಯಂ ಸಂಗ್ರಹಾಗಾರ ಹೊಂದಿದ್ದು, 10 ದಿನಗಳಿಗೆ […]

ಅಂತಾರಾಷ್ಟ್ರೀಯ ಕ್ರಿಕೆಟ್‌ ಕಂಡ ಸ್ಪೋಟಕ ಆಟಗಾರ ಎಬಿ ಡಿ ವಿಲಿಯರ್ಸ್‌ ದಿಢೀರ್‌ ವಿದಾಯ..!

Wednesday, May 23rd, 2018
Abd-villiers-3

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕಂಡ ಸ್ಪೋಟಕ ಆಟಗಾರ ಎಬಿ ಡಿ ವಿಲಿಯರ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಹೌದು,ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಎಬಿಡಿ ವಿಲಿಯರ್ಸ್‌ ಈ ದಿಢೀರ್‌ ನಿವೃತ್ತಿ ಘೋಸಿಸುವ ಮೂಲಕ ಅವರ ಅಭಿಮಾನಿಗಳಿಗೆ ಬಿಗ್‌ ಶಾಕ್‌ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಪರ 14 ವರ್ಷಗಳ ಕಾಲ ಕ್ರಿಕೆಟ್‌ ಆಡಿರುವ ವಿಲಿಯರ್ಸ್‌ 114 ಟೆಸ್ಟ್‌, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. 14 ವರ್ಷಗಳ ಸುದೀರ್ಘ ಕ್ರಿಕೆಟ್‌ ಜೀವನದಲ್ಲಿ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ 66.67 ಲಕ್ಷ ರೂ. ಮೌಲ್ಯದ ಚಿನ್ನ ವಶ

Friday, May 18th, 2018
DRI-gold

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಿಮಾನ ನಿಲ್ದಾಣದಲ್ಲಿ 2 ಕೆಜಿ 116 ಗ್ರಾಂ ತೂಕದ 66.67 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ ಹಚ್ಚಿದ್ದಾರೆ. ಮುಂಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನದಲ್ಲಿ ಚಿನ್ನ‌ ಪತ್ತೆಯಾಗಿದೆ. ಎಸ್‌ಜಿ‌ 479 ಸ್ಪೈಸ್ ಜೆಟ್ ವಿಮಾನದ ಶೌಚಾಲಯದಲ್ಲಿ ಸಾಕ್ಸ್‌ನಲ್ಲಿ ಚಿನ್ನ ಇಡಲಾಗಿತ್ತು. ತಲಾ 1 ಕೆಜಿ ಚಿನ್ನದ ಬಿಲ್ಲೆ ಹಾಗೂ 116.640 ಗ್ರಾಂನ ಚಿನ್ನದ ಬಿಲ್ಲೆ ಪತ್ತೆಯಾಗಿದೆ. ದುಬೈನಿಂದ ಮುಂಬೈ […]

ಬಿಜೆಪಿ ಅಭ್ಯರ್ಥಿ ಪರ ಮುಂಬೈ ಲೋಕಸಭಾ ಸದಸ್ಯ ಪ್ರಚಾರ

Monday, May 7th, 2018
gopal-shetty

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಇಂದು ಮುಂಬೈ ಲೋಕಸಭಾ ಸದಸ್ಯ ಗೋಪಾಲ ಶೆಟ್ಟಿ ಪ್ರಚಾರ ನಡೆಸಿದರು. ಕರಾವಳಿಯಿಂದ ಮುಂಬೈಗೆ ಹೋಗಿ ನೆಲೆಸಿ ಅಲ್ಲಿ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಗೋಪಾಲ ಶೆಟ್ಟಿ ಬಿಜೆಪಿ ಪರ ಮತಯಾಚನೆ ತವರು ಜಿಲ್ಲೆಗೆ ಆಗಮಿಸಿದ್ದಾರೆ. ಮಂಗಳೂರಿನ ಕಂಕನಾಡಿ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಮತಯಾಚನೆ ಮಾಡಿದರು. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ವೇಳೆ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ […]