Blog Archive

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ವಿಭಜಿಸಲು ಕೆಲ ಗುಂಪುಗಳು ಷಡ್ಯಂತ್ರ ನಡೆಸುತ್ತಿದೆ: ಅಮಿತ್ ಷಾ

Monday, August 22nd, 2016
Amith-sha

ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ವಿಭಜಿಸಲು ಕೆಲ ಗುಂಪುಗಳು ಷಡ್ಯಂತ್ರ ನಡೆಸುತ್ತಿದ್ದು, ಇಂತಹವರನ್ನು ಪ್ರತ್ಯೇಕಿಸಿ ದೇಶದ ಐಕ್ಯತೆ ಮೆರೆಯುವ ಕಾರ್ಯವಾಗಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಭಾರತ ತಿರಂಗ ಯಾತ್ರೆ ಹಾಗೂ ಸ್ವಾತಂತ್ರ್ಯ 70ರ ಬಲಿದಾನದ ಕಾರ್ಯಕ್ರಮದಂಗವಾಗಿ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ರಾಷ್ಟ್ರ ವಿಭಜನೆಯಂತಹ ಭಾಷಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ನೀಡಲಾಗುತ್ತಿದ್ದು, ದೇಶದ […]

ಕರಾವಳಿ ಕಾಲೇಜಿಗೆ ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ

Monday, June 16th, 2014
Ganesh rao

ಮಂಗಳೂರು : ನಗರದ ಕೊಟ್ಟಾರ ಚೌಕಿ ಸಮೀಪದಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ಕರಾವಳಿ ಕಾಲೇಜಿಗೆ ಎಪ್ರಿಲ್ 2014ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ವರ್ಷ (6ನೇ ಸೆಮಿಸ್ಟರ್) ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಈ ವಿಶೇಷ ಸಾಧನೆಗಾಗಿ ಕಾಲೇಜಿನ ವಿದ್ಯಾರ್ಥಿ ವೃಂದ ಮತ್ತು ಅಧ್ಯಾಪಕ ವೃಂದವನ್ನು ಕಾಲೇಜಿನ ಆಡಳಿತ ಮಂಡಳಿ ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಅಧ್ಯಕ್ಷರಾಗಿರುವ ಶ್ರೀ ಎಸ್. ಗಣೇಶ್ ರಾವ್ ಇವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಕರಾವಳಿ ಕಾಲೇಜಿನ ಬಹತೇಕ ಹೆಚ್ಚಿನ […]

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಆಯ್ಕೆ

Friday, July 19th, 2013
University College Students’ Union

ಮಂಗಳೂರು : ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆಯಲ್ಲಿ. ಎಬಿವಿಪಿ ಒಟ್ಟು 31 ಸೀಟ್ ನಲ್ಲಿ 26 ಸೀಟುಗಳನ್ನು ಜಯಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ, ಕಾರ್ಯದರ್ಶಿ ಯಾಗಿ ಮಹೇಶ್ ರಾಜ್ ಮೂರನೇ ಬಿಎ, ಲಲಿತಕಲಾ ಕಾರ್ಯದರ್ಶಿ ಯಾಗಿ ಅವಿನಾಶ್ ಮೂರನೇ ಬಿಎ, ಜೊತೆ ಕಾರ್ಯದಶರ್ಿಯಾಗಿ ಶ್ವೇತಾ ಮೂರನೇ ಬಿಬಿಎಂ, ಜೊತೆ ಲಲಿತಕಲಾ ಕಾರ್ಯದರ್ಶಿ ಯಾಗಿ ಪವಿತ್ರಾ ಮೂರನೇ ಬಿಕಾಂ ಆಯ್ಕೆಯಾಗಿದ್ದಾರೆ. ಚುನಾವಣೆಯ ನಂತರ ವಿದ್ಯಾರ್ಥಿ […]

ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ನಡೆದ ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭ

Monday, February 25th, 2013
Mangalore University

ಮಂಗಳೂರು : ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ರಾಜ್ಯಪಾಲ ಹಾಗೂ ವಿ.ವಿ.ಕುಲಾಧಿಪತಿ ಎಚ್.ಆರ್.ಭಾರದ್ವಾಜ್ ಅವರು ಹಿರಿಯ ಹಾಕಿ ಆಟಗಾರ ಎ,.ಬಿ.ಸುಬ್ಬಯ್ಯ, ಖ್ಯಾತ ಸಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಹಾಗೂ ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಹೊಸದಿಲ್ಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕಾರ್ಯದರ್ಶಿ ರಾಮಸ್ವಾಮಿ, ದೇಶದಲ್ಲಿರುವ 600 ವಿಶ್ವ ವಿದ್ಯಾನಿಲಯಗಳ ಪೈಕಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ […]

ರವೀಂದ್ರ ಕಲಾ ಭವನದಲ್ಲಿ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣ ‘ಕಲೆ-ಹಿಂಸೆ’

Thursday, January 10th, 2013
National seminar

ಮಂಗಳೂರು : ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಕಾಲೇಜಿನ ಇಂಗ್ಲಿಷ್‌ ವಿಭಾಗ ವತಿಯಿಂದ ನಡೆದ ‘ಕಲೆ-ಹಿಂಸೆ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣವನ್ನು ಮಂಗಳೂರು ವಿಶ್ವದ್ಯಾನಿಲಯದ ಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಹಿಂಸೆ ಎನ್ನುವುದು ವಿವಿಧ ಆಯಾಮಗಳಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಪ್ರತಿಫಲಿಸಿದರೆ, ಕಲೆ ಮಾನವನ ಜೀವನದಲ್ಲಿ ಅನನ್ಯ ಭಾವರೂಪಿಯಾಗಿ ಹೊಸತನವನ್ನು ಪ್ರಜ್ವಲಿಸುತ್ತದೆ. ಕಲೆಯ ಮೂಲಕ ಹಿಂಸೆಯನ್ನು ತಡೆಗಟ್ಟಿ, ಅದನ್ನು ಮಟ್ಟಹಾಕಲು ಸಾಧ್ಯ ಎಂದವರು ಹೇಳಿದರು. […]