Blog Archive

ಚೆಸ್ ಪಂದ್ಯಾಟ: ಆಳ್ವಾಸ್‍ನ ದರ್ಶನ ರಾಷ್ಟ್ರಮಟ್ಟಕ್ಕೆ ಆಯ್ಕೆ

Saturday, September 29th, 2018
alwas-college

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ರಾಯಚೂರು ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ಆಳ್ವಾಸ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿದರ್ಶನ್ ಐದನೇ ಸ್ಥಾನ ಪಡೆದು ಆಂಧ್ರಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಆಳ್ವಾಸ್‌ನಲ್ಲಿ ತುಳು ರಾಮಾಯಣ

Wednesday, September 12th, 2018
alwas-clg

ಮೂಡಬಿದಿರಿ: “ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಕಾವ್ಯವು ಮಾಡುತ್ತದೆ. ಇದಕ್ಕೆ ಪೂರಕವಾಗಿ ಮೂಡಿ ಬಂದಿರುವ ಕಾವ್ಯವೇ ಕೇಶವ್ ಭಟ್ರು ರಚಿಸಿದ “ಮಂದಾರ ರಾಮಾಯಣ”. ಈ ಕಾವ್ಯ ವನ್ನು ವಿಮರ್ಶಾತ್ಮಕ ಚಿಂತನೆಗೆ ಒಳಪಡಿಸದೆ, ಇದರ ನಿಜವಾದ ತಿರುಳಾದ ಧರ್ಮಾರ್ಥಕಾಮ ಮೋಕ್ಷಗಳನ್ನು ಅರಿಯಬೇಕೆಂದು ಮೂಡಬಿದಿರೆ ಜೈನ ಮಠದ ಸ್ವಾಮೀಜಿ ಚಾರುಕೀರ್ತಿ ಪಂಡಿತಾಚಾರ್ಯವರ್ಯರು ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರವು ಆಯೋಜಿಸಿದ ‘ಮಂದಾರ ಮಂಥನ’ ತುಳು ಮಂದಾರ ರಾಮಾಯಣ ಕಾವ್ಯಾವಲೋಕನ ಕಾರ‍್ಯಕ್ರಮವನ್ನು […]

ರಾಜ್ಯ ಸೀನಿಯರ‍್ಸ್, ಜ್ಯೂನಿಯರ‍್ಸ್ ಅಥ್ಲೆಟಿಕ್ಸ್: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

Thursday, September 6th, 2018
Alvas

ಮೂಡುಬಿದಿರೆ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮೂರು ದಿನಗಳು ನಡೆದ ರಾಜ್ಯ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2018 ರಲ್ಲಿ ಮೂಡುಬಿದಿರೆಯ ಆಳ್ವಾಸ್ ಸ್ಪೋಟ್ಸ್ ಕ್ಲಬ್ 582 ಅಂಕ ಪಡೆದು ಸಮಗ್ರ ಪ್ರಶಸ್ತಿ ಹಾಗೂ ಬೆಂಗಳೂರಿನ ಡಿವೈಇಎಸ್ 177 ಅಂಕಗಳನ್ನು ಪಡೆದ ರನ್ನರ್‌ಅಪ್ ಪ್ರಶಸ್ತಿಪಡೆದುಕೊಂಡಿದೆ. ಕ್ರೀಡಾಕೂಟದ ಒಟ್ಟು 10 ವಿಭಾಗಗಳಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್ ‘ತಂಡ ಪ್ರಶಸ್ತಿ’ ಪಡೆದುಕೊಂಡಿದೆ. ಕೊನೆಯ ದಿನ ೭ ಹೊಸ ಕೂಟ ದಾಖಲೆ ಸಹಿತ ಮೂರು […]

ಆಳ್ವಾಸ್‌ನಲ್ಲಿ ಮಾಹಿತಿ ಕಾರ್ಯಾಗಾರ

Wednesday, September 5th, 2018
moodbidri

ಮೂಡಬಿದಿರೆ: ಇಂದಿನ ಸಮಾಜದಲ್ಲಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೋಷಕರಲ್ಲಿನ ಅರಿವಿನ ಕೊರತೆ ಈ ಸಮಸ್ಯೆಗೆ ಮೂಲ ಕಾರಣ ಎಂದು ಮಂಗಳೂರು ಇಂಚರಾ ಫೌಂಡೇಷನ್‌ನ ನಿರ್ದೇಶಕ ಪ್ರೀತಮ್ ರೊಡ್ರಿಗಸ್ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮನಶಾಸ್ತ್ರ ಮತ್ತು ಸಮಾಜಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮಕ್ಕಳ ಮೇಲಿನ ದೌರ್ಜನ್ಯ ಭಾರತದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು ಅದರಲ್ಲೂ ಸಂಬಂಧಿಕರೆ ದೌರ್ಜನ್ಯ ಎಸಗುತ್ತಿರುವುದು […]

ಆಳ್ವಾಸ್‌ನಲ್ಲಿ ನಾಯಕತ್ವ ತರಬೇತಿ ಶಿಬಿರ

Wednesday, September 5th, 2018
alwas-college

ಮೂಡಬಿದಿರೆ: “ಒಬ್ಬ ವ್ಯಕ್ತಿಯ ಧನಾತ್ಮಕ ಪರಿವರ್ತನೆಯಿಂದ ದೇಶವೇ ಪರಿವರ್ತನೆಯಾಗುತ್ತದೆ. ಹಾಗಾಗಿ ಅಂಥಹ ಬದಲಾವಣೆ ಈ ಕಾರ್ಯಕ್ರಮ ನಾಂದಿಯಾಗಬೇಕು” ಎಂದು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ|ಯೋಗೀಶ್‌ ಕೈರೋಡಿ ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಪದವಿ ಸಮಾಜಕಾರ್ಯ ವಿಭಾಗದ ‘ಸ್ಪಟಿಕ ಫೋರಂ’ನ ವತಿಯಿಂದ ಬುಧವಾರ ನಡೆದ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ನಮ್ಮೆಲ್ಲರಿಗೂ ಮಾದರಿ ಎಂಬ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ. ಅವರ ಸಾಧನೆ ನಮ್ಮನ್ನು ಪ್ರೇರಿತಗೊಳಿಸಿರುತ್ತದೆ. ಅವರೆಲ್ಲಾ ಇಂದು ಸಾಧಕ ಸ್ಥಾನದಲ್ಲಿ ಇರುತ್ತಾರಷ್ಟೇ. ಆದರೆ ಆ […]

ಉದ್ಯೋಗವೇ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಬರುವ ಕೌಶಲ್ಯ ಹೊಂದಿರಬೇಕು : ನಾಗಭೂಷಣ್

Thursday, August 23rd, 2018
Roster club

ಮಿಜಾರು : ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕಿಕೊಂಡು ಹೋಗಬಾರದು. ಉದ್ಯೋಗವೇ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಬರಬೇಕು. ಅಂತಹ ಕೌಶಲ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಅಲಹಬಾದ್ ಐಐಐಟಿ ನಿರ್ದೇಶಕರಾದ ಡಾ. ಪಿ. ನಾಗಭೂಷಣ್ ಹೇಳಿದರು. ಆಳ್ವಾಸ್ ಕಾಲೇಜಿನ ರೋಸ್ಟ್ರಮ್ ಸ್ಪೀಕರ್ ಕ್ಲಬ್‌ನ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಅನುಸಾರವಾಗಿ ಶಿಕ್ಷಣ ಪಡೆಯಬೇಕೇ ಹೊರತು, ತಂದೆ ತಾಯಿಯ ಇಚ್ಛೆಯಂತೆ ಅಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಪೋಷಕರ ಒತ್ತಾಯಕ್ಕೆ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್ ಅಭ್ಯಾಸ […]

ಆಳ್ವಾಸ್‌ನಲ್ಲಿ “ಕಾರ್ಗಿಲ್ ವಿಜಯ ದಿವಸ್”

Monday, July 30th, 2018
kargil-deves

ಮೂಡಬಿದೆರೆ: ಆಳ್ವಾಸ್ ಕಾಲೇಜಿನ ಎನ್‌ಸಿಸಿ ಭೂಸೇನೆಯು ತನ್ನ ವಾರ್ಷಿಕ ಕಾರ‍್ಯಕ್ರಮಗಳ ಉದ್ಘಾಟನೆ ಹಾಗೂ ಕಾರ್ಗಿಲ್ ವಿಜಯ ದಿನದ ಸಂಭ್ರಮಾಚರಣೆಯ ಅಂಗವಾಗಿ ಹಾನರಿಂಗ್ ಆವರ್ ನೇಶನ್ ಹೀರೋಸ್ ”ಕಾರ್ಗಿಲ್ ವಿಜಯ ದಿವಸ್” ಎಂಬ ಕಾರ‍್ಯಕ್ರಮವನ್ನು ಕಾಲೇಜಿನ ಕುವೆಂಪು ಸಭಾ ಭವನದಲ್ಲಿ, ಶನಿವಾರ ಹಮ್ಮಿಕೊಂಡಿತ್ತು. ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಮಾಜಿ ಸುಬೇದಾರ್ ಮೇಜರ್ ರಾಜೇಂದ್ರ ಜಿ .ಕೆ ಕಾರ್ಗಿಲ್ ಯುದ್ದದ ಸನ್ನಿವೇಶವನ್ನು ವಿವರಿಸಿದರು. ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಮಾಜಿ ವೀರ ಯೋಧ ಹವಾಲ್ದರ ಪ್ರಭಾಕರ ರೈ ಅವರನ್ನು ಗೌರವಿಸಲಾಯಿತು. […]

ಗರಿಷ್ಠ ವಿದ್ಯಾರ್ಥಿಗಳ ಉತ್ತೀರ್ಣ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದಾಖಲೆ

Wednesday, July 25th, 2018
alwas-rank

ಮೂಡುಬಿದಿರೆ: ಸಿಎ-ಸಿಪಿಟಿ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ 74 ಹಾಗೂ ಆಳ್ವಾಸ್ ಪದವಿ ಕಾಲೇಜಿನ 18 ವಿದ್ಯಾರ್ಥಿಗಳು ಸಹಿತ ಒಟ್ಟು 92 ಮಂದಿ ಗರಿಷ್ಠ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದಾಖಲೆ ನಿರ್ಮಿಸಿದೆ. ಆಳ್ವಾಸ್ ಪದವಿ ಕಾಲೇಜಿನ ಸುಷ್ಮಾ.ಎನ್, ಸುಮಂತ್, ಪವಿತ್ರಾ, ಭಾಗ್ಯಶ್ರೀ, ಲವಿಟಾ ಕ್ಯಾಸ್ತಲಿನೋ, ಸ್ವಾತಿ ಕಿಣಿ, ನಿಖಿಲ್, ನಿಶಾ ಎಸ್.ಶೆಟ್ಟಿ. ದಿನಿತಾ ಎಂ.ಎಚ್, ಬಿ.ನವೀನ್ ಪೈ, ಪ್ರಜ್ವಲ್ ಬಿ.ಶೆಟ್ಟಿ, ನಯನಾ ಜಿ., ವರ್ಷಿತಾ, ಚಂದನಾ ಸಿ., ದೀರಜ್ ಬಿ.ಎನ್, ಲಾವಣ್ಯ, ಪವಿತ್ರಾ.ಪಿ.ಎನ್, […]

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮ

Wednesday, July 25th, 2018
alwas-clg

ಮೂಡುಬಿದಿರೆ: ಪತ್ರಿಕೋದ್ಯಮದ ಅಸ್ಮಿತೆ ಮುದ್ರಣಾ ಮಾಧ್ಯಮದಲ್ಲಿ ಅಡಗಿದ್ದು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ಮುದ್ರಣ ಮಾಧ್ಯಮದಲ್ಲಿ ಪ್ರಾರಂಭಿಸಿದರೆ, ಮಾಧ್ಯಮ ಲೋಕದಲ್ಲಿ ಉನ್ನತ ಸ್ಥಾನವನ್ನು ಏರಬಹುದು ಎಂದು ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್ ತಿಳಿಸಿದರು. ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಇಂದು ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದಿಟ್ಟತನ ಹಾಗೂ ನೇರನುಡಿ ಪತ್ರಕರ್ತರಿಗೆ ಇರಬೇಕಾದ ಪ್ರಮುಖ ಗುಣಗಳಾಗಿದ್ದು, ಹೊಸತನದ ಆಳವಡಿಕೆ ಪ್ರತಿ ಹಂತದಲ್ಲೂ ಅಗತ್ಯವಿದೆ ಎಂದು ಹೇಳಿದರು. ನವಮಾಧ್ಯಮಗಳ ಅನ್ವೇಷಣೆಯಿಂದ […]

ಆಳ್ವಾಸ್ ರಾಷ್ಟ್ರೀಯ ಸೇವಾ ಯೋಜನೆ 2018-19ನೇ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Saturday, July 21st, 2018
alwasingurate

ಮೂಡಬಿದಿರೆ: ವಿದ್ಯಾರ್ಥಿ ಸಮುದಾಯ ಎನ್.ಎಸ್.ಎಸ್ ಹಾಗೂ ಎನ್ ಸಿ.ಸಿ ಸಂಘಟನೆಗಳಿಗೆ ಕೇವಲ ಮನೋರಂಜನೆ, ವಿಹಾರ, ವಿನೋದದ ಉದ್ದೇಶದಿಂದ ಸೇರದೆ, ಸೇವಾ ಮನೋಭಾವದಿಂದ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಾಗ ಸಿಗುವ ಸಂತೋಷ ಅನನ್ಯವಾದುದ್ದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ ಎಂ ಮೋಹನ್ ಆಳ್ವ ತಿಳಿಸಿದರು. ಅವರು ಶನಿವಾರ, ಕುವೆಂಪು ಸಭಾಭವನದಲ್ಲಿ, ಆಳ್ವಾಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2018-19ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ದೇವಸ್ಥಾನಗಳ ಸರ್ವೇಕ್ಷಣ ಕೃತಿ ಬಿಡುಗಡೆ ಸಮಾರಂಭ ಕಾರ‍್ಯಕ್ರಮದಲ್ಲಿ […]