Blog Archive

ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮಂಗಳವಾರ 44

Wednesday, July 15th, 2020
kasaragod-corona

ಕಾಸರಗೋಡು : ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು ಮಂಗಳವಾರ 44 ಮಂದಿಗೆ ದೃಢಪಟ್ಟಿದೆ. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್  ಹೇಳಿರುವಂತೆ  20 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 15 ಮಂದಿ ವಿದೇಶಗಳಿಂದ, 9 ಮಂದಿ ಇತರ ರಾಜ್ಯಗಳಿಂದ ಬಂದವರಿಗೆ ಸೋಂಕು ಖಚಿತವಾಗಿದೆ ಎಂದು ತಿಳಿಸಿದ್ದಾರೆ. ಮಂಜೇಶ್ವರ ಪಂಚಾಯತ್ ನ 42, 62 ವರ್ಷದ ವ್ಯಕ್ತಿಗಳು, ಮೀಂಜ ಪಂಚಾಯತ್ ನ 62 ವರ್ಷದ ಮಹಿಳೆ, 32 ವರ್ಷದ ವ್ಯಕ್ತಿ, ಚೆಂಗಳ ಪಂಚಾಯತ್‌‌‌ನ 26, 62, 29 ವರ್ಷದ ಮಹಿಳೆಯರು, 32,16,34,37,75 ವರ್ಷದ ವ್ಯಕ್ತಿಗಳು, ಚೆಮ್ನಾಡ್ […]

ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಕೊರೋನಾಗೆ ಉಚಿತ ಚಿಕಿತ್ಸೆ – ಸಚಿವ ಕೋಟ 

Monday, July 13th, 2020
corona free

ಮಂಗಳೂರು : ಕೊರೋನಾ ಸೋಂಕಿತರಿಗೆ ಜಿಲ್ಲೆಯ ಎಲ್ಲಾ ಖಾಸಗಿ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಸೋಮವಾರ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಹಾಗೂ ಸಾಮಥ್ರ್ಯವನ್ನು ಪರಿಶೀಲಿಸಿ, ಬಳಿಕ ಮಾತನಾಡುತ್ತಾ, ಬಿಪಿಎಲ್, ಎಪಿಎಲ್ ಕುಟುಂಬಗಳು, ವಲಸೆ ಕಾರ್ಮಿಕರು, ರೇಶನ್ ಕಾರ್ಡ್ ಇಲ್ಲದವರು ಸೇರಿದಂತೆ ಎಲ್ಲರಿಗೂ ಜಿಲ್ಲೆಯ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೋಗಿಗಳು ಆಸ್ಪತ್ರೆಯಲ್ಲಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಉಚಿತ […]

ಕೊರೋನಾಗೆ 85 ವರ್ಷ ಪ್ರಾಯದ ವೃದ್ಧ ಬಲಿ

Saturday, July 11th, 2020
covid death

ಬಂಟ್ವಾಳ : ಕೋವಿಡ್-19 ಗೆ ಶನಿವಾರ  ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳದ 85 ವರ್ಷ ಪ್ರಾಯದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗೆ ಅವರಿಗೆ ಅಸ್ತಮಾ ಸಮಸ್ಯೆ ಹೆಚ್ಚಾದ ಕಾರಣ ಜುಲೈ 7ರಂದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊವೀಡ್ ಪರೀಕ್ಷೆಗೆ ಕಳುಹಿಸಿದ್ದ ಅವರ ಗಂಟಲು ದ್ರವ ಮಾದರಿಯ ವರದಿ ಜುಲೈ 9ರಂದು ರಾತ್ರಿ ಬಂದಿದ್ದು ಕೊರೋನ ಪಾಸಿಟಿವ್ ಅಗಿದೆ. ಅವರು ಹಲವು ವರ್ಷಗಳಿಂದ ಅಸ್ತಮಾ ರೋಗದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ […]

ಕೊರೋನಾ ಹಿನ್ನೆಲೆ ಕನ್ಯಾಡಿ ಆಂಗ್ಲಮಾದ್ಯಮ ಶಾಲೆ ಒಂದು ವರ್ಷ ಸಂಪೂರ್ಣ ಬಂದ್

Friday, June 12th, 2020
Brahmanada

ಮಂಗಳೂರು : ಮಕ್ಕಳ ಆರೋಗ್ಯದ ದೃಷ್ಟಿ ಯಿಂದ ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲಮಾದ್ಯಮ ವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತೆರೆಯದಿರಲು ನಿರ್ಧರಿಸಿದೆ. ಕೊರೋನಾ ಹಿನ್ನೆಲೆ  ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲಮಾದ್ಯಮ ವಿದ್ಯಾಲಯ ಒಂದು ವರ್ಷ ಸಂಪೂರ್ಣ ಬಂದ್ ಇಡಲು ಶಿಕ್ಷಣ ಸಂಸ್ಥೆ ಅಧ್ಯಕ್ಷ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನಿರ್ಧಾರಿಸಿದ್ದಾರೆ. ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲಮಾದ್ಯಮ ವಿದ್ಯಾಲಯ  ಸುಮಾರು 350 ಮಕ್ಕಳು ವಿದ್ಯಾಭ್ಯಾಸ ‌ಮಾಡುತ್ತಿದ್ದಾರೆ. ಎಲ್ ಕೆಜಿಯಿಂದ ಹತ್ತನೇ ತರಗತಿ ಗಳಿವೆ. 350 […]

ಸಮಾಜ ಸೇವೆಗೆಂದು ಲಭ್ಯವಿದ್ದ 30 ಮೃತದೇಹ ಮಣ್ಣುಪಾಲು !

Wednesday, May 27th, 2020
ಸಮಾಜ ಸೇವೆಗೆಂದು ಲಭ್ಯವಿದ್ದ 30 ಮೃತದೇಹ ಮಣ್ಣುಪಾಲು !

ಬೆಳಗಾವಿ: ತಮ್ಮ ಸಾವಿನ ನಂತರವೂ ನಮ್ಮ ದೇಹ ಸಮಾಜಕ್ಕೆ ಉಪಯೋಗವಾಗಲಿ ಎಂದು ಎಷ್ಟೋ ಜನರು ಆಸ್ಪತ್ರೆಗಳಿಗೆ ತಮ್ಮ ಸಾವಿನ ನಂತರ ವೈದ್ಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆಂದು ದೇಹದಾನ ಮಾಡುತ್ತಾರೆ. ಆದರೆ, ವಿಶ್ವಕ್ಕೆ ವಕ್ಕರಿಸಿದ ಕೊರೋನಾ ಬೆಳಗಾವಿ ಜಿಲ್ಲೆಯಲ್ಲಿ 30 ಕ್ಕೂ ಹೆಚ್ಚು ದಾನ ಮಾಡಿದ ದೇಹಗಳನ್ನು ಸ್ವೀಕರಿಸಲಾಗದೆ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿಯ ಡಾ.ರಾಮಣ್ಣವರ ಚಾರಿಟೇಬಲ್‌ ಟ್ರಸ್ಟ್‌ ನ ಡಾ. ಮಹಾಂತೇಶ ರಾಮಣ್ಣವರ, ಲಾಕ್ ಡೌನ ಸಂದರ್ಭದಲ್ಲಿ ಸರಕಾರವು ದೇಹದಾನದ ಕುರಿತು ಸರಿಯಾದ ಮಾಹಿತಿ ಮತ್ತು […]

ಮಹಾರಾಷ್ಟ್ರದಿಂದ ಹಿಂತಿರುಗಿದ ಉಡುಪಿಯ ಮೂವರಲ್ಲಿ ಕೊರೋನಾ ದೃಢ

Tuesday, May 26th, 2020
corona-virus19

ಉಡುಪಿ : ಮಹಾರಾಷ್ಟ್ರದಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ ಮೂರು ಮಂದಿಗೆ ಕೊರೊನಾ ದೃಢಪಟ್ಟಿದ್ದು ಇವರಲ್ಲಿ 9 ವರ್ಷದ ಹೆಣ್ಣು ಮಗು, 30 ವರ್ಷದ ಮಹಿಳೆ ಹಾಗೂ 27 ವರ್ಷದ ಯುವಕ ಒಳಗೊಂಡಿದ್ದರೆ, ಚಿಕಿತ್ಸೆಗಾಗಿ ಇವರನ್ನು ನಿಗದಿತ ಕೊವೀಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 111 ಸೋಂಕು ಪ್ರಕರಣ ಪತ್ತೆಯಾಗಿದೆ. ರಾಜ್ಯ ಆರೋಗ್ಯ ಇಲಾಖೆ ಆಯಾ ದಿನದ ಸೋಂಕು ಪೀಡಿತರ ವಿವರಗಳನ್ನು ದಿನಕ್ಕೆ  ಎರಡು ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿದ್ದು, […]

ಕರ್ನಾಟಕ ಗಡಿಭಾಗದ ವರ್ಕಾಡಿಯಲ್ಲಿ ಕೊರೋನಾ, ಕಾಸರಗೋಡಿನಲ್ಲಿ ರವಿವಾರ ಐವರು ಸೋಂಕಿತರು

Sunday, May 24th, 2020
Kerala corona

ಕಾಸರಗೋಡು :  ರವಿವಾರದಂದು ಕಾಸರಗೋಡು ಜಿಲ್ಲೆಯಲ್ಲಿ ಐವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ನಡುವೆ ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕು ಖಚಿತಗೊಂಡವರೆಲ್ಲ ಮಹಾರಾಷ್ಟ್ರ ದಿಂದ ಆಗಮಿಸಿದವರಾಗಿದ್ದಾರೆ. 41 ವರ್ಷ ಪ್ರಾಯದ ಕುಂಬಳೆ ನಿವಾಸಿ, 32 ವರ್ಷದ ಮಂಗಲ್ಪಾಡಿ ನಿವಾಸಿ, 44 ಮತ್ತು 47 ವರ್ಷ ಪ್ರಾಯದ ಪೈವಳಕೆ ನಿವಾಸಿಗಳು ಹಾಗೂ 60 ವರ್ಷದ ವರ್ಕಾಡಿ ಗ್ರಾಮದ ಕೆದಂಬಾಡಿ ನಿವಾಸಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ರವಿವಾರ ಸೋಂಕು ದೃಢಪಟ್ಟವರೆಲ್ಲರೂ ಪುರುಷರಾಗಿದ್ದಾರೆ. ಭಾನುವಾರ ಇಬ್ಬರು ಕೋವಿಡ್ ರೋಗದಿಂದ ಗುಣಮುಖರಾಗಿದ್ದಾರೆ. […]

ಕೊರೋನಾ ನೆಪದಲ್ಲಿ ಕೇಂದ್ರ ಮಾರುಕಟ್ಟೆ ಎತ್ತಂಗಡಿ; ಅತಂತ್ರಗೊಂಡ ವ್ಯಾಪಾರಸ್ಥರು – ತೀವ್ರ ಹೋರಾಟಕ್ಕೆ ನಿರ್ಧಾರ

Thursday, May 21st, 2020
Sunil-Bajal

ಮಂಗಳೂರು : ಕೊರೋನಾ ವೈರಸ್‌ ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರ ಘೋಷಣೆ ಮಾಡಿರುವ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ತೀರಾ ಹಾಳಾಗಿದ್ದು, ಮತ್ತೊಂದು ಕಡೆ ಅದನ್ನೇ ನೆಪಮಾಡಿ ಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ನಗರದ ಹೃದಯಭಾಗದಲ್ಲಿದ್ದ ಕೇಂದ್ರ ಮಾರುಕಟ್ಟೆಯನ್ನು ಏಕಾಏಕಿಯಾಗಿ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ತಾತ್ಕಾಲಿಕ ನೆಲೆಯಲ್ಲಿಎತ್ತಂಗಡಿ ಮಾಡಿರುವುದು ಹಾಗೂ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ತೀರಾ ಅವೈಜ್ಞಾನಿಕ ಕ್ರಮ ಹಾಗೂ  ಖಂಡನೀಯವಾಗಿದೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ. ದ.ಕ. ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ […]

ಚಿಕ್ಕಮಗಳೂರು : ಗರ್ಭಿಣಿ , ವೈದ್ಯಾಧಿಕಾರಿ ಸೇರಿ ಐವರಿಗೆ ಕೊರೋನಾ

Wednesday, May 20th, 2020
corona Chikamagaluru

ಚಿಕ್ಕಮಗಳೂರು :  ಕೊಪ್ಪದ ಕೇಂದ್ರದಲ್ಲಿ ಕ್ವಾರಂಟೈನಲ್ಲಿದ್ದ ಮೂವರಿಗೆ ಕೋವಿಡ್-19 ಪತ್ತೆಯಾಗಿದೆ, ಕಾಫಿನಾಡಿನಲ್ಲಿ ಒಂದೇ ದಿನ ಐವರಿಗೆ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಮರಳಿದ್ದ ಎನ್.ಆರ್.ಪುರ ತಾಲ್ಲೂಕಿನ ಕೆರೆಗದ್ದೆಯ ಈ ಮೂವರು ಕ್ವಾರಂಟೈನಲ್ಲಿದ್ದರು. 7 ವರ್ಷ ಮತ್ತು 10 ವರ್ಷದ ಬಾಲಕ, 17 ವರ್ಷದ ಯುವತಿಗೆ ಕೋವಿಡ್ ದೃಢಪಟ್ಟಿದೆ. ತರೀಕೆರೆಯ ಗರ್ಭಿಣಿ (27) ಮತ್ತು ಮೂಡಿಗೆರೆಯ ವೈದ್ಯಾಧಿಕಾರಿಗೆ ಕೋವಿಡ್ ಪತ್ತೆಯಾಗಿದೆ.

ಕೊರೋನಾ ನಡುವೆ ಮಂಗಳೂರಿಗೆ ‘ಅಂಫಾನ್’ ಚಂಡಮಾರುತ ಭೀತಿ

Sunday, May 17th, 2020
amfan

ಮಂಗಳೂರು : ಒಂದೆಡೆ ಕೊರೋನಾ ಭೀತಿ ಮುಂದುವರಿಯುತ್ತಿರುವಾಗಲೇ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರ ಪರಿಣಾಮ ಕರಾವಳಿ ತೀರದಲ್ಲಿ ‘ಅಂಫಾನ್’ ಎಂಬ ಹೆಸರಿನ ಚಂಡಮಾರುತದ ಭೀತಿಯೂ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಮೇ 18ರಂದು ಈ ಚಂಡಮಾರುತವು ತೀವ್ರ ಸ್ವರೂಪ ಪಡೆಯಲಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ‘ಎಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ. ಅಲ್ಲದೆ ಮುಂಗಾರು ಪ್ರವೇಶಕ್ಕೆ ಈ ಚಂಡಮಾರುತವು ತೀವ್ರ ಪರಿಣಾಮ ಬೀರಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅರಬ್ಬೀ ಸಮುದ್ರದಲ್ಲಿ […]