Blog Archive

ಅನಂತ ಕುಮಾರ್ ಅವರ ನಿಧನ ರಾಜ್ಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ: ಕೋಟ ಶ್ರೀನಿವಾಸ ಪೂಜಾರಿ

Monday, November 12th, 2018
srinivas-poojary

ಮಂಗಳೂರು: ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವರಾದ ಅನಂತ ಕುಮಾರ್ ಅವರ ನಿಧನ ರಾಷ್ಟ್ರ ಮತ್ತು ರಾಜ್ಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ರಾಜ್ಯ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಾನು ಅವರನ್ನು ಭೇಟಿಯಾದ ಸಂದರ್ಭ ಅವರು ವಿರೋಧವೇ ಇಲ್ಲದೆ ನೀನು‌ ಆಯ್ಕೆಯಾಗಿದ್ದಿ ನಿನಗೆ ಶುಭವಾಗಲಿ‌ ಎಂದಿದ್ದರು‌. ಇತ್ತೀಚೆಗೆ ಅಟಲ್ ಜೀಯವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಬಿಡಲು ನಾನು ಯಡಿಯೂರಪ್ಪ, ಅನಂತ‌ ಕುಮಾರ್ ಅವರು ಒಟ್ಟಾಗಿದ್ದೆವು. ನೀರಿನ ಸೆಳೆತಕ್ಕೆ ಅವರು ಒಂದು ರೀತಿ […]

ಮರಳು ಸಮಸ್ಯೆ ಧರಣಿ ವೇಳೆ ಮೃತರಾದ ಹನೀಪ್ ಮನೆಗೆ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಸಾಂತ್ವನ

Monday, October 29th, 2018
srinivas-poojary

ಉಡುಪಿ: ಜಿಲ್ಲೆಯಲ್ಲಿ ಮರಳು ಸಮಸ್ಯೆಯಿಂದಾಗಿ ಕೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ಅನೇಕರು ಉದ್ಯೋಗ ಕಳೆದುಕೊಂಡು ಆತಂಕಿತರಾಗಿರುವ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ನಡೆಯುತ್ತಿರುವ ಧರಣಿಯಲ್ಲಿ‌ ಪಾಲ್ಗೊಂಡ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತರಾದರ 45 ವರ್ಷ ಪ್ರಾಯದ ಹೆಜಮಾಡಿಯ ಹನೀಪ್ ಅವರ ಮನೆಗೆ ಇಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತ ಹನೀಪ್ ರ ವಯೋವೃದ್ದ ತಾಯಿ, ಅವರ ಸಹೋದರರು […]

‘ಸದಾ ನಿದ್ದೆಯಲ್ಲಿಯೇ ಮುಳುಗಿರುವ ಸಿದ್ದರಾಮಯ್ಯಗೆ ಶ್ರೀನಿವಾಸ್ ಶೆಟ್ಟಿ ಕಾಣಿಸುವುದಾದರೂ ಹೇಗೆ’: ಕೋಟ ತಿರುಗೇಟು

Friday, October 26th, 2018
srinivas-poojary

ಕುಂದಾಪುರ: ಸದಾ ನಿದ್ದೆಯಲ್ಲಿಯೇ ಮುಳುಗಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಯಾರೂ ಕಾಣಿಸೋದೆಯಿಲ್ಲ. ಅದು ಸಿದ್ದರಾಮಯ್ಯ ತಪ್ಪು ಹೊರತು ಹಾಲಾಡಿಯವರದ್ದಲ್ಲ. ಈಗ ಸಿದ್ದರಾಮಯ್ಯ ನಿದ್ದೆಯಿಂದ ಎದ್ದಿದ್ದರೂ ಕೂಡ ಕಾಲ ಮಿಂಚಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಬೈಂದೂರಿನ ನಾಗೂರಿನಲ್ಲಿ ನಡೆದ ಲೋಕಸಭಾ ಉಪಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದು ಮಾತನಾಡುವ ವೇಳೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ […]

ಸುಭದ್ರ ಸರಕಾರ ನೀಡುವುದಾಗಿ ಭರವಸೆ ನೀಡಿದ ಸಮ್ಮಿಶ್ರ ಸರಕಾರ ಜನರ ವಿಶ್ವಾಸ ಕಳಕೊಂಡಿದೆ : ಶ್ರೀನಿವಾಸ ಪೂಜಾರಿ

Thursday, August 30th, 2018
Kota-poojary

ಮಂಗಳೂರು : ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ರಾಷ್ಟ್ರೀಯ ಪಕ್ಷವೊಂದು ಜೆಡಿಎಸ್‌ ಕೈ ಹಿಡಿದಿರುವುದು ಹಾಸ್ಯಾಸ್ಪದ. ತಾವು ಅಸ್ತಿತ್ವ ಕಳೆದು ಕೊಂಡರೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿತ್ತು. ಆದರೆ ಇದು ಎಷ್ಟು ದಿನ ಎಂಬುದನ್ನು ಈ ಎರಡೂ ಪಕ್ಷಗಳ ಮುಖಂಡರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು. ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಪೂಜಾರಿ ಸುಭದ್ರ ಸರಕಾರ ನೀಡುವುದಾಗಿ ಭರವಸೆ ನೀಡಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಜನರಲ್ಲಿ […]

ಕುಮಾರಸ್ವಾಮಿ ಮಂಡಿಸಿದ ಬಜೆಟ್ ಜೆ‌ಡಿಎಸ್ ಶಾಸಕರಿಗೆ ಮಂಡಿಸಿದ ಬಜೆಟ್ ಆಗಿದೆ: ಶ್ರೀನಿವಾಸ ಪೂಜಾರಿ

Saturday, July 7th, 2018
kota-srinivas-poojary

ಮಂಗಳೂರು: ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಸರ್ಕಾರ ಮಂಡಿಸಿದ ಬಜೆಟ್ ಮುಂದುವರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದು, ಅದನ್ನು ಅನುಷ್ಠಾನ ಮಾಡುವವರೆಗೆ ಬಿಜೆಪಿ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಗಳೂರು ಬಿಜೆಪಿ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಜೆಟ್ನಲ್ಲಿ ಹಿಂದಿನ ಸರ್ಕಾರದ ಬಜೆಟ್ ಮುಂದುವರಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಅವರು ಅದನ್ನು ಮಾಡುವ ಬಗ್ಗೆ ಅನುಮಾನವಿದೆ. ಆದರೆ ಬಜೆಟ್ ಅನುಷ್ಠಾನ ಮಾಡುವವರೆಗೆ ಬಿಜೆಪಿ […]

ಜಿಲ್ಲೆಯಲ್ಲಿ ಪಡೆದ ಭರ್ಜರಿ ಗೆಲುವು ಮುಂಬರುವ ಎಲ್ಲಾ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ: ರತ್ನಾಕರ ಹೆಗ್ಡೆ

Tuesday, June 19th, 2018
udupi-distrdt

ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ಸಂಘಟಿತ ಪ್ರಯತ್ನದಿಂದ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಡೆದ ಭರ್ಜರಿ ಗೆಲುವು ಮುಂಬರುವ ಎಲ್ಲಾ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಕಡಿಯಾಳಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಮತ್ತು ಚುನಾವಣಾ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿ ಅವರು ಮಾತನಾಡುತಿದ್ದರು. ರಾಜ್ಯದಾದ್ಯಂತ ಬಿಜೆಪಿ ಉತ್ತಮ ಸಾಧನೆಮಾಡಿದೆ. ಕೇವಲ 8 ಸ್ಥಾನಗಳ ಕೊರತೆಯಿಂದ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಆಡಳಿತ ಕೈತಪ್ಪಿದರೂ […]

ನಮ್ಮ ಗುರಿ ಮೂಡುಬಿದಿರೆ ಪುರಸಭೆಯನ್ನು ಕಾಂಗ್ರೆಸ್ ಮುಕ್ತ ಮಾಡುವುದು: ಉಮಾನಾಥ ಕೋಟ್ಯಾನ್

Monday, June 4th, 2018
umanath-kotian

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಉಮಾನಾಥ ಕೋಟ್ಯಾನ್ ಹಾಗೂ ಕಾರ್ಯಕರ್ತರಿಗೆ ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ಇದರ ವತಿಯಿಂದ ಅಭಿನಂದನಾ ಕಾರ್ಯಕ್ರಮವು ರವಿವಾರ ಪದ್ಮಾವತಿ ಕಲಾ ಮಂಟಪದಲ್ಲಿ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯವಾಗಿ ಬೆಳೆದಿರುವ ಕ್ಷೇತ್ರ ಮೂಡುಬಿದಿರೆಯಲ್ಲಿ ಬಿಜೆಪಿಯ ಗೆಲುವಿನ ಸಾಧನೆ ಅದ್ಭುತ. ಈ ಗೆಲುವಿನ ಹಿಂದೆ ಸಹಸ್ರರು ಕಾರ್ಯಕರ್ತರ ಪರಿಶ್ರಮವಿದೆ. ಕಾಂಗ್ರೆಸ್ ಮುಕ್ತ ಕ್ಷೇತ್ರವಾಗಿ ಮೂಡುಬಿದಿರೆಯು ಮಾರ್ಪಾಡಾಗಬೇಕೆಂಬುದು ಭಾರತೀಯ […]

ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಗುರ್ಮೆ ಸುರೇಶ್ ಶೆಟ್ಟಿ

Saturday, April 28th, 2018
lalaji-mendon

ಶಿರ್ವ: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ಅಭಿವೃದ್ಧಿಯ ಅನುಷ್ಠಾನ ರಾಜ್ಯದ ಜನತೆಗೆ ತಲುಪಬೇಕಾದರೆ ಕರ್ನಾಟಕದಲ್ಲೂ ಯಡಿಯೂರಪ್ಪನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್‌ರನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಹಿರಿಯ ನಾಯಕ ಗುರ್ಮೆ ಸುರೇಶ್ ಶೆಟ್ಟಿ ಮನವಿ ಮಾಡಿದ್ದಾರೆ. ಶಿರ್ವ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಾಜಕೀಯ ಪಾರ್ಟಿಯಲ್ಲಿ ಅಪೇಕ್ಷೆಗಳಿರುವುದು ತಪ್ಪಲ್ಲ, ಆದರೆ ಪಾರ್ಟಿ ಒಬ್ಬರನ್ನು ಅಭ್ಯರ್ಥಿಯೆಂದು ಘೋಷಿಸಿದ ನಂತರ ಒಮ್ಮತದ ಹೋರಾಟ […]

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಅಮಿತ್ ಶಾ

Tuesday, February 20th, 2018
janata-party

ಸುಬ್ರಹ್ಮಣ್ಯ: ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಗೆಲುವು ದಕ್ಷಿಣ ಭಾರತದಲ್ಲಿ ಪಕ್ಷದ ಗೆಲುವಿಗೆ ಹೆಬ್ಬಾಗಿಲು ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ಬಿಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿರುವ ನವ ಕರ್ನಾಟಕ ನಿರ್ಮಾಣಕ್ಕಾಗಿ ‘ನವಶಕ್ತಿ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದ ಅವರು, ಸಿದ್ದರಾಮಯ್ಯ ಸರಕಾರದಲ್ಲಿ ಭ್ರಷ್ಟಾಚಾರಿಗಳಿದ್ದಾರೆ ಎಂದು ಆರೋಪಿಸಿದರು. ಶಾಸಕ ಹಾರಿಸ್ ಪುತ್ರನ […]