Blog Archive

ರಾಜ್ಯದಲ್ಲಿ 10ಕೋಟಿ ಸಸಿಗಳನ್ನು ನೆಡಲು ಯೋಜನೆ : ಅರಣ್ಯ ಸಚಿವ ಆರ್.ಶಂಕರ್

Tuesday, June 26th, 2018
R shankar

ಸುಬ್ರಹ್ಮಣ್ಯ: ರಾಜ್ಯದಲ್ಲಿ 10ಕೋಟಿ ಸಸಿಗಳನ್ನು ನೆಡಲು ಯೋಜನೆ ರೂಪಿತವಾಗಿದೆ. ರಾಜ್ಯವನ್ನು ಹಸಿರು ಹೊದೆಕೆಯನ್ನಾಗಿಸಲು ಪ್ರಯತ್ನ ಮಾಡುತ್ತೇನೆ. ಈ ಯೋಜನೆ ಜಾರಿಗೊಂಡಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ರಾಜ್ಯವು ದೇಶದಲ್ಲೇ ಮಾದರಿಯಾಗಲಿದೆ. ಅರಣ್ಯ ಇಲಾಖೆಗೆ ಬಜೆಟ್‌ನಲ್ಲಿ 1500 ಕೋಟಿ ದೊರಕುತ್ತಿತ್ತು. ಈ ಮೊತ್ತವು ಕಡಿಮೆಯಾಗುತ್ತದೆ. ಈ ಬಾರಿ ಬಜೆಟ್‌ನಲ್ಲಿ ಅರಣ್ಯ ಸಂರಕ್ಷಣೆಗೆ ೫೦೦ಕೋಟಿ ಹೆಚ್ಚುವರಿ ಅನುದಾನ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅರಣ್ಯ ಸಂರಕ್ಷಣೆಗೆ ಪ್ರಾಧಾನ ಆದ್ಯತೆ ನೀಡುವುದು ನನ್ನ ಧ್ಯೇಯ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಹೇಳಿದರು. ಕುಕ್ಕೆ […]

ಪಶ್ಚಿಮ ಘಟ್ಟದಲ್ಲಿ ಗುಡ್ಡ ಕುಸಿತ…ರೈಲ್ವೆ ಹಳಿ ಮೇಲೆ ಬಿದ್ದ ಮಣ್ಣು

Friday, June 15th, 2018
colapse

ಮಂಗಳೂರು: ಪಶ್ಚಿಮ ಘಟ್ಟದಲ್ಲಿ‌ ಭಾರಿ ಮಳೆ ಸುರಿಯುತ್ತಿದ್ದು ಗುಡ್ಡವೊಂದು ಕುಸಿದು ರೈಲ್ವೆ ಹಳಿ ಮೇಲೆ ಮಣ್ಣು ಬಿದ್ದಿದೆ. ಸುಬ್ರಹ್ಮಣ್ಯ ಮತ್ತು ಸಿರಿಬಾಗಿಲು ನಡುವೆ ಇರುವ ರೈಲ್ವೆ ಹಳಿಗೆ ಗುಡ್ಡ ಕುಸಿದು ಮಣ್ಣು ಬಿದ್ದಿದ್ದು ರೈಲು ಸಂಚಾರಕ್ಕೆ ತೊಡಕಾಗಿದೆ. ಮಣ್ಣು ತೆರವು ಕಾರ್ಯಚರಣೆ ನಡೆಯುತ್ತಿದ್ದು ಮಂಗಳೂರು -ಬೆಂಗಳೂರು ರೈಲು ಸಂಚಾರಕ್ಕೆ ವಿಳಂಬವಾಗಿದೆ.

ಸಿಎಂ ಓಲೈಕೆ ರಾಜಕಾರಣ ಯಶಸ್ವಿಯಾಗದು: ಅಮಿತ್ ಶಾ

Tuesday, February 20th, 2018
speech

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಓಲೈಕೆ ರಾಜಕಾರಣ ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಪಕ್ಕದ ಕುಲ್ಕುಂದದಲ್ಲಿ ನವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಓಲೈಕೆ ರಾಜಕಾರಣ ಯಶಸ್ವಿಯಾಗುತ್ತದೆ ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರೆ ಅದು ಅವರ ತಪ್ಪು ಭಾವನೆ ಅಷ್ಟೆ. ಅವರ ಓಲೈಕೆ ಮತ್ತು ಧ್ರುವೀಕರಣ ರಾಜಕಾರಣವನ್ನು ಎನ್.ಎ.ಹ್ಯಾರಿಸ್ ಮಗನ ಪ್ರಕರಣದಲ್ಲಿ ಗಮನಿಸಬಹುದು. ಎಮ್ಎಲ್ಎ […]

ಸುಬ್ರಹ್ಮಣ್ಯಕ್ಕೆ ಬಂದು ಹಣವಿಲ್ಲದೆ ಕಂಗಾಲಾದ ಪ್ರೇಮಿಗಳು… ಬಳಿಕ ಆಗಿದ್ದೇನು!?

Friday, February 9th, 2018
subramanya

ಮಂಗಳೂರು: ಊರಿಗೆ ಮರಳಲು ದುಡ್ಡಿಲ್ಲದೆ ಕಂಗಾಲಾಗಿದ್ದ ಹಾಸನದ ಯುವ ಪ್ರೇಮಿಗಳನ್ನು ಕಡಬ ಠಾಣೆ ಪೊಲೀಸರು ಊರಿಗೆ ಕಳುಹಿಸಿದ ಘಟನೆ ನಡೆದಿದೆ. ಯುವ ಪ್ರೇಮಿಗಳು ಮನೆ ಮಂದಿಗೆ ತಿಳಿಸದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರೈಲಿನಲ್ಲಿ ಬಂದಿದ್ದರು. ಆದರೆ ತಂದ ಹಣವೆಲ್ಲ ಖರ್ಚಾಗಿ ಕೊನೆಗೆ ಊಟ ಮಾಡಲು, ಊರಿಗೆ ಮರಳಲು ಸಾಧ್ಯವಾಗದೆ ನೆಟ್ಟಣ ರೈಲು ನಿಲ್ದಾಣದಲ್ಲಿ ಕುಳಿತಿದ್ದರು. ಹಾಸನದ ನಿವಾಸಿಯಾಗಿರುವ ಯುವಕ ನೂತನ್ ಹಾಸ್ಟೆಲ್‌‌ನಲ್ಲಿದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದ. ತನ್ನ ಪ್ರೇಯಸಿಯನ್ನು ಕುಕ್ಕೆ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದ. ಆದರೆ ಬಳಿಕ ದುಡ್ಡಿಲ್ಲದೆ […]

ಬಯಸಿದ್ದು ವೈದ್ಯ ವೃತ್ತಿ, ಆಯ್ಕೆ ಮಾಡಿದ್ದು ರಾಷ್ಟ್ರ ಸೇವೆ

Thursday, February 1st, 2018
subramanya

ಸುಬ್ರಹ್ಮಣ್ಯ : ಆಗ ಕಾರ್ಗಿಲ್‌ ಯುದ್ಧದ ಸಮಯ. 1999ನೇ ಇಸವಿ. ಮೂರನೇ ತರಗತಿ ಕಲಿಯುತ್ತಿದ್ದ ಬಾಲಕ ದೂರದರ್ಶನದಲ್ಲಿ ಬರುತ್ತಿದ್ದ ಯುದ್ಧದ ಸನ್ನಿವೇಶಗಳನ್ನು, ಬಂದೂಕು ಹಿಡಿದ ಸೈನಿಕರ ದೃಶ್ಯಗಳನ್ನು ನೋಡುತ್ತಿದ್ದ. ಶಾಲೆಯಿಂದ ಬಂದು ಮನೆಯಲ್ಲಿ ತಲೆದಿಂಬು ಬಂಕರಾಗಿಸಿ, ಆಟಿಕೆ ಗನ್‌ನಿಂದ ಡಿಶುಂ ಡಿಶುಂ ಎಂದು ಮಾಡುವುದು ಸಾಮಾನ್ಯವಾಗಿತ್ತು. ಈಗ ಅದೇ ಬಾಲಕ ಸೇನೆಯಲ್ಲಿ ಕ್ಯಾಪ್ಟನ್‌ ಹುದ್ದೆಗೇರಿದ್ದಾರೆ. ಅವರೇ ಕಲ್ಮಡ್ಕ ಗ್ರಾಮದ ಕ್ಯಾ.ಪ್ರಶಾಂತ ಜಿ ಕಶ್ಯಪ್‌. ಜಮ್ಮು ಮತ್ತು ಕಾಶ್ಮಿರದ 20ನೇ ಇನ್‌ಫೆಂಟ್ರಿಯ ಕುಮೌನ್‌ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್‌ […]

ಚಂದ್ರಗ್ರಹಣ: ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಇಲ್ಲ

Tuesday, January 30th, 2018
dharmastala

ಉಡುಪಿ: ಖಗ್ರಾಸ ಚಂದ್ರ ಗ್ರಹಣ ನಿಮಿತ್ತ ಜ. 31ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಧ್ಯಾಹ್ನ 2.30 ಗಂಟೆಯಿಂದ ರಾತ್ರಿ 9ರ ವರೆಗೆ ಶ್ರೀ ಮಂಜುನಾಥ ದೇವರ ದರ್ಶನ ಹಾಗೂ ಪೂಜಾದಿ ಸೇವೆಗಳು ಇರುವುದಿಲ್ಲ. ರಾತ್ರಿ 9.30ರಿಂದ 10.30ರ ವರೆಗೆ ಭಕ್ತರಿಗೆ ಹೊರಾಂಗಣದಿಂದ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 31ರಂದು ಚಂದ್ರ ಗ್ರಹಣ ನಿಮಿತ್ತ ದೇವರ ದರ್ಶನದ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು […]

ಸಿನಿಮಾ ನಟಿ ಮೇಲೆ ನೈತಿಕ ಪೊಲೀಸ್ ಗಿರಿ ಕೇಸ್‌ಗೆ ಟ್ವಿಸ್ಟ್‌ :ಎಸ್ಪಿ ಸುಧೀರ್ ರೆಡ್ಡಿ ಹೇಳಿದ್ದೇನು ?

Monday, January 1st, 2018
constable

ಮಂಗಳೂರು: ಸುಬ್ರಹ್ಮಣ್ಯದಲ್ಲಿ ದೇವಸ್ಥಾನಕ್ಕೆ ಬಂದ ಚಿತ್ರನಟಿಯೊಬ್ಬಳು ಅನ್ಯಕೋಮಿನ ಹುಡುಗನ ಜೊತೆ ಇದ್ದ ಕಾರಣಕ್ಕೆ ನೈತಿಕ ಪೊಲೀಸ್‌ಗಿರಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ 20 ರ ಮಧ್ಯಾಹ್ನ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಅನ್ಯಕೋಮಿನ ಹುಡುಗನ ಜೊತೆ ಯುವತಿ ರಾತ್ರಿ ಏಕಾಂಗಿಯಾಗಿ ಚಲಿಸುತ್ತಿದ್ದಾಳೆಂಬ ಸಾರ್ವಜನಿಕರ ದೂರು ಆಧರಿಸಿ ಯುವತಿಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಯಿತು. ಈಕೆಯನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಮನೆಯವರಿಗೆ ತಿಳಿಸದೇ ಆಕೆ ಬಂದಿರುವುದು ತಿಳಿದು ಬಂದಿದೆ […]

ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಮೃತ್ಯು

Thursday, December 14th, 2017
kumaradara

ಸುಬ್ರಹ್ಮಣ್ಯ: ಸ್ನೇಹಿತರೊಂದಿಗೆ ಮೋಜು ಮಾಡಲೆಂದು ಸುಬ್ರಹ್ಮಣ್ಯ ರಕ್ಷಿತಾರಣ್ಯದ ಮುಂಗುಳಿಪಾದೆ ಎಂಬಲ್ಲಿನ ಕುಮಾರಧಾರ ನದಿ ತಟಕ್ಕೆ ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಗಣೇಶ ಎಂಬವರ ಪುತ್ರ ಜಯಪ್ರಕಾಶ್ (19) ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತರಾದ ಮಿಥುನ್, ಸತೀಶ್, ಗುರುಪ್ರಸಾದ್, ಪ್ರವೀಣ್, ಅನಿಲ್ ಕುಮಾರ್ ಅವರೊಂದಿಗೆ ಮೋಜು ಮಾಡಲೆಂದು ಬುಧವಾರ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಮಧ್ಯಾಹ್ನ ಹೊಳೆ ಬದಿಯಲ್ಲಿ ಊಟ ಮಾಡಿದ ನಂತರ ಸ್ನಾನಕ್ಕಿಳಿದಿದ್ದ ಜಯಪ್ರಕಾಶ್ […]

ಕುಮಾರಧಾರ ನದಿಯಲ್ಲಿ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ

Saturday, December 19th, 2015
champa shashti

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಶುಕ್ರವಾರ ಬೆಳಗ್ಗೆ ಕುಮಾರಾಧಾರ ನದಿಯಲ್ಲಿ ಶ್ರೀ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಅವಭೃತೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.ಇತರ ಪುರೋಹಿತರ ಮಂತ್ರ ಘೋಷಗಳನ್ನು ಮಾಡಿದರು. ನೂರಾರು ಭಕ್ತರು ಶ್ರೀ ದೇವರ ಅವಭೃತ ಸ್ನಾನದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ ಪಾವನರಾದರು. ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ಕುಕ್ಕೆ […]

ಸುಬ್ರಹ್ಮಣ್ಯದಲ್ಲಿ ಭಕ್ತಿ ಸಂಭ್ರಮದ ನಾಗರ ಪಂಚಮಿ:ಹಾಲು ಸಮರ್ಪಿಸಿದ ಭಕ್ತರು

Friday, August 1st, 2014
kukke Subrahmanya

ಸುಬ್ರಹ್ಮಣ್ಯ : ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು. ಈ ನಿಮಿತ್ತ ಶ್ರೀ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು. ಭಕ್ತಾಧಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ನಾಗರಾಜನಿಗೆ ಪುರೋಹಿತ ಕುಮಾರ ಭಟ್ ಎರೆದರು. ತನುವಿನೊಂದಿಗೆ ಹಿಂಗಾರ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು. ಮಹಾಪೂಜೆಯ ನಂತರ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ನೈವೇಧ್ಯ ಸಮರ್ಪಣೆ ನೆರವೇರಿತು. ಕುಕ್ಕೆಯಲ್ಲಿ ಪ್ರತಿದಿನ ನಡೆಯುವ ಆಶ್ಲೇಷಾ ಬಲಿ,ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ, […]