Blog Archive

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಸಭೆ

Saturday, August 5th, 2017
Khader

ಮಂಗಳೂರು : ಐದು ವರ್ಷಗಳಲ್ಲಿ ರಾಜ್ಯದಲ್ಲಿ ದಕ್ಷ , ಭ್ರಷ್ಟಚಾರರಹಿತ ಹಾಗೂ ಜನಪರ ಆಡಳಿತ ನೀಡಿ ಜನಮೆಚ್ಚುಗೆಗೆ ಪಾತ್ರವಾಗಿರುವ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೇರಿಸುವಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ಜಿಲ್ಲಾ ಘಟಕದ ಸಭೆಯನ್ನುದ್ದೇಶಿಸಿ ಮಾತನಾಡಿದ ಖಾದರ್, ಕಾಂಗ್ರೆಸ್ ಸರಕಾರದ ಮೇಲೆ ಕಳಂಕ ತರಲು ಪ್ರತಿಪಕ್ಷ ಬಿಜೆಪಿ ಪ್ರಯತ್ನಿಸುತ್ತಿದೆ,  ವಿಪಕ್ಷಗಳ ಅಪಪ್ರಚಾರಗಳನ್ನು ವಿಫಲಗೊಳಿಸುವ ಕಾರ್ಯವನ್ನು […]

ನೂತನ ಪೊಲೀಸ್ ಆಯುಕ್ತರ ನೇಮಕಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರ ತೀವ್ರ ಅಸಮಾಧಾನ

Friday, May 26th, 2017
satheesh Kumar ips

ಮಂಗಳೂರು :  ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್ . ಸತೀಶ್ ಕುಮಾರ್ ಅವರ ನೇಮಕಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರ ತೀವ್ರ ಅಸಮಾಧಾನ  ಪಡಿಸಿದ್ದು  ಸತೀಶ್ ಕುಮಾರ್ ಅಧಿಕಾರ ಸ್ವೀಕರಿಸುವುದು ತಡವಾಗುವ ಅಥವಾ ರದ್ದಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸತೀಶ್ ಕುಮಾರ್ ಅವರ ನೇಮಕದ ಕುರಿತು ಮಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಇದು ಅವರ ಪಾಲಿಗೆ ಅಚ್ಚರಿಯ ಆದೇಶ ಎಂದು ಹೇಳಲಾಗಿದೆ.  ಆಹಾರ ಸಚಿವ ಯು. ಟಿ. ಖಾದರ್ […]

ಅಸೈಗೋಳಿ ಕೇಂದ್ರ ಮೈದಾನದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ

Monday, February 6th, 2017
queen Veerarani Abbakka

ಮಂಗಳೂರು: ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ವೀರರಾಣಿ ಅಬ್ಬಕ್ಕ ಸ್ಮರಣೆಯ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು. ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಅಸೈಗೋಳಿ ಕೇಂದ್ರ ಮೈದಾನದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ-2017ನ್ನು ಉದ್ಘಾಟಿಸಿ ಮಾತನಾಡಿದರು. ಏಕಲವ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪೂಜಾರಿ ಮಾತನಾಡಿ, ರಾಣಿ ಅಬ್ಬಕ್ಕಳ ಸ್ಮರಣೆಯಂತಹ ಕಾರ್ಯಕ್ರಮದಲ್ಲಿ ಪ್ರತಿಭೆಗಳನ್ನು ಪ್ರದರ್ಶಿಸುವ ಅವಕಾಶ ಶ್ಲಾಘನೀಯ. ಸೋಲು, ಗೆಲುವು ಚಿಂತಿಸದೆ ನೈಜ […]

ಎರಡು ತಿಂಗಳಿಗೊಮ್ಮೆ ಪಡಿತರ ವಿತರಣೆಯ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ: ಯು.ಟಿ.ಖಾದರ್

Thursday, January 26th, 2017
U-T-Khadar

ಮಂಗಳೂರು: ಎರಡು ತಿಂಗಳಿಗೊಮ್ಮೆ ಪಡಿತರ ವಿತರಣೆಯ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ರಮದ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಎರಡು ತಿಂಗಳು ಅಥವಾ ಮೂರು ತಿಂಗಳ ಪಡಿತರವನ್ನು ಒಮ್ಮೆಲೆ ವಿತರಿಸಿದರೆ ಗ್ರಾಹಕರು ಪದೇ ಪದೆ ಪಡಿತರ ಅಂಗಡಿಗೆ ಬರುವುದು ತಪ್ಪುತ್ತದೆ. ಈ ಬಗ್ಗೆ ಜನತೆಯ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತಿದೆ. […]

ಕೇರಳ ರಾಜ್ಯದ ತಳಂಗೆರೆಯಲ್ಲಿ ನಡೆದ ಫ್ರೆಂಡ್ಲಿ ಕ್ರಿಕೆಟ್ ಮ್ಯಾಚ್ ಆಡಿ ಮ್ಯಾನ್ ಆಫ್‌‌ ದಿ ಮ್ಯಾಚ್‌‌ ಪಡೆದ ಯು.ಟಿ.ಖಾದರ್

Friday, December 30th, 2016
U-T-khader

ಮಂಗಳೂರು: ಸಚಿವ ಯು.ಟಿ.ಖಾದರ್ ಕೇರಳ ರಾಜ್ಯದ ತಳಂಗೆರೆಯಲ್ಲಿ ನಡೆದ ಫ್ರೆಂಡ್ಲಿ ಕ್ರಿಕೆಟ್ ಮ್ಯಾಚ್ ಆಡಿ ಮ್ಯಾನ್ ಆಫ್‌‌ ದಿ ಮ್ಯಾಚ್‌‌ ಪಡೆದ ಅಪರೂಪದ ಪ್ರಸಂಗ ನಡೆಯಿತು. ಕೇರಳದ ಕಾಸರಗೋಡು ಜಿಲ್ಲೆಗೆ ಖಾಸಗಿ ಭೇಟಿ ನೀಡಿದ್ದ ಸಚಿವ ಯು.ಟಿ.ಖಾದರ್ ತಮ್ಮ ಆಪ್ತರೊಬ್ಬರು ನಡೆಸುತ್ತಿದ್ದ ತಳಂಗೆರೆ ಕ್ರಿಕೆಟ್ ಪಂದ್ಯಾಟ ನೋಡಲು ತೆರಳಿದ್ದರು. ಈ ಸಂದರ್ಭದಲ್ಲಿ ಕ್ರಿಕೆಟ್ ಆಡುವಂತೆ ಒತ್ತಾಯಪಡಿಸಿದ ಕ್ರಿಕೆಟ್ ಅಭಿಮಾನಿಗಳ ಒತ್ತಡಕ್ಕೆ ಮಣಿದ ಸಚಿವ ಖಾದರ್ ನೀಲಿ ಜೆರ್ಸಿ ಧರಿಸಿ ಕ್ರಿಕೆಟ್ ಆಟವಾಡಿದರು. ಎರಡು ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ […]

ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ: ಯು. ಟಿ. ಖಾದರ್

Monday, November 14th, 2016
U-t-khadar

ಮಂಗಳೂರು: ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿತಕರ ಘಟನೆಯಲ್ಲಿ ನನ್ನ ಪಾತ್ರವಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದ್ದಾರೆ. ಆರೋಪದಲ್ಲಿ ಹುರುಳಿಲ್ಲ. ಅಹಿತಕರ ಘಟನೆ ಯಾರೇ ಮಾಡಿದರೂ ಖಂಡನೀಯ. ಶಾಂತಿಯನ್ನು ಬಯಸುವ ಯಾವ ನಾಗರಿಕನೂ ಇಂತಹ […]

ಸುಪ್ರೀಂ ಆದೇಶದ ಪಾಲನೆ ಅನಿವಾರ್ಯ: ಸಚಿವ ರಮೇಶ್‌ ಕುಮಾರ

Friday, September 16th, 2016
ಸುಪ್ರೀಂ ಆದೇಶದ ಪಾಲನೆ ಅನಿವಾರ್ಯ: ಸಚಿವ ರಮೇಶ್‌ ಕುಮಾರ

ಮಂಗಳೂರು: ಕಾವೇರಿ ನೀರು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಅನಿವಾರ್ಯವಾದ್ದರಿಂದ ನಮ್ಮ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ಸಚಿವ ರಮೇಶ್‌ ಕುಮಾರ ಸಮರ್ಥನೆ ನೀಡಿದ್ದಾರೆ. ಇಂದು ನಗರದಲ್ಲಿರುವ ಸಚಿವ ಯು.ಟಿ ಖಾದರ್ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅಂತಿಮ. ಹಾಗಿರುವಾಗ ಸರ್ವೋಚ್ಛ ನ್ಯಾಯಾಲಯದ ತೀರ್ಪು ಪಾಲಿಸಬೇಕು. ಇನ್ನು ಇದು ಮಧ್ಯಂತರ ತೀರ್ಪು ಆಗಿರುವುದರಿಂದ ಸೆ.20ರಂದು ಮತ್ತೆ ವಿಚಾರಣೆ ನಡೆಯಲಿದೆ. ಆಗ […]

ಮಕ್ಕಳ ಶಿಕ್ಷಣ ಭವಿಷ್ಯದಲ್ಲಿ ಪೋಷಕರ ಪಾತ್ರ ಹಿರಿದು : ಯು.ಟಿ.ಖಾದರ್

Monday, August 1st, 2016
Udyavara-School

ಮಂಜೇಶ್ವರ: ಮಕ್ಕಳ ಶಿಕ್ಷಣ ಉನ್ನತಿಯಲ್ಲಿ ಪೋಷಕರು ಬಹಳಷ್ಟು ಗಮನ ಹರಿಸಬೇಕು, ಪ್ರಾಥಾಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣದಲ್ಲಿ ಪೋಷಕರು ಸೂಕ್ಷ್ಮ ನಿಲುವು ಹೊಂದಿರಬೇಕು, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಿಗಿಂತಲೂ ರಕ್ಷಕರ ಪಾತ್ರ ಹಿರಿದಾದುದೆಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಅವರು ಇಲ್ಲಿನ ಉದ್ಯಾವರ ಸರಕಾರಿ ಪ್ರೌಢಶಾಲೆಯಲ್ಲಿ 30 ಲಕ್ಷ.ರೂ.ಅನುದಾನದಲ್ಲಿ ರಾಜ್ಯಸಭಾ ಸದಸ್ಯೆಡಾ. ಬಿ.ಜಯಶ್ರಿ ಅನುದಾನದಿಂದ ನಿರ್ಮಿಸಲಾದ ಮಲ್ಟಿಮೀಡಿಯಾ ತರಗತಿ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ನಮ್ಮ ದೇಶದ ಶಿಕ್ಷಣ […]

ರಾಜ್ಯಾದ್ಯಂತ ಜು.8ರಿಂದ ಕೆಜಿ ತೊಗರಿ ಬೇಳೆ 130 ರೂ.ಗೆ ಲಭ್ಯವಾಗಲಿದೆ: ಖಾದರ್

Thursday, July 7th, 2016
Khadar

ಮಂಗಳೂರು: ರಾಜ್ಯಾದ್ಯಂತ ಜು.8ರಿಂದ ಕೆಜಿ ತೊಗರಿ ಬೇಳೆ 130 ರೂ.ಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ತೊಗರಿ ದಾಸ್ತಾನಿಗೂ ಮಿತಿ ನಿಗದಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಬಗೆಯ ತೊಗರಿಗೂ ಮುಂದಿನ ಮೂರು ತಿಂಗಳವರೆಗೆ ಇದೇ ದರ ಅನ್ವಯವಾಗಲಿದೆ. ವ್ಯಾಪಾರಿಗಳಿಗೂ ಸ್ವಲ್ಪ ಲಾಭ ದೊರೆಯಲಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ ಜು. 8ರಂದು ಸಭೆ ನಡೆಸಿ ನಂತರ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದರು. […]

ವಿದ್ಯಾರ್ಥಿಗಳು ಬಲಿಷ್ಟರಾದಾಗ ಮಾತ್ರ ರಾಷ್ಟ್ರ ಅಭಿವೃದ್ದಿಯಾಗಲು ಸಾಧ್ಯ- ಯು.ಟಿ.ಖಾದರ್

Sunday, November 22nd, 2015
Alvas sports

ಮೂಡಬಿದ್ರೆಃ ಇಂದಿನ ಯುವಕರು, ವಿದ್ಯಾರ್ಥಿಗಳು ಬಲಿಷ್ಟರಾದಾಗ ಮಾತ್ರ ರಾಷ್ಟ್ರ ಅಭಿವೃದ್ದಿಯಾಗಲು ಸಾಧ್ಯ. ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ವಿದ್ಯೆಯ ಜೊತೆಗೆ ಕ್ರೀಡೆ ಬಹು ಮುಖ್ಯ. ವಿದ್ಯಾರ್ಥಿಗಳ ಕ್ರೀಡಾ ಹಿತಸಕ್ತಿಯ ಮೇಲೆ ಕಾಳಾಜಿ ವಹಿಸಿ ಸರ್ಕಾರ ವಿವಿಧ ಯೋಜನೆಗಳನ್ನು ಕಲ್ಪಿಸುತ್ತಿದೆ.ವಿದ್ಯೆ,ಕ್ರೀಡೆಯ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಾಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯದ ಆರೊಗ್ಯ ಸಚಿವರಾದ ಯು.ಟಿ.ಖಾದರ್ ಹೇಳಿದರು. ಇಲ್ಲಿನ ಸ್ವರಾಜ ಮೈದಾನದಲ್ಲಿ ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದೈಹಿಕ ಶಿಕ್ಷಣ ಶಿಕ್ಷಕರ […]