Blog Archive

ಈ ಬಾರಿಯ ಚುನಾವಣೆಯಲ್ಲಿ ರೈ ಟಾರ್ಗೆಟ್‌: ಯಶಸ್ವಿಯಾಗುತ್ತಾ ಬಿಜೆಪಿ ತಂತ್ರ!?

Wednesday, February 14th, 2018
ramanath-rai

ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಮಟ್ಟಿಗೆ ಬಿಜೆಪಿಗೆ ಸಚಿವ ರಮಾನಾಥ ರೈಯವರೇ ಟಾರ್ಗೆಟ್‌ ಎನ್ನಲಾಗುತ್ತಿದೆ. ಕರಾವಳಿ ಜಿಲ್ಲೆಯ ಕಾಂಗ್ರೆಸ್‌ನ ಹೈಕಮಾಂಡ್ ಆಗಿರುವ ಸಚಿವ ರೈ ಅದ್ಯಾಕೋ ಗೊತ್ತಿಲ್ಲ ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಬಿಜೆಪಿ ಗೆಲುವಿನ ತಂತ್ರ ಹೂಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಜಿಲ್ಲೆ ಮಾತ್ರವಲ್ಲ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗುತ್ತಿವೆ. ಅಧಿಕಾರಿಗಳ ವರ್ಗಾವಣೆ, ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳು […]

ಬಂಟ್ವಾಳ ಕ್ಷೇತ್ರ : ರಮಾನಾಥ ರೈ v/s ಬಿಜೆಪಿ ಕದನ!

Wednesday, January 31st, 2018
ramanath-rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ಬಂಟ್ವಾಳ. ಕ್ಷೇತ್ರದ ಶಾಸಕರು ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ ರಮಾನಾಥ ರೈ. ಹಲವಾರು ವಿವಾದಗಳಿಂದ ಸುದ್ದಿ ಮಾಡಿದ್ದ ಸಚಿವ ರಮಾನಾಥ ರೈ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಪ್ರಮುಖ ಟಾರ್ಗೆಟ್. ಕಲ್ಲಡ್ಕ ಪ್ರಭಾಕರ ಭಟ್ ರ ಶಾಲೆಗೆ ರಾಜ್ಯ ಸರ್ಕಾರದ […]

ಶಾಸಕ ಸುನಿಲ್‌ ಕುಮಾರ್‌ ವಿರುದ್ಧ ದೂರು

Wednesday, January 24th, 2018
karkala

ಬಂಟ್ವಾಳ: ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತ ಪ್ರಶಾಂತ ಕುಲಾಲ್‌ ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಿಜೆಪಿ ನಡಿಗೆ ಗ್ರಾಮದ ಕಡೆಗೆ ಪಾದಯಾತ್ರೆಯ 9ನೇ ದಿನದ ಸಭಾ ಕಾರ್ಯಕ್ರಮ ಸೋಮವಾರ ರಾತ್ರಿ ಕಲ್ಲಡ್ಕದಲ್ಲಿ ನಡೆದಿದ್ದು, ಈ ಸಂದರ್ಭ ಸುನಿಲ್‌ಕುಮಾರ್‌ ಜನರಲ್ಲಿ ಧಾರ್ಮಿಕ ಭಾವನೆ ಕೆರಳುವಂತೆ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಚುನಾವಣೆ ರಾಜೇಶ್‌ ನಾೖಕ್‌, ರಮಾನಾಥ ರೈ ನಡುವಿನ ಚುನಾವಣೆಯಲ್ಲ. ಅಲ್ಲಾ ಮತ್ತು ರಾಮ ನಡುವಿನ ಚುನಾವಣೆ. ನೀವು ಅಲ್ಲನನ್ನು ಪ್ರೀತಿಸುವರಿಗೆ […]

ಈ ಚುನಾವಣೆಯೇ ರಮಾನಾಥ ರೈ ಕೊನೆಯ ಬಯಲಾಟ ಎಂದ ಹರಿಕೃಷ್ಣ ಬಂಟ್ವಾಳ

Wednesday, January 17th, 2018
harikrishna

ಮಂಗಳೂರು : ಈ ಬಾರಿಯ ಚುನಾವಣೆ ಸಚಿವ ರಮಾನಾಥ ರೈ ಅವರ ಕೊನೆಯ ಬಯಲಾಟ. ರಮಾನಾಥ ರೈ ಮಹಿಷಾಸುರನಾದರೆ, ಜನರು ದೇವಿಯ ರೂಪದಲ್ಲಿ ಅವರನ್ನು ಮುಗಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಿಲ್ಲವ ಸಮುದಾಯದವರಿಗೆ ಟಿಕೆಟ್ ನೀಡಲಿ ಎಂದು ಸಚಿವ ರಮಾನಾಥ ರೈ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಬಿಲ್ಲವರ ಬಗ್ಗೆ ಮಾತನಾಡುವ ನೈತಿಕತೆ ರಮಾನಾಥ ರೈಗಿಲ್ಲ ಎಂದು ಕಿಡಿ ಕಾರಿದರು. […]

ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ರನ್ನು ಭೇಟಿಯಾದ ಸಿಎಂ

Monday, January 8th, 2018
hospital

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿವಾರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದರು. ನಗರದ ಕೊಡಿಯಲ್ ಬೈಲ್ ನಲ್ಲಿರುವ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರನ್ನು ಮುಖ್ಯಮಂತ್ರಿ ಭೇಟಿಯಾಗಿ, ಆರೋಗ್ಯ ವಿಚಾರಿಸಿ ನಂತರ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು. ಈ ಸಂದರ್ಭ […]

ದೀಪಕ್ ರಾವ್ ಕೊಲೆ ಪ್ರಕರಣ: ರಮಾನಾಥ ರೈ-ಶೋಭಾ ಕರಂದ್ಲಾಜೆ ಜಟಾಪಟಿ

Thursday, January 4th, 2018
ramanath

ಮಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೃತ ದಿಪಕ್ ರಾವ್ ಅವರ ಶವಯಾತ್ರೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ಮುಂಚೆಯೂ ಮೆರವಣಿಗೆಗಳು ನಡೆದ ಸಂದರ್ಭದಲ್ಲಿ ಘರ್ಷಣೆಗಳಾಗಿರುವ ಉದಾಹರಣೆಗಳು ಜಿಲ್ಲೆಯಲ್ಲಿ ಇವೆ ಹಾಗಾಗಿ ಪೊಲೀಸರು ಶವ ಯಾತ್ರೆಗೆ ಅನುಮತಿ ನಿರಾಕರಿಸುತ್ತಿದ್ದಾರೆ ಎಂದರು. ದೀಪಕ್ ಮೃತ ದೇಹ ಗೌಪ್ಯವಾಗಿ ಮನೆಗೆ ಶಿಫ್ಟ್, ಶವಯಾತ್ರೆಗೆ ಬಿಗಿಪಟ್ಟು ಮಾಧ್ಯಮದ ಪೋನ್ ಇನ್ ನಲ್ಲಿ ಎದುರುಬದುರಾದ ಸಚಿವ ರಮಾನಾಥ […]

‘ಪೂಜಾರಿಯವರದ್ದು ನೋವಿನ ಕಣ್ಣೀರು, ರೈ ಅವರದ್ದು ಮೊಸಳೆ ಕಣ್ಣೀರು’

Tuesday, January 2nd, 2018
harikrishna

ಮಂಗಳೂರು: ಪೂಜಾರಿಯವರದ್ದು ನೋವಿನ ಕಣ್ಣೀರು, ರಮಾನಾಥ ರೈಯವರದ್ದು ಚುನಾವಣಾ ಸೋಲಿನ ಭೀತಿಯ ಮೊಸಳೆ ಕಣ್ಣೀರು ಎಂದು ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಸಮಾರಂಭವೊಂದರಲ್ಲಿ ಅವರು ಪೂಜಾರಿಯವರನ್ನು ಕೀಳು ಪದ ಬಳಸಿ ನಿಂದಿಸಿರುವುದನ್ನು ಕಣ್ಣಾರೆ ಕಂಡವರು, ಕಿವಿಯಾರೆ ಕೇಳಿದವರೂ ಇದ್ದಾರೆ. ಆದರೆ, ತಾನು ಪೂಜಾರಿಯವರನ್ನು ಅವಾಚ್ಯವಾಗಿ ನಿಂದಿಸಿಲ್ಲ ಎಂದು ಸಚಿವ ರೈ ಈಗ ಹೇಳುತ್ತಿದ್ದಾರೆ. ಸುಳ್ಳು ಹೇಳುವುದು ಸಚಿವರ ಹುಟ್ಟುಗುಣ ಎಂದು ದೂರಿದರು. ಕಳೆದ ವರ್ಷ ಫೆ. 7ರಂದು ಸುರತ್ಕಲ್ ಬಂಟರ […]

ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೂ ಸಿದ್ಧ: ರಮಾನಾಥ ರೈ

Monday, January 1st, 2018
ramanath

ಮಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರಿಗೆ ಅವಹೇಳನ ಮಾಡಲಾಗಿದೆ ಎಂಬ ವಿಚಾರದ ಬಗ್ಗೆ ಅರಣ್ಯ ಸಚಿವ ಬಿ. ರಮಾನಾಥ ರೈ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಮಾನಾಥ್‌ ರೈ, ನಾನು ಜನಾರ್ದನ ಪೂಜಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಲ್ಲ. ರಾಜಕೀಯ ಕಾರಣಕ್ಕೆ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಈ ಬಗ್ಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೂ ಸಹ ಸಿದ್ಧ ಎಂದಿದ್ದಾರೆ. ಈ ಬಗ್ಗೆ ಪೂಜಾರಿಯವರಿಗೂ ವೈಯಕ್ತಿಕವಾಗಿ ಹೇಳಿದ್ದೇನೆ. ಅವರು ಹಿರಿಯರು, ಅವರ ಮೇಲೆ ನನಗೆ ಅಪಾರ ಗೌರವ […]

ನನ್ನ ಗೆಲುವಿಗೆ ಮುಸ್ಲಿಂ ಸಮುದಾಯ ಕಾರಣ: ರಮಾನಾಥ ರೈ

Friday, December 29th, 2017
Ramanath-rai

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಬಂಟ್ವಾಳ ಕ್ಷೇತ್ರದಲ್ಲಿ ತಾನು 6 ಬಾರಿ ಗೆದ್ದು ಬರಲು ಮುಸ್ಲಿಂ ಸಮುದಾಯ ಪ್ರಮುಖ ಪಾತ್ರ ವಹಿಸಿದ್ದಾರೆ. ಜನಪ್ರತಿನಿಧಿಗಳಿಗೆ ಮಗ್ಗುಲ ಮುಳ್ಳಾಗಲಿದಿಯೇ ಎತ್ತಿನ ಹೊಳೆ? ಮುಸ್ಲಿಂ‌ ಸಮುದಾಯದ ಜನರ ಋಣ ಜನ್ಮ ಜನ್ಮಾಂತರಗಳಿಗೂ ತೀರಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರ ದ ಹಿಂದೂ ಸಮುದಾಯದ‌ ಜನರ‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ […]

ಕರಾವಳಿ ಉತ್ಸವ ಉದ್ಘಾಟನೆ ಮಾಡಲಿದ್ದಾರೆ ನಟ ಪ್ರಕಾಶ್ ರೈ

Wednesday, December 20th, 2017
prakash-rai

ಮಂಗಳೂರು: ಡಿಸೆಂಬರ್ 22ರಿಂದ 31ರವರೆಗೆ ಮಂಗಳೂರಿನಲ್ಲಿ ನಡೆಯುವ ‘ಕರಾವಳಿ ಉತ್ಸವ 2017’ ಅನ್ನು ಬಹುಭಾಷಾ ನಟ‌ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ. ಪ್ರಕಾಶ್ ರೈ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ‘ಕರಾವಳಿ ಉತ್ಸವ ಯಶಸ್ವಿಯಾಗಿ ನಡೆಯುವಂತೆ ಸಕಲ ತಯಾರಿಗಳೂ ನಡೆಯುತ್ತಿವೆ’ ಎಂದರು. ಕರಾವಳಿ ಉತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ಕರಾವಳಿ ಉತ್ಸವ ಮೈದಾನ ಮತ್ತು ಕದ್ರಿ ಉದ್ಯಾನದ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. […]