Blog Archive

ಸ್ಥಳೀಯ ಮಾರುಕಟ್ಟೆಗಳಲ್ಲಿ ದಿನಸಿ ಸಾಮಾಗ್ರಿಗಳು, ತರಕಾರಿಗೆ ಗ್ರಾಹಕರಿಂದ ಹೆಚ್ಚು ಹಣ ವಸೂಲಿ, ದೂರು

Monday, May 31st, 2021
vegetable

ಮಂಗಳೂರು : ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕ ರಿಂದ ಕೆಲವೊಂದು ದಿನಸಿ ಸಾಮಾಗ್ರಿಗಳು, ತರಕಾರಿ, ಹಣ್ಣು ಹಂಪಲುಗಳ ವರ್ತಕರು ಸಿಕ್ಕಿದ್ದೇ ಲಾಭ ಎಂಬಂತೆ ಮನ ಬಂದಂತೆ ಹಣ ವಸೂಲಿ ಮಾಡುತ್ತಿರುವ  ಹಿನ್ನಲೆಯಲ್ಲಿ ಸಾರ್ವಜನಿಕರು  ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವುದರಿಂದ,  ಅಂತಹ ವರ್ತಕರನ್ನು ಪತ್ತೆ ಹಚ್ಚಲು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್19 ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸುವ ಸಲುವಾಗಿ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದ ವತಿಯಿಂದ ಕಾಲಕಾಲಕ್ಕೆ ಎಲ್ಲಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಲಾಕ್‍ಡೌನ್‍ನ […]

ಸುಲಿಗೆ ಮಾಡುವ ಆ್ಯಂಬುಲೆನ್ಸ್ ಚಾಲಕರ ವಿರುದ್ಧ ಕಠಿಣ ಕ್ರಮ: ಆರ್ ಅಶೋಕ

Sunday, May 30th, 2021
R Ashoka

ಬೆಂಗಳೂರು : ದುಬಾರಿ ಹಣ ವಸೂಲಿ ಮಾಡುವುದು ಗಮನಕ್ಕೆ ಬಂದರೆ ಅಂತಹ ಆ್ಯಂಬುಲೆನ್ಸ್ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು. “ಪ್ರಧಾನಿ ಮೋದಿಯವರ ಆಡಳಿತಕ್ಕೆ ಏಳು ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಕ್ಷೇತ್ರದಲ್ಲಿ ಚಾಲನೆ ನೀಡಿ ಮಾತನಾಡುತ್ತಾ,”ಕೆಲ ಆ್ಯಂಬುಲೆನ್ಸ್ ಚಾಲಕರು ಸೋಂಕಿನಿಂದ ಸಾವನ್ನಪ್ಪಿರುವವರ ಶವ ಸಾಗಿಸಲು, ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಲು ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇಂಥಹ ಚಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ […]

ಪೊಲೀಸರು ಜಪ್ತಿ ಮಾಡಿದ 35 ಸಾವಿರ ವಾಹನಗಳ ದಂಡದ ಮೊತ್ತ ನೋಡಿ ಗೃಹ ಸಚಿವರೇ ಶಾಕ್!

Saturday, May 29th, 2021
Bommai

ಬೆಂಗಳೂರು : ಕೋವಿಡ್ 19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಗೆ ಇಳಿದವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿದ ಪೊಲೀಸರು ಬರೋಬ್ಬರಿ 35905 ಸಾವಿರ ವಾಹನ ಜಪ್ತಿ ಮಾಡಿದ್ದಾರೆ. ಅದರಲ್ಲೂ 32 ಸಾವಿರ ದ್ವಿಚಕ್ರ ವಾಹನ. ಇವುಗಳಿಂದ ಸರಾಸರಿ ದಂಡ ಎಷ್ಟು ಸಂಗ್ರಹವಾಗುತ್ತದೆ. ಈ ದಂಡದ ಮೊತ್ತವನ್ನು ಏನು ಮಾಡುತ್ತಾರೆ ಎಂಬುದರ ಪೂರ್ಣ ವಿವರ ಇಲ್ಲಿದೆ ನೋಡಿ! 35 ಸಾವಿರ ವಾಹನ ಜಪ್ತಿ ರಾಜಧಾನಿಯಲ್ಲಿ ಬೆಳಗ್ಗೆ […]

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜೂನ್ 30 ರವರೆಗೆ ಲಾಕ್ ಡೌನ್ ಘೋಷಣೆ ಮಾಡಲು ಹೇಳಿಲ್ಲಾ! ಶೆಟ್ಟರ್

Saturday, May 29th, 2021
Jagadish Shetter

ಹುಬ್ಬಳ್ಳಿ: ಜಲ ಜೀವನ ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆಯ 388 ಗ್ರಾಮಗಳಿಗೆ ಮುಂದಿನ ಮೂರು ವರ್ಷಗಳಲ್ಲಿ, ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ಜಿಲ್ಲೆಗೆ 1032 ಕೋಟಿಯಲ್ಲಿ ಜಲ ಜೀವನ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ 403 ಕೋಟಿ ನೀಡಿದರೇ, 602 ಕೋಟಿ ರಾಜ್ಯ ಸರ್ಕಾರ ನೀಡಿದೆ, 423 ಕೋಟಿ ನಬಾರ್ಡ್ ರಿಂದ ಸಾಲ ತೆಗೆದುಕೊಳ್ಳಲಾಗುತ್ತಿದೆ ಎಂದರು. […]

ವಿಶೇಷ ಚೇತನ ಮಕ್ಕಳಿಗೆ ದಾನಿಗಳು ನೀಡಿದ ಹಣ ನೀಡುವಂತೆ ಪೀಡಿಸಿ ಮಗನಿಂದ ತಂದೆಯ ಕೊಲೆ

Saturday, May 29th, 2021
Sundara Poojary

ಚಿಕ್ಕಮಗಳೂರು: ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ಆದಾಯವಿಲ್ಲದೆ  ಮನೆಗೆ ಬಂದು ತಾನು ಕೇಳಿದಾಗ ಹಣ ನೀಡಿಲ್ಲವೆಂದು ಸಿಟ್ಟಿಗೆದ್ದ ಹಿರಿಯ ಮಗ ತಂದೆಯನ್ನೇ ಕೊಲೆಗೈದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಚನ್ನಡ್ಲುವಿನಲ್ಲಿ ನಡೆದಿದೆ. ಸುಂದರ ಪೂಜಾರಿ (52) ಮೃತ ದುರ್ದೈವಿ. ಈ ಘಟನೆ ಮೂಡಿಗೆರೆ ತಾಲೂಕಿನ ಚನ್ನಡ್ಲುವಿನಲ್ಲಿ ನಡೆಡಿದ್ದು ಇವರನ್ನು ಹಿರಿಯ ಮಗ ನಿಖೇಶ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸುಂದರ ಪೂಜಾರಿಯವರು ಪಾರ್ಶ್ವವಾಯು ಪೀಡಿತರಾಗಿದ್ದು,  ಇಬ್ಬರು ವಿಶೇಷ ಚೇತನ ಮಕ್ಕಳು ಮತ್ತು ಪತ್ನಿಯೊಂದಿಗೆ ಅವರು ವಾಸವಾಗಿದ್ದು, ದಾನಿಗಳು ಅವರಿಗೆ ನೆರವು ನೀಡಿದ್ದರಿಂದ ಲಕ್ಷಾಂತರ ರೂ. ಸಂಗ್ರಹವಾಗಿದೆ. […]

ಗದಗ ಉಸ್ತುವಾರಿ ಸಚಿವರಿಂದ ನರಗುಂದ ನಗರ ಪ್ರದಕ್ಷಿಣೆ

Monday, May 24th, 2021
CC Pateel

ಗದಗ : ರಾಜ್ಯ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಸೋಮವಾರ ನರಗುಂದ ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿ, ಲಾಕ್ ಡೌನ್ ಸಮಯದ ಸ್ಥಿತಿಗತಿಯ ವೀಕ್ಷಣೆ ಮಾಡಿದರು. ಕೊರೋನಾ ಸಮಯದ ಲಾಕ್‌ಡೌನ್ ಕಠಿಣ ಸಂದರ್ಭವಾಗಿದ್ದು, ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಜನರ ಜೀವಹಾನಿ ತಪ್ಪಿಸಲು ಲಾಕ್ ಡೌನ್ ಅನಿವಾರ್ಯವಾಗಿದೆ. ಕೋವಿಡ್ ನಿಯಮಾವಳಿಗಳನ್ನು ಸಾರ್ವಜನಿಕರು ಸರಿಯಾಗಿ ಪಾಲಿಸುವ ಮೂಲಕ ಸಹಕರಿಸಿ, ಸುರಕ್ಷಿತವಾಗಿರಿ […]

ಧಾರವಾಡ ಜಿಲ್ಲೆಯಲ್ಲಿ ವೀಕ್ ಎಂಡ್ ಲಾಕ್ ಡೌನ್ ವಿಸ್ತರಣೆ

Sunday, May 23rd, 2021
shetter

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹಬ್ಬುತ್ತಿರುವ ಕೊರೊನಾ ಸರಪಳಿ ಕಟ್ ಮಾಡಲು ಸರ್ಕಾರ ಹೊರಡಿಸಿರುವ ಲಾಕಡೌನ್ ಮಾರ್ಗಸೂಚಿಗಳನ್ನು ಹೊರತುಪಡಿಸಿ ಧಾರವಾಡ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇಂದು ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು, ವಾರದಲ್ಲಿ ಐದು ದಿನ ಕಟ್ಟುನಿಟ್ಟಿನ ಲಾಕಡೌನ್ ಜಾರಿ ಮಾಡಿದ್ದಾರೆ. ಮೇ.27 ಹಾಗೂ 28 ರಂದು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ […]

ಲಾಕ್‌ ಡೌನ್‌ನಿಂದ ಸಂಕಷ್ಟಕ್ಕೀಡಾದ ಧ್ವನಿಬೆಳಕು, ಫೋಟೋಗ್ರಾಫರ್ಸ್, ಕ್ಯಾಟರಿಂಗ್, ಶಾಮಿಯಾನ ಉದ್ಯೋಗಿಗಳು

Saturday, May 22nd, 2021
Sounds lights

ಮಂಗಳೂರು : ನಮಗೆ ಕಳೆದ ಬಾರಿಯೂ ಲಾಕ್‌ಡೌನ್ ಸಂದರ್ಭವೂ ವ್ಯಾಪಾರವಿಲ್ಲ, ಈ ಬಾರಿಯೂ ವ್ಯಾಪಾರದ ಅವಧಿಯಲ್ಲಿಯೇ ಲಾಕ್ ಡೌನ್ ಮಾಡಲಾಗಿದೆ.  ನಮ್ಮ ಸಂಸ್ಥೆಗಳಲ್ಲಿ ದುಡಿಯುವ ಸಾವಿರಾರು ಸಂಖ್ಯೆಯ ಸಿಬ್ಬಂದಿಯಿದ್ದಾರೆ. ಅವರ ಕುಟುಂಬವಿದೆ. ನಮಗೆ ಯಾವುದೇ ಪರ್ಯಾಯ ಉದ್ಯೋಗವಿಲ್ಲ ನಮಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ ಎಂದು  ದ.ಕ. ಜಿಲ್ಲಾ ಧ್ವನಿಬೆಳಕು, ಫೋಟೋಗ್ರಾಫರ್ಸ್, ಕ್ಯಾಟರಿಂಗ್, ಶಾಮಿಯಾನ ಮಾಲಕರ ಸಂಘಗಳ ಮುಖ್ಯಸ್ಥರು ಹೇಳಿದ್ದಾರೆ. ಈ ಸಂಘಟನೆಗಳ ಮುಖ್ಯಸ್ಥರು ತಮಗೂ ಸರಕಾರ ಪ್ಯಾಕೇಜ್ ಘೋಷಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ಪತ್ತ್ರಿಕಾಗೋಷ್ಠಿ ನಡೆಸಿ […]

ಲಾಕ್ ಡೌನ್ ಜೂಜಾಟ : ಹನ್ನೊಂದು ಮಂದಿಯ ಬಂಧನ, 1,76,800/- ರೂ ಮೌಲ್ಯದ ಸೊತ್ತು ವಶ

Friday, May 21st, 2021
Andar Bahar

ಮಂಗಳೂರು : ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಬಿಕರ್ನಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ, ಸಾಮಾಜಿಕ ಅಂತರವನ್ನು ಪಾಲಿಸದೇ ಮಾಸ್ಕ್ ಧರಿಸದೇ ಅಕ್ರಮ ಜೂಜಾಟವಾದ ಆಂದರ್- ಬಾಹರ್ ಆಟವನ್ನು ಆಡುತ್ತಿದ್ದ ಹನ್ನೊಂದು ಮಂದಿಯನ್ನು ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಯವರಾದ  ರಾಜೇಂದ್ರ. ಬಿ, ಪ್ರದೀಪ ಟಿಆರ್ ಮತ್ತು ಸಿಬ್ಬಂದಿಗಳು ಮೇ 21 ಶುಕ್ರವಾರ ಬಂಧಿಸಿದ್ದಾರೆ. 1) ರಾಜೇಂದ್ರ ಹಲ್ದಾರ್(41), ವಾಸ:, ಆದಿಲಬಾದ್, ತೆಲಂಗಾಣ, ಹಾಲಿ ವಾಸ ಪದವು ಕುಲಶೇಖರ, ಮಂಗಳೂರು 2) […]

ಎರಡನೇ ಹಂತದ ಲಾಕ್ ಡೌನ್ ಮೇ 24 ರಿಂದ ಜೂನ್ 7ರ ವರೆಗೆ ವಿಸ್ತರಿಸಿದ ಸರಕಾರ

Friday, May 21st, 2021
BS Yedyurappa

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆಯ ಎರಡನೇ ಹಂತದ ಲಾಕ್ ಡೌನ್ ಅನ್ನು ಮತ್ತೆ 14 ದಿನಗಳ ದಿನಗಳ ಕಾಲ ವಿಸ್ತರಿಸಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಬಳಿಕ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ರಾಜ್ಯಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಮೇ 24 ರಿಂದ ಜೂನ್ 7ರ ವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಹಿಂದೆ ಜಾರಿಗೊಳಿಸಿರುವ ಮಾರ್ಗಸೂಚಿಯೇ ಅನ್ವಯವಾಗಲಿದೆ ಎಂದು ಸಿಎಂ ಬಿ.ಎಸ್. […]