Blog Archive

ದ.ಕ. ಜಿಲ್ಲೆಯಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮಾರುಕಟ್ಟೆ ತೆರೆದಿರುತ್ತದೆ

Tuesday, March 24th, 2020
mangalore-market

ಮಂಗಳೂರು : ಮಾನ್ಯ ಜಿಲ್ಲಾಧಿಕಾರಿಗಳು ಇಂದು ಹೊರಡಿಸಿರುವ ಆದೇಶವು ಉಲ್ಲೇಖ (3) ರಲ್ಲಿ ರಾಜ್ಯ ಸರಕಾರ ಇಂದು ಹೊರಡಿಸಿರುವ ಲಾಕ್ ಡೌನ್ ಅದೇಶಕ್ಕೆ ಪೂರಕ ಆದೇಶವಾಗಿದೆ. ರಾಜ್ಯ ಸರಕಾರದ ಲಾಕ್ ಡೌನ್ ಆದೇಶದಲ್ಲಿರುವ ಎಲ್ಲಾ ನಿರ್ಬಂಧಗಳು ಜಿಲ್ಲೆಗೆ ಸಂಪೂರ್ಣವಾಗಿ ಅನ್ವಯವಾಗಲಿದೆ. ಆದರೆ, ದ.ಕ. ಜಿಲ್ಲೆಯಲ್ಲಿ ಆಹಾರ ಸಾಮಗ್ರಿ, ದಿನಸಿ ಅಂಗಡಿ, ಮಾಂಸ,ಮೀನು ಮಾರುಕಟ್ಟೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ತೆರೆಯಲು ಅವಕಾಶವಿರುತ್ತದೆ.

ನಳಿನ್‌ರನ್ನು ದ.ಕ.ಜಿಲ್ಲೆಯ ಸಂಸದ ಎನ್ನಲು ನಾಚಿಕೆಯಾಗುತ್ತದೆ : ರಮಾನಾಥ ರೈ

Saturday, May 18th, 2019
Nalin-Hatavo

ಮಂಗಳೂರು : ಇತ್ತೀಚೆಗೆ ಟ್ವಿಟ್ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ತಕ್ಷಣ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಹಾತ್ಮಾ ಗಾಂಧೀಜಿಯನ್ನು ಅವಮಾನಿಸಿದ್ದನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಶನಿವಾರ ಪಕ್ಷದ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯನ್ನು […]

ಭಾರಿ ಮಳೆಗೆ ವಿರಾಮ..ಇಂದು ಮಂಗಳೂರಿನಲ್ಲಿ ಸುಡುಬಿಸಿಲಿನ ವಾತವರಣ!

Monday, July 9th, 2018
hot-temperature

ಮಂಗಳೂರು: ಕಳೆದ ನಾಲ್ಕು ದಿನ ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿದ್ದರೆ, ಇಂದು ಜಿಲ್ಲೆಯಲ್ಲಿ ಸುಡುಬಿಸಿಲಿನ ವಾತವರಣವಿದೆ. ದ.ಕ. ಜಿಲ್ಲೆಯ ಕೆಲವೆಡೆ ಇಂದು ಸಣ್ಣ ಮಟ್ಟದಲ್ಲಿ ಮಳೆ ಸುರಿದರೆ ಹೆಚ್ಚಿನೆಡೆ ಸುಡು ಬಿಸಿಲಿನ ವಾತಾವರಣವಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಇಂದು ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನ ಭಾರಿ ಮಳೆಯಿಂದ ಹಲವು ತಗ್ಗು ಪ್ರದೇಶಗಳಲ್ಲಿ ನೆರೆ ನೀರು ನಿಂತಿದೆ. ಆದರೆ ಇಂದು ಕೊಂಚ ಬಿಸಿಲಿನ ವಾತಾವರಣವಿದೆ.

ವಿಧಾನಸಭಾ ಚುನಾವಣೆ… ಮತಗಟ್ಟೆಗೆ ತೆರಳಲು ಸಿದ್ಧರಾದ ಅಧಿಕಾರಿಗಳು

Friday, May 11th, 2018
election-vote

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಮತಗಟ್ಟೆಗೆ ತೆರಳಲು ಅಧಿಕಾರಿಗಳು ಸಿದ್ಧಗೊಂಡಿದ್ದಾರೆ. ಇವಿಎಂ ಮಷಿನ್‌‌ಗಳ ಬಾಕ್ಸ್‌‌ಗಳನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ಕೊಂಡೊಯ್ಯುತ್ತಿದ್ದಾರೆ. ಮತದಾನದ ಸಂದರ್ಭದಲ್ಲಿ ಯಾವುದೇ ಚ್ಯುತಿ ಬಾರದಂತೆ ಜಿಲ್ಲಾ ಚುನಾವಣಾ ಆಯೋಗ ನಿಗಾ ವಹಿಸಿದೆ. ದ.ಕ. ಜಿಲ್ಲೆಯಲ್ಲಿ 12,837 ಮತಗಟ್ಟೆ ಅಧಿಕಾರಿಗಳು, 1,295 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ 8 ಕ್ಷೇತ್ರಗಳಿಗೆ 13,176 ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಚುನಾವಣಾ ಕರ್ತವ್ಯ ಮುಕ್ತಾಯವಾದ ಬಳಿಕ […]

ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಇಂಟಕ್ ಕರೆ

Saturday, May 5th, 2018
dakshina-kannada

ಮಂಗಳೂರು: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷದ ಕಾರ್ಮಿಕ ಘಟಕ ವಾದ ಇಂಟಕ್ ಕರೆ ನೀಡಿದೆ. ಶನಿವಾರ ಇಂಟಕ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ಇಂಟಕ್‌ನ ಸರ್ವ ಸದಸ್ಯರೂ ಕೂಡ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು. ತಮ್ಮ ಕುಟುಂಬದ ಸರ್ವರನ್ನೂ ಕೂಡ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಆರ್.ಲೋಬೊ ಇಂಟಕ್‌ನ ಹಲವು ಸಮಸ್ಯೆಗಳಿಗೆ […]

ಮೇ 7ರಂದು ಮತದಾರರ ಚೀಟಿ ಪಡೆಯಲು ಕೊನೆಯ ದಿನ: ಸಸಿಕಾಂತ್ ಸೆಂಥಿಲ್

Saturday, May 5th, 2018
sesikanth-senthil

ಮಂಗಳೂರು: ಮತದಾರರ ಪಟ್ಟಿಯಲ್ಲಿ ಇರುವ ಮತದಾರರ (ವೋಟರ್ ಸ್ಲಿಫ್) ಚೀಟಿಯನ್ನು ಈ ಬಾರಿ ಪ್ರತಿ ಮತದಾರರ ಮನೆಗೆ ತಲುಪಿಸಲಾ ಗುವುದು ಒಂದು ವೇಳೆ ಈ ಚೀಟಿ ದೊರೆಯದೆ ಇದ್ದವರಿಗಾಗಿ ಮೇ 7ರಂದು ಪ್ರತಿ ಮತಗಟ್ಟೆಯಲ್ಲಿ ಚೀಟಿ ಪಡೆಯಲು ಅವಕಾಶ ಮಾಡಿಕೊಡಲಾಗುವುದು. ಈ ಚೀಟಿಯಲ್ಲಿ ಮತದಾರರ ಭಾವಚಿತ್ರ ಮತಗಟ್ಟೆಯ ವಿವರ ಒಳಗೊಂಡಿರುತ್ತದೆ. ಈ ಚೀಟಿ ಇಲ್ಲದಿದ್ದರೂ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಮತಚಲಾಯಿಸಲು ಯಾವೂದೇ ಸಮಸ್ಯೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ದ.ಕ ಜಿಲ್ಲೆಯಲ್ಲಿ ಚುನಾವಣಾ […]

ಬಿಜೆಪಿಗೆ ತಾಕತ್ತಿದ್ದರೆ ದ.ಕ. ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್‌‌‌ ನೀಡಲಿ: ಸಚಿವ ರೈ ಸವಾಲು

Tuesday, January 16th, 2018
congress-samithi

ಮಂಗಳೂರು: ಪಕ್ಷದ ಪ್ರಚಾರ ಸಭೆಯ ಬ್ಯಾನರ್‌ಗಳಲ್ಲಿ ದೇವರ ಭಾವಚಿತ್ರ ಹಾಕಿ ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡುವ ಬದಲು ಬಿಜೆಪಿಗೆ ತಾಕತ್ತಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸವಾಲು ಹಾಕಿದ್ದಾರೆ. ಭಾರತೀಯ ಜನತಾ ಪಕ್ಷದ ಪ್ರಚಾರ ಸಭೆ ಬ್ಯಾನರ್‌ಗಳಲ್ಲಿ ದೈವ-ದೇವರ ಭಾವಚಿತ್ರ ಹಾಕಿಕೊಂಡು ಅವಮಾನ ಮಾಡಲಾಗಿದೆ ಎಂದು ಆಕ್ಷೇಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ […]

ನಾಳೆ ದ.ಕ ಜಿಲ್ಲೆಯ ಪಾವೂರು ಗ್ರಾಮ ಪಂಚಾಯತ್‍ ಚುನಾವಣೆ :ಪೊಲೀಸ್ ಬಂದೋಬಸ್ತ್

Saturday, December 16th, 2017
police

ಮಂಗಳೂರು : ದ.ಕ ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯು ಡಿಸೆಂಬರ್ 17 ರಂದು ನಡೆಯಲಿದೆ. ಮಂಗಳೂರು ತಾಲೂಕಿನ ಮಲ್ಲೂರು ಮತ್ತು ಪಾವೂರು ಗ್ರಾ.ಪ, ಬಂಟ್ವಾಳ ತಾಲೂಕಿನ ಮಂಚಿ ಗ್ರಾ.ಪ ಹಾಗೂ ಪುತ್ತೂರು ತಾಲೂಕಿನ ಕೊಯಿಲ ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಯಲಿರುವುದು. ಈ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ ಮತ್ತು ಶಾಂತಿಯುತ ವಾತಾವರಣದಲ್ಲಿ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿರುವುದರಿಂದ ದ.ಕ ಜಿಲ್ಲೆಯಲ್ಲಿ ಡಿಸೆಂಬರ್ 16 ರ ಬೆಳಿಗ್ಗೆಯಿಂದ ಡಿಸೆಂಬರ್ […]

ಮಗನ ಮದುವೆ ಸಂಭ್ರಮದಲ್ಲೇ ಚೊಚ್ಚಲ ಕಾದಂಬರಿ ಬಿಡುಗಡೆ

Friday, December 15th, 2017
kadambari

ಮಂಗಳೂರು: ಕಥೆಗಾರ್ತಿ ಅನಿತಾ ನರೇಶ್ ಮಂಚಿಯವರು ತಮ್ಮ ಮಗನ ಮದುವೆಯ ಸಂಭ್ರಮದಲ್ಲಿ ಚೊಚ್ಚಲ ಕಾದಂಬರಿಯನ್ನು ಬಿಡುಗಡೆಗೊಳಿಸಿದ್ದಾರೆ. ಕಥೆಗಾರ್ತಿ ಅನಿತಾ-ನರೇಶ್ ದಂಪತಿಯ ಮಗನ ಮದುವೆ ಸಮಾರಂಭ ನಡೆಯಿತು. ಮಗ ಚೇತನ್, ಸ್ವಾತಿ ಮಂಚಿಯವರನ್ನು ಸಪ್ತಪದಿ ತುಳಿದು ಮನೆತುಂಬಿಸಿಕೊಳ್ಳುವ ಸಂಭ್ರಮದ ಸಂದರ್ಭದಲ್ಲಿ ಅನಿತಾರ `ಪದ ಕುಸಿಯೆ ನೆಲವಿಹುದು’ ಎಂಬ ಕಾದಂಬರಿಯನ್ನು ಅನಾವರಣಗೊಳಿಸಲಾಯಿತು. ದಿಟ್ಟ ಮಹಿಳೆಯೊಬ್ಬಳ ಕಥೆಯನ್ನು ಸಾರುವ ಕೃತಿ ಇದಾಗಿದೆ. ಹೆಸರಿಗೆ ತಕ್ಕ ಹಾಗೆ ಶಾಂತ ಸ್ವಭಾವದ ಶಾಂತಿ ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲಿ ಸಾಗುವ ನೈಜ ಬದುಕನ್ನಾಧರಿಸಿ ಬರೆದ ಕೃತಿಯನ್ನು […]

ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’ : ಹರಿಕೃಷ್ಣ ಬಂಟ್ವಾಳ್

Tuesday, December 12th, 2017
ramanath-rai

ಮಂಗಳೂರು: ಸುಮಾರು 25 ಸಂಘಟನೆಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುತ್ತದೆ ಎನ್ನಲಾಗಿದ್ದ ಸಚಿವ ಬಿ.ರಮಾನಾಥ ರೈ ನೇತೃತ್ವದ ‘ಸಾಮರಸ್ಯದ ನಡಿಗೆ’ಯಲ್ಲಿ ಬರೀ 500ರಷ್ಟು ಜನರು ಮಾತ್ರ ಭಾಗವಹಿಸಿದ್ದಾರೆ. ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’. ಇದೊಂದು ‘ಫ್ಲಾಪ್ ಶೋ’ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಸೇರಿದಂತೆ ಇತರ ಇಲಾಖೆಗಳು ತಮ್ಮ ನಿಯಂತ್ರಣದಲ್ಲಿದ್ದರೂ ಕಳೆದ 4 ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯವಾಗದವರಿಗೆ ಈಗ ಸಾಮರಸ್ಯದ ನೆನಪಾಗಿರುವುದೇಕೆ? […]