Blog Archive

ಕಿಂಡಿ ಅಣೆಕಟ್ಟನ್ನು ಸ್ವಯಂ ಸ್ಫೂರ್ತಿಯಿಂದ ದುರಸ್ತಿ ಮಾಡಿ ನೀರು ಸಂಗ್ರಹಕ್ಕೆ ಅವಕಾಶ ಮಾಡಿದ ಯುವಕರ ಪಡೆ

Tuesday, December 6th, 2016
Uppinangadi

ಪುತ್ತೂರು: ಹಲವು ದಿನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಿಂಡಿ ಅಣೆಕಟ್ಟನ್ನು ಸ್ವಯಂ ಸ್ಫೂರ್ತಿಯಿಂದ ದುರಸ್ತಿ ಮಾಡಿ ನೀರು ಸಂಗ್ರಹಕ್ಕೆ ಯುವಕರ ಪಡೆ ಅವಕಾಶ ಮಾಡಿ ಆದರ್ಶ ಮೆರೆದಿರುವ ವಿಶಿಷ್ಠ ಕಾರ್ಯ ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆಯಿತು. ಉಪ್ಪಿನಂಗಡಿ ಗ್ರಾಮದ ಅರ್ತಿಲನಾಲಯದ ಗುಂಡಿ ಎಂಬಲ್ಲಿನ ಕಿಂಡಿ ಅಣೆಕಟ್ಟು ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಕಿಂಡಿ ಅಣೆಕಟ್ಟಿನ ಹಲಗೆಯೂ ಕಣ್ಮರೆಯಾಗಿತ್ತು. ಬಳಕೆಯಾಗದೇ ಉಳಿದಿದ್ದ ಕಿಂಡಿ ಅಣೆಕಟ್ಟಿಗೆ ಅಡಕೆ ಮರದ ಪಟ್ಟಿಯನ್ನು ಅಳವಡಿಸಿ, ಸಿಮೆಂಟ್ ಗೋಣಿಚೀಲಗಳಲ್ಲಿ ಮರಳು ತುಂಬಿಸಿ ಅಣೆಕಟ್ಟಿನ ಕಿಂಡಿಯನ್ನು ಯುವಕರ ತಂಡ ಬಂದ್ ಮಾಡಿ […]

ಉಪ್ಪಿನಂಗಡಿ : ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನ ಬಂಧನ

Wednesday, April 23rd, 2014
Annaih Gowda

ಉಪ್ಪಿನಂಗಡಿ : ಶನಿವಾರ ರಾತ್ರಿ ಕಳೆಂಜ ಗ್ರಾಮದ ಶಾಲೆತಡ್ಕ ನಿವಾಸಿ ಅಣ್ಣಯ್ಯ ಗೌಡ (48) ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಜಿಲ್ಲಾ ಅಪರಾಧಿ ಪತ್ತೆ ದಳ ಪೊಲೀಸರು, ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿರುವ ರುದ್ರೇಶ್ (29) ಹಾಗು ಕೊಲೆಗೀಡಾದ ಅಣ್ಣಯ್ಯ ಗೌಡರ ಪತ್ನಿ ಅಮಿತಾ (38) ಬಂಧಿತ ಆರೋಪಿಗಳು. ಅಣ್ಣಯ್ಯ ಗೌಡರ ಮನೆಗೆ ಶನಿವಾರ ರಾತ್ರಿ ಬಂದಿದ್ದ ರುದ್ರೇಶ್ ತನ್ನ ಕಾಮದಾಟಕ್ಕೆ ತಡೆಯಾಗಿದ್ದ ಗೌಡರನ್ನು ಕಬ್ಬಿಣದ […]

ಉಪ್ಪಿನಂಗಡಿ ಬಳಿಯ ಪೆರ್ನೆ ಅಗ್ನಿ ದುರಂತ ಮಡಿದವರಿಗೆ ತಲಾ 1ಲಕ್ಷ ರೂಪಾಯಿ ಪರಿಹಾರ ಘೋಷಣೆ

Wednesday, April 10th, 2013
DC Harsha Gupta

ಮಂಗಳೂರು : ಉಪ್ಪಿನಂಗಡಿ ಸಮೀಪದ ಪೆರ್ನೆ, ರಾಷ್ಟೀಯ ಹೆದ್ದಾರಿ 75ರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅನಿಲ ಟ್ಯಾಂಕರ್ ದುರಂತದಲ್ಲಿ ಮಡಿದವರಿಗೆ ತಲಾ 1ಲಕ್ಷ ರೂಪಾಯಿಗಳ ಪರಿಹಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಹರ್ಷ ಗುಪ್ತ ಅವರು ಘೋಷಿಸಿದ್ದಾರೆ. ಶೇ.50 ಕ್ಕಿಂತಲೂ ಹೆಚ್ಚು ಸುಟ್ಟು ಗಾಯಗೊಂಡ ವ್ಯಕ್ತಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಹಾಗೂ ಶೇ.50ಕ್ಕಿಂತಲೂ ಕಡಿಮೆ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ತಕ್ಷಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮತ್ತು ಸಂಬಂಧಪಟ್ಟ ಅನಿಲ ಸರಬರಾಜು […]

ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್

Tuesday, April 9th, 2013
Gas tanker accident near Uppinangady

ಮಂಗಳೂರು : ಸುಮಾರು 16 ಸಾವಿರ ಲೀಟರ್ ಅನಿಲವನ್ನು ತುಂಬಿಕೊಂಡ ಟ್ಯಾಂಕರ್ ವೊಂದು  ಮಂಗಳೂರಿನನಿಂದ ಬೆಂಗಳೂರಿಗೆ ಸಾಗುತ್ತಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಇಂದು ಬೆಳಗ್ಗೆ ೯ ಗಂಟೆಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಪೆರ್ನೆ ಬಳಿ ನಡೆದಿದೆ. ಟ್ಯಾಂಕರ್ ಉರುಳಿಬಿದ್ದ ಪರಿಣಾಮ ಅನಿಲ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿಕೊಂಡು ಟ್ಯಾಂಕರ್‌ನಲ್ಲಿದ್ದ ಚಾಲಕ ಹಾಗೂ ಕ್ಲಿನರ್ ಬೆಂಕಿಗಾಹುತಿಯಾಗಿದ್ದಾರೆ. ಮಾತ್ರವಲ್ಲದೆ ಬೆಂಕಿ ರಾಷ್ಟ್ರೀಯ ಹೆದ್ದಾರಿ 75 ರ ಸುಮಾರು 20 ಕ್ಕೂ ಹೆಚ್ಚಿನ ಮನೆಗಳಿಗೆ […]