ಮಂಗಳೂರಿಗೆ ಶುದ್ಧೀಕೃತ ಸಮುದ್ರ ನೀರು: ಚೆನ್ನೈಗೆ ತಂಡ

Friday, February 9th, 2018
cleaned

ಮಂಗಳೂರು : ಮಂಗಳೂರು ನಗರಕ್ಕೆ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಒಂದೂವರೆ ವರ್ಷದ ಹಿಂದೆ ಪ್ರಸ್ತಾವಗೊಂಡು ನನೆಗುದಿಗೆ ಬಿದ್ದಿದ್ದ ಸಮುದ್ರ ನೀರನ್ನು ಸಂಸ್ಕರಿಸಿ ಒದಗಿಸುವ ಚಿಂತನೆ ಇದೀಗ ಮತ್ತೆ ಮರು ಜೀವ ಪಡೆದುಕೊಂಡಿದೆ. ಸಮುದ್ರದ ನೀರು ಸಂಸ್ಕರಿಸಿ ಸಿಹಿನೀರನ್ನಾಗಿ ಪರಿವರ್ತಿಸುವ ಬಗ್ಗೆ ಅಧ್ಯಯನ ನಡೆಸಲು ಮನಪಾ ಹಾಗೂ ಅಧಿಕಾರಿಗಳನ್ನೊಳಗೊಂಡ ಸುಮಾರು 33ಕ್ಕೂ ಅಧಿಕ ಮಂದಿಯ ತಂಡವು ಈ ವ್ಯವಸ್ಥೆಯನ್ನು ಈಗಾಗಲೇ ಸ್ಥಾಪಿಸಿರುವ ಚೆನ್ನೈಗೆ ಅಧ್ಯಯನ ಪ್ರವಾಸ ಕೈಗೊಂಡಿದೆ. ಕಡಲ ತಡಿಯ ಮಂಗಳೂರಿ ನಲ್ಲಿ ತೀರಾ ಸಾಮಾನ್ಯ ಸಮಸ್ಯೆ […]

ಸ್ಕಿಲ್ ಗೇಮ್ ಕೇಂದ್ರಗಳಿಗೆ ದಾಳಿ ನಡೆಸಿದ ಮೇಯರ್‌‌ಗೆ ಹೈಕೋರ್ಟ್‌ ಶಾಕ್‌

Tuesday, February 6th, 2018
kavitha-sanil

ಮಂಗಳೂರು: ನಗರದ ಸ್ಕಿಲ್ ಗೇಮ್ ಕೇಂದ್ರಗಳಿಗೆ ದಾಳಿ ನಡೆಸಿ ಸುದ್ದಿಯಾಗಿದ್ದ ಮೇಯರ್ ಕವಿತಾ ಸನಿಲ್ ಹಾಗೂ ಅವರ ತಂಡಕ್ಕೆ ಹೈಕೋರ್ಟ್‌ ಶಾಕ್‌ ನೀಡಿದೆ. ಕಳೆದ ಬಾರಿ ಫಳ್ನೀರ್‌ನ ಸ್ಕಿಲ್ ಗೇಮ್‌‌ಗೆ ದಾಳಿ ನಡೆಸಿದ ಮೇಯರ್ ಕವಿತಾ ಸನಿಲ್ ವಿರುದ್ಧ ಮಾಲಕಿ ಸಜಿತಾ ರೈ ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಕವಿತಾ ಸನಿಲ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್ ಹಾಗೂ ಪಾಂಡೇಶ್ವರ ಠಾಣೆಯ ವೃತ್ತ ನಿರೀಕ್ಷಕರಾದ ಕೆ.ಯು. ಬೆಳ್ಳಿಯಪ್ಪ ಅವರಿಗೆ ಕೋರ್ಟ್‌ ನೋಟೀಸು […]

ಇಂಧನ ತೈಲ ಬೆಲೆಯೇರಿಕೆ ವಿರೋಧಿಸಿ ಮಹಿಳಾ ಕಾಂಗ್ರೆಸ್‌ನಿಂದ ಸೈಕಲ್, ಎತ್ತಿನಗಾಡಿ ಜಾಥಾ

Saturday, February 3rd, 2018
congress

ಮಂಗಳೂರು: ಇಂಧನ ತೈಲ ಬೆಲೆ ಏರಿಕೆಯನ್ನು ಖಂಡಿಸಿ, ಕೇಂದ್ರ ಸರಕಾರದ ಜನವಿರೋಧಿಯನ್ನು ವಿರೋಧಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ಬೆಳಗ್ಗೆ ನಗರದಲ್ಲಿ ಎತ್ತಿನ ಗಾಡಿಯೊಂದಿಗೆ ಸೈಕಲ್ ಜಾಥಾ ನಡೆಯಿತು. ನಗರದ ಅಂಬೇಡ್ಕರ್ ವೃತ್ತ(ಜ್ಯೋತಿ)ದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಸೈಕಲ್ ಜಾಥಾವನ್ನು ಚಲನಚಿತ್ರ ನಟಿ ಭಾವನಾ ಹಾಗೂ ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಪೆಟ್ರೋಲ್, ಡೀಸೆಲ್ ಬೆಲೆ ದಿನೇದಿನೆ ಗಗನಕ್ಕೇರುತ್ತಿದೆ. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಇಂಧನ ತೈಲ ಬೆಲೆಯೇರಿಕೆಯ ವಿರುದ್ಧ […]

ಪಾರ್ಕಿಂಗ್ ಅತಿಕ್ರಮಣ ಶೀಘ್ರ ತೆರವು: ಮೇಯರ್ ಕವಿತಾ ಸನಿಲ್

Thursday, January 18th, 2018
sanil

ಮಂಗಳೂರು: ನಗರದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಅತಿಕ್ರಮಿಸಿ ಕಟ್ಟಡ, ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿರುವುದನ್ನು ಗುರುತಿಸಲಾಗಿದ್ದು, ಶೀಘ್ರ ಅವುಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಮಾಡಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು. ಗುರುವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾರ್ಕಿಂಗ್ ಸ್ಥಳಗಳನ್ನು ಅತಿಕ್ರಮಿಸಿರುವುದರಿಂದ ಸಂಚಾರದ ಸಮಸ್ಯೆ ಉದ್ಭವವಾಗಿದೆ. ಇದರಿಂದ ಸಾವಿರಾರು ಮಂದಿಗೆ ತೊಂದರೆಯೂ ಆಗಿದೆ. ಆ ಹಿನ್ನೆಲೆಯಲ್ಲಿ ಪಾರ್ಕಿಂಗ್ ಮೀಸಲಿಟ್ಟ ಸ್ಥಳಗಳನ್ನು ಅತಿಕ್ರಮಿಸಿರುವವರ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಅದರ ಆಧಾರದ ಮೇಲೆ ಕಾರ್ಯಾಚರಣೆ ಮಾಡಲಾಗುವುದು ಎಂದರು. ನಗರದ ಸುಮಾರು […]

ಲಾಟರಿ ಮೂಲಕ ಫಲಾನುಭವಿಗಳಿಗೆ ಫ್ಲ್ಯಾಟ್ ಹಂಚಿಕೆ ಪ್ರಕ್ರಿಯೆ

Wednesday, January 17th, 2018
ivan-desouza

ಮಂಗಳೂರು: ವಸತಿ ರಹಿತ ಬಡವರಿಗೆ ಇದೇ ಮೊದಲ ಬಾರಿಗೆ ಫ್ಲ್ಯಾಟ್, ಅಪಾರ್ಟ್‌ಮೆಂಟ್‌ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಫಲಾನುಭವಿಗಳ ಮೊತ್ತದಿಂದ ನಿರ್ಮಿಸಿಕೊಡಲು ನಿರ್ಧರಿಸಲಾಗಿದ್ದು, ಮಂಗಳವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ನಡೆಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ನಗರದಲ್ಲಿ ಸೂಕ್ತ ಸ್ಥಳದ ಕೊರತೆಯಿಂದಾಗಿ ವಸತಿ ರಹಿತರಿಗೆ ಮನೆ ಒದಗಿಸಲು ಅಸಾಧ್ಯವಾಗಿತ್ತು. ಅಪಾರ್ಟ್‌ಮೆಂಟ್ ಮಾದರಿಯ ಮನೆ ನಿರ್ಮಾಣದ ಮೂಲಕ ವಸತಿ […]

1.9 ಕೋಟಿ ವೆಚ್ಚದಲ್ಲಿ ಸ್ಟರಕ್ ರಸ್ತೆ ಮಾಡಲಾಗುವುದು: ಶಾಸಕ ಜೆ.ಆರ್.ಲೋಬೊ

Saturday, January 6th, 2018
j-r-lobo

ಮಂಗಳೂರು: ಸ್ಟರಕ್ ರಸ್ತೆಯನ್ನು 1.9 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಸ್ಟರಕ್ ರಸ್ತೆ ಅಭಿವೃದ್ಧಿಗೆ ಮೇಯರ್ ಕವಿತಾ ಸನಿಲ್ ರೊಂದಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ ಈ ರಸ್ತೆಯನ್ನು ಪ್ರಿಮಿಯಮ್ ಅಫೈರ್ಸ್ ಯೋಜನೆಯ ಮೂಲಕ ಅಭಿವೃದ್ಧಿಗೊಳಿಸಲಾಗುತ್ತಿದ್ದು 480 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಾಗಲಿದೆ ಎಂದರು. ಈ ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಪೂರ್ಣ ಪ್ರಮಾಣದಲ್ಲಿ ನೆರವು ನೀಡಿದ್ದಾರೆ ಅವರ ನೆರವನ್ನು ಸ್ಮರಿಸಿದ ಶಾಸಕ ಜೆ.ಆರ್.ಲೋಬೊ ಅವರು […]

ಐವನ್ ಡಿಸೋಜ ಮನೆಯ ಕ್ರಿಸ್‌ಮಸ್ ಸಂಭ್ರಮದಲ್ಲಿ ಹಾಡಿದ ಮೇಯರ್ ಕವಿತಾ ಸನಿಲ್

Monday, December 25th, 2017
ivan-desouza

ಮಂಗಳೂರು: ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಸಂಭ್ರಮ ಕೂಟದಲ್ಲಿ ಮೇಯರ್ ಕವಿತಾ ಸನಿಲ್ ಹಾಡೊಂದನ್ನು ಹಾಡಿ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು. ಕರಾಟೆ ಚಾಂಪಿಯನ್ ಆಗಿರುವ ಮೇಯರ್ ಕವಿತಾ ಸನಿಲ್, ನೃತ್ಯ, ಹಾಡಿನ ಮೂಲಕ ಈಗಾಗಲೇ ಗಮನ ಸೆಳೆದವರು. ಇಂದು ಕ್ರಿಸ್‌ಮಸ್ ಸಂಭ್ರಮದಂಗವಾಗಿ ಸಂಗೀತ ರಸಮಂಜರಿಯನ್ನೂ ಆಯೋಜಿಸಲಾಗಿತ್ತು. ಮೇಯರ್ ಕವಿತಾ ಸನಿಲ್‌ರವರು ಐವನ್ ಡಿಸೋಜ ಮತ್ತು ಅವರ ಕುಟುಂಬದವರಿಗೆ ಕ್ರಿಸ್‌ಮಸ್ ಶುಭಾಶಯ ಹೇಳಿದ ಬಳಿಕ ‘ತೇರೆ ಮೇರೆ […]

ಪಾರ್ಕಿಂಗ್ ಅವ್ಯವಸ್ಥೆ… ಮಂಗಳೂರಲ್ಲೂ ಸಂಚಾರ ದುಸ್ತರ

Monday, December 11th, 2017
parking-problem

ಮಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಸೇರ್ಪಡೆಗೊಂಡ ನಗರ. ಆದರೆ ನಗರದಲ್ಲಿ ವಾಹನ ದಟ್ಟಣೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ನಗರಕ್ಕೆ ಒಂದು ಸುವ್ಯವಸ್ಥಿತ ರೂಪ ಕೊಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ ಸೆಟ್‌ಬ್ಯಾಕ್‌ಗಾಗಿ ಇಂತಿಷ್ಟು ಜಾಗವನ್ನು ಬಿಡಬೇಕು ಮತ್ತು ಅದಕ್ಕೆ ಅಗತ್ಯ ಬೀಳುವ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಬೇಕು ಎಂಬ ನಿಯಮಗಳಿವೆ. ಆದರೆ ಇಲ್ಲಿರುವ ಹೆಚ್ಚಿನ ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್‌ಗೆ […]

ಇಂಡಿಯನ್‌ ಕರಾಟೆ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌ ಪಂದ್ಯಾಟದಲ್ಲಿ ಮೇಯರ್‌ ಕವಿತಾ ಸನಿಲ್‌ಗೆ ಚಿನ್ನ

Monday, November 6th, 2017
karate championship

ಮಂಗಳೂರು:”ಇಂಡಿಯನ್‌ ಕರಾಟೆ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌’ ಪಂದ್ಯಾಟದಲ್ಲಿ ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರು ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯನ್‌ ಕರಾಟೆ ಮಂಗಳೂರು ಡೋಜೋ ವತಿಯಿಂದ ಮಂಗಳೂರಿನಲ್ಲಿ ಜರಗಿದ  ಬ್ಲ್ಯಾಕ್‌ ಬೆಲ್ಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಕೊಂಡಿದ್ದಾರೆ. ಕವಿತಾ ಅವರು 65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲಾಕ್‌ ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಫೈನಲ್‌ನಲ್ಲಿ ಉದಯೋನ್ಮುಖ ಕರಾಟೆ ಪಟು ನಿಶಾ ನಾಯಕ್‌ ವಿರುದ್ಧ 7-3 ಅಂಕಗಳಿಂದ ಅವರು ಜಯಗಳಿಸಿದರು. ನಿಶಾ ನಾಯಕ್‌ ಅವರು ಬೆಳ್ಳಿ ಹಾಗೂ […]

ಪಾಲಿಕೆಯಲ್ಲಿ ವಿರೋಧ ಪಕ್ಷದ ಬಿಜೆಪಿ ಸದಸ್ಯರಿಂದ ಧರಣಿ, ಮೇಯರ್ ಕಣ್ಣೀರು

Tuesday, October 31st, 2017
mayor

ಮಂಗಳೂರು: ಫ್ಲ್ಯಾಟ್ ನ ಸೆಕ್ಯುರಿಟಿ ಗಾರ್ಡ್ ಮಗುವಿನ ಮೇಲೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರು  ಹಲ್ಲೆ ಮಾಡಿದ್ದಾಗಿ ಆರೋಪಿಸಿ ವಿರೋಧ ಪಕ್ಷದ ಬಿಜೆಪಿ ಸದಸ್ಯರು ಪಾಲಿಕೆ ಸಭೆ ನಡೆಯಲು ಅವಕಾಶ ನೀಡದೇ ಇದ್ದಾಗ, ಕಟೀಲು ದುರ್ಗಾ ಪರಮೇಶ್ವರಿ ಮೇಲೆ ಆಣೆ ಇಟ್ಟು ಕಣ್ಣೀರು ಹಾಕಿದ ಘಟನೆ ನಡೆಯಿತು. ವಿರೋಧ ಪಕ್ಷದವರು ಧರಣಿ ಆರಂಭಿಸಿದ್ದರಿಂದ ೧೦.೩೦ಕ್ಕೆ ಆರಂಭವಾಗಬೇಕಿದ್ದ ಸಭೆ ಆರಂಭ ಆಗಲಿಲ್ಲ. ಮೇಯರ್ ಡೌನ್ ಡೌನ್ ಎಂದು ಕೂಗುತ್ತ ಮೇಯರ್ ಪೀಠದ ಎದುರು ಜಮಾಯಿಸಿದರು. ಇದಕ್ಕೆ […]