Blog Archive

ಬೆಂಗಳೂರಲ್ಲಿ ಹಳಿ ದಾಟುವಾಗ ರೈಲಿಗೆ ಸಿಲುಕಿ ಓರ್ವ ಸಾವು

Saturday, October 6th, 2018
railway-track

ಬೆಂಗಳೂರು: ರೈಲಿಗೆ ಸಿಲುಕಿ ವ್ಯಕ್ತಿವೋರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಶ್ಯಾಂ ಪುರ ರೈಲ್ವೆ ಕ್ರಾಸಿಂಗ್ ಬಳಿ ನಡೆದಿದೆ. ಕೆಜಿ ಹಳ್ಳಿ ಬಳಿಯ ಶ್ಯಾಂ ಪುರ ರೈಲ್ವೆ ಕ್ರಾಸಿಂಗ್ನಲ್ಲಿ ಹಳಿ ದಾಟುವಾಗ ರೈಲಿಗೆ ಸಿಲುಕಿ ಓರ್ವ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಟ್ರಾಫಿಕ್ ವಾರ್ಡನ್ಗಳು ಆಂಬ್ಯುಲೆನ್ಸ್ ಮೂಲಕ ಶವವನ್ನು ಆಸ್ಪತ್ರೆಗೆ ಶವ ರವಾನಿಸಿದ್ದಾರೆ.

ಬೆಂಗಳೂರಲ್ಲಿ ಬೆಳಕಿಗೆ ಬಂತು ಮತ್ತೊಂದು ಮಾರಣಾಂತಿಕ ಹಲ್ಲೆ ಪ್ರಕರಣ

Friday, October 5th, 2018
attacked

ಬೆಂಗಳೂರು: ಈ ಹಿಂದೆ ನಲ್ಪಾಡ್ ಗ್ಯಾಂಗ್ನಿಂದ ನಡೆದಿದ್ದ ಹಲ್ಲೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಿವೃತ್ತ ಅಧಿಕಾರಿವೋರ್ವರ ಮಗ ಸುಮನ್ ಎಂಬಾತ ಯುವರಾಜ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ನಡೆದು 24 ದಿನಗಳಾಗಿದ್ದರೂ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎನ್ನಲಾಗ್ತಿದೆ. ಸೆ.8 ರಂದು ಯುವರಾಜ್ ಹೋಟೆಲ್ ಗೆ ಊಟಕ್ಕೆ ತೆರಳಿದ್ದ ವೇಳೆ ಕೈ ತೊಳೆದುಕೊಂಡು ಹೊರಡುವಾಗ ಯುವರಾಜ್ ಕೈ […]

ಬೆಂಗಳೂರು ನಗರ ಪೊಲೀಸರಿಂದ ಶಾಲಾ ಮಕ್ಕಳಿಗೆ ಮಾದಕ ವಸ್ತುಗಳ ಜಾಗೃತಿ

Thursday, October 4th, 2018
police-safe

ಬೆಂಗಳೂರು: ನಗರ ಪೊಲೀಸರು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಜ್ಞಾನಭಾರತಿ ಠಾಣಾ ಪೊಲೀಸರು ಕಾಲೇಜು ಹಾಗೂ ಶಾಲಾ ಮಕ್ಕಳಿಗೆ ಕೆಲ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮುಂದುವರೆಸಿದ್ದಾರೆ. ಮಾದಕ ವಸ್ತುಗಳನ್ನು ಕಾಲೇಜಿಗೆ ತಂದರೆ ಹೇಗೆ ಅದನ್ನು ತಡೆಗಟ್ಟಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಹಾಗೂ ಜ್ಞಾನಭಾರತಿ ಇನ್ಸ್ಪೆಕ್ಟರ್ ಗಿರಿರಾಜ್ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.

ಹಲ್ಲೆ ಹಾಗೂ ಅಪಹರಣ ಪ್ರಕರಣ: ದುನಿಯಾ ವಿಜಿಗೆ ಇಂದಾದರೂ ಸಿಗುತ್ತಾ ಜಾಮೀನು?

Saturday, September 29th, 2018
duniya-vijay

ಬೆಂಗಳೂರು: ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ಜೈಲು ಸೇರಿರುವ ದುನಿಯಾ ವಿಜಯ್ ಜಾಮೀನು‌ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸೆಷನ್ ಕೋರ್ಟ್ ಮುಂದೆ ಬರಲಿದ್ದು, ಇಂದಾದರೂ ವಿಜಯ್ಗೆ ಜಾಮೀನು ಸಿಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಪ್ರಕರಣ ಸಂಬಂಧ 5ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ ವಿಜಯ್ ಪರ ವಕೀಲರು ಸೆಷನ್ ಕೋರ್ಟ್ ಮೊರೆ ಹೋಗಿದ್ದರು. ಲ್ಯಾಬ್ ರಿಪೋರ್ಟ್ ಹಾಗೂ ಮಾರುತಿಗೌಡ ಹೆಲ್ತ್ ರಿಪೋರ್ಟ್ ಬರದ ಹಿನ್ನೆಲೆ ಹಾಗೂ ಜಾಮೀನು ಅರ್ಜಿಗೆ ಆಕ್ಷೇಪಣೆ […]

ಪೊಲೀಸ್​​ ಇಲಾಖೆ ವತಿಯಿಂದ ಮಾದಕ ದ್ರವ್ಯ ವ್ಯಸನ ವಿರೋಧಿ ಅಭಿಯಾನ

Friday, September 28th, 2018
parameshwar

ಬೆಂಗಳೂರು: ಡ್ರಗ್ಸ್ ಚಟಕ್ಕೆ ಬಿದ್ದ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜೀವಕ್ಕೆ ಮಾರಕವಾಗಿರುವ ಡ್ರಗ್ಸ್ ತ್ಯಜಿಸುವಂತೆ ಯುವ ಪಿಳಿಗೆಯ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆ ವೈಟ್ ಫೀಲ್ಡ್ ವಿಭಾಗದ ವತಿಯಿಂದ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಡ್ರಗ್ಸ್ ತಡೆಗೆ ಮುಂದಾಗಿದ್ದಾರೆ. ಹೀಗೆ ಒಂದೆಡೆ ಸೇ ನೋ ಟು ಡ್ರಗ್ಸ್ ಎಂಬ ಬಿತ್ತಿ ಪತ್ರ ಹಿಡುದು ಜನರು ಕೂಗುತ್ತಿದ್ದರು. ಮತ್ತೊಂದೆಡೆ ಡ್ರಗ್ಸ್ ನಿರ್ಮೂಲನೆ ಮಾಡುವುದಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ […]

ಔಷಧ ಅಂಗಡಿ ಮುಷ್ಕರಕ್ಕೆ ಬೆಂಗಳೂರಲ್ಲಿ ಮಿಶ್ರ ಪ್ರತಿಕ್ರಿಯೆ

Friday, September 28th, 2018
medical-shop

ಬೆಂಗಳೂರು: ದೇಶಾದ್ಯಂತ ಕರೆ ನೀಡಲಾಗಿರುವ ಔಷಧ ಅಂಗಡಿಗಳ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಔಷಧ ಅಂಗಡಿಗಳು ಮುಚ್ಚುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದರೆ, ಮತ್ತೆ ಕೆಲ ಔಷಧ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿ ರೋಗಿಗಳಿಗೆ ನೆರವಾಗಿವೆ. ಮುಷ್ಕರದಿಂದ ಕೆಲವೆಡೆ ಬಿಸಿ ತಟ್ಟಿದೆ. ಸಣ್ಣಪುಟ್ಟ ಕ್ಲಿನಿಕ್ಗಳ ಪಕ್ಕದಲ್ಲಿರುವ ಔಷಧ ಅಂಗಡಿಗಳು ಕೆಲವೆಡೆ ತೆರೆಯದೇ ಮುಷ್ಕರಕ್ಕೆ ಬೆಂಬಲ ನೀಡಿದ್ದು ರೋಗಿಗಳು ಔಷಧಕ್ಕೆ ಪರದಾಡಬೇಕಾಯಿತು. ಆದರೆ ಸಮೀಪದಲ್ಲೇ ಇರುವ ಇತರ ಕೆಲ ಮೆಡಿಕಲ್ ಶಾಪ್ಗಳು ಎಂದಿನಂತೆ ತೆರೆದಿದ್ದು, […]

ಜಿಮ್ ಟ್ರೈನರ್ ಮೇಲೆ ಹಲ್ಲೆ ಪ್ರಕರಣ: ದುನಿಯಾ ವಿಜಯ್ ಅಂಡ್​ ಟೀಂ​​ ಸೆಷನ್ಸ್ ಕೋರ್ಟ್​ ಮೊರೆ

Thursday, September 27th, 2018
vijay-duniya

ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ದುನಿಯಾ ವಿಜಯ್ ಅಂಡ್ ಟೀಂ ಸೆಷನ್ಸ್ ಕೋರ್ಟ್ ಮೊರೆ ಹೋಗಿದೆ. ದುನಿಯಾ ವಿಜಿ ಪರ ವಕೀಲ ಶಿವಕುಮಾರು ಇವತ್ತು ಸೆಷನ್ಸ್ ಕೊರ್ಟ್ಗೆ ನಾಲ್ವರ ಪರ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ‌ಎಸಿಎಂಎಂ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾ ಹಿನ್ನೆಲೆ ಇವತ್ತು ಸೆಷನ್ಸ್ ಕೋರ್ಟ್ ಮೊರೆ ಹೋಗಿ ದುನಿಯಾ ವಿಜಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ದುನಿಯಾ ವಿಜಯ್, ಪ್ರಸಾದ್, ಮಣಿ ಪರವಾಗಿ ಅರ್ಜಿ ಸಲ್ಲಿಕೆಯಾಗಿದೆ.‌‌ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು […]

ಬೆಂಗಳೂರಲ್ಲಿ ಮಳೆ ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮ: ಡಾ. ಜಿ.ಪರಮೇಶ್ವರ್

Tuesday, September 25th, 2018
parameshwar

ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ‌ನಿರೀಕ್ಷೆಗೂ‌ ಮೀರಿ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಸುಮಾರು 300 ಮರಗಳು ಧರೆಗುರುಳಿದ್ದು, ಶೀಘ್ರವೇ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ.‌ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ವಲಯವಾರು ತಂಡಗಳು‌ ಕೆಲಸ‌ ಮಾಡುತ್ತಿವೆ ಎಂದು ಹೇಳಿದರು. ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್ ಆದೇಶ‌ ನೀಡಿದ್ದು, ಈ […]

ವಿಜಯ್ ಕ್ಷಮೆ ಕೇಳಿದ್ರೂ ಕೂಡ ನಾನು ಯಾವತ್ತೂ ರಾಜಿಯಾಗಲ್ಲ: ಪಾನಿಪುರಿ ಕಿಟ್ಟಿ

Monday, September 24th, 2018
kitty-2

ಬೆಂಗಳೂರು: ನಾನು ಆದಷ್ಟು ಪ್ರಯತ್ನ ಮಾಡ್ತಿದ್ದೀನಿ. ಕಾನೂನು ಮೊರೆ ಹಾಗೂ ಫಿಲ್ಮ್ ಚೇಂಬರ್ ಮೊರೆಯೂ ಹೋಗಿದ್ದೀನಿ. ಎಷ್ಟು ಸಾಧ್ಯವೋ ಅಷ್ಟು ಹೋರಾಡ್ತೀನಿ. ವಿಜಯ್ ಕ್ಷಮೆ ಕೇಳಿದ್ರೂ ಕೂಡ ನಾನು ಯಾವತ್ತೂ ರಾಜಿಯಾಗಲ್ಲ ಎಂದು ಪಾನಿಪುರಿ ಕಿಟ್ಟಿ ಹೇಳಿದ್ದಾರೆ. ಈ ಪ್ರಕರಣ ಕುರಿತು ಫಿಲ್ಮ್ ಚೇಂಬರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ ಹಾಗೂ ವಿಜಿ ನಡುವೆ ಯಾವುದೇ ದ್ವೇಷ ಇಲ್ಲ. ಆದರೆ ನನ್ನ ಅಣ್ಣನ ಮಗ ಮಾರುತಿ ಗೌಡ ಜೊತೆಯಲ್ಲಿ ನಡೆದಿರುವ ಘಟನೆಯಿಂದ ಸಿಟ್ಟು […]

ಅಪಾರ್ಟ್​ಮೆಂಟ್​ನಿಂದ ಜಿಗಿದು ವೈದ್ಯನ ಪತ್ನಿ ಸಾವು: ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​

Friday, September 21st, 2018
doctor

ಬೆಂಗಳೂರು: ಮಂತ್ರಿ ಅಲ್ವೈನ್ ಅಪಾರ್ಟ್ಮೆಂಟ್ನಿಂದ ಜಿಗಿದು ವೈದ್ಯನ ಪತ್ನಿ ಮೃತಪಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತ ಸೋನಾಲ್ ಅಗರವಾಲ್ ಬಳಿ ಎಂಟು ನಕಲಿ ಕೀ ಬಂಚ್ ಪತ್ತೆಯಾಗಿರುವ ಅಂಶ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ಅಪಾರ್ಟ್ಮೆಂಟ್ ನ 505 ನೇ ಫ್ಲ್ಯಾಟ್ನಲ್ಲಿ ವಾಸವಿದ್ದ ಸೋನಾಲ್ ಅಕ್ಕಪಕ್ಕದಲ್ಲಿದ್ದ ಫ್ಲ್ಯಾಟ್ ಗಳ ನಕಲಿ ಕೀ ಮಾಡಿಸಿಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸೆ.16ರಂದು ನಡೆದಿದ್ದ ಘಟನೆ ಸೋನಾಲ್‌ ಹಾಗೂ ಅವರ ಪತಿ ವೈದ್ಯ ಅವಿನಾಶ್ ವಾಸವಿದ್ದ […]