Blog Archive

ನಾಳೆ ಪಂಪ್‌ವೆಲ್ ಮೇಲ್ಸೇತುವೆ ಅಣಕು ಉದ್ಘಾಟನೆ : ಕಾಂಗ್ರೆಸ್

Tuesday, December 31st, 2019
pumpwell

ಮಂಗಳೂರು : ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಪಂಪ್‌ವೆಲ್ ಮೇಲ್ಸೇತುವೆ (ಫ್ಲೈಓವರ್) ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಇರುವ ಹಿನ್ನೆಲೆಯಲ್ಲಿ ಜನವರಿ 1ರಂದು ಸಂಜೆ ಇದರ ಅಣಕು ಉದ್ಘಾಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ. ಫ್ಲೈಓವರ್ ಕಾಮಗಾರಿ ಪ್ರಗತಿಯ ಬಗ್ಗೆ ಪರಿಶೀಲಿಸಲು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ದ.ಕ. ಜಿಲ್ಲಾ ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಯಲ್ಲಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಜನವರಿ ಪ್ರಥಮ ವಾರದಲ್ಲಿ ಫ್ಲೈಓವರ್ ಲೋಕಾರ್ಪಣೆಯಾಗುತ್ತದೆ ಎಂದು […]

ಕಾಂಗ್ರೆಸ್ ಅಮಾಯಕ ಮುಸ್ಲಿಂ ರಿಗೆ ಚಿತಾವಣೆ ಕೊಟ್ಟು ಗಲಭೆ ಮಾಡುತ್ತಿದೆ : ಪ್ರತಾಪ್ ಸಿಂಹ

Saturday, December 21st, 2019
pratapa-simha

ಮೈಸೂರು : ಕೇಂದ್ರ ಸರ್ಕಾರ ಪಾಕ್, ಅಪ್ಘಾನ್, ಬಾಂಗ್ಲಾದೇಶದಲ್ಲಿ ತುಳಿತಕ್ಕೊಳಗಾದ ಅಲ್ಪ ಸಂಖ್ಯಾತರಿಗೆ ಇಲ್ಲಿನ ನಾಗರಿಕತ್ವ ನೀಡುವ ಸಲುವಾಗಿ ಸಿಎಎ ಜಾರಿಗೆ ತಂದಿದೆಯೇ ಹೊರತು ಇಲ್ಲಿರುವ ಮುಸ್ಲಿಂ ಬಂಧುಗಳನ್ನು ನೀವು ಭಾರತೀಯರೇ ಹೌದಾ ಅಲ್ಲವಾ ಎಂದು ಸಾಬೀತು ಪಡಿಸಲು, ಅಥವಾ ಇಲ್ಲಿಂದ ಹೊರದಬ್ಬಲು ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟ ಪಡಿಸಿದ್ದಾರೆ. ಜಲದರ್ಶನಿ ಅತಿಥಿ ಗೃಹದ ಎದುರು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ತುಳಿತಕ್ಕೊಳಗಾದವರಿಗೆ ನಾವು ಆಶ್ರಯ ನೀಡುತ್ತಿದ್ದೇವೆ. ಕಾಂಗ್ರೆಸ್ ನವರು ಅದನ್ನು […]

ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ಗಂಭೀರ ಆರೋಪ

Monday, December 16th, 2019
CT-Ravi

ತುಮಕೂರು : “ಕಾಂಗ್ರೆಸ್ನವರು ತಾಲಿಬಾನಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಪೌರತ್ವ ಕಾಯ್ದೆ ವಿಚಾರವಾಗಿ ಒಂದು ಪಿತೂರಿ ನಡೆಯುತ್ತಿದೆ. ಆ ಪಿತೂರಿಯಲ್ಲಿ ತಾಲಿಬಾನಿಗಳು, ಕಾಂಗ್ರೆಸ್ಸಿಗರು, ಕಮ್ಯೂನಿಸ್ಟರು ಒಟ್ಟಾಗಿ ಪಿತೂರಿ ಭಾಗ ಆಗಿರೋದು ದುರದೃಷ್ಟಕರ,” ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಾಕಿಸ್ತಾನದಿಂದ ಆಫ್ಘಾನಿಸ್ತಾನದಿಂದ ಧಾರ್ಮಿಕ ಕಾರಣಕ್ಕೆ, ಭಯೋತ್ಪಾದಕ ಕಾರಣಕ್ಕೆ ಬಂದವರು ನಿರಾಶ್ರಿತರು. ಅವರಿಗಿದ್ದಿದ್ದು ಮೂರೇ ದಾರಿ ಸಾವು, ಮತಾಂತರ, ಪೂರ್ವಜನರನ್ನ ತೊರೆಯುವುದು. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಮತೀಯ ಕಾರಣಕ್ಕೆ ಬಂದವರು ನಿರಾಶ್ರಿತರು. […]

ನಾನು ಮೊದಲೇ ಈ ಫಲಿತಾಂಶ ಹೇಳಿದ್ದೆ, ಅವರು ಗಮನ ಕೊಡಲಿಲ್ಲ : ಜರ್ನಾದನ ಪೂಜಾರಿ

Monday, December 9th, 2019
poojary

ಮಂಗಳೂರು : ಜನರ ಅಭಿಪ್ರಾಯಗಳಿಗೆ ಬೆಲೆ ನೀಡಬೇಕು, ಕಾಂಗ್ರೆಸ್ ನ ಕೆಲವು ನಾಯಕರು ದುರಹಂಕಾರ ಬಿಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಜರ್ನಾದನ ಪೂಜಾರಿ ಹೇಳಿದ್ದಾರೆ. ರಾಜ್ಯದ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ  ಅವರು, ನಾನು ಮೊದಲೇ ಹೇಳಿದ್ದೆ ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ರಾಜ್ಯದ ಉಪ ಚುನಾವಣೆಯಲ್ಲಿ ಸೋಲಾಗುತ್ತದೆ ಎಂದು. ನನ್ನ ಭವಿಷ್ಯ ನಿಜವಾಗಿದೆ ಎಂದು ಅವರು ಹೇಳಿದರು. ಮತ್ತೆ ಗೆಲುವು ಸಾಧಿಸಬೇಕಾದರೆ ದುರಹಂಕಾರವನ್ನು ಕೆಲವು ನಾಯಕರು ಬಿಡಬೇಕು ಎಂದು ಸಲಹೆ ನೀಡಿದರು . ಪಕ್ಷವನ್ನು ಸರಿಪಡಿಸಿ ತಪ್ಪುಗಳನ್ನು ತಿದ್ದಿಕೊಂಡು […]

ಉಪಚುನಾವಣೆ : ಬಿಜೆಪಿ-12 ಸ್ಥಾನ, ಕಾಂಗ್ರೆಸ್ -2, ಪಕ್ಷೇತರ-1, ಜೆಡಿಎಸ್-0

Monday, December 9th, 2019
yediyurappa

ಬೆಂಗಳೂರು: ರಾಜ್ಯದಲ್ಲಿ ನಡೆದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ಬಿಜೆಪಿ 12 ಸ್ಥಾನಗಳನ್ನು ಪಡೆದು, ಜೆಡಿಎಸ್ ಸೂನ್ಯ,  ಪಕ್ಷೇತರ-1  ಹಾಗೂ ಕಾಂಗ್ರೆಸ್ ಕೇವಲ 2 ಸ್ಥಾನಗಳ ಮೂಲಕ ಭಾರೀ ಹಿನ್ನಡೆಯನ್ನು ಪಡೆದಿದೆ. ಬಿಜೆಪಿ ಸರಕಾರ ರಚನೆಗೆ ಕಾರಣವಾದ  ಅನರ್ಹ ಶಾಸಕರ ಭವಿಷ್ಯವನ್ನು ನಿರ್ಧರಿಸಬಲ್ಲ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರ ಸೇಫ್ ಆಗಿದೆ. ಹಿರೇಕೂರಿನಲ್ಲಿ ಬಿಸಿ ಪಾಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಹೆ.ಬನ್ನಿಕೋಡ್ ವಿರುದ್ಧ ಮತಗಳ ಅಂತರದಲ್ಲಿ […]

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಬೀಸುತ್ತಿದೆ 15 ಕ್ಷೇತ್ರದಲ್ಲಿ ಗೆಲ್ಲುತ್ತೇವೆ : ಮಾಜಿ ಸಂಸದ ಜಿ.ಎಸ್. ಉಗ್ರಪ್ಪ

Monday, December 2nd, 2019
Ugrappa

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಗೋಚರಿಸುತ್ತಿದ್ದು, ಬಿಜೆಪಿ ಹಾಗೂ ಅನರ್ಹ ಶಾಸಕರ ವಿರುದ್ಧವಾದಂತಹ ಗಾಳಿ 15 ಕ್ಷೇತ್ರಗಳಲ್ಲಿ ಬೀಸುತ್ತಿದೆ ಎಂದು ಮಾಜಿ ಸಂಸದ ಜಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲಾ 15 ಕ್ಷೇತ್ರದಲ್ಲಿ ಗೆಲ್ಲುವ ಸೂಚನೆ ಸಿಗುತ್ತಿದೆ. ಇದರಿಂದಲೇ ಬಿಜೆಪಿ ನಾಯಕರು ಹಾಗೂ ಅನರ್ಹ ಶಾಸಕರು ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ಹತಾಶೆಯಿಂದ ಮಾತನಾಡಲು ಆರಂಭಿಸಿದ್ದಾರೆ. ಇವರೆಲ್ಲರೂ ಸದ್ಯ ತಿರುಕನ ಕನಸನ್ನು ಕಾಣುತ್ತಿದ್ದಾರೆ. ಜನರ ದಾರಿ […]

ದ.ಕ. ಜಿ.ಪಂ. ಸ್ಥಾಯೀ ಸಮಿತಿ ಚುನಾವಣೆ – ಬಿಜೆಪಿಗೆ 32, ಕಾಂಗ್ರೆಸ್‌ಗೆ 1

Wednesday, November 20th, 2019
zp-election

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಐದು ಸ್ಥಾಯೀ ಸಮಿತಿಗಳ ಒಟ್ಟು 33 ಸದಸ್ಯ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ವಿಪಕ್ಷ ಕಾಂಗ್ರೆಸ್‌ ಒಂದು ಸ್ಥಾನ ಗಳಿಸಿತು. ಉಳಿದೆಲ್ಲ ಸ್ಥಾನಗಳು ಬಿಜೆಪಿ ಪಾಲಾಗಿವೆ. ಸಾಮಾನ್ಯವಾಗಿ ದ.ಕ. ಜಿ.ಪಂ.ನಲ್ಲಿ ಸ್ಥಾಯೀ ಸಮಿತಿಗಳ ಸದಸ್ಯರ ಆಯ್ಕೆ ಜಿ.ಪಂ. ಸದಸ್ಯರು, ಮುಖಂಡರ ನಡುವಿನ ಪರಸ್ಪರ ಮಾತುಕತೆ, ಹೊಂದಾಣಿಕೆಯ ಮೂಲಕ ನಡೆಯುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಿರ್ದಿಷ್ಟ ಸಂಖ್ಯೆಯ ಸ್ಥಾನಗಳಿಗೆ ಪಟ್ಟು ಹಿಡಿದ ಕಾರಣ ಚುನಾವಣೆ ನಡೆಯಿತು. ಜಿ.ಪಂ.ನಲ್ಲಿ […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ

Thursday, November 14th, 2019
MCC-Election

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಾಲಿಕೆಯಲ್ಲಿ ಈ ಬಾರಿ ಭಾರತೀಯ ಜನತಾಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. 60 ವಾರ್ಡ್ ಗಳಲ್ಲಿ 44ರಲ್ಲಿ ಬಿಜೆಪಿ ಗೆಲುವು ತನ್ನದಾಗಿಸಿದ್ದು, ಕಾಂಗ್ರೆಸ್ 14 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದೆ. ಇದರಿಂದ ಕಳೆದ ಬಾರಿ 35 ಸ್ಥಾನ ಪಡೆದು ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಗೆ ಇದರಿಂದ ತೀವ್ರ ಮುಖಭಂಗವಾಗಿದೆ. ಎಸ್ ಡಿಪಿಐ 2 ವಾರ್ಡ್ ಗಳಲ್ಲಿ ಜಯಗಳಿಸಿದೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತವರಲ್ಲಿ […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 18 ಗೆಲುವು, ಕಾಂಗ್ರೆಸ್ ಗೆ 7ರಲ್ಲಿ ಗೆಲುವು

Thursday, November 14th, 2019
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಪ್ರಕಟವಾಗಿರುವ ವಾರ್ಡ್ ಗಳಲ್ಲಿ ಬಿಜೆಪಿ 18, ಕಾಂಗ್ರೆಸ್ ಗೆ 7ರಲ್ಲಿ ಗೆಲುವು ಸಾಧಿಸಿದೆ. ವಾರ್ಡ್ ನಂ.3 ಕಾಟಿಪಳ್ಳ ಪೂರ್ವ: 2486 ಮತಗಳನ್ನು ಗಳಿಸಿರುವ ಬಿಜೆಪಿಯ ಲೋಕೇಶ್ ಬೊಳ್ಳಾಜೆ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಬಶೀರ್ ಅಹ್ಮದ್ ಗೆ‌ ಸೋಲುಂಡಿದ್ದಾರೆ. ವಾರ್ಡ್ ನಂ.57 ಹೊಯ್ಗೆ ಬಝಾರ್: ಬಿಜೆಪಿಯ ರೇವತಿ ಶ್ಯಾಂಸುಂದರ್ 2116 ಮತಗಳನ್ನು ಪಡೆದು ಜಯಸಿದ್ದಾರೆ. ವಾರ್ಡ್ ನಂ.6 ಇಡ್ಯಾ ಪೂರ್ವ: ಬಿಜೆಪಿಯ ಸರಿತಾ ಶಶಿಧರ್ […]

ಉಪಚುನಾವಣೆಯಲ್ಲಿ ಕಾಂಗ್ರೆಸ್​​​ಗೆ ಇಡುಗಂಟೂ ಸಿಗುವುದಿಲ್ಲ : ಸಚಿವ ಡಿ.ವಿ.ಸದಾನಂದಗೌಡ

Monday, November 11th, 2019
sadnanda-gowda

ಮಂಗಳೂರು : ಅನರ್ಹ ಶಾಸಕರ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಕೆಲವು ಕ್ಷೇತ್ರಗಳಲ್ಲಿ ಇಡುಗಂಟು ಸಿಗುವುದಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನಡೆದ ವಿದ್ಯಮಾನಗಳಿಂದ ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಶಿಷ್ಯರೇ ಅವರ ಮೇಲೆ ಸಿಟ್ಟಾಗಿ ದೂರ ಹೋಗಿದ್ದಾರೆ. ಒತ್ತಡ ಏರಿ ಪ್ರತಿಪಕ್ಷದ ನಾಯಕ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಎಂಬ ಕಂದಕ ಸೃಷ್ಟಿಯಾಗಿದೆ. ಈ ಕಂದಕ […]