Blog Archive

ಕೆಎಸ್ಐಸಿ ಸಂಸ್ಥೆ ವತಿಯಿಂದ ಮೈಸೂರು ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ..!

Friday, December 14th, 2018
silk-saree

ಮಂಗಳೂರು: ರೇಷ್ಮೆ ಸೀರೆಗಳು ಮಧ್ಯಮವರ್ಗದವರ ಕೈಗೆಟಕುವುದಿಲ್ಲ ಎಂದುಕೊಂಡಿದ್ದರೆ ನಿಮ್ಮ ಆಲೋಚನೆ ಪಕ್ಕಕ್ಕಿಡಿ. ಮಹಿಳೆಯರ ಅಚ್ಚು ಮೆಚ್ಚಿನ ರೇಷ್ಮೆ ಸೀರೆಗಳು ಈಗ ಅಗ್ಗದ ಬೆಲೆಯಲ್ಲಿ ಸಿಗುತ್ತಿವೆ. ಮೈಸೂರು ಸಿಲ್ಕ್ ಸಂಸ್ಥೆ ಈ ಒಂದು ಆಫರ್ ಕೊಟ್ಟಿದೆ. ಬಡವರಿಗೂ, ಮಧ್ಯಮ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಕೆಎಸ್ ಐಸಿ ಸಂಸ್ಥೆ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡುತ್ತಿದೆ. ನಗರದ ಲಾಲ್ ಬಾಗ್ ನಲ್ಲಿರುವ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯಲ್ಲಿ ಕರ್ನಾಟಕದ ಪಾರಂಪರಿಕ ಉತ್ಪನ್ನ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು […]

ಇಂದಿನಿಂದ ಮೈಸೂರುನಲ್ಲಿ ಅಂತಾರಾಷ್ಟ್ರೀಯ ಆಹಾರ ಅಧಿವೇಶನ ಆರಂಭ

Thursday, December 13th, 2018
inguaration

ಮೈಸೂರು: ಇಂದಿನಿಂದ ಮೈಸೂರಿನ ಸಿ.ಎಫ್.ಟಿ.ಆರ್.ಐ ಸಹಯೋಗದೊಂದಿಗೆ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಆಹಾರ ಅಧಿವೇಶನ ಉದ್ಘಾಟನೆಗೊಂಡಿತು. ಅಧಿವೇಶನ ಉದ್ಘಾಟಸಿ ಮಾತನಾಡಿದ ಎನ್.ಐ.ಎಫ್.ಟಿ.ಇ.ಎನ್ ಕುಲಪತಿ ಪ್ರೊ. ಚಂಡಿ ವಸುದೇವಪ್ಪ, ಆಹಾರ ಸಂಶೋಧನಾಲಯಗಳ ಬಗ್ಗೆ ಸಾರ್ವಜನಿಕರಲ್ಲಿ ಮೊದಲು ಜಾಗೃತಿ ಮೂಡಬೇಕು. ಜೊತೆಗೆ ಯುವಕರು ಮೊದಲು ಜಾಗೃತರಾಗಬೇಕು. ಸರ್ಕಾರಿ ಉದ್ಯೋಗಳನ್ನು ಕಾಯುತ್ತ ಕೂರಬಾರದು. ತಮ್ಮ ಕಾಯಕವನ್ನು ತಾವೇ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು . ಈ ಸಮ್ಮೇಳನದಲ್ಲಿ ಸುಮಾರು 2000ಕ್ಕೂ ಹೆಚ್ಚು ಸಂಶೋಧಕರು ಭಾಗವಹಿಸಿದ್ದು, 150 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ. […]

ವಾಸ್ತು ಪ್ರಕಾರ ನಗರ ನಿರ್ಮಾಣ ಮಾಡಬೇಕು: ಖಾದರ್​ ಗೆ ಶ್ರೀಗಳ ಸಲಹೆ

Friday, December 7th, 2018
u-t-khader

ಮೈಸೂರು: ಮೈಸೂರು ನಗರವನ್ನು ವಾಸ್ತುಪ್ರಕಾರ ನಿರ್ಮಾಣ ಮಾಡಬೇಕೆಂದು ಆಧ್ಯಾತ್ಮ ಗುರು ರವಿಶಂಕರ್ ಗುರೂಜಿ ಅವರು ಸಲಹೆ ನೀಡಿದ್ದಾರೆ. ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಗುರುವಾರ ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟ (ಕ್ರೆಡಾಯ್) ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಶ್ರೀಗಳು, ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿ ಸ್ವಚ್ಛವಾದ ಗಾಳಿ, ಶುದ್ಧ ನೀರು ಜೊತೆಗೆ ವಾಸ್ತು ಪ್ರಕಾರ ನಗರ ನಿರ್ಮಾಣ ಮಾಡಬೇಕೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರಿಗೆ ಸಲಹೆ ನೀಡಿದರು. ಇದೇ ವೇಳೆ ಮಾತನಾಡಿದ […]

ಎರಡು ಲಾರಿಗಳ‌ ನಡುವೆ ಡಿಕ್ಕಿ: ಚಾಲಕರ ಸ್ಥಿತಿ ಗಂಭೀರ

Friday, November 30th, 2018
accident

ಮೈಸೂರು: ಓವರ್ ಟೇಕ್ ಭರದಲ್ಲಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡು-ಗುಂಡ್ಲುಪೇಟೆ ರಸ್ತೆಯ ಹಿರಿಕಟ್ಟಿ‌ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ನಡೆದ ಅಪಘಾತದಿಂದ ಓರ್ವ ಚಾಲಕನ ಕಾಲು ತುಂಡಾಗಿದ್ದರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆಯಿಂದ ಹೆದ್ದಾರಿಯಲ್ಲಿ ಗಂಟೆಗಂಟಲೇ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡಲು ಜಿಲ್ಲಾಧಿಕಾರಿ ಶಿಫಾರಸ್ಸು

Saturday, November 17th, 2018
mysuru

ಮೈಸೂರು: ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣಾ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಮೈಸೂರು ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಜನದಟ್ಟಣೆಯನ್ನು ನಿವಾರಿಸಲು ರಸ್ತೆಗಳನ್ನು ಅಗಲೀಕರಿಸುವ ಸಂಬಂಧ ಅಲ್ಲಿರುವ ಪಾರಂಪರಿಕ ಕಂಬಗಳನ್ನು ಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಯಿತು. ಸಮಿತಿ ಸದಸ್ಯರು ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ […]

ಸಿದ್ದರಾಮಯ್ಯ ಮುಖಂಡತ್ವದಲ್ಲಿ ಮೈಸೂರು ಮೇಯರ್​ ವಿವಾದ ಬಗೆ ಹರಿಸುತ್ತೇವೆ: ಹೆಚ್ ಡಿ ದೇವೇಗೌಡ

Friday, November 16th, 2018
devegouda

ದೇವನಹಳ್ಳಿ: ತಾಲೂಕಿನ ಗ್ರಾಮ ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣಾ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿದರು. ಈ ಕುರಿತು ಮಾತನಾಡಿದ ಅವರು ಕಾಂಗ್ರೆಸ್ -ಜೆಡಿಎಸ್ ಎರಡು ಪಕ್ಷಗಳು ಮೈತ್ರಿಯಾಗಿವೆ. ಸಿದ್ದರಾಮಯ್ಯ ನವರ ಮುಖಂಡತ್ವದಲ್ಲಿ ಸಮಸ್ಯೆ ಬಗೆ ಹರಿಸುತ್ತೇವೆ ಎಂದರು. ಮೇಯರ್ ಆಯ್ಕೆಗೆ ನಾಳೆಯವರೆಗೂ ಸಮಯಕಾಶವಿದೆ. ಎಲ್ಲರೂ ಓಗ್ಗಟ್ಟಾಗಿ ಸೇರಿ ಮೇಯರ್ ಆಯ್ಕೆ ಮಾಡ್ತಾರೆ ಎಂದು ದೇವೇಗೌಡ ತಿಳಿಸಿದ್ರು.

ಕೊಡಗಿಗೆ ತಮಿಳುನಾಡು ಪರಿಹಾರ ಕೊಡಬೇಕು: ಎಸ್.ಎಲ್.ಭೈರಪ್ಪ

Wednesday, November 14th, 2018
kodagu

ಮೈಸೂರು: ಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ತಮಿಳುನಾಡು ಸರ್ಕಾರ ಕೂಡ ಪರಿಹಾರ ಕೊಡಬೇಕು ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದ್ದಾರೆ. ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನಿಂದ ಕಾವೇರಿ ನೀರು ಹೋಗಲಿಲ್ಲವೆಂದರೆ, ತಮಿಳುನಾಡು ಸರ್ಕಾರ ಕಾವೇರಿ ನೀರು ಬಂದಿಲ್ಲವೆಂದು ಸುಪ್ರೀಂಕೋರ್ಟ್ ಮೊರೆಹೋಗುತ್ತದೆ. ಸದ್ಯ ಕೊಡುಗಿನಲ್ಲಿ ಭೀಕರ ಪ್ರವಾಹವಾಗಿದ್ದು, ಇಲ್ಲಿಂದ ನೀರು ಪಡೆಯಲು ಹಠಕ್ಕೆ ಬೀಳುವ ತಮಿಳುನಾಡಿಗೆ ಕೊಡುಗಿನ ಮೇಲೆ ಮಾನವೀಯತೆ ಬಂದಿದಿಯಾ? ಎಂದು […]

ಅನಂತ್ ಕುಮಾರ್ ನಿಧನ: ರಾಜ್ಯಾದ್ಯಂತ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Monday, November 12th, 2018
ananth-kumar

ಬೆಂಗಳೂರು: ಕೇಂದ್ರ ಸಚಿವ ಹೆಚ್.ಎನ್. ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಅವರ ಗೌರವಾರ್ಥವಾಗಿ ರಾಜ್ಯಾದ್ಯಂತ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರ ಸಚಿವರಾಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಶೋಕಾಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂತಾಪ‌ ಸೂಚಕವಾಗಿ ರಾಜ್ಯ ಸರ್ಕಾರ ಸರ್ಕಾರ ರಜೆ ಘೋಷಿಸಿದೆ. ಈ ವೇಳೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭಗಳ ಆಯೋಜನೆ ಮಾಡದಂತೆ‌ ಸುತ್ತೋಲೆ ಹೊರಡಿಸಿದೆ. ಈ ನಡುವೆ ಮೈಸೂರು ವಿವಿ ಪದವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಮೈಸೂರು ವಿವಿ ಆದೇಶ ಹೊರಡಿಸಿದೆ. ಇತರೆ ವಿವಿಗಳ […]

ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಮಕ್ಕಳು..ಪೋಷಕರಿಂದ ಹುಡುಕಾಟ!

Monday, November 5th, 2018
childrens

ಮೈಸೂರು: ಮನೆಯಲ್ಲಿದ್ದ 100 ರೂಪಾಯಿಯನ್ನು ಖರ್ಚು ಮಾಡಿದ್ದಕ್ಕೆ ತಂದೆ ತಾಯಿ ಬುದ್ಧಿ ಹೇಳಿದ ಕಾರಣ, ಇಬ್ಬರು ಮಕ್ಕಳು ಮನೆ ಬಿಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಎನ್.ಆರ್.ಮೊಹಲ್ಲಾದಲ್ಲಿ ವಾಸವಾಗಿರುವ ನಾಗರಾಜು ಮತ್ತು ಸೌಮ್ಯ ದಂಪತಿಯ ಮಕ್ಕಳಾದ ಐಶ್ವರ್ಯ(14) ಹಾಗೂ ನಕುಲ್(12) ಬುದ್ದಿ ಹೇಳಿದ್ದಕ್ಕೆ ಬೇಸರಗೊಂಡು ಮನೆಬಿಟ್ಟು ಹೋದ ಮಕ್ಕಳು. ಅಕ್ಟೋಬರ್ 28ರಂದು ಮಕ್ಕಳು ಮನೆಯಲ್ಲಿದ್ದ 100 ರೂಪಾಯಿಯನ್ನು ಖರ್ಚು ಮಾಡಿದ್ದಾರೆ. ಇದಕ್ಕೆ ಮನೆಯಲ್ಲಿ ಹೀಗೇ ಮಾಡಬೇಡಿ ಎಂದು ತಂದೆತಾಯಿ ಬುದ್ಧಿ ಹೇಳಿದ್ದಾರೆ. ತಂದೆ ತಾಯಿಯ ಈ […]

ಮೈಸೂರಲ್ಲಿ ಇಬ್ಬರು ಅಂತಾರಾಜ್ಯ ಕಳ್ಳಿಯರ ಬಂಧನ: 244 ಗ್ರಾಂ. ಚಿನ್ನಾಭರಣ ವಶ

Thursday, November 1st, 2018
mysuru

ಮೈಸೂರು: ಇಬ್ಬರು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸಿ ಅವರಿಂದ 7.30 ಲಕ್ಷ ರೂ. ಮೌಲ್ಯದ 244 ಗ್ರಾಂ. ಚಿನ್ನಾಭರಣ ಮತ್ತು 45,050 ರೂ. ನಗದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ವೆಲೂರು ಜಿಲ್ಲೆಯ ಜೋಲಾರ್‌ಪೇಟೆ ಪಟ್ಟಣದ ಬಾಬುನಗರದ ನಿವಾಸಿಗಳಾದ ಉಷಾರಾಣಿ (40), ರೂಪ(24) ಬಂಧಿತರು. ದಸರಾ ಮಹೋತ್ಸವದ ಅವಧಿಯಲ್ಲಿ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಈ ವೇಳೆ ರಾಜ್ಯ ಹಾಗೂ ಹೊರ ರಾಜ್ಯದ ಪಿಕ್‌ಪಾಕೆಟ್ ಕಳ್ಳರು ಮೈಸೂರಿಗೆ ಆಗಮಿಸಿ ಅಪರಾಧವೆಸಗುತ್ತಾರೆ. ಇದನ್ನು ತಡೆಯಲು ಮತ್ತು ಪತ್ತೆಗೆ ಪೊಲೀಸ್ […]