Blog Archive

ಮಂಗಳೂರಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ… ಅಭಿಮಾನಿಗಳ ಕಂಡು ಗೆಲುವಿನ ನಗೆ ಬೀರಿದ ಪ್ರಧಾನಿ

Tuesday, December 19th, 2017
narendra-modi

ಮಂಗಳೂರು: ಓಖಿ ಚಂಡಮಾರುತದಿಂದ ಹಾನಿಗೊಳಗಾದ ಲಕ್ಷದ್ವೀಪದ ಪ್ರದೇಶಗಳನ್ನು ಪರಿಶೀಲಿಸುವ ಸಲುವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕೇಂದ್ರ ವಿಮಾನಯಾನ ರಾಜ್ಯ ಸಚಿವ ಪಿ. ರಾಧಾಕೃಷ್ಣನ್, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಾಸಕ ಎಸ್. ಅಂಗಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮೋದಿ ಅವರನ್ನು ಸ್ವಾಗತಿಸಿದರು. ಬಂಟ್ವಾಳ ಚಿಲಿಪಿಲಿ ತಂಡದಿಂದ ಚೆಂಡೆ, ಕೊಂಬು, […]

ಸಂಸದ ನಳಿನ್ ಕುಮಾರ್ ಕಟೀಲ್ ಆಶೀರ್ವದಿಸಿದ ಜನಾರ್ಧನ್ ಪೂಜಾರಿ

Monday, November 20th, 2017
Nalin-Kumar-Kateel

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಲ್ಲವ ಸಂಘದಿಂದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೊಡಿ ಮರ ಸಲ್ಲಿಸುವ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಪೂಜಾರಿ ಅವರ ಬಳಿ ತೆರಳಿ ಅವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ತಲೆ ಸವರಿದ ಜನಾರ್ಧನ್ ಪೂಜಾರಿ ಆಶೀರ್ವಾದ ಮಾಡಿದರು. ಪೂಜಾರಿ […]

ಸಿಎಂ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ

Tuesday, October 24th, 2017
nalin kumar kateel

ಮಂಗಳೂರು: ಮಾಂಸ ಸೇವನೆ ಮಾಡಿ ಧರ್ಮಸ್ಥಳ ಮಂಜುನಾಥ ದೇವರ ದರ್ಶನ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಮಾಂಸ ತಿನ್ನುತ್ತೇನೆ ಎನ್ನುವ ಮುಖ್ಯಮಂತ್ರಿಯಿಂದ ಇನ್ನೇನು‌ ನಿರೀಕ್ಷಿಸಲು ಸಾಧ್ಯ ಎಂದು ಸಿದ್ದರಾಮಯ್ಯರನ್ನು ಜರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಜುನಾಥ್‌‌ ದೇವಸ್ಥಾನದ ಬಗೆಗಿರುವ ನಂಬಿಕೆ, ಭಾವನೆಗಳಿಗೆ ಬೆಲೆ ಕೊಡಲಿಲ್ಲ ಎಂದು ಕಿಡಿಕಾರಿದ್ದಾರೆ.

ಕೋಟಿ ಚೆನ್ನಯರ ತಾಯಿ ದೇಯಿ ಬೈದೇತಿ ವಿಗ್ರಹಕ್ಕೆ ನಡೆಸಿದ ಅವಮಾನ ಪ್ರಕರಣ, ರಾಜಕೀಯ ಬಣ್ಣ

Tuesday, October 10th, 2017
jatha

ಮಂಗಳೂರು:ರಾಜಕೀಯ ಬಣ್ಣ ಪಡೆದುಕೊಂಡ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೇತಿ ವಿಗ್ರಹಕ್ಕೆ ನಡೆಸಿದ ಅವಮಾನ ಪ್ರಕರಣ. ದೇಯಿ ಬೈದೇತಿ ವಿಗ್ರಹಕ್ಕೆ ಅವಮಾನ ಪ್ರಕರಣವನ್ನು ಖಂಡಿಸಿರುವ ಬಿಜೆಪಿ, ತನ್ನ ಪಕ್ಷದ ವತಿಯಿಂದ ಇವತ್ತು ಪುತ್ತೂರಿನಿಂದ ಪಡುಮಲೆಗೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಿದೆ. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಜಾಥಾ ಆರಂಭಗೊಂಡಿದೆ. ಪಡುಮಲೆಯಲ್ಲಿರುವ ದೇಯಿ ಬೈದೇತಿ ವನದ ತನಕ ಈ ಜಾಥಾ ನಡೆಯಲಿದೆ. ಜಾಥಾದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ […]

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರಿಗೆ ಆಗಮನ

Tuesday, October 3rd, 2017
amith-sha

ಮಂಗಳೂರು: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಮುಂಜಾನೆ ಮಂಗಳೂರಿಗೆ ಆಗಮಿಸಿದ್ದಾರೆ. ಅಹಮದಾಬಾದ್ ನಿಂದ ವಿಶೇಷ ವಿಮಾನದ ಮೂಲಕ ಹೊರಟ ಅಮಿತ್ ಶಾ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ ಸುಮಾರು 1:30 ಗಂಟೆಗೆ ಆಗಮಿಸಿದರು. ಕಮಲ ಪಾರ್ಟಿಯ ಚಾಣಕ್ಯನನ್ನು ವಿಮಾನ ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕೇರಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೆ ಸುರೇಂದ್ರನ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರ್ ಸೇರಿದಂತೆ ಪ್ರಮುಖ ನಾಯಕರು ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ತಡರಾತ್ರಿಯವರೆಗೂ ಕಾದು […]

ಕಂಬಳವನ್ನು ಉಳಿಸುವ ಸಲುವಾಗಿ ಜ. 28ರಂದು ನಡೆಯುವ ಹೋರಾಟಕ್ಕೆ ಜ್ಯಾತ್ಯಾತೀತವಾಗಿ ಬೆಂಬಲ

Wednesday, January 25th, 2017
District-Kambala-Committee1

ಮಂಗಳೂರು: ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಕಂಬಳವನ್ನು ಉಳಿಸುವ ಸಲುವಾಗಿ ಜ. 28ರಂದು ಮೂಡಬಿದ್ರೆಯಲ್ಲಿ ನಡೆಯುವ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಪಕ್ಷಾತೀತ, ಜ್ಯಾತ್ಯಾತೀತವಾಗಿ ನಡೆಯುವ ಹೋರಾಟಕ್ಕೆ ಎಲ್ಲರೂ ಬೆಂಬಲ ಘೋಷಿಸಿದ್ದಾರೆ. ಕಂಬಳ ಹಿಂಸೆಯನ್ನು ಪ್ರಚೋದಿಸುವಂತಹ ಕ್ರೀಡೆ ಅಲ್ಲ. ಕಾಲ ಕಾಲಕ್ಕೆ ಪೌಷ್ಟಿಕ ಆಹಾರವನ್ನುಂಡು, ದೇಹಕ್ಕೆ ಸೂಕ್ತ ಮಸಾಜು ಮಾಡಿಸಿಕೊಂಡು, ಕೆಸರು ಗದ್ದೆಯಲ್ಲಿ ಓಡುವ ಕೋಣಗಳು ಅತ್ಯಂತ ಆರೋಗ್ಯದಾಯಕವಾಗಿರುತ್ತದೆ. ಕೃಷಿಗೆ ಬಳಸುವ ಎತ್ತುಗಳನ್ನಾದರೂ ನಿರ್ವಿರ್ಯಗೊಳಿಸುತ್ತಾರೆ. ಆದರೆ, ಕಂಬಳದ […]

ನಳಿನ್‌‌‌‌ ಕುಮಾರ್ ಕಟೀಲ್‌‌ ನೀಡಿರುವ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

Tuesday, January 3rd, 2017
congress

ಮಂಗಳೂರು: ಉಳ್ಳಾಲದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಸಂಸದ ನಳಿನ್‌‌‌‌ ಕುಮಾರ್ ಕಟೀಲ್‌‌ ನೀಡಿರುವ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಸಂಸದ ನಳಿನ್ ಅವರ ಹೇಳಿಕೆ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ. ಬಿಜೆಪಿಗರು ಬೆಂಕಿ ಹಚ್ಚಿದರೆ ಕಾಂಗ್ರೆಸ್ ಪಕ್ಷ ನಂದಿಸುವ ಕಾರ್ಯ ಮಾಡಲಿದೆ ಎಂದರು. ಪ್ರತಿಭಟನಾ ಸಭೆಯಲ್ಲಿ ಆಡಿದ್ದು ಸಂಸದರ ಗಿಮಿಕ್. ಯಾವುದೇ ಚುನಾವಣೆ ಬಂದಾಗಲೂ ಕೋಮುಗಲಭೆ ಹುಟ್ಟುಹಾಕುವಲ್ಲಿ […]

ಲೋಕಸಭಾ ಸದಸ್ಯ ಸಾಮರಸ್ಯ ಕಾಪಾಡಬೇಕು, ಬೆಂಕಿ ಹಚ್ಚಬಾರದು : ಸಚಿವ ರೈ

Monday, January 2nd, 2017
rai

ಮಂಗಳೂರು, : ಕೊಣಾಜೆಯಲ್ಲಿ  ‘ದ.ಕ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ’ ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜವಾಬ್ದಾರಿಯುತ ಲೋಕಸಭಾ ಸದಸ್ಯ ಸಾಮರಸ್ಯ ಕಾಪಾಡಬೇಕು. ಚುನಾಯಿತ ಪ್ರತಿನಿಧಿಯಾಗಿ ಈ ರೀತಿಯ ಹೇಳಿಕೆ ಸಲ್ಲದು. ಈ ಬಗ್ಗೆ ಗೃಹ ಸಚಿವರಲ್ಲಿ ಸಂಪರ್ಕದಲ್ಲಿದ್ದು, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಅವರು ಬೆಂಕಿ ಹಚ್ಚುವಾಗ ಅದನ್ನು ಶಮನ ಮಾಡುವ ಶಕ್ತಿ ಸರಕಾರಕ್ಕಿದೆ ಎಂದು ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಠಾಣೆ ಮುಂದೆ […]

ಪೊಲೀಸ್ ಆತ್ಮಹತ್ಯೆಯ ವರದಿ: ರಾಜನಾಥ್ ಸಿಂಗ್ ಮಾಹಿತಿ

Saturday, August 6th, 2016
Rajanath-singh

ಮಂಗಳೂರು: ದೇಶದಲ್ಲಿ 2012ರಿಂದ 2014ರವರೆಗೆ 614 ಮಂದಿ ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆತಂಕಕಾರಿ ವರದಿಯೊಂದು ಬಂದಿದೆ. 2012ರಲ್ಲಿ 214 ಮಂದಿ, 2013 ರಲ್ಲಿ 235 ಹಾಗೂ 2014ರಲ್ಲಿ 165 ಮಂದಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಲೋಕಸಭೆಯ ಮುಂಗಾರು ಅಧಿವೇಶದಲ್ಲಿ ಪೊಲೀಸರು ಆತ್ಮಹತ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಜನಾಥ್ ಸಿಂಗ್, ಕೇಂದ್ರ ಅಪರಾಧ ದಾಖಲೆಗಳ ಬ್ಯೂರೊ ಅಂಕಿ-ಅಂಶಗಳ […]

ಆದರ್ಶ ಗ್ರಾಮ ಯೋಜನೆ ಜನಪರ ಯೋಜನೆ-ಸಂಸದ ನಳಿನ್ ಕುಮಾರ್ ಕಟೀಲ್

Monday, April 20th, 2015
Nalin Sullia

ಮಂಗಳೂರು : ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಜನ ಪ್ರತಿನಿಧಿಗಳು ಸರಕಾರದ ಅಧಿಕಾರಿಗಳಿಗಿಂತ, ಜನಸಾಮಾನ್ಯರ ಸಹಭಾಗಿತ್ವ ಅತೀ ಮುಖ್ಯ. ಆ ನಿಟ್ಟಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಜನರ ಯೋಜನೆಯಾಗಿ ರೂಪುಗೊಂಡಿದೆ. ಇದು ಜನರ ಮನ,ಮನೆಗಳನ್ನು ತಲುಪುವಂತಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕರೆನೀಡಿದರು. ಸಂಸದರು ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆ ಮಾಡಿದ ಸುಳ್ಯ ತಾಲೂಕಿನ ಬಳ್ಪ ಗ್ರಾಮದಲ್ಲಿ ಯೋಜನೆಯ ಅನುಷ್ಠಾನದ ಬಗ್ಗೆ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ […]