Blog Archive

ಹೊಸ ಬಜೆಟ್​ನಲ್ಲಿ ಕರಾವಳಿ ಜಿಲ್ಲೆಗೆ ಸಾಕಷ್ಟು ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜನತೆ..!

Thursday, July 5th, 2018
budjet

ಮಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್ ಕರಾವಳಿ ಜನರ ಸಾಕಷ್ಟು ನಿರೀಕ್ಷೆಗೆ ಕಾರಣವಾಗಿದೆ. ಹೊಸ ಬಜೆಟ್ನಲ್ಲಿ ಕರಾವಳಿ ಜಿಲ್ಲೆಗೆ ಸಾಕಷ್ಟು ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದು, ಎಷ್ಟರಮಟ್ಟಿಗೆ ಬಜೆಟ್ನಲ್ಲಿ ಕರಾವಳಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕರಾವಳಿ ಜಿಲ್ಲೆಯ ಪ್ರಮುಖ ವಹಿವಾಟುಗಳಲ್ಲಿ ಮುಖ್ಯವಾದದ್ದು ಮೀನುಗಾರಿಕೆ. ವಾರ್ಷಿಕ ಸಾವಿರಾರು ಕೋಟಿ ವಹಿವಾಟು ಇರುವ ಈ ಉದ್ಯಮದಲ್ಲಿ ಉತ್ತಮ ವಹಿವಾಟಾದರೆ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆಗಳು ಸಿಗುತ್ತವೆ. ಸಾವಿರಾರು ಮಂದಿ ಮೀನುಗಾರಿಕೆಯನ್ನೇ ಅವಲಂಬಿಸಿದ್ದು, ಇವರನ್ನು ನಂಬಿ ಸಾವಿರಾರು ಕುಟುಂಬಗಳು […]

ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ನಾಪತ್ತೆ..!

Tuesday, July 3rd, 2018
kumuta

ಕುಮಟಾ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ವ್ಯಕ್ತಿಯೊಬ್ಬರು ದೋಣಿ ಮಗುಚಿದ ಪರಿಣಾಮ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಇಲ್ಲಿನ ಕಾಗಲ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಇಲ್ಲಿನ ಮುಲ್ಲಾ ಅಹ್ಮದ್ ಸಾಬ್ ಸಮುದ್ರದಲ್ಲಿ ನಾಪತ್ತೆಯಾದವರು. ಇವರು ಇಂದು ಮುಂಜಾನೆ ಕಾಗಲ ಬಳಿ ಪಾತಿ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿದ ಪಾತಿ ದೋಣಿ ಮಗುಚಿಬಿದ್ದಿದೆ. ಈ ವೇಳೆ ಅಹ್ಮದ್ ಸಾಬ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ.

ಮಂಗಳೂರಲ್ಲಿ ಇಂದಿನಿಂದ ಆಳಸಮುದ್ರ ಮೀನುಗಾರಿಕೆ ಸ್ಥಗಿತ

Friday, June 1st, 2018
deep-sea-fishing

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಹಿವಾಟು ಮೀನುಗಾರಿಕೆ ಇಂದಿನಿಂದ ಸ್ಥಗಿತಗೊಂಡಿದೆ. ಮೀನುಗಳ ಸಂತಾನೋತ್ಪತ್ತಿ ಸಮಯ ಹಾಗೂ ಸಮುದ್ರದಲ್ಲಿ ಭಾರಿ ಏರಿಳಿತ ಉಂಟಾಗುವುದರಿಂದ ಇಂದಿನಿಂದ ಜುಲೈ 31 ರವರೆಗೆ ಆಳಸಮುದ್ರ ಮೀನುಗಾರಿಕೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಮೀನುಗಾರರು ಮೀನುಗಾರಿಕೆಗೆ ತೆರಳದೆ‌ ಮಂಗಳೂರಿನ ಬಂದರಿನಲ್ಲಿ ಬೋಟುಗಳನ್ನು ಲಂಗರು ಹಾಕಿದ್ದಾರೆ. ಇಂದಿನಿಂದ ಎರಡು ತಿಂಗಳು ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಮಂಗಳೂರು ಬಂದರಲ್ಲಿ ಸಾವಿರಾರು ಬೋಟ್‌ಗಳು ಲಂಗರು ಹಾಕಿವೆ. ಮೀನುಗಾರಿಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಬಂದರು ಪ್ರದೇಶದಲ್ಲಿ […]

ಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆಗೆ ಕಡ್ಡಾಯ ನಿಷೇಧ..!

Friday, May 25th, 2018
coastal-wood

ಕರಾವಳಿಯ ಪ್ರಮುಖ ವಾಣಿಜ್ಯ ವಹಿವಾಟದ ಮೀನುಗಾರಿಕೆಗೆ ಈ ಅವಧಿಯಲ್ಲಿ ಪ್ರತಿ ಬಾರಿ ಕಡ್ಡಾಯ ರಜೆ ನೀಡಲಾಗುತ್ತದೆ. ಅದರಂತೆ ಆಳ ಸಮುದ್ರ ಮೀನುಗಾರಿಕೆಯನ್ನು ನೀಷೇಧಿಸಿ ಸರ್ಕಾರ ಆದೇಶ ನೀಡಿದೆ. ಪ್ರತಿ ಬಾರಿ ಈ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧವನ್ನು ಹೇರಲು ಮುಖ್ಯ ಕಾರಣ ಈ ಅವಧಿಯಲ್ಲಿ ಮೀನುಗಳ ಸಂತಾನೋತ್ಪತ್ತಿ. ಜೂನ್‌ ತಿಂಗಳು ಮಳೆ ಆರಂಭವಾದೊಡನೆ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಮೀನುಗಳು ಮೊಟ್ಟೆ ಇಡುವ ಸಂದರ್ಭ ಇದಾಗಿದ್ದರಿಂದ ಮೀನುಗಳ ಬೇಟೆಯಾಡುವುದರಿಂದ ಅವುಗಳ ಸಂತತಿ ನಶಿಸಲು ಕಾರಣವಾಗುತ್ತದೆ. ಈ ಕಾರಣಕ್ಕಾಗಿ ಮೀನುಗಾರಿಕೆಯನ್ನು […]

ಬೋಟು ನಿಲುಗಡೆಗೆ ದಕ್ಕೆಯಲ್ಲಿ ಜಾಗವೇ ಇಲ್ಲ

Saturday, November 18th, 2017
Bander

ಮಂಗಳೂರು: ಮೀನುಗಳ ಬಗ್ಗೆಯೇ ಲೆಕ್ಕಾಚಾರ ಹಾಕುವ ನಗರದ ಮೀನುಗಾರಿಕೆ ದಕ್ಕೆಯಲ್ಲಿ ಬೋಟುಗಳು ಸಮರ್ಪಕವಾಗಿ ನಿಲ್ಲಲು ವ್ಯವಸ್ಥೆಗಳಿಲ್ಲ. ಸರಬರಾಜು ಮಾಡುವ ಉದ್ದೇಶದಿಂದ ಸಮುದ್ರದಲ್ಲಿ ಸಂಚರಿಸಿ, ಮೀನು ಹಿಡಿದು ಬೋಟು ಮೂಲಕ ಮಂಗಳೂರು ದಕ್ಕೆಗೆ ಬಂದರೆ ಇಲ್ಲಿ ಬೋಟು ನಿಲ್ಲಲು ಸ್ಥಳವಿಲ್ಲ. ನಗರದ ಮೀನುಗಾರಿಕೆ ದಕ್ಕೆಗೆ ಒಳ ಪಟ್ಟಂತೆ ಪರ್ಸಿನ್‌, ಟ್ರಾಲ್‌ಬೋಟು ಸಹಿತ ಸುಮಾರು 1,500ಕ್ಕೂ ಅಧಿಕ ಬೋಟುಗಳಿವೆ. ಈಗಿನ ದಕ್ಕೆ 600 ಮೀಟರ್‌ ಉದ್ದವಿದ್ದು, ಇದರಲ್ಲಿ ಒಂದು ಸಾಲಿನಲ್ಲಿ ಅಂದಾಜು 350 ಬೋಟುಗಳಿಗೆ ಸ್ಥಳಾವಕಾಶವಿದೆ. ಉಳಿದ 1250 ಬೋಟುಗಳು […]

ಹಳೆ ಬಂದರುವಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ಅವಘಡ

Thursday, October 5th, 2017
accident

ಮಂಗಳೂರು: ಬೋಟ್‌ನಲ್ಲಿ ಅವಘಡ ಉಂಟಾಗಿ ಓರ್ವ ಮೀನುಗಾರ ಸಾವಿಗೀಡಾಗಿರುವ ಘಟನೆ ನಗರದ ಹಳೆ ಬಂದರುವಿನಲ್ಲಿ ಮೀನುಗಾರಿಕೆಗೆ ತೆರಳಿದ್ದಗ ನಡೆದಿದೆ. ಹಳೆ ಬಂದರುವಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನ ಕಬ್ಬಿಣದ ರಾಡ್‌ ತಗುಲಿ ಓರ್ವ ಮೀನುಗಾರ ಸಾವಿಗೀಡಾಗಿದ್ದು, ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ. ಬೋಟ್‌ನ ಸಿಬ್ಬಂದಿ ಆಂಧ್ರದ ನೆಲ್ಲೂರಿನ ಪೊಕ್ಕಿಮಗಾಡಿ ಬಾಬು (45) ಮೃತ ದುರ್ದೈವಿ. ವೈಲಾ ಬಾಬು ಗಾಯಗೊಂಡ ವ್ಯಕ್ತಿ.  

ಕರಾವಳಿಯಲ್ಲಿ ಚುರುಕುಗೊಂಡ ಮೀನುಗಾರಿಕೆ, ಬೆಲೆ ಕಡಿಮೆ ಆಗುವ ಸಾಧ್ಯತೆ

Saturday, August 5th, 2017
fish

ಮಂಗಳೂರು:  ಎರಡು ತಿಂಗಳ ರಜೆಯ ಬಳಿಕ ಮಂಗಳೂರಿನಲ್ಲಿ ಮತ್ಸ್ಯ ಬೇಟೆ ಮತ್ತೆ ಶುರುವಾಗಿದೆ. ಮೀನು ಪ್ರಿಯರ ಬೇಡಿಕೆಯನ್ನು ಪೂರೈಸಲು ಮೀನುಗಾರರು ಉತ್ಸಾಹದಿಂದಲೇ ಸಮುದ್ರಕ್ಕೆ ಇಳಿದಿದ್ದಾರೆ. ಆಗಸ್ಟ್ 1 ರಿಂದ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಶುರುವಾಗಿದೆ. ಎರಡು ತಿಂಗಳು ಸ್ಥಳೀಯ ಮೀನು ಸಿಗದೇ, ದುಬಾರಿ ಬೆಲೆ ತೆತ್ತು, ಬೇರೆ ರಾಜ್ಯದ ಮೀನುಗಳನ್ನು ಖರೀದಿಸುತ್ತಿದ್ದ ಜನರು, ಇದೀಗ ಸ್ಪಲ್ಪ ನಿರಾಳರಾಗಿದ್ದಾರೆ. ಇನ್ನಾದರೂ ಮೀನಿನ ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಕಡಲು ಉದ್ವಿಗ್ನವಾಗುವುದು ಸಹಜ. ಇದರ ಜತೆಗೆ ಮೀನಿನ […]

ಮೀನು ಸಂರಕ್ಷಣಾ ಘಟಕಗಳು ವಿಷಕಾರಿ ಪದಾರ್ಥಗಳು ಇರುವ ಮೀನುಗಳನ್ನು ತಿನ್ನದಂತೆ ಎಚ್ಚರ ವಹಿಸಬೇಕು : ಯು.ಟಿ. ಖಾದರ್

Friday, October 7th, 2016
u-t-khadar

ಮಂಗಳೂರು: ಕೆಂಬೇರಿ ಮೀನಿನ ತಲೆ ಭಾಗ ತಿಂದು ಹಲವಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರಿಕಾ ಕಾಲೇಜಿನ ತಜ್ಞರು, ವಿಜ್ಞಾನಿಗಳು, ಆರೋಗ್ಯ, ಆಹಾರ ಸುರಕ್ಷತೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸಭೆ ನಡೆಸಿ ಚರ್ಚಿಸಿದರು. ಕೆಂಬೇರಿ, ತೊಂದೆ ಎಂಬ ಹೆಸರಿನ ಮೀನುಗಳ ಕೆಲವು ತಳಿಗಳ ದೇಹದ ಕೆಲವು ಭಾಗಗಳಲ್ಲಿ ವಿಷಕಾರಿ ಪದಾರ್ಥಗಳು ಇರುವುದರಿಂದ ಅವುಗಳನ್ನು ತಿನ್ನದಂತೆ ಎಚ್ಚರ ವಹಿಸಬೇಕು ಹಾಗೂ ಸಂಬಂಧಪಟ್ಟವರು ಇಂತಹ […]

ಮೀನುಗಾರಿಕೆ ಬಂದರ್ ವರೆಗೆ ಸಿಟಿ ಬಸ್

Monday, April 18th, 2011
ಮೀನುಗಾರಿಕೆ ಬಂದರ್ ವರೆಗೆ ಸಿಟಿ ಬಸ್ ಮೀನುಗಾರಿಕೆ ಬಂದರ್ ವರೆಗೆ ಸಿಟಿ ಬಸ್

ಮಂಗಳೂರು : ಮೀನುಗಾರರಿಗೆ ಅನುಕೂಲವಾಗುವಂತೆ ಈ ಹಿಂದೆ ಇದ್ದಂತೆ ರೂಟ್ ಸಂ.26,32 ಹಾಗೂ ಇನ್ನು ಕೆಲವು ಮಾರ್ಗದ ಬಸ್ಸುಗಳನ್ನು ಹಳೆ ಬಂದರು ಪ್ರದೇಶದ ಮೀನುಗಾರಿಕಾ ಬಂದರ್ ವರೆಗೆ ವಿಸ್ತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ಅವರು ಮೀನುಗಾರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೀನುಗಾರಿಕೆಗೆ ಸಂಬಂಧಿಸಿದ ವಿಷಯಗಳ ಕುರಿತ ಸಭೆಯಲ್ಲಿ ಈ ವಿಷಯ ತಿಳಿಸಿದರು. ಮೀನುಗಾರರ ಸೂಕ್ತ ರಕ್ಷಣೆಗೆ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳನ್ನು ವಿನಂತಿಸಿದರು. ಇತ್ತೀಚೆಗೆ ಮೀನುಗಾರರಿಗೆ […]

ಬಂದರು ಹಾಗೂ ಒಳನಾಡು ಜಲಸಾರಿಗೆ,ಮೀನುಗಾರಿಕೆ ಇಲಾಖೆಗೆ ರೂ.325.15 ಲಕ್ಷ ಹೆಚ್ಚುವರಿ ಅನುದಾನ

Wednesday, March 30th, 2011
ಶ್ರೀ ಕೃಷ್ಣ ಜೆ.ಪಾಲೇಮಾರ್

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಹಾಗೂ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರದ 2010-11 ನೇ ಸಾಲಿನಲ್ಲಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ 8 ಕಾಮಗಾರಿಗಳ ಅನುಷ್ಠಾನಕ್ಕಾಗಿ ರೂ.123.45 ಲಕ್ಷ ಹಾಗೂ ಮೀನುಗಾರಿಕಾ ಇಲಾಖೆಗೆ 14 ಕಾಮಗಾರಿಗಳಿಗೆ ರೂ.201.70ಲಕ್ಷ,ಹೆಚ್ಚುವರಿ ಅನುದಾನ ಒದಗಿಸಿದೆಯೆಂದು ರಾಜ್ಯದ ಜೀವಿಶಾಸ್ತ್ರ,ಪರಿಸರ,ಬಂದರು,ವಿಜ್ಞಾನ ಮತ್ತು ತಂತ್ರಜ್ಞಾನ, ಮೀನುಗಾರಿಕೆ ಹಾಗೂ ಜಲಸಾರಿಗೆ  ಸಚಿವರಾದ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ.ಪಾಲೇಮಾರ್  ತಿಳಿಸಿರುತ್ತಾರೆ. ಮಂಗಳೂರು ತಣ್ಣೀರುಬಾವಿ ಬೆಂಗ್ರೆ […]