Blog Archive

ಸಾಯಿಬಾಬಾ ಪಾದುಕೆ ದರ್ಶನ ಪಡೆದ ಭಕ್ತರು

Thursday, May 24th, 2018
sai-baba

ಮಂಗಳೂರು: ಶಿರಡಿಯಿಂದ ಮಂಗಳೂರಿನ ಉರ್ವ ಚಿಲಿಂಬಿಯ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಆಗಮಿಸಿದ ಸಾಯಿ ಬಾಬಾರ ಪವಿತ್ರ ಪಾದುಕಾ ದರ್ಶನ ಕಾರ್ಯಕ್ರಮದಲ್ಲಿ ಬುಧವಾರ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಾಯಿ ಬಾಬಾರವರು ಧರಿಸುತ್ತಿದ್ದ ಶ್ರೀ ಪಾದುಕೆಯನ್ನು ದರ್ಶನಾರ್ಥವಾಗಿ ಶಿರಿಡಿಯಿಂದ ಚಿಲಿಂಬಿಯ ಸಾಯಿ ಬಾಬಾ ಮಂದಿರಕ್ಕೆ ತರಲಾಗಿತ್ತು. ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿ ಪಾದುಕೆಯ ದರ್ಶನ ಪಡೆದರು. ಸಂಜೆ ಪಟ್ಲಸತೀಶ್ ಶೆಟ್ಟಿ ಮತ್ತು ಬಳಗದವರಿಂದ ಶ್ರೀ ಸಾಯಿ ಯಕ್ಷಾರಾಧನೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು.

ಸಿದ್ದರಾಮಯ್ಯರಿಂದ ಕೊಲೆಗಡುಗರ ರಕ್ಷಣೆ: ಅಮಿತ್ ಶಾ ಆರೋಪ

Wednesday, May 9th, 2018
amit-shah

ಮಂಗಳೂರು: ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣೆ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾತಾಳದಲ್ಲಿದ್ದರೂ ಕೊಲೆಗಡುಕರನ್ನು ಹುಡುಕಿ ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ನಗರದ ನವಭಾರತ್ ವೃತ್ತದಿಂದ ಡೊಂಗರಕೇರಿ ಮೂಲಕ ಕಾರ್‌ಸ್ಟ್ರೀಟ್ ತನಕ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರೊಂದಿಗೆ ರೋಡ್ ಶೋ ನಡೆಸಿದ ಬಳಿಕ ಅವರು ಮಾತನಾಡಿದರು. ಸಿದ್ದರಾಮಯ್ಯ ಸರಕಾರ ಅಭಿವೃದ್ಧಿ ವಿರೋಧಿ ಮತ್ತು ಗೂಂಡಾಗಿರಿಯ ಸರಕಾರ. ಕಾರ್ಯಕರ್ತರನ್ನು ಹತ್ಯೆ […]

ಮಂಗಳೂರಲ್ಲಿ ಅಮಿತ್ ಶಾ ರೋಡ್ ಶೋ

Tuesday, May 8th, 2018
amit-shah

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ‌ ಅಧ್ಯಕ್ಷ ಅಮಿತ್ ಶಾ ಬಿಜೆಪಿ ಪಾಳಯಕ್ಕೆ ಬಲ ತುಂಬಲಿದ್ದಾರೆ. ಮಂಗಳೂರು ನಗರ ದಕ್ಷಿಣ ಮತ್ತು‌ ಉತ್ತರ ಕ್ಷೇತ್ರಗಲ್ಲಿ ಬೃಹತ್‌ ರೋಡ್ ಶೋ ಮಾಡಲಿರುವ ಅಮಿತ್ ಶಾ ಕೊನೇ ಕೆಲವೇ ದಿನಗಳಲ್ಲಿ ಪ್ರಚಾರ ಕಾರ್ಯಕ್ಕೆ ಫಿನಿಶಿಂಗ್ ಟಚ್ ನೀಡಲಿದ್ದಾರೆ. ಅವರ ರೋಡ್ ಶೋ ಕಾರ್ಯಕ್ರಮದ ವಿವರಗಳು ಹೀಗಿವೆ. 1. ಮಧ್ಯಾಹ್ನ 12.45 ವಿಮಾನ ನಿಲ್ದಾಣಕ್ಕೆ ಆಗಮನ 2. ಊಟ ವಿಶ್ರಾಂತಿ 2.15ರ ವರೆಗೆ. 3. ಮಧ್ಯಾಹ್ನ […]

ಬಿಜೆಪಿ ಅಭ್ಯರ್ಥಿ ಪರ ಮುಂಬೈ ಲೋಕಸಭಾ ಸದಸ್ಯ ಪ್ರಚಾರ

Monday, May 7th, 2018
gopal-shetty

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಇಂದು ಮುಂಬೈ ಲೋಕಸಭಾ ಸದಸ್ಯ ಗೋಪಾಲ ಶೆಟ್ಟಿ ಪ್ರಚಾರ ನಡೆಸಿದರು. ಕರಾವಳಿಯಿಂದ ಮುಂಬೈಗೆ ಹೋಗಿ ನೆಲೆಸಿ ಅಲ್ಲಿ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಗೋಪಾಲ ಶೆಟ್ಟಿ ಬಿಜೆಪಿ ಪರ ಮತಯಾಚನೆ ತವರು ಜಿಲ್ಲೆಗೆ ಆಗಮಿಸಿದ್ದಾರೆ. ಮಂಗಳೂರಿನ ಕಂಕನಾಡಿ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಮತಯಾಚನೆ ಮಾಡಿದರು. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ವೇಳೆ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ […]

‘ಹಿಂದುತ್ವ’ದ ಹೆಸರಲ್ಲಿ ಮತ ಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪತ್ನಿ

Saturday, April 28th, 2018
vedavyas-kamath

ಮಂಗಳೂರು: ಇಲ್ಲಿನ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪತ್ನಿ ಹಿಂದುತ್ವದ ಹೆಸರಲ್ಲಿ ಮತ ಯಾಚನೆ ಮಾಡಿದ್ದರೆನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ. ಈ ವೀಡಿಯೊದಲ್ಲಿ ಕೆಲವು ಮಹಿಳೆಯರು ಬಿಜೆಪಿಗೆ ಮತಯಾಚನೆ ಮಾಡಲು ಬಂದಿದ್ದಾರೆ. ಆ ಪೈಕಿ ಓರ್ವ ಮಹಿಳೆ ” ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಧರ್ಮಪತ್ನಿಯವರೇ ನಿಮ್ಮಲ್ಲಿ ಮತಯಾಚನೆಗೆ ಬಂದಿದ್ದಾರೆ, ಅವರು ನಿಮ್ಮಲ್ಲಿ ಮಾತನಾಡಲಿದ್ದಾರೆ” ಎಂದು ಹೇಳುತ್ತಾರೆ. ಬಳಿಕ ಮಾತನಾಡುವ […]

ಶ್ರೀನಿವಾಸ ಮಲ್ಯರ ಕೊಡುಗೆ ಸ್ಮರಣೀಯ : ವೇದವ್ಯಾಸ ಕಾಮತ್‌

Thursday, April 26th, 2018
vedavyas-kamath

ಮಂಗಳೂರು: ನವಮಂಗಳೂರಿನ ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯರ ಕೊಡುಗೆಗಳನ್ನು ಸ್ಮರಿಸಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಅವರು, ಮಲ್ಯರ ಮನೆಗೆ ಭೇಟಿ ನೀಡಿ ಕದ್ರಿಯಲ್ಲಿರುವ ಮಲ್ಯ ಪ್ರತಿಮೆಗೆ ಮಾಲಾರ್ಪಣೆಗೈದರು. ನವಮಂಗಳೂರು ಬಂದರು ಸ್ಥಾಪನೆ, ಮಂಗಳೂರು ವಿಮಾನ ನಿಲ್ದಾಣ ನಿರ್ಮಾಣ, ಎನ್‌.ಐ.ಟಿ.ಕೆ. ಸ್ಥಾಪನೆ, ಮಂಗಳೂರಿನಲ್ಲಿ ಆಕಾಶವಾಣಿ, ರಾಷ್ಟ್ರೀಯ ಹೆದ್ದಾರಿ 17, ರೈಲು ಮಾರ್ಗಗಳ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳಲ್ಲಿ ಮಲ್ಯರು ಮಹತ್ತರ ಪಾತ್ರ ವಹಿಸಿದ್ದರು. ಉಳ್ಳಾಲ ಮತ್ತು ಅದರಾಚೆಗಿನ ಪ್ರದೇಶಗಳು ಮಂಗಳೂರಿಗೆ ಸಂಪರ್ಕ ಸಾಧಿಸಲು […]

ಮಾ.3: ಅಂಕೋಲ, ಕುಶಾಲನಗರದಿಂದ ಜನ ಸುರಕ್ಷಾ ಯಾತ್ರೆ -ಮಂಗಳೂರು ಚಲೋ

Thursday, March 1st, 2018
ankola

ಮಂಗಳೂರು: ಬಿಜೆಪಿ ಕರ್ನಾಟಕದಿಂದ ಮಾರ್ಚ್ 3ರಿಂದ 6ರವರೆಗೆ ಏಕಕಾಲದಲ್ಲಿ ಅಂಕೋಲ ಮತ್ತು ಕುಶಾಲನಗರದಿಂದ ಜನ ಸುರಕ್ಷಾ ‘ ಮಂಗಳೂರು ಚಲೋ ’ ಹೆಸರಿನ ಪಾದಯಾತ್ರೆ ಆರಂಭಗೊಳ್ಳಲಿದೆ. ಮಾರ್ಚ್ 6ರಂದು ನಗರದ ನೆಹರು ಮೈದಾನದಲ್ಲಿ ಸಮಾವೇಶ ನಡೆಯಲಿದೆ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ , ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ರಾಜ್ಯ ಸರಕಾರದ ತುಷ್ಟೀಕರಣ ನೀತಿಯನ್ನು ವಿರೋಧಿಸಿ, ಹಿಂದೂ […]

ಮತದಾರರ ಪಟ್ಟಿಗೆ ಕೇರಳ ವಿದ್ಯಾರ್ಥಿಗಳ ಹೆಸರು ಸೇರಿಸಿರುವ ಬಗ್ಗೆ ದೂರು: ವೇದವ್ಯಾಸ ಕಾಮತ್

Wednesday, January 31st, 2018
kerala-student

ಮಂಗಳೂರು: ಮಹಾನಗರ ಪಾಲಿಕೆ ಚುನಾವಣಾ ಶಾಖೆಯಲ್ಲಿ ಅನಧಿಕೃತವಾಗಿ ಕೇರಳ ಮೂಲದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಇಲ್ಲಿನ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ ಕ್ರಮದ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದುಹಾಕಿರುವುದಕ್ಕೆ ಸೂಕ್ತ ಪುರಾವೆ ಒದಗಿಸದೆ ಇಲ್ಲಿ ಏಕಾಏಕಿ 3 ಸಾವಿರಕ್ಕೂ ಅಧಿಕ ಕೇರಳದ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು […]

ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಪ್ರಭು

Monday, January 22nd, 2018
suresh-prabhu

ಮಂಗಳೂರು: ಮಂಗಳೂರನ್ನು ಸ್ಟಾರ್ಟ್‌ಅಪ್‌, ಶಿಕ್ಷಣ, ಮೆಡಿಕಲ್‌ ಟೂರಿಸಂ ಹಬ್‌ ಆಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಹೇಳಿದರು. ನಗರದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಬದಲಾವಣೆಯ ಗಾಳಿ ಬೀಸಿದೆ. ಮುಂದಿನ 7 ವರ್ಷಗಳಲ್ಲಿ ದೇಶದ ಚಿತ್ರಣದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದರು. ಗೇರುಬೀಜ ಆಮದು ಸುಂಕದಲ್ಲಿ ಶೇ.5 ಕಡಿತಗೊಳಿಸುವ ಪ್ರಸ್ತಾವನೆ ಸದ್ಯ ಕೇಂದ್ರದ ಮುಂದಿದೆ. ಭಾರತೀಯ ಆರ್ಥಿಕತೆಯಲ್ಲಿ ಒಟ್ಟು ದೇಶೀಯ […]

ರಸ್ತೆ ಅಗೆದು ಜನರನ್ನು ವಂಚಿಸುತ್ತಿರುವ ಪಾಲಿಕೆ ಮತ್ತು ಶಾಸಕರು- ಡಿ ವೇದವ್ಯಾಸ ಕಾಮತ್

Wednesday, January 17th, 2018
strike

ಮಂಗಳೂರು: ತಿಂಗಳುಗಟ್ಟಲೆ ರಸ್ತೆ ಅಗೆದು ಕಾಮಗಾರಿ ಯಾವಾಗ ಮುಗಿಯುತ್ತೆ ಎನ್ನುವ ಸ್ಪಷ್ಟ ಕಲ್ಪನೆ ಇಲ್ಲದೆ ನೂರಾರು ಜನ ನಿತ್ಯ ಪ್ರಯಾಣಿಸುವ ರಸ್ತೆಯನ್ನು ಬಂದ್ ಮಾಡಿರುವ ಮೇಯರ್ ಹಾಗೂ ಶಾಸಕರಿಗೆ ಜನರ ಸಮಸ್ಯೆ ಅರ‍್ಥವಾಗುವುದಿಲ್ಲವೇ ಎಂದು ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ. ಅವರು ಬೋಳೂರು ವಾರ‍್ಡ್ 27ರಲ್ಲಿ ಸ್ಥಳೀಯ ನಾಗರಿಕರು ಮತ್ತು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ರಸ್ತೆ ಕಾಮಗಾರಿಗಳನ್ನು ನಿರ‍್ದೀಷ್ಟ ಸಮಯದ ಒಳಗೆ ಮುಗಿಸುವ ಪರಿಜ್ಞಾನ ಜನಪ್ರತಿನಿಧಿಗಳಿಗೆ ಇರಬೇಕು. ಆದರೆ […]