Blog Archive

ಜಿಲ್ಲಾ ಪಂಚಾಯಿತಿಯ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಹಜರತ್‌ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ

Saturday, November 11th, 2017
tipu jayanti

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಜರತ್‌ ಟಿಪ್ಪು ಸುಲ್ತಾನ್ ಜಯಂತಿ ಉದ್ಘಾಟಿಸಿ ಬಿ.ರಮಾನಾಥ ರೈ ಅವರು ಮಾತನಾಡಿದರು. ‘ಟಿಪ್ಪು ತನ್ನ 15ನೇ ವಯಸ್ಸಿನಿಂದಲೇ ಬ್ರಿಟಿಷರ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ. ದೇಶದಿಂದ ಬ್ರಿಟಿಷರನ್ನು ಹೊರಹಾಕಲು ನಿರಂತರವಾಗಿ ಪ್ರಯ ತ್ನಿಸಿದ. ಆಗಿನ ಇತಿಹಾಸಕಾರರು ಯಾವ ಲೋಪವೂ ಇಲ್ಲದೇ ಇದನ್ನು ದಾಖಲು ಮಾಡಿದ್ದರು. ಆದರೆ, ಈಗ ಕೆಲವರು ತಮ್ಮ ಮೂಗಿನ ನೇರಕ್ಕೆ […]

ಮಂಗಳೂರು: 62ನೇ ಕನ್ನಡ ರಾಜ್ಯೋತ್ಸವ ಆಚರಣೆ

Wednesday, November 1st, 2017
Rajhotsava

ಮಂಗಳೂರು: ಮಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಧ್ವಜಾರೋಹಣದ ಮೂಲಕ ನೆರವೇರಿಸಿದರು ಹಾಗು ಸಂಭ್ರಮದಿಂದ 62ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾಡಾಳಿತ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ . ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಪಡೆ ಸೇರಿದಂತೆ ಎನ್.ಸಿ.ಸಿ ಪ್ಲಟೂನ್ ಗಳು ಹಾಗೂ ಶಾಲಾ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ನಡೆಯಿತು. ಕನ್ನಡ ಉಳಿಸುವ ಜವಾಬ್ದಾರಿ ನಮ್ಮದು ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ […]

ಎಫ್ಐಆರ್ ದಾಖಲಿಸಿದ ಮಾತ್ರಕ್ಕೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ: ರೈ

Tuesday, October 31st, 2017
ramanath rai

ಮಂಗಳೂರು: ಸಚಿವ ಜಾರ್ಜ್ ಅವರ ಮೇಲೆ ಸಿಬಿಐ ಎಫ್ಐಆರ್ ದಾಖಲಿಸಿದ ಮಾತ್ರಕ್ಕೆ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ. ಸಚಿವ ರೈ ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಹಲವಾರು ಸಚಿವರುಗಳ ಮೇಲೆ ಕ್ರಿಮಿನಲ್ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಸಚಿವ ಜಾರ್ಜ್ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ ಎಂದು ಅವರು […]

ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಬ್ಲಾಕ್ ಕಾಂಗ್ರೆಸ್ ದೂರು ಸಲ್ಲಿಕೆ

Friday, October 27th, 2017
congress

ಮಂಗಳೂರು: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಬಗ್ಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಅತ್ಯಂತ ಅವಹೇಳಕಾರಿಯಾದ ಮಾತನಾಡಿದ್ದಾರೆ ಎಂದು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಬ್ಲಾಕ್ ಕಾಂಗ್ರೆಸ್ ವತಿಯಿಂದ ನೀಡಿರುವ ದೂರಿನಲ್ಲಿ ರಮಾನಾಥ ರೈ ಅವರ ಘನತೆ, ಗೌರವ, ವ್ಯಕ್ತಿತ್ವವನ್ನು ಲೆಕ್ಕಿಸದೆ ಅವರ ಬಗ್ಗೆ ಕೀಳಭಿರುಚಿಯ ಶಬ್ದ ಬಳಕೆ ಮಾಡಿದ್ದಾರೆ ಎಂದಿದ್ದಾರೆ. ಸಂಜೀವ ಮಠಂದೂರು ಅವರು ಉದ್ದೇಶಪೂರ್ವಕವಾಗಿಯೇ ಸಚಿವರ ಬಗ್ಗೆ ಮಾನಹಾನಿಕರ ಮಾತುಗಳನ್ನು ಸಾರ್ವಜನಿಕವಾಗಿ ಆಡಿದ್ದಾರೆ. ಅಲ್ಲಾದೆ […]

ಶರತ್ ಮಡಿವಾಳ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ

Wednesday, July 12th, 2017
Ramanath Rai

ಮಂಗಳೂರು : ಶರತ್ ಮಡಿವಾಳ ಅವರ ಮನೆಗೆ ಒಂಬತ್ತು ದಿನಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು. ಸಜಿಪ ಗ್ರಾಮದಲ್ಲಿರುವ ಶರತ್ ಅವರ ಮನೆಗೆ ಭೇಟಿ ಬುಧವಾರ ಬೆಳಗ್ಗೆ ನೀಡಿದ ಸಚಿವರು ಶರತ್ ತಂದೆ ತನಿಯಪ್ಪರಿಗೆ ಸಾಂತ್ವಾನ ಹೇಳಿದರು. ಮಾಧ್ಯಮದವರನ್ನು ಹೊರಗಿಟ್ಟು ಶರತ್ ಅವರ ಮನೆಗೆ ತೆರಳಿದ ಸಚಿವರು ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದ್ದರೆನ್ನಲಾಗಿದೆ. ಸಚಿವರು ಭೇಟಿ ನೀಡದಿರುವ ಬಗ್ಗೆ ತನಿಯಪ್ಪ ಅವರು ನಿನ್ನೆ ಮಾಧ್ಯಮದೆದುರು ಬೇಸರ ವ್ಯಕ್ತಪಡಿಸಿದ್ದರು.  

ದೇವಾಲಯಗಳು ಧಾರ್ಮಿಕ ಭಾವನೆ ಅಧಿಕಗೊಳಿಸುವ ತಾಣ -ಬಿ.ರಮಾನಾಥ ರೈ

Saturday, July 8th, 2017
Kukke Subhramanya

ಸುಬ್ರಹ್ಮಣ್ಯ: ಭಕ್ತಾಧಿಗಳು ತಮ್ಮ ಅಭೀಷ್ಠತೆಗಳನ್ನು ಪೂರೈಸಲು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಪ್ರಯೋಜನಕಾರಿಯಾಗಿದೆ. ದೇವಾಲಯಗಳು ಸಮಾಜಕ್ಕೆ ಸುeನವನ್ನು ಬೋಧಿಸುವ ಕೇಂದ್ರವಾಗಬೇಕು. ಸಮಾಜಕ್ಕೆ ಧಾರ್ಮಿಕ ಭಾವನೆಯ ಕಾಳಜಿಯನ್ನು ಅಧಿಕಗೊಳಿಸುವ ತಾಣವಾಗಬೇಕು. ದೇವಳದ ಆರ್ಥಿಕ ಸಂಪತ್ತನ್ನು ಕೇವಲ ವೈಧಿಕ ವಿದಿವಿಧಾನಗಳಿಗೆ ಸೀಮಿತಗೊಳಿಸದೆ ಇವುಗಳನ್ನು ಸಾಮಾಜಿಕ ಕೆಲಸಕಾರ್ಯಗಳಿಗೆ ವಿನಿಯೋಗಿಸಬೇಕು. ಇದರಿಂದ ಸಮಾಜದ ಅಭಿವೃದ್ಧಿಯು ಉಂಟಾಗುತ್ತದೆ. ರಾಜ್ಯದ ನಂಬರ್ ವನ್ ಆದಾಯ ತರುವ ದೇವಳದಲ್ಲಿ ನೆರವೇರುತ್ತಿರುವ ಮಾಸ್ಟರ್ ಪ್ಲಾನ್ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳನ್ನು […]

ಮೋಟರ್ ಕಾಯ್ದೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

Saturday, February 4th, 2017
Congress-Protest

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಮೋಟರ್ ಕಾಯ್ದೆ ವಿರೋಧಿಸಿ ನಗರದ ಆರ್‌ಟಿಓ ಕಚೇರಿ ಮುಂಭಾಗದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಮೋಟಾರ್ ಕಾಯ್ದೆಯಿಂದ ಜನಸಾಮನ್ಯರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಮ್ ಕೋಡಿಜಾಲ್ ಅವರು ಮೋಟರ್ ಕಾಯ್ದೆಯಿಂದ ಚಾಲಕರ ಲೈಸೆನ್ಸ್ ರದ್ದಾದಲ್ಲಿ 5 ವರ್ಷಗಳವರೆಗೆ ಪರವಾನಗಿ ರದ್ದಾಗುತ್ತದೆ. ಇದರಿಂದ ಅವರ ಕುಟುಂಬದ […]

ಜಾಗೃತಿ ವಾಹನ ಕಾರ್ಯಾಚರಣೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ

Saturday, January 7th, 2017
Ramanatha-rai

ಮಂಗಳೂರು: ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ಜನ ಜಾಗೃತಿ ಕೂಡಾ ಪರಿಣಾಮಕಾರಿ ಕ್ರಮ ಎಂದರಿತ ಮಂಗಳೂರು ಪೊಲೀಸ್ ಕಮಿಷನರೇಟ್, ಸಿಮೀತ ವ್ಯಾಪ್ತಿಯಲ್ಲಿ ಜಾಗೃತಿ ವಾಹನ ಕಾರ್ಯಾಚರಣೆಯನ್ನು ಆಯೋಜಿಸಿದೆ. ಜಾಗೃತಿ ವಾಹನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಚಾಲನೆ ನೀಡಿದರು. ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ ಮಾತನಾಡಿ, ಅಪರಾಧಗಳನ್ನು ತಡೆಯುವಲ್ಲಿ ಜನತೆಯ ಪಾತ್ರವೂ ಮಹತ್ತರವಾಗಿದೆ. ಯಾರೋ ಫೋನ್ ಮಾಡಿ ಬ್ಯಾಂಕ್ ಖಾತೆಯ ವಿವರ ಕೇಳಿದಾಕ್ಷಣ ಕೊಟ್ಟು ಬಿಡುವುದಲ್ಲ. ನೇರ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಬೇಕು. ನಕಲಿ ಕರೆಗಳ […]

ಶಿರಾಡಿ ಅಭಿವೃದ್ಧಿ ಕಾಮಗಾರಿಗಾಗಿ ಸಂಪೂರ್ಣ ರಸ್ತೆ ಬಂದ್ ಮಾಡುವುದಕ್ಕೆ ವಿರೋಧಿಸಿದ ಸಚಿವ ರೈ

Wednesday, November 2nd, 2016
Shiradi-ghat

ಮಂಗಳೂರು: ಶಿರಾಡಿ ಘಾಟ್‌ ರಸ್ತೆಯ ಎರಡನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಪೂರ್ಣ ರಸ್ತೆ ಬಂದ್ ಮಾಡಲಾಗಿದೆ. ಅಲ್ಲದೆ, ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿರಾಡಿ ಅಭಿವೃದ್ಧಿ ಕಾಮಗಾರಿಗಾಗಿ ಸಂಪೂರ್ಣ ರಸ್ತೆ ಬಂದ್ ಮಾಡುವುದಕ್ಕೆ ಪ್ರಬಲವಾಗಿ ವಿರೋಧಿಸಿದ ಸಚಿವ ರೈ, ಸಂಪೂರ್ಣವಾಗಿ ರಸ್ತೆ […]

ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಆನೆ ನೀಡುವುದಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿಕೆ

Tuesday, August 23rd, 2016
Udupi-Shree-krishna-mata

ಉಡುಪಿ: ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಆನೆ ನೀಡುವುದಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು. ರಾಜಾಂಗಣದಲ್ಲಿ ರವಿವಾರ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣಮಠಕ್ಕೆ ಹಿಂದೆ ವೀರಪ್ಪ ಮೊಯಿಲಿ ಆನೆ ನೀಡಿದ್ದರು. ಆನೆ ಸುಭದ್ರೆಯನ್ನು ಅರಣ್ಯ ಇಲಾಖೆಗೆ ಚಿಕಿತ್ಸೆಗೆ ನೀಡಿದ್ದು ತಿಳಿದಿದೆ. ಅಷ್ಟಮಿ ಉತ್ಸವಕ್ಕೆ ಅಧಿಕಾರಿಧಿಗಳಲ್ಲಿ ಮಾತನಾಡಿ ಆನೆ ನೀಡುತ್ತೇನೆ ಎಂದರು. ಉಭಯ ಜಿಲ್ಲೆಗಳಲ್ಲಿ ಕೃಷ್ಣಾಷ್ಟಮಿ ಉತ್ಸವ, ಮೊಸರುಕುಡಿಕೆ ಸಂಭ್ರಮ ಜರುಗುತ್ತಿದೆ. ನಾನು ಚಿಕ್ಕವನಿದ್ದಾಗ ಅಷ್ಟಮಿ, ಚೌತಿಯ ಮರ್ಯಾದೆಧಿಗೆಂದು ಜನರು ಬರುತ್ತಿದ್ದರು. ಇದು […]