Blog Archive

ಬಹಿರಂಗ ಸಭೆ ಬಳಿಕ ನಾಮಪತ್ರ ಸಲ್ಲಿಸಿದ ಸಚಿವ ರೈ

Thursday, April 19th, 2018
namapatra

ಮಂಗಳೂರು: ಕಾಂಗ್ರೆಸ್ ಎಲ್ಲಾ ಭಾಷೆ, ಎಲ್ಲಾ ಧರ್ಮ ಹಾಗೂ ಎಲ್ಲಾ ಭಾಷೆಯ ಜನರನ್ನು ಪ್ರೀತಿಸುತ್ತದೆ. ನಾನು ಕೂಡಾ ಇದೇ ತತ್ವವನ್ನು ಪಾಲಿಸುತ್ತಿದ್ದೇನೆ ಎಂದು ಬಿ.ಸಿ. ರೋಡ್‌‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಚಿವ ಬಿ.ರಮಾನಾಥ್‌‌ ರೈ ಹೇಳಿದರು. ಬಂಟ್ವಾಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೆ ಮುಂಚೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇನ್ನೊಂದು ಧರ್ಮವನ್ನು ಪ್ರೀತಿ ಮಾಡುವವರು ನಿಜವಾದ ಹಿಂದೂ ಹಾಗೂ ಎಲ್ಲಾ ಧರ್ಮದ ಜನರನ್ನು ಪ್ರೀತಿ ಮಾಡುವ ಅವಶ್ಯಕತೆ ನಮಗಿದೆ ಎಂದರು. ನನ್ನ ಕೆಲಸವನ್ನು ಅತ್ಯಂತ ನಿಷ್ಠೆಯಿಂದ […]

ಮಂಗಳೂರಿನಲ್ಲಿ ರೈತ ಮುಖಂಡ ನಿಗೂಢ ಸಾವು

Monday, March 26th, 2018
sucide

ಮಂಗಳೂರು: ಬಂಟ್ವಾಳ ನಂದಾವರ ದೇವಸ್ಥಾನದ ಪಕ್ಕ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಸಜೀಪಮುನ್ನೂರು ಗ್ರಾಮದ ರೈತ ಮುಖಂಡ, ಬಳಕೆದಾರರ ಹೋರಾಟಗಾರ ಶರತ್ ಕುಮಾರ್(45) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಾಲು ಜಾರಿ ಬಿದ್ದು ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷರಾಗಿದ್ದ ಶರತ್, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರ ಹೋರಾಟ, ಎತ್ತಿನಹೊಳೆ ಹೋರಾಟ, ಸ್ಥಳೀಯವಾಗಿ […]

ಅಂಗವೈಕಲ್ಯತೆ ದೇಹಕ್ಕೆ ಮನಸ್ಸಿಗಲ್ಲ… ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುತ್ತಿರುವ ವಿಶೇಷಚೇತನ ಜಗನ್‌

Saturday, March 3rd, 2018
swaccha-bharat

ಮಂಗಳೂರು: ರಾಮಕೃಷ್ಣ ಮಿಷನ್ ಜಿಲ್ಲೆಯಲ್ಲಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛ ಭಾರತ್ ಕಾರ್ಯಕ್ರಮ ಈಗಾಗಲೇ ಸಾವಿರಾರು ಮನಸ್ಸುಗಳನ್ನು ಜಾಗೃತಗೊಳಿಸಿವೆ. ಜಾತಿ, ಧರ್ಮ ಮರೆತು ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು, ಐಟಿ ಸಿಬಂದಿ, ರಿಕ್ಷಾ ಚಾಲಕರು, ಜನಸಾಮಾನ್ಯರು, ಅಷ್ಟೇ ಏಕೆ ಜಪಾನಿನ ಉದ್ಯಮಿಯೊಬ್ಬರು ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯರಿಗೆ ಸ್ವಚ್ಛತೆಯ ಪಾಠ ಹೇಳಿದ್ದಾರೆ. ಇತ್ತೀಚೆಗೆ ಯುವಕನೊಬ್ಬ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಕುವ ಕಚೇರಿಗೇ ಕಸಗಳನ್ನು ಸುರಿಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಯ ಸುರಿಮಳೆಗೆ ಪಾತ್ರರಾಗಿದ್ದರು. ಹೀಗೆ ಮಠದ ಸ್ವಚ್ಛತಾ ಅಭಿಯಾನ ದೇಶವ್ಯಾಪಿ […]

ಮದುವೆಯಲ್ಲೂ ಹೊರೆ ಕಾಣಿಕೆ, ಫಸ್ಟ್‌‌ ನೈಟ್‌ಗೂ ಅಡ್ಡಿ…ಫ್ರೆಂಡ್ಸ್‌‌ ಕುಚೇಷ್ಟೆಗೆ ನವದಂಪತಿ ಸುಸ್ತು!

Thursday, March 1st, 2018
marriege

ಮಂಗಳೂರು: ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೆಯ ದೊಡ್ಡ ಸಂಭ್ರಮಗಳಲ್ಲಿ ಊರವರು ಕೊಡುಗೆಯಾಗಿ ಹೊರೆ ಕಾಣಿಕೆ ಸಲ್ಲಿಸುವುದನ್ನು ನೋಡಿದ್ದೇವೆ. ಆದರೆ, ಮದುವೆಗೂ ಹೊರೆ ಕಾಣಿಕೆ ಸಲ್ಲಿಸಿದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ರಾಕೇಶ್ ಅವರ ಮದುವೆ ಬಂಟ್ವಾಳ ತಾಲೂಕಿನ ರಾಯಿಯಲ್ಲಿ ಫೆ.20ರಂದು ನಡೆದಿದೆ. ಮದುಮಕ್ಕಳಿಗೆ ಏನಾದರೂ ಸರ್‌‌ಪ್ರೈಸ್ ಗಿಫ್ಟ್ ನೀಡಲೇಬೇಕು ಎಂದುಕೊಂಡಿದ್ದ ರಾಕೇಶ್ ಗೆಳೆಯರು ಈ ರೀತಿ ಮಾಡಿದ್ದಾರೆ. ಇವರ ಕೀಟಲೆಗೆ ಮದುಮಗಳು ಸುಷ್ಮಾ ಕೂಡಾ ದಂಗಾಗಿದ್ದಾರೆ. ಮದುಮಗ […]

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಶತಸಿದ್ಧ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

Tuesday, February 20th, 2018
yedeyorappa

ಮಂಗಳೂರು: ಪರಿವರ್ತನಾ ಯಾತ್ರೆಯ ಮೂಲಕ‌ ರಾಜ್ಯದ‌ ಉದ್ದಗಲಕ್ಕೆ ಪ್ರವಾಸ ಮಾಡಿದ್ದೇನೆ. ಆಯಾ ಭಾಗದ ಜ್ವಲಂತ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಸ್ಥಳೀಯ ಜನರ ಆಶಯಗಳನ್ನು‌ ಆಲಿಸಿದ್ದೇನೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು. ಬಂಟ್ವಾಳದಲ್ಲಿ‌ ನವಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು. ವಿಧಾನಸಭಾ ಕ್ಷೇತ್ರದ ಬೂತ್ ಗಳನ್ನು ಬಲಪಡಿಸಬೇಕು. ಬೂತ್ ಮಟ್ಟದಲ್ಲಿ ಶೇ 60ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಬೇಕು.‌‌ ಕಾಂಗ್ರೆಸ್ ನವರು‌ ಎಷ್ಟೇ ಪ್ರಬಲರಾಗಿದ್ದರೂ ತಲೆ ಕೆಡಿಸಿಕೊಳ್ಳಬೇಡಿ. ಬೂತ್ ಗಳನ್ನು ಬಲಪಡಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಕರ್ನಾಟಕ‌‌ದಲ್ಲಿ ಮಾತ್ರ ಅಧಿಕಾರದಲ್ಲಿದೆ.‌ ಮೂರುವರೆ ವರ್ಷದಲ್ಲಿ […]

ಬಂಟ್ವಾಳದ ಬಳಿ ಕಾರ್ – ಬೈಕ್ ಮುಖಾಮುಖಿ ಡಿಕ್ಕಿ… ಇಬ್ಬರ ಸ್ಥಿತಿ ಗಂಭೀರ

Monday, February 19th, 2018
bantwal

ಮಂಗಳೂರು: ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ಬಂಟ್ವಾಳದ ಬಳಿ ನಡೆದಿದೆ. ಬಂಟ್ವಾಳದ ಮೆಲ್ಕಾರ್‌ ಸೇತುವೆ ಬಳಿ ಈ ಘಟನೆ ನಡೆದಿದೆ. ಘಟನೆಯಿಂದ ಬೈಕ್‌ ಸವಾರರಿಬ್ಬರಿಗೂ ಗಂಭೀರ ಗಾಯಗಳಾಗಿವೆ. ಇನ್ನು ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಬಳಿಕ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್‌ ಕಾರಿನಲ್ಲಿ ಚಾಲಕನೊಬ್ಬನೇ ಇದ್ದು, ಆತನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ […]

ಮಂಗಳೂರಿನಲ್ಲೊಂದು ಅನ್ಯಧರ್ಮೀಯ ಲವ್ ಕಹಾನಿ.. ಮಾದರಿಯಾದ ಶಿಕ್ಷಕ ಜೋಡಿ

Wednesday, February 14th, 2018
mangluru

ಮಂಗಳೂರು: ಧರ್ಮಕ್ಕೂ, ಪ್ರೀತಿಗೂ ಸಂಬಂಧವಿಲ್ಲ ಎಂದು ಗೊತ್ತಿದ್ದರೂ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರಕ್ಕೆ ಮಾತ್ರ ಕೊನೆಯಿಲ್ಲ. ಕಾನೂನಿನ ಸಮ್ಮತವಿದ್ದರೂ ಧರ್ಮವನ್ನೇ ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುವರ ಮಧ್ಯೆಯೂ ಕಳೆದ ಇಪ್ಪತ್ತೈದು ವರ್ಷಗಳಿಂದ ಸುಂದರ ಜೀವನ ಕಟ್ಟಿಕೊಂಡು ಮಾದರಿಯಾಗಿ ಬದುಕಿದ ಜೋಡಿ ನಮ್ಮ ಕಣ್ಣ ಮುಂದಿದೆ. ಅದು 1992, ಡಿಸೆಂಬರ್ 4. ಬಾಬ್ರಿ ಮಸೀದಿ ಧ್ವಂಸ ಮಾಡಿದವರ ಮೇಲೆ ಒಂದು ವರ್ಗ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದು ಗುಂಪು ವಿಜಯೋತ್ಸವದಿಂದ ಬೀಗುತ್ತಿದ್ದ ಸಂದರ್ಭ. ಎಲ್ಲಿ ನೋಡಿದರೂ ಹಿಂಸಾಚಾರ, ನಿಷೇಧಾಜ್ಞೆ, ಕರ್ಫ್ಯೂ […]

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಕಾನ್ಸ್‌ಟೇಬಲ್ ವನಿತಾ ಆರ್. ಆಯ್ಕೆ

Wednesday, February 7th, 2018
state

ಮಂಗಳೂರು: ಕೆಲವು ತಿಂಗಳ ಹಿಂದೆ ಬಂಟ್ವಾಳ ತಾಲೂಕು ಕೋಮುಗಲಭೆಯಿಂದಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಪೊಲೀಸರು ಹಗಲು ರಾತ್ರಿಯೆನ್ನದೆ ಬಂದೋಬಸ್ತ್ ಡ್ಯೂಟಿಯಲ್ಲಿಯೇ ನಿರತರಾಗಿದ್ದರು. ಇದೆಲ್ಲದರ ಮಧ್ಯೆ ಇಲ್ಲಿನ ಮಹಿಳಾ ಕಾನ್ಸ್‌ಟೇಬಲ್ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ. ಪೊಲೀಸ್ ಇಲಾಖಾ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಂಟ್ವಾಳ ನಗರ ಠಾಣೆಯ ಕಾನ್ಸ್‌ಟೇಬಲ್ ವನಿತಾ ಆರ್. 100, 200ಮತ್ತು 400 ಮೀಟರ್ ಓಟದಲ್ಲಿ ಪ್ರಥಮ, ಎತ್ತರ ಜಿಗಿತ ಹಾಗೂ 4*100 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ […]

ಗೃಹ ಬಂಧನದಲ್ಲಿದ್ದ ಅಸ್ವಸ್ಥ ಮಹಿಳೆಗೆ ಸಹೋದರಿಯಿಂದಲೇ ಸಿಕ್ತು ಮುಕ್ತಿ

Tuesday, February 6th, 2018
bandana

ಮಂಗಳೂರು: ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಕೆಯ ಸಹೋದರಿಯೇ ಕರೆದೊಯ್ಯುವ ಮೂಲಕ ಆಕೆಯನ್ನು ಬಿಡುಗಡೆ ಮಾಡಿದಂತಾಗಿದೆ. ಬಂಟ್ವಾಳದ ಸಜೀಪಮೂಡ ಗ್ರಾಮದ ಬೇಂಕ್ಯ ನಿವಾಸಿ ವೆಂಕಪ್ಪ ಪೂಜಾರಿ ಹಾಗೂ ಸುಮತಿ ದಂಪತಿಯ ಪುತ್ರಿ ಮಲ್ಲಿಕಾ (35) ಗೃಹಬಂಧನದಲ್ಲಿದ್ದರು. ಹಲವು ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಮಲ್ಲಿಕಾಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರ. ಮೂವರು ಸಹೋದರಿಯರಿಗೂ ಮದುವೆಯಾಗಿದೆ. ಕೆಲ ವರ್ಷಗಳ ಹಿಂದೆ ಈಕೆಯ ತಂದೆ ಹಾಗೂ ಸಹೋದರ ಮೃತಪಟ್ಟ ಮೇಲೆ ತಾಯಿ ಮತ್ತು ಮಲ್ಲಿಕಾ ಇಬ್ಬರೇ ಮನೆಯಲ್ಲಿರುತ್ತಿದ್ದರು. ಎರಡು ದಿನಗಳ […]

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 2 ಕೋ.ರೂ. ಮೊತ್ತದ ಕಾಮಗಾರಿಗೆ ಚಾಲನೆ

Saturday, February 3rd, 2018
ramanath-rai

ಬಂಟ್ವಾಳ: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ನಗರೋತ್ಥಾನ-3 ಮತ್ತು ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ಶನಿವಾರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ನಗರೋತ್ಥಾನ 2ನೇ ಹಂತ ಹಾಗೂ ಇತರ ಅನುದಾನ ಸೇರಿ ಒಟ್ಟು ಸುಮಾರು 20.48 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇವುಗಳಲ್ಲಿ 338 […]