Blog Archive

ಫೋನ್ ಇನ್‌ನಲ್ಲಿ ಮೇಯರ್ ಕವಿತಾ ಸನಿಲ್‌

Saturday, October 28th, 2017
phone in

ಮಂಗಳೂರು: ಫೋನ್ ಇನ್‌ನಲ್ಲಿ ಮೇಯರ್ ಕವಿತಾ ಸನಿಲ್‌ರನ್ನು, ವಾಹನ ಸವಾರರ ಕಷ್ಟ ನಿಮಗೆ ಗೊತ್ತಿದೆಯಾ? ನಮಗೆ ಆದ ತೊಂದರೆಯ ಜವಾಬ್ದಾರಿಯನ್ನು ನೀವು ಹೊರುತ್ತೀರಾ ಎಂದು ಮಹಿಳಾ ಸವಾರರೊಬ್ಬರು ಪ್ರಶ್ನಿಸಿದ್ದಾರೆ. ಮಾತು ಆರಂಭಿಸಿದ ಮಹಿಳೆ, ನಾನು ಈಗಷ್ಟೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬಲ್ಮಠ-ಬೆಂದೂರ್ವೆಲ್ ಮಾರ್ಗದಲ್ಲಿ ಗುಂಡಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಕ್ಕೆ ಒಳಗಾಗಿದ್ದೇನೆ. ನನ್ನ ತಾಯಿಯ ಸೊಂಟಕ್ಕೆ ಏಟಾಗಿದೆ. ನನಗೂ ಗಾಯವಾಗಿದೆ. ನೀವು ಬಲ್ಮಠ-ಬೆಂದೂರ್ವೆಲ್ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸಿದ್ದೀರಾ? ಇಲ್ಲವಾದರೆ ಒಮ್ಮೆ ಬನ್ನಿ, ಇದಕ್ಕೆ ಯಾರು ಕಾರಣ ಎಂದು ಮೇಯರ್‌ಗೆ ಮಹಿಳೆ […]

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ

Monday, October 23rd, 2017
kittur chennamma jayanti celebration

ಮಂಗಳೂರು: ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಇತಿಹಾಸದ ಧೀಮಂತ ಮಹಿಳೆ ಎಂದು  ಅಭಿಪ್ರಾಯಿಸಿದ್ದಾರೆ. ಪ್ರಥಮ ಬಾರಿಗೆ ನಗರದ ರಾಮಕೃಷ್ಣ ವಿದ್ಯಾಸಂಸ್ಥೆಗಳ ಆವರಣದ ಸಭಾಭವನದಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಬ್ರಿಟಿಷರ ವಿರುದ್ಧ ರಣ ಕಹಳೆ ಊದಿದ್ದ ಚೆನ್ನಮ್ಮ ಇತಿಹಾಸದ ಪುಟಗಗಳಲ್ಲಿ ಸೇರಿ ಹೋಗಿದ್ದರೂ ಆಕೆಯ ಕೆಚ್ಚೆದೆಯ […]

ಬಜಾಲ್-ಕಲ್ಲಗುಡ್ಡೆ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ

Saturday, October 21st, 2017
JR lobo

ಮಂಗಳೂರು: ಬಜಾಲ್- ಕಲ್ಲಗುಡ್ಡೆ ರಸ್ತೆಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 30  ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಬಜಾಲ್-ಕಲ್ಲಗುಡ್ಡೆಯಲ್ಲಿ 30  ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಮುಖ್ಯಮಂತ್ರಿಗಳು ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅನುದಾನ ನೀಡಿದ್ದಾರೆ. ಈ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಮಾಡಬೇಕು ಎಂದು ಶಾಸಕರು ನುಡಿದರು. ಮಂಗಳೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ಆಸಕ್ತರಾಗಿದ್ದಾರೆ. ಅವರ ಇಚ್ಚೆಯಂತೆ ನಾವು ಜನಪ್ರತಿನಿಧಿಗಳು ಕೆಲಸ ಮಾಡಿ ಮಂಗಳೂರು ನಗರವನ್ನು ಮಾದರಿ […]

ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

Friday, October 13th, 2017
mahanagara palike

ಮಂಗಳೂರು: “ಸ್ತ್ರೀಯರು ಪುರುಷರಿಗೆ, ಪುರುಷರು ಸ್ತ್ರೀಯರಿಗೆ ಮಸಾಜ್ ಮಾಡಬಾರದು ಎಂದು ಯಾವ ಕಾನೂನು ಹೇಳುತ್ತದೆ? ಒಂದು ವೇಳೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಕಾನೂನು ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದಲ್ಲವೇ? ಎಂದು ಹೈಕೋರ್ಟ್ ಪಾಲಿಕೆಯನ್ನು ಪ್ರಶ್ನಿಸಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗದಿದ್ದರೂ ಮಸಾಜ್ ಸೆಂಟರ್ ಗಳ ಪರವಾನಿಗೆ ಹೇಗೆ ರದ್ದು ಪಡಿಸಿದ್ದೀರಿ?” ಎಂದು ಮಂಗಳೂರು ಮಹಾನಗರ ಪಾಲಿಕೆ (ಮನಪಾ)ಯ ಆಡಳಿತವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಂಗಳೂರು ಮೇಯರ್ ಕವಿತಾ […]

ಮೀನು ಮಾರುಕಟ್ಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

Wednesday, October 11th, 2017
fish market

ಮಂಗಳೂರು:ಮೇಯರ್ ಕವಿತಾ ಸನಿಲ್  ನಗರದ ಸ್ಟೇಟ್ ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು  ಮಂಗಳವಾರ ಉದ್ಘಾಟಿಸಿದರು. ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ ತಾತ್ಕಾಲಿಕ ಮೀನು ಮಾರುಕಟ್ಟೆಯ ಮೇಲ್ಚಾವಣೆ ಕುಸಿದು ಮಳೆಗಾಲದಲ್ಲಿ ಧಾರಾಕಾರ ಮಳೆ ಮಾರುಕಟ್ಟೆಯ ಒಳಗೆ ಸುರಿಯುತ್ತಿದ್ದು, ಇದರಿಂದ ಮೀನು ಮಾರಾಟಗಾರಿಗೆ ಹಾಗೂ ಗ್ರಾಹಕರಿಗೆ ತುಂಬಾ ಸಮಸ್ಯೆಯಾಗಿತ್ತು. ನೆಲಕ್ಕೆ ಹಾಸಲಾದ ಕಲ್ಲ ಚಪ್ಪಡಿಗಳು ಅಲ್ಲಿಲ್ಲಿ ಕಿತ್ತು ಹೋಗಿ ಒಳಗಡೆ ರಾಡಿ ತುಂಬಿತ್ತು. ಈ ಕುರಿತು ಮೀನು ಮಾರಾಟಗಾರರು ಹಲವು ಬಾರಿ ಮಂಗಳೂರು […]

ಮೇಯರ್ ಕವಿತಾ ಸನಿಲ್: ನಗರದ ಅನಧಿಕೃತ ಫ್ಲಾಟ್ ಗಳ ವಿರುದ್ಧ ಸಮರ

Tuesday, October 10th, 2017
mayor

ಮಂಗಳೂರು: ಪಾಲಿಕೆಯಲ್ಲಿ ಡೋರ್ ನಂಬರ್ ಆಗದೆ ಅಕ್ರಮವಾಗಿ ವಾಸವಿರುವ ಫ್ಲ್ಯಾಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಕವಿತಾ ಸನಿಲ್ ಮುಂದಾಗಿದ್ದಾರೆ.  ಮಂಗಳೂರು ಮೇಯರ್ ಕವಿತಾ ಸನಿಲ್ ಏಕಾಏಕಿ ನಗರದ ಹೊರವಲಯದ ಮೇರಿಹಿಲ್ ನ ಪಿಂಟೋಸ್ ಗಾರ್ಡನ್ ಎಂಬಲ್ಲಿರುವ ವೆಲಂಕಣಿ ಎಬೋರ್ಡ್ ಹೆಸರಿನ ಫ್ಲಾಟ್ ಗಳ ಮೇಲೆ ದಾಳಿ ನಡೆಸಿದರು.ಮಂಗಳೂರಿನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದ ಮಂಗಳೂರು ಮೇಯರ್ ಕವಿತಾ ಸನಿಲ್ ಈಗ ನಗರದ ಅನಧಿಕೃತ ಫ್ಲಾಟ್ ಗಳ ವಿರುದ್ಧ ಸಮರ ಸಾರಿದ್ದಾರೆ. ವೆಲಂಕಣಿ ಎಬೋರ್ಡ್ ಪ್ಲಾಟ್ […]

ಕ್ರೀಡೆಯ ಅಗತ್ಯವು ಮಕ್ಕಳಿಗಿಂತ ಹಿರಿಯರಿಗೆ ಅವಶ್ಯವಾಗಿದೆ :ಮೇಯರ್ ಕವಿತಾ ಸನಿಲ್

Friday, October 6th, 2017
sports

ಮಂಗಳೂರು: ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ ಹಾಗೂ ಕಂದಾಯ ಇಲಾಖೆಯೆ ಗ್ರಾಮ ಸಹಾಯಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಹಾಗೂ ದ.ಕ.ಜಿಲ್ಲಾ ‘ಡಿ’ ವರ್ಗದ ಸರಕಾರಿ ನೌಕರರ ಸಂಘದ ವಜ್ರ ಮಹೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರೀಡೋತ್ಸವಕ್ಕೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಗುರುವಾರ ಮೇಯರ್ ಕವಿತಾ ಸನಿಲ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯ ಅಗತ್ಯವು ಮಕ್ಕಳಿಗಿಂತ ಹಿರಿಯರಿಗೆ ಅವಶ್ಯವಾಗಿದೆ. ವಯಸ್ಸು ಹೆಚ್ಚಾದಂತೆ ದೇಹಕ್ಕೆ ಕ್ರೀಡಾ ಕಸರತ್ತು ಅತೀ ಮುಖ್ಯ. ಹೀಗಾಗಿ ಕ್ರೀಡೆಗೆ […]

ವಾಲ್ಮೀಕಿ ರಾಮಾಯಣದ ಸಂದೇಶಗಳು ಜಗತ್ತಿನ ಎಲ್ಲೆಡೆಯೂ ಸಾರ್ವಕಾಲಿಕ

Thursday, October 5th, 2017
Valmiki jayanthi

ಮಂಗಳೂರು : ಸಮಾಜದ ಜನರೆಲ್ಲರೂ ರಾಮನಂತೆ, ಲಕ್ಷ್ಮಣನಂತೆ, ಸೀತೆಯಂತೆ ಆದರ್ಶರಾಗಿ ಜೀವಿಸಬೇಕೆಂಬ ಸಂದೇಶವಿರುವ ರಾಮಾಯಣ ಕೃತಿಯ ಮೂಲಕ ವಾಲ್ಮೀಕಿಯವರು ಜಗತ್ತಿನ ಎಲ್ಲರೂ ಆದರ್ಶರಾಗಿರಬೇಕೆಂಬ ಸಂದೇಶವನ್ನು ನೀಡಿದ್ದು, ಆ ಸಂದೇಶ ಇಂದಿಗೆ ಪ್ರಸ್ತುತ ಎಂದು ಶಾಸಕ ಜೆ.ಆರ್ ಲೋಬೋ ಅಭಿಪ್ರಾಯಿಸಿದ್ದಾರೆ. ನಗರದ ಪುರಭವನದಲ್ಲಿ ಗುರುವಾರ ದ.ಕ. ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ದ.ಕ. ಜಿಲ್ಲಾ ವಾಲ್ಮೀಕಿ ನಾಯಕ ಅಸೋಸಿಯೇಶನ್ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು […]

ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ತರಬೇತಿ ಕಾರ್ಯಾಗಾರ

Tuesday, August 29th, 2017
Street vendors seminar

ಮಂಗಳೂರು :  ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪೌರಾಡಳಿತ ಮತ್ತು ದ.ಕ. ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ, ನಿಯಂತ್ರಣ ಅಧಿನಿಯಮ ಕಾಯ್ದೆಯ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು. ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಜಾಗ ಮೀಸಲಿಡಲಾಗಿದೆ. ಅದೇ ಜಾಗದಲ್ಲಿ ವ್ಯಾಪಾರ ಮಾಡುವ ಮೂಲಕ ಸಹಕಾರ ನೀಡಿ ಎಂದು ಕಾರ್ಯಾಗಾರ ಉದ್ಘಾಟಿಸಿದ ಮೇಯರ್ ಕವಿತಾ ಸನಿಲ್ ಹೇಳಿದರು. ಬೀದಿಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡಬೇಡಿ, ಕಾಲುದಾರಿಯನ್ನು ಅತಿಕ್ರಮಿಸಬೇಡಿ, ಮಂಗಳೂರು ಸ್ಮಾರ್ಟ್ ಸಿಟಿಯಾಗುವಾಗ ನಗರದ ಸೌಂದರ್ಯ ಹೆಚ್ಚಿಸಲು […]

ಮೇಯರ್ ಕವಿತಾ ಸನಿಲ್, ಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ ರಿಂದ ಪುಟ್ ಪಾತ್ ನಲ್ಲಿ ಪಾದಯಾತ್ರೆ

Thursday, July 27th, 2017
padayatre

ಮಂಗಳೂರು: ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮೇಯರ್ ನೇತೃತ್ವದಲ್ಲಿ  ಪಿವಿಎಸ್‌ ಸರ್ಕಲ್ ನಿಂದ ಸ್ಟೇಟ್ ಬ್ಯಾಂಕ್‌ವರೆಗೆ ಬುಧವಾರ ಸಂಚಾರ ಸುಧಾರಣೆ ಪಾದಯಾತ್ರೆ ನಡೆಸಿದರು. ಈ ಪಾದಯಾತ್ರೆ ಸಂದರ್ಭದಲ್ಲಿ ರಸ್ತೆಯಲ್ಲಿ ಕಂಡು ಬಂದ ಅನಧಿಕೃತ ಪಾರ್ಕಿಂಗ್, ರಸ್ತೆ-ಫುಟ್ ಪಾತ್ ಒತ್ತುವರಿ ತೆರವು ಹಾಗೂ ಸಂಚಾರಕ್ಕೆ ಅಡ್ಡಿಯಾಗಿರುವ ಗೂಡಂಗಡಿಗಳನ್ನು ತೆರವುಗೊಳಿಸಿ  ಎಚ್ಚರಿಕೆ ನೀಡಲಾಯಿತು. ಕಾರ್ಪೊರೇಟರ್‌ ಎ.ಸಿ. ವಿನಯ ರಾಜ್‌ ನಗರದ ಮಿಲಾಗ್ರಿಸ್‌ನ ಆಟೋ ನಿಲ್ದಾಣದಲ್ಲಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಮಾನು ನಿರ್ಮಿಸಲು  ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ […]