Blog Archive

ಶಾಂತಿ, ಸಹನೆ, ಸಂಯಮ ನಮ್ಮ ಉಸಿರಾಗಲಿ: ಸಚಿವ ರೈ

Friday, January 26th, 2018
ramanath

ಮಂಗಳೂರು: ಸಹಬಾಳ್ವೆಯ ಬದುಕನ್ನು ನಮ್ಮದಾಗಿಸಿಕೊಂಡು ಶಾಂತಿ, ಸಹನೆ, ಸಂಯಮವನ್ನು ಉಸಿರಾಗಿಸಿಕೊಳ್ಳೋಣ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು. ನಗರದ ನೆಹರೂ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಂಭ್ರಮಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರಾದ ಜೆ.ಆರ್.ಲೋಬೋ, ಬಿ.ಎ.ಮೊಯ್ದಿನ್ ಬಾವ, ಮೇಯರ್ ಕವಿತಾ ಸನಿಲ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರಾಜ್ಯ ಗೇರು ಅಭಿವೃದ್ಧಿ ನಿಗಮದ […]

ಸಾಧನೆ ಜನರಿಗೆ ತಿಳಿಸಿ ಕಾಂಗ್ರೆಸ್‌ ಗೆಲ್ಲಿಸಿ: ಶಾಸಕಿ ಶಕುಂತಳಾ ಶೆಟ್ಟಿ

Friday, January 19th, 2018
shankuntala-shetty

ಪುತ್ತೂರು: ವಿಧಾನಸಭಾ ಕ್ಷೇತ್ರವೊಂದರ ಅಭಿವೃದ್ಧಿಗೆ 800 ಕೋಟಿ ರೂ. ಅನುದಾನ ತರಿಸುವ ಸಾಧನೆ ಮಾಡಿದ್ದು, ಪಕ್ಷದ ನರ-ನಾಡಿಗಳನ್ನು ಅರಿತಿರುವ ಕಾರ್ಯಕರ್ತರು ಮುಂದಿನ ಬಾರಿಯೂ ಕಾಂಗ್ರೆಸ್‌ ಗೆಲುವಿಗೆ ತಮ್ಮ ಶ್ರಮವನ್ನು ತೋರ್ಪಡಿಸಬೇಕು ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ವಿನಂತಿಸಿದರು. ಸುಭದ್ರಾ ಸಭಾಂಗಣದಲ್ಲಿ ಗುರುವಾರ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್‌ ವ್ಯಾಪ್ತಿಯ ಬೂತ್‌ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು. ರಾಜ್ಯ ಸರಕಾರದ ಸಾಧನಾ ಸಮಾವೇಶಕ್ಕೆ ಪುತ್ತೂರಿನಲ್ಲಿ ದಾಖಲೆಯ […]

ಬಿಜೆಪಿಗೆ ತಾಕತ್ತಿದ್ದರೆ ದ.ಕ. ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್‌‌‌ ನೀಡಲಿ: ಸಚಿವ ರೈ ಸವಾಲು

Tuesday, January 16th, 2018
congress-samithi

ಮಂಗಳೂರು: ಪಕ್ಷದ ಪ್ರಚಾರ ಸಭೆಯ ಬ್ಯಾನರ್‌ಗಳಲ್ಲಿ ದೇವರ ಭಾವಚಿತ್ರ ಹಾಕಿ ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡುವ ಬದಲು ಬಿಜೆಪಿಗೆ ತಾಕತ್ತಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸವಾಲು ಹಾಕಿದ್ದಾರೆ. ಭಾರತೀಯ ಜನತಾ ಪಕ್ಷದ ಪ್ರಚಾರ ಸಭೆ ಬ್ಯಾನರ್‌ಗಳಲ್ಲಿ ದೈವ-ದೇವರ ಭಾವಚಿತ್ರ ಹಾಕಿಕೊಂಡು ಅವಮಾನ ಮಾಡಲಾಗಿದೆ ಎಂದು ಆಕ್ಷೇಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ […]

ಜಲೀಲ್ ಕರೋಪಾಡಿ ಕುಟುಂಬಕ್ಕೆ ಸಚಿವ ರೈಯಿಂದ 10 ಲಕ್ಷ ರೂ. ಪರಿಹಾರ

Monday, January 15th, 2018
ramanath-rai

ಬಂಟ್ವಾಳ: 2017ರ ಮೇ ತಿಂಗಳಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕುಟುಂಬಕ್ಕೆ ಉಸ್ತುವಾರಿ ಸಚಿವ ಬಿ. ರಮಾನಾಥ ರೈ 10 ಲಕ್ಷ ರೂ.ಗಳ ಪರಿಹಾರ ನೀಡಿದ್ದಾರೆ. ಜಲೀಲ್ ಕರೋಪಾಡಿ ನಿವಾಸಕ್ಕೆ ಭೇಟಿ ನೀಡಿದ ಸಚಿವರು ಖುದ್ದಾಗಿ 10 ಲಕ್ಷ ರೂ.ಗಳ ಚೆಕ್‌‌ನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಜಲೀಲ್ ತಂದೆ ಉಸ್ಮಾನ್ ಕರೋಪಾಡಿ ಅವರು ಸಚಿವರಿಂದ ಪರಿಹಾರದ ಚೆಕ್‌‌ನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಹಾಗೂ ಇತರ ಸ್ಥಳೀಯ […]

ಮಂಚಿ ಗ್ರಾಪಂ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಜಯ

Wednesday, December 20th, 2017
panchayat

ಬಂಟ್ವಾಳ: ಮಂಚಿಯಲ್ಲಿ ಗ್ರಾಮ ಪಂಚಾಯತ್ ಸ್ಥಾನವೊಂದಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ ಮಿನಿ ವಿಧಾನಸೌಧದಲ್ಲಿ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಯ್ದು ಕುಂಞಿ 463 ಮತ ಪಡೆದು ಜಯಶಾಲಿಯಾಗಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಪ್ರಭಾಕರ ಶೆಟ್ಟಿ 356 ಮತಗಳನ್ನು ಗಳಿಸಿದರು. 21 ಮತಗಳು ತಿರಸ್ಕೃತಗೊಂಡಿವೆ. ಚುನಾವಣಾಧಿಕಾರಿ ಆಹಾರ ಶಾಖೆ ಉಪತಹಶೀಲ್ದಾರ್ ವಾಸು ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಮೋಹನ ಕುಮಾರ್ ನೇತೃತ್ವದಲ್ಲಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ವಿಜೇತ ಅಭ್ಯರ್ಥಿ […]

ಜನಪ್ರತಿನಿಧಿಗಳಿಗೆ ಮಗ್ಗುಲ ಮುಳ್ಳಾಗಲಿದಿಯೇ ಎತ್ತಿನ ಹೊಳೆ?

Monday, December 18th, 2017
janaprathinidi

ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ.ಒಂದೆಡೆ ರಥಯಾತ್ರೆಗಳು ಆರಂಭವಾದರೆ ಇನ್ನೊಂಡೆದಡೆ ಪಾದಯಾತ್ರೆಗಳಿಗೆ ಚಾಲನೆ ನೀಡಲಾಗಿದೆ.ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯ ಎತ್ತಿನಹೊಳೆ ಯೋಜನೆ ಹೋರಾಟ ಮುಂಬರು ಚುನಾವಣೆಯ ಪ್ರಮುಖ ವಿಷಯವಾಗಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಆರಂಭಗೊಂಡಿದೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರು ದುಮುಕಲು ಮುಂದಾಗಿದ್ದಾರೆ.ಬಯಲು ಸೀಮೆಗೆ ನೀರುಣಿಸುವ ಉದ್ದೇಶಹೊಂದಿರುವ ಎತ್ತಿನಹೊಳೆ ಯೋಜನೆ ವಿವಾದದ ಮೂಲ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಎತ್ತಿನಹೊಳೆ ಹೋರಾಟಗಾರರು ಚುನಾವಣೆಗೆ ಸ್ಪರ್ದಿಸಲು ಮುಂದಾಗಿದ್ದಾರೆ. ಕರಾವಳಿಯನ್ನೇ […]

ಆಶ್ರಫ್, ಶರತ್ ಕುಟುಂಬಕ್ಕೆ ತಲಾ 5 ಲಕ್ಷ ರೂ

Thursday, December 14th, 2017
u-t-kader

ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ಕೆಲವು ತಿಂಗಳ ಹಿಂದೆ ಕೊಲೆಯಾಗಿರುವ ಮುಹಮ್ಮದ್ ಅಶ್ರಫ್ ಮತ್ತು ಶರತ್ ಮಡಿವಾಳ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ಐದು ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ ಎಂದು ಆಹಾರ ಮತ್ತು ನಾಗರಿಕ‌ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು. ಪರಿಹಾರದ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮೂಲಕ ಎರಡೂ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಬಂಟ್ವಾಳದಲ್ಲಿ ಇಬ್ಬರು ಅಮಾಯಕರ ಹತ್ಯೆ ನಡೆದಾಗ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದ್ದೆ. ಸರಕಾರದ […]

ಮನುಷ್ಯರಾಗಿ ಬದುಕೋಣ: ಪ್ರಕಾಶ್‌ ರೈ ಕರೆ

Wednesday, December 13th, 2017
prakash-said

ಮಂಗಳೂರು: ಈ ಜಗತ್ತಲ್ಲಿ ಹುಲ್ಲುಕಡ್ಡಿಯನ್ನೂ ಸೃಷ್ಟಿಸುವ ಶಕ್ತಿ ಹಾಗೂ ಅರ್ಹತೆಯಿಲ್ಲದ ನಮಗೆ ಯಾರನ್ನೂ ಕೊಲ್ಲುವ ಅರ್ಹತೆಯೂ ಇಲ್ಲ. ಹೀಗಾಗಿ ಮನುಷ್ಯರಾಗಿ ಬದುಕಬೇಕೇ ಹೊರತು, ದ್ವೇಷದಿಂದ ಬದುಕುವುದು ಸಲ್ಲದು ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಕರೆ ನೀಡಿದರು. ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಫರಂಗಿಪೇಟೆಯಿಂದ ಮಾಣಿವರೆಗೆ ಮಂಗಳವಾರ ನಡೆದ, ಸಾಮರಸ್ಯಕ್ಕಾಗಿ ಸೌಹಾರ್ದ ನಡಿಗೆ ಸಮಾ ರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಸಾಮರಸ್ಯ ನಡಿಗೆಯಲ್ಲಿ ನಾನೊಬ್ಬ ನಟ ಹಾಗೂ ದೇಶದ ಪ್ರಜೆಯಾಗಿ ಭಾಗವಹಿಸಿದ್ದೇನೆ. ಕಲಾವಿದ ಪ್ರತಿಭೆ […]

ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’ : ಹರಿಕೃಷ್ಣ ಬಂಟ್ವಾಳ್

Tuesday, December 12th, 2017
ramanath-rai

ಮಂಗಳೂರು: ಸುಮಾರು 25 ಸಂಘಟನೆಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುತ್ತದೆ ಎನ್ನಲಾಗಿದ್ದ ಸಚಿವ ಬಿ.ರಮಾನಾಥ ರೈ ನೇತೃತ್ವದ ‘ಸಾಮರಸ್ಯದ ನಡಿಗೆ’ಯಲ್ಲಿ ಬರೀ 500ರಷ್ಟು ಜನರು ಮಾತ್ರ ಭಾಗವಹಿಸಿದ್ದಾರೆ. ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’. ಇದೊಂದು ‘ಫ್ಲಾಪ್ ಶೋ’ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಸೇರಿದಂತೆ ಇತರ ಇಲಾಖೆಗಳು ತಮ್ಮ ನಿಯಂತ್ರಣದಲ್ಲಿದ್ದರೂ ಕಳೆದ 4 ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯವಾಗದವರಿಗೆ ಈಗ ಸಾಮರಸ್ಯದ ನೆನಪಾಗಿರುವುದೇಕೆ? […]

ಅನಿಲ ಭಾಗ್ಯ: ಜಿಲ್ಲೆಯಲ್ಲಿ 49618 ಮನೆಗೆ ಉಚಿತ ಗ್ಯಾಸ್ ಸಂಪರ್ಕ

Saturday, November 11th, 2017
anila bhagya

ಮ೦ಗಳೂರು: ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ಯಾಸ್ ಸಂಪರ್ಕ ಇಲ್ಲದಿರುವ 49618 ಫಲಾನುಭವಿಗಳಿಗೆ ಉಚಿತವಾಗಿ ಸಂಪರ್ಕ ನೀಡಲಾಗುವುದು ಎಂದು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಗ್ಯಾಸ್ ಸಂಪರ್ಕ ಪಡೆದಿರುವ ಮನೆಗಳನ್ನು ಹೊರತುಪಡಿಸಿ, ಇನ್ನೂ 49618 ಮನೆಗಳಿಗೆ ಗ್ಯಾಸ್ ಸಂಪರ್ಕ ಪಡೆಯಲು ಬಾಕಿ ಇದೆ. ಈಗಾಗಲೇ […]