Blog Archive

ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಕಾರ್ಯ

Monday, February 3rd, 2020
dharmastala

ಉಜಿರೆ : ಆರುನೂರು ಮಂದಿ ಸಕ್ರಿಯ ಸ್ವಯಂ ಸೇವಕರತಂಡ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಉಜಿರೆಯಲ್ಲಿ ಕಳೆದ ಜನವರಿ 21ರಂದುಉಜಿರೆಜಾತ್ರೆ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆಗೊಂಡಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಮುಂಡಾಜೆ, ಚಾರ್ಮಾಡಿ ಪರಿಸರದಲ್ಲಿ ನೆರೆ ಪೀಡಿತರಿಗೆ ಸಂಕಷ್ಟದ ಸಂದರ್ಭಅಭಯಹಸ್ತ ನೀಡಿ ಸಹಕರಿಸಿದ ತಂಡ ಪ್ರಾಕೃತಿಕ ವಿಕೋಪಗಳು ಮುಂದೆ ಸಂಭವಿಸಿದಾಗ ನೆರವು ನೀಡಲು ಹಾಗೂ ಸೇವೆ ನೀಡಲು 600 ಜನರ ವ್ಯವಸ್ಥಿತ ಸ್ವಯಂ ಸೇವಕರತಂಡವನ್ನು ರಚಿಸಿದೆ. ಸೇವಾ ಸಮಿತಿಯ ಪ್ರಥಮ ಸೇವೆಯಾಗಿ ಭಾನುವಾರ ಧರ್ಮಸ್ಥಳದಲ್ಲಿ […]

ಧರ್ಮಸ್ಥಳದ ವಿಂಟೇಜ್‌ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್‌ ಕಾರು ಕೊಡುಗೆ

Monday, February 3rd, 2020
ujire

ಉಜಿರೆ : ರಾಜಸ್ತಾನದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜಿ ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ 1972ರ ಮೋಡೆಲ್ ಮರ್ಸಿಡಿಸ್ ಬೆನ್ಜ್‌ಕಾರನ್ನುಕೊಡುಗೆಯಾಗಿ ನೀಡಿದರು. ೨೮೦ ಎಸ್. ಮಾದರಿಯ ಈ ಕಾರುಅತ್ಯುತ್ತಮಕಾರುಎಂದು ತಿಳಿದು ಬಂದಿದೆ. ಸ್ವಾಮೀಜಿಯವರು ಭಾನುವಾರ ಬೆಳಿಗ್ಯೆ ಬೀಡಿನಎದುರು (ಹೆಗ್ಗಡೆಯವರ ನಿವಾಸ) ಕಾರಿನ ಕೀ ಹಸ್ತಾಂತರಿಸುವ ಮೂಲಕ ಕಾರನ್ನುಕೊಡುಗೆಯಾಗಿ ನೀಡಿದರು. ಕೆಲವು ವರ್ಷಗಳ ಹಿಂದೆಜಾಗತಿಕಯೋಗ ಸಮ್ಮೇಳನ ಉದ್ಘಾಟಿಸಲು ಸ್ವಾಮೀಜಿ ಧರ್ಮಸ್ಥಳಕ್ಕೆ ಬಂದಾಗಇಲ್ಲಿನಕಾರ್ ಮ್ಯೂಸಿಯಂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವಿಸಿದರು. ಸ್ವಾಮೀಜಿಯುರೋಪ್‌ಖಂಡದ ಆಸ್ಟ್ರೀಯಾ […]

ಇಂಗ್ಲೇಂಡ್‌ನ ಮಹಿಳಾ ಉದ್ಯಮಿಗಳ ತಂಡ ಧರ್ಮಸ್ಥಳಕ್ಕೆ ಭೇಟಿ

Tuesday, January 28th, 2020
england

ಉಜಿರೆ : ಇಂಗ್ಲೇಡ್‌ನ ಮಹಿಳಾ ಉದ್ಯಮಿಗಳ ತಂಡ ರೂಪಾ ಗಿರಾರ್ಡ್ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಭಾನುವಾರ ಭೇಟಿಯಾಗಿ ಮಾಹಿತಿ, ಮಾರ್ಗದರ್ಶನ ಪಡೆದರು. ದೇವಸ್ಥಾನ, ಅನ್ನಪೂರ್ಣ ಭೋಜನಾಲಯ, ವಸ್ತು ಸಂಗ್ರಹಾಲಯ ಹಾಗೂ ವಿವಿಧ ವಿಭಾಗಗಳಿಗೆ ಭೇಟಿ ಮಾಡಿ ಮಾಹಿತಿ ಕಲೆ ಹಾಕಿದರು.    

ಧರ್ಮಸ್ಥಳದಲ್ಲಿ ಧರ್ಮಶ್ರೀ ನೂತನ ವಿಸ್ತೃತ ಕಟ್ಟಡ ಉದ್ಘಾಟನೆ

Saturday, January 25th, 2020
dharmasri

ಉಜಿರೆ: ಸ್ವಾತಂತ್ರ್ಯ ಆಂದೋಲನದ ರೀತಿಯಲ್ಲಿ ಸ್ವಚ್ಛತಾ ಅಭಿಯಾನ ಆಂದೋಲನವಾಗಿ ಸ್ವಚ್ಛ ಭಾರತದ ಕನಸು ನನಸಾಗಬೇಕು. ಸೈನಿಕರು ದೇಶದ ರಕ್ಷಣೆ ಮಾಡಿದಂತೆ ನಾವು ಸಮಾಜದ ರಕ್ಷಣೆ ಮಾಡೋಣ ಎಂದು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ಕಚೇರಿ ಧರ್ಮಶ್ರೀಯ ನೂತನ ವಿಸ್ತೃತ ಕಟ್ಟಡವನ್ನು ಶುಕ್ರವಾರ ಅವರು ಉದ್ಘಾಟಿಸಿ ಮಾತನಾಡಿದರು. ಕೇವಲ ರಸ್ತೆ, ಆಸ್ಪತ್ರೆ, ಶಾಲೆ ಅಭಿವೃದ್ಧಿ ಆದರೆ ಅದು ಪ್ರಗತಿಯ ದ್ಯೋತಕವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ […]

ಅಡಿಕೆ ಕೊಯ್ಲು ಮತ್ತು ಬೋರ್ಡೊ ದ್ರಾವಣ ಸಿಂಪಡಣೆಗೆ ಹೈಟೆಕ್‌ ದೋಂಟಿ : ಧರ್ಮಸ್ಥಳದಲ್ಲಿ ಪ್ರಾತ್ಯಕ್ಷಿಕೆ

Friday, January 3rd, 2020
dharmastala

ಉಜಿರೆ : ಅಡಿಕೆ ಕೊಯ್ಲು ಮತ್ತು ಬೋರ್ಡೊ ದ್ರಾವಣ ಸಿಂಪಡಣೆಗೆ ಅಮೇರಿಕಾದಲ್ಲಿರುವ ಹಾಸನ ಮೂಲದ ಎಂಜಿನಿಯರ್ ಬಾಲ ಸುಬ್ರಹ್ಮಣ್ಯ ಸುಧಾರಿತ ಹೈಟೆಕ್‌ ದೋಂಟಿ ಸಂಶೋಧನೆ ಮಾಡಿದ್ದು ಅವರು ಶುಕ್ರವಾರ ಧರ್ಮಸ್ಥಳದಲ್ಲಿರುವ ಹರ್ಪಾಡಿ ತೋಟದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಸವಿವರ ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಈ ವರೆಗೆ ಲಭ್ಯ ಇರುವ ಕೊಯ್ಲು ದೋಂಟಿಗಳಿಂದ ಇದು ವಿಭಿನ್ನವಾಗಿದ್ದು, ಯಾವುದೇ ಇಂಧನ ಅಥವಾ ವಿದ್ಯುತ್ ಬಳಸದೆ ಸುಲಭದಲ್ಲಿಉಪಯೋಗಿಸಬಹುದು. ಕ್ಯಾಂಪ್ಕೋದ ಅಡಿಕೆ ಸಂಶೋಧನಾ […]

ಹೊಸ ವರ್ಷದ ಶುಭಾರಂಭ : ಧರ್ಮಸ್ಥಳದಲ್ಲಿ ಭಕ್ತರ ಗಡಣ

Wednesday, January 1st, 2020
ujire

ಉಜಿರೆ : ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವ ಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಹೊಸ ವರ್ಷ ಶುಭಾರಂಭದ ದಿನವಾದ ಬುಧವಾರ ನಾಡಿನೆಲ್ಲೆಡೆಯಿಂದ ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ದೇವರದರ್ಶನ ಪಡೆದು ಸೇವೆ ಸಲ್ಲಿಸಿದರು. ಹಲವು ಮಂದಿ ಪಾದಯಾತ್ರೆಯಲ್ಲಿ ಬಂದರೆ, ಕೆಲವರು ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬಂದು ತಮ್ಮಸೇವೆ ಸಲ್ಲಿಸಿದ್ದಾರೆ. ಅನೇಕ ಮಂದಿ ಮುಡಿ ಅರ್ಪಿಸಿ (ತಲೆಕೂದಲು ತೆಗೆಸಿ) ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ದೇವರ ದರ್ಶನದ ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ […]

ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ

Thursday, November 28th, 2019
chandra swamy

ಧರ್ಮಸ್ಥಳ : ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಬುಧವಾರ ರಾತ್ರಿ ಧರ್ಮಸ್ಥಳ ದ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಹೆಗ್ಗಡೆಯವರ ನಿವಾಸದಿಂದ  (ಬೀಡಿನಿಂದ) ಸಂಜೆ ಏಳುಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಮಹೋತ್ಸವ ಸಭಾ ಭವನಕ್ಕೆ ಹೋದ ಬಳಿಕ ಅಲ್ಲಿ ಪಂಚನಮಸ್ಕಾರ ಮಂತ್ರ ಪಠಣ, ಸಮವಸರಣ ಪೂಜಾ ಮಂತ್ರ ಪಠಣಆದಮೇಲೆ ಶ್ರಾವಕ-ಶ್ರಾವಿಕೆಯರಿಂದಅಷ್ಟವಿಧಾರ್ಚನೆ ಪೂಜೆ ನಡೆಯಿತು. ಗಣಧರ ಪರಮೇಷ್ಠಿ ಪೂಜೆ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಯಿತು. ಸೌಮ್ಯ, ಸಾವಿತ್ರಿ, ಮಂಜುಳಾ ಮತ್ತುಅಭಿಜ್ಞಾ ಹಾಗೂ […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ಸರ್ವಧರ್ಮ ಸಮ್ಮೇಳನ ಉದ್ಘಾಟನೆ

Tuesday, November 26th, 2019
laksha-deepotsava

ಧರ್ಮಸ್ಥಳ :ಒಳ್ಳೆಯವರಾಗಿ ಮತ್ತು ಒಳ್ಳೆಯ ಕೆಲಸವನ್ನೇ ಮಾಡಿ – ಇದೇಜೀವನ ಸಿದ್ಧಾಂತವಾಗಬೇಕು ಎಂದು ನಿಕಟಪೂರ್ವ ಲೋಕಸಭಾಅಧ್ಯಕ್ಷರಾದ ಸುಮಿತ್ರಾ ಮಹಾಜನ್ ಹೇಳಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ ೮೭ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಒಳ್ಳೆಯ ವರ್ತನೆಯನ್ನು ಹೊಂದಿದಾಗ ಮಾತ್ರಇತರರೂ ಒಳ್ಳೆಯ ವ್ಯಕ್ತಿಗಳಾಗಿ ರೂಪಿಗೊಳ್ಳಲು ನಾವು ಆದರ್ಶ ವ್ಯಕ್ತಿಗಳಾಗಿ ನಮ್ಮ ವರ್ತನೆಯಿಂದ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ.ಧರ್ಮ ಮತ್ತುಕರ್ತವ್ಯದಲ್ಲಿ ನಿವೃತ್ತಿಎಂಬುದುಇಲ್ಲ. ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಿಂದ ಮಾನವನೇ ಮಾಧವನಾಗಬಲ್ಲ ಎಂದುಅವರು ಹೇಳಿದರು. […]

ಲಕ್ಷದೀಪೋತ್ಸವಕ್ಕೆ ಸಜ್ಜುಗೊಂಡ ಧರ್ಮಸ್ಥಳ : ಎಲ್ಲೆಲ್ಲಿ ಏನೇನಿದೆ ಈ ವರದಿ ನೋಡಿ

Thursday, November 21st, 2019
ಲಕ್ಷದೀಪೋತ್ಸವಕ್ಕೆ ಸಜ್ಜುಗೊಂಡ ಧರ್ಮಸ್ಥಳ : ಎಲ್ಲೆಲ್ಲಿ ಏನೇನಿದೆ ಈ ವರದಿ ನೋಡಿ

ಧರ್ಮಸ್ಥಳ :  ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶುಕ್ರವಾರ ಹೊಸಕಟ್ಟೆ ಉತ್ಸವದೊಂದಿಗೆ ಶುಭಾರಂಭಗೊಳ್ಳುತ್ತದೆ. ದೇವಸ್ಥಾನ, ಬೀಡು, ವಸತಿ ಛತ್ರಗಳು ಹಾಗೂ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಮುಖ್ಯ ಪ್ರವೇಶದ್ವಾರದ ಬಳಿ ಕೆ.ಎಸ್.ಆರ್.ಟಿ.ಸಿ. ವಿಶೇಷ ಕೌಂಟರ್, ಪೊಲೀಸ್ ಕೌಂಟರ್ ತೆರೆಯಲಾಗಿದೆ. ಸ್ವಚ್ಛತಾ ಸೇನಾನಿಗಳು ಸ್ವಚ್ಛತೆ ಕಾಪಾಡಲು ವಿಶೇಷ ಶ್ರಮ ವಹಿಸುತ್ತಿದ್ದಾರೆ. ಶುಕ್ರವಾರ ಸಂಜೆ ಉಜಿರೆಯಿಂದ ಧರ್ಮಸ್ಥಳಕ್ಕೆ ಹೊರಡುವ ಪಾದಯಾತ್ರೆಯ ಯಶಸ್ಸಿಗೆ ಸರ್ವರೂ […]

ಧರ್ಮಸ್ಥಳದಲ್ಲಿ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ದಿನ ಆಚರಣೆ

Tuesday, November 19th, 2019
Dharmastala

ಉಜಿರೆ : ವೈದ್ಯರು ಮಾನವೀಯತೆಯೊಂದಿಗೆ ಹಾಗೂ ನಗುಮುಖದದಿಂದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇದೇವರ ಸೇವೆಯಾಗಿದೆಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿಎರಡನೆರಾಷ್ಟ್ರೀಯ ಪ್ರಕೃತಿಚಿಕಿತ್ಸಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಆಸ್ಪತ್ರೆ, ಜೈಲು ಮತ್ತುರುದ್ರಭೂಮಿ ನೋಡಿದಾಗನಮಗೆ ಆಧುನಿಕಜೀವನದ ಸಮಸ್ಯೆಗಳ ಅರಿವಾಗುತ್ತದೆ.ಆಧುನಿಕಜೀವನ ಶೈಲಿ, ಆಹಾರ ಸೇವನಾ ಕ್ರಮ, ಸದಾಒತ್ತಡದ ಕೆಲಸಗಳು, ಅತಿಯಾದತಂತ್ರಜ್ಞಾನದ ಬಳಕೆ, ವಾಯುಮಾಲಿನ್ಯಮೊಬೈಲ್ ಫೋನ್ ಬಳಕೆ ಇತ್ಯಾದಿ ಕಾರಣಗಳಿಂದ ಇಂದು ಎಳೆಯ […]