Blog Archive

ಡ್ರಗ್ಸ್ ಜಾಲವನ್ನು ಮಟ್ಟಹಾಕಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ: ಶಾಸಕ ವೇದವ್ಯಾಸ ಕಾಮತ್

Thursday, November 29th, 2018
vedvyas-kamath

ಮಂಗಳೂರು: ಬೆಂಗ್ರೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಮಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇಂತಹ ಕೆಟ್ಟ ಘಟನೆಗಳಿಗೆ ಯುವಕರು ಗಾಂಜಾ, ಅಫೀಮು, ಚರಸ್ ನಂತಹ ಡ್ರಗ್ಸ್ ಸೇವಿಸುತ್ತಿರುವುದೇ ಕಾರಣ. ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಕೊನೆಗೊಳಿಸದಿದ್ದರೆ […]

ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ..ಮೆಡಿಕಲ್​ ಶಾಪ್​ ಪರವಾನಗಿ ರದ್ದು!

Tuesday, September 4th, 2018
helth-care

ಮಂಗಳೂರು: ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ಮಾಡಿದ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ‌‌‌ ಮೆಡಿಕಲ್ ಶಾಪ್ನ ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆ ರದ್ದುಗೊಳಿಸಿ ಆದೇಶ ಹೊರಡಿದೆ. 2018 ರ ಜು. 18ರಂದು ನಗರದ ಪಿವಿಎಸ್ ಸಮೀಪದ ಪಿ.ಕೆ. ಹೆಲ್ತ್‌ ಕ್ಯೂರ್ ಮೆಡಿಕಲ್ ಶಾಪ್‌ನಲ್ಲಿ ಯಾವುದೇ ವೈದ್ಯರ ಚೀಟಿ ಇಲ್ಲದೆ ಮತ್ತು ಬರಿಸುವ ಔಷಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉರ್ವ ಪೊಲೀಸ್ […]

ಪೊಲೀಸ್ ಸಿಬ್ಬಂದಿವೋರ್ವರ ಮೊಬೈಲ್ ಮತ್ತು ನಗದು ದೋಚಿದ ಮೂವರ ಕಳ್ಳರ ಬಂಧನ..!

Monday, August 20th, 2018
arrested

ಮಂಗಳೂರು: ಮಂಗಳೂರಿನ ನೆಹರು ಮೈದಾನದ ಬಳಿ ಪೊಲೀಸ್ ಸಿಬ್ಬಂದಿವೋರ್ವರ ಮೊಬೈಲ್ ಮತ್ತು ನಗದು ದೋಚಿದ ಮೂವರು ಕಳ್ಳರನ್ನು ಪಾಂಡೇಶ್ವರ ಪೊಲೀಸರು ಮತ್ತು ದಕ್ಷಿಣ ರೌಡಿ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ. ನೆಹರು ಮೈದಾನದ ಸಮೀಪ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕಾನ್ಸ್ಟೇಬಲ್ ಶ್ರೀನಿವಾಸ್ ಅವರ ಮೊಬೈಲ್ ಹಾಗೂ ನಗದನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದರು. ಚಿಕ್ಕಮಗಳೂರಿನ ಯತೀಶ್ ಎಂ.ಎಸ್. ಯಾನೆ ಯತಿ (22) ಮಹಮ್ಮದ್ ಅಶ್ರಫ್ ಯಾನೆ ಅಜ್ಜು (23) ಮತ್ತು ಬಂಟ್ವಾಳ ತಾಲೂಕು ಸರಪಾಡಿ ಅಜಿಲಮೊಗರಿನ ಮುಹಮ್ಮದ್ […]

ಮೈಸೂರಿನಲ್ಲಿ ಪೊಲೀಸ್ ಜೀಪ್​ ಪಲ್ಟಿ… ಮೂವರಿಗೆ ಗಾಯ!

Saturday, July 28th, 2018
police-jeep

ಮೈಸೂರು: ಚಲಿಸುತ್ತಿದ್ದ ಪೊಲೀಸ್ ಜೀಪ್ನ ಆ್ಯಕ್ಸಲ್ ಬ್ಲೇಡ್ ಕಟ್ ಆಗಿ ಪೊಲೀಸ್ ಜೀಪ್ ಪಲ್ಟಿಯಾಗಿರುವ ಘಟನೆ ಹೆಚ್.ಡಿ ಕೋಟೆಯ ಮಾದಾಪುರ ಗ್ರಾಮದಲ್ಲಿ ನಡೆದಿದ್ದು ಜೀಪ್ನಲ್ಲಿದ್ದ ಸಿಪಿಐ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಹೆಚ್.ಡಿ. ಕೋಟೆ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಜೀಪೊಂದು ಮೈಸೂರಿನಿಂದ ಮಾನಂದವಾಡಿ ರಸ್ತೆಯ ಮೂಲಕ ಹೆಚ್.ಡಿ ಕೋಟೆಗೆ ಹೋಗುತ್ತಿರುವಾಗ ಮಾದಾಪುರ ಗ್ರಾಮದ ಬಳಿ ಜೀಪ್ ನ ಅಕ್ಸೆಲ್ ಬ್ಲೇಡ್ ಕಟ್ಟಾದ, ಪರಿಣಾಮ ಜೀಪ್ ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆಯಲ್ಲಿ ಪಲ್ಟಿ ಹೊಡೆದು ರಸ್ತೆ ಬದಿಯಲ್ಲಿದ್ದ ಮನೆಗೆ […]

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ, ನ್ಯಾಯಲಯಕ್ಕೆ ಹಾಜರು

Monday, July 23rd, 2018
arrested

ಮಂಗಳೂರು: ಕೊಲೆ, ದರೋಡೆ ಸೇರಿದಂತೆ ವಿವಿಧ 24 ಪ್ರಕರಣಗಳ ಆರೋಪ ಎದುರಿಸುತ್ತಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಂಗಳೂರಿನ ಹನೀಫ್ ಎಂಬಾತನೇ ಬಂಧಿತ ಆರೋಪಿ. ಈತ ತಲಪಾಡಿಯ ಕೆಸಿ ನಗರದ ನಿವಾಸಿಯಾಗಿದ್ದು ನ್ಯಾಯಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಲಾಗಿತ್ತು. ಆರೋಪಿಯನ್ನು ಉಳ್ಳಾಲ ದರ್ಗಾದ ಬಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಮಂಗಳೂರಿನ ಉಳ್ಳಾಲ, ಮಂಗಳೂರು ಉತ್ತರ ಪೊಲೀಸ್ ಠಾಣೆ ಮತ್ತು ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.

ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ನಗದು ಹಾಗೂ ಚಿನ್ನಾಭರಣ ಎಗರಿಸಿ ಪರಾರಿ..!

Tuesday, July 3rd, 2018
saohail

ಕಾಸರಗೋಡು: ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ನಗದು ಹಾಗೂ ಚಿನ್ನಾಭರಣ ಎಗರಿಸಿದ ಘಟನೆ ಬಾಡೂರು ಎಂಬಲ್ಲಿ ನಡೆದಿದೆ. ಮೊಗ್ರಾಲ್ ನಿವಾಸಿ ಸುಹೈಲ್(28) ದರೋಡೆಗೊಳಗಾದವರು. ಇವರು ಸೋಮವಾರ ಸಂಜೆ ಬೈಕಿನಲ್ಲಿ ತೆರಳುತ್ತಿದ್ದಾಗ ಇನ್ನೊಂದು ಬೈಕಿನಲ್ಲಿ ಬಂದ ತಂಡ ಈ ಕೃತ್ಯ ಎಸಗಿದೆ. ಸುಹೈಲ್ ಪೆರ್ಲದಲ್ಲಿರುವ ಸಹೋದರಿ ಮನೆಗೆ ಚಿನ್ನಾಭರಣ ಮತ್ತು ಹಣದೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ತಂಡ ಕಣ್ಣಿಗೆ ಖಾರದ ಪುಡಿ ಎರಚಿದೆ. ಬಳಿಕ ಸುಹೈಲ್ ಅವರಲ್ಲಿದ್ದ 15 ಪವನ್ ಚಿನ್ನಾಭರಣ ಹಾಗೂ […]

ನಮ್ಮ ಶಾಸಕರನ್ನು ಒಳಗೆ ಅಥವಾ ಹೊರಗೆ ಕೊಂಡೊಯ್ದು ರಕ್ಷಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್

Thursday, May 17th, 2018
D-K-Shivkumar

ಬೆಂಗಳೂರು: ನಮ್ಮ ಒಬ್ಬ ಶಾಸಕರನ್ನು ಹೊರತುಪಡಿಸಿದರೆ ಎಲ್ಲರೂ ಜತೆಯಲ್ಲೆ ಇದ್ದಾರೆ. ಯಾರೂ ಬಿಟ್ಟು ಹೋಗಿಲ್ಲ ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಸುದ್ದಿಗಾರರ ಜತೆ‌ ಮಾತನಾಡಿದ ಅವರು, ಸಂಪರ್ಕಕ್ಕೆ ಸಿಗದಿರುವ ಶಾಸಕರ ಬಗ್ಗೆ ಈಗ ಏನನ್ನೂ ಹೇಳಲ್ಲ. ಅವರು ನಮ್ಮೊಂದಿಗೆ ಇಲ್ಲ ಅಷ್ಟೆ, ಸಂಪರ್ಕದಲ್ಲಿದ್ದಾರೆ. ನಮ್ಮ ಶಾಸಕರು ನಮ್ಮೊಂದಿಗೆ ಇದ್ದಾರೆ, ಎಲ್ಲಿಯೂ ಹೋಗಲ್ಲ. ಅಗತ್ಯ ಸಂದರ್ಭ ಬಂದಾಗ ನಮ್ಮ ಬಲ ತೋರಿಸುತ್ತೇವೆ. ನಾವು ನಮ್ಮ ನಡೆಯನ್ನು ಈಗ ತಿಳಿಸಲ್ಲ. ಅಗತ್ಯ ಬಂದಾಗ ನಿಮಗೇ ಅರಿವಾಗುತ್ತದೆ […]

ಮತದಾನ ಪ್ರಕ್ರಿಯೆಗೆ ಜಿಲ್ಲಾ ಪೊಲೀಸ್ ಸಕಲ ಸಿದ್ಧತೆ: ಎಸ್ಪಿ ರವಿಕಾಂತೇಗೌಡ

Wednesday, May 9th, 2018
ravikanth-gowda

ಮಂಗಳೂರು: ಮತದಾನ ಪ್ರಕ್ರಿಯೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಸಕಲ ಸಿದ್ಧತೆ ಮಾಡಿಕೊಂಡಿವೆ ಎಂದು ಎಸ್ಪಿ ರವಿಕಾಂತೇಗೌಡ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಜ.17ರಿಂದಲೇ ಚುನಾವಣೆಗೆ ಸಂಬಂಧಿಸಿ ಸಿದ್ಧತೆ ಆರಂಭಿಸಲಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದ ನಂತರ ಇಲಾಖೆಯು ಎಚ್ಚೆತ್ತುಕೊಂಡು ಸರ್ವ ಸಿದ್ದತೆ ನಡೆಸಿದೆ. ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ 981 ಮತಗಟ್ಟೆಗಳಿವೆ. ಬಂದೋಬಸ್ತ್‌ಗಾಗಿ ಡಿವೈಎಸ್ಪಿ ಹುದ್ದೆಯ ಅಧಿಕಾರಿಗಳಲ್ಲದೆ 870 ಹೆಡ್‌ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ಗಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಲ್ಲದೆ […]

ಸ್ವಚ್ಛತಾ ಆಭಿಯಾನದೊಂದಿಗೆ ಚುನಾವಣಾ ಪ್ರಚಾರ ಆರಂಭಿಸಿದ ಮದನ್

Tuesday, February 6th, 2018
madan

ಮಂಗಳೂರು: ಕೋಮು ಸಂಘರ್ಷ, ರಾಜಕೀಯ ದೊಂಬರಾಟಕ್ಕೆ ಸಾಕ್ಷಿಯಾಗುತ್ತಿರುವ ಕಡಲ ತಡಿಯ ನಗರ ಮಂಗಳೂರಿನಲ್ಲಿ ಬದಲಾವಣೆ ತರುವ ದೃಷ್ಠಿಯಿಂದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ರಾಜಕೀಯಕ್ಕೆ ದಾಪುಗಾಲಿಟ್ಟಿದ್ದಾರೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಇದೀಗ ಮದನ್ ವಿಶಿಷ್ಟ ರೀತಿಯ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅವರು ಜನರೊಂದಿಗೆ ಬೆರೆತುಕೊಳ್ಳಲು ಜನಪರ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳುತ್ತಿದ್ದಾರೆ. ಖಾಕಿ ಕಳಚಿಟ್ಟು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮದನ್ ಮಂಗಳೂರು ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ‌ […]

ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮ

Saturday, February 3rd, 2018
police-suresh

ಮಂಗಳೂರು: ಆಟೋ ರಿಕ್ಷಾ ಚಾಲಕರು ಸಾರ್ವಜನಿಕರು ಕರೆದಲ್ಲಿಗೆ ಬಾಡಿಗೆಗೆ ಹೋಗದ ಬಗ್ಗೆ ಹಾಗೂ ಅಧಿಕ ಬಾಡಿಗೆ ದರ ವಸೂಲಿ ಮಾಡುತ್ತಿರುವ ಬಗ್ಗೆ ಶುಕ್ರವಾರ ನಡೆದ ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದೂರುಗಳು ಬಂದಿದ್ದು, ಇಂತಹ ನಿರ್ದಿಷ್ಟ ಪ್ರಕರಣಗಳ ಕುರಿತು ರಿಕ್ಷಾದ ನಂಬರ್‌ ದಾಖಲಿಸಿ, ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ (ನಂ. 100) ಕರೆ ಮಾಡಿ ತಿಳಿಸಿದರೆ ಅಂತಹ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ತಿಳಿಸಿದರು. ನಗರದಲ್ಲಿ ಇರುವ ರಿಕ್ಷಾ […]