Blog Archive

ಪಂಚಾಯತ್‌ರಾಜ್‌ ವ್ಯವಸ್ಥೆ ತಿದ್ದುಪಡಿ ಬಳಿಕ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಂಡಿದೆ: ರಮಾನಾಥ ರೈ

Tuesday, August 30th, 2016
Rai

ವೇಣೂರು: ಪಂಚಾಯತ್‌ರಾಜ್‌ ವ್ಯವಸ್ಥೆ ತಿದ್ದುಪಡಿ ಬಳಿಕ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಂಡಿದೆ. ಅಲ್ಲದೆ ಇಲ್ಲಿನ ಜನತೆ ಸಾಮಾಜಿಕ ಹಾಗೂ ಸದೃಢ ಬದುಕು ಕಂಡಿದ್ದಾರೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ಸೋಮವಾರ ದ.ಕ. ಜಿ.ಪಂ. ಮಂಗಳೂರು, ತಾ.ಪಂ. ಬೆಳ್ತಂಗಡಿ, ಪಂಚಾಯತ್‌ ರಾಜ್‌ ಎಂಜಿನಿಯರ್‌ ಉಪವಿಭಾಗ ಬೆಳ್ತಂಗಡಿ ಹಾಗೂ ಗ್ರಾ.ಪಂ. ನಾರಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾರಾವಿ ಗ್ರಾ.ಪಂ.ನ ನೂತನ ಪಂಚಾಯತ್‌ ಕಟ್ಟಡ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. […]

ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ಎಸಗುವ ಮತೀಯ ಶಕ್ತಿಗಳ ವಿರುದ್ಧ ಜಾಗೃತರಾಗಬೇಕು: ರಮಾನಾಥ ರೈ

Wednesday, August 24th, 2016
Rai

ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ಎಸಗುವ ಮತೀಯ ಶಕ್ತಿಗಳ ವಿರುದ್ಧ ಪ್ರಜ್ಞಾವಂತರು ಜಾಗೃತರಾಗಬೇಕು ಹಾಗೂ ಅವರನ್ನು ದೂರವಿಡಬೇಕು ಎಂದು ರಾಜ್ಯ ಅರಣ್ಯ, ಪರಿಸರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ನಗರದ ಸರ್ಕಿಟ್‌ ಹೌಸ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಭಯ ಜಿಲ್ಲೆಗಳಲ್ಲಿ, ಧರ್ಮ, ದೇವರು, ದೇಶಪ್ರೇಮ, ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ ನೋವು ತರುವ ವಿಚಾರ. ಕೆಂಜೂರಿನಲ್ಲಿ ನಡೆದಿರುವ ಪ್ರವೀಣ್‌ ಪೂಜಾರಿ ಹತ್ಯೆ ಗೋರಕ್ಷಕರ […]

ನಗರೋತ್ಥಾನ ಕಾಮಗಾರಿ: ತ್ವರಿತಗೊಳಿಸಲು ಸಚಿವರ ಸೂಚನೆ

Tuesday, March 10th, 2015
dc meeting

ಮಂಗಳೂರು : ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮ ನಗರೋತ್ಥಾನ ಯೋಜನೆ-2ರಡಿ ಜಿಲ್ಲೆಯ ಎಲ್ಲಾ ಪಟ್ಟಣ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ ಮತತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರೋತ್ಥಾನ ಯೋಜನೆಯ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು. ಯೋಜನೆಯಡಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಜಿಲ್ಲೆಯಲ್ಲಿ ಕಾಮಗಾರಿಯ ನಿಗದಿತ ಕಾಲಾವಧಿ ಮುಗಿದಿದ್ದರೂ, ಹಲವು ಕಾಮಗಾರಿಗಳು ಇನ್ನೂ ಪ್ರಾರಂಭಗೊಂಡಿಲ್ಲ ಎಂದು ಅವರು […]

ಗ್ರಾಮಸ್ಥರ ಮನೆ ಬಾಗಿಲಿಗೆ ಕಂದಾಯ ಇಲಾಖೆ-ರಮಾನಾಥ.ರೈ

Tuesday, June 17th, 2014
Ramanatha Rai

ಮಂಗಳೂರು : ಗ್ರಾಮೀಣ ಪ್ರದೇಶಗಳ ಜನರು ಕಂದಾಯ ಇಲಾಖೆಗೆ ಸಂಬಂದಿಸಿದ ಕೆಲಸಕಾರ್ಯಗಳಿಗೆ ಸದಾ ಪಟ್ಟಣ ಪ್ರದೇಶದ ತಹಶೀಲ್ದಾರರ ಕಚೇರಿಗೆ ಕಂದಾಯ ನಿರೀಕ್ಷಕರ ಗ್ರಾಮಲೆಕ್ಕಾಧಿಕಾರಿಗಳ ಕಚೇರಿಗೆ ಆಗಿಂದಾಗ್ಗೆ ಅಲೆಯುವುದನ್ನು ತಪ್ಪಿಸಲು ದ.ಕ.ಜಿಲ್ಲೆಯಲ್ಲಿ ಜಿಲ್ಲಾಡಳಿತ ವಿನೂತನ ಕಾರ್ಯ ಕೈಗೊಂಡಿದ್ದು ಪ್ರತಿದಿನ ಒಂದೊಂದು ಗ್ರಾಮಪಂಚಾಯತ್ ನಲ್ಲಿ ಕಂದಾಯ ಅದಾಲತ್ ಗಳನ್ನು ಹಮ್ಮಿಕೊಳ್ಳುವ ಮೂಲಕ ಕಂದಾಯ ಇಲಾಖೆಯನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ತಂದಿದೆ ಎಂದು ಅರಣ್ಯ, ಪರಿಸರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ. ಅವರು ಇಂದು ಬಂಟ್ವಾಳ […]

ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ಉದ್ಫಾಟನೆ

Wednesday, April 9th, 2014
Congress Web

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ಸೈಟ್ ಉದ್ಘಾಟನಾ ಸಮಾರಂಭವು ಪಕ್ಷದ ಚುನಾವಣಾ ಪ್ರಚಾರ ಕಛೇರಿಯಲ್ಲಿ ಮಂಗಳವಾರ ಸಂಜೆ ನಡೆಯಿತು. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ. ರಮಾನಾಥ ರೈ ವೆಬ್ ಸೈಟ್ ಉದ್ಫಾಟನೆ ಮಾಡಿದರು. ಸಾಮಾಜಿಕ ತಾಣಗಳಲ್ಲಿ ಸಾರ್ವಜನಿಕರ ಹಾದಿ ತಪ್ಪಿಸುವ ಷಡ್ಯಂತ್ರಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಜನರಿಗೆ ವಸ್ತುಸ್ಥಿತಿಯ ಅರಿವು ಮೂಡಿಸಬೇಕಾದ ಅಗತ್ಯವಿದೆ. ಜನಸಾಮಾನ್ಯರಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾವಂತ ಯುವ ಸಮೂಹದಲ್ಲಿ ಮತದಾನದ ಜನಜಾಗೃತಿ ಮೂಡಿಸುವುದು. ಪಕ್ಷದ ಧ್ಯೇಯ, ಧೋರಣೆ, […]

ಸರಕಾರದ `ಕ್ಷೀರ ಭಾಗ್ಯ ಯೋಜನೆಗೆ’ ಮಂಗಳೂರಿನಲ್ಲಿ ಬಿ.ರಮಾನಾಥ ರೈಯವರಿಂದ ಚಾಲನೆ

Thursday, August 1st, 2013
Ramanath Rai ksheera Bhagya

ಮಂಗಳೂರು :  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್  ದಕ್ಷಿಣ ಕನ್ನಡ ಜಿಲ್ಲೆ, ಸಾರ್ವಜನಿಕ ಶಿಕ್ಷಣಾ ಇಲಾಖೆ, ಅಕ್ಷರ ದಾಸೋಹ, ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ಮತ್ತು ದಕ್ಷಿಣ ಕನ್ನಡ  ಹಾಲು ಉತ್ಪಾದಕರ ಒಕ್ಕೂಟ ಇದರ ಸಹಯೋಗದಲ್ಲಿ ಆಗಸ್ಟ್ 1 ರಂದು ಸರಕಾರಿ ಮಾದರಿ ಹಿರಿಯ ಪ್ರಾಥವಿಕ ಶಾಲೆ ಉರ್ವ ಮಂಗಳೂರು ಇಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಉಚಿತ ಹಾಲು ವಿತರಿಸುವ `ಕ್ಷೀರ ಭಾಗ್ಯ’ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದ  […]

ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ 43.2 ಲಕ್ಷ ಮೊತ್ತದ ಚೆಕ್ ವಿತರಣೆ

Monday, July 22nd, 2013
Perne Accident

ಬಂಟ್ವಾಳ: ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪೆನಿಯಿಂದ  ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ ಒಟ್ಟು 43.2 ಲಕ್ಷ ಮೊತ್ತದ ಚೆಕ್ಕನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾನುವಾರ ಬಿ.ಸಿ.ರೋಡ್ ನ ಸಚಿವರ ಕಚೇರಿಯಲ್ಲಿ ವಿತರಿಸಿದರು. ಒಟ್ಟು 14 ಮಂದಿಗೆ ಪರಿಹಾರ ಧನವಾಗಿ 43.2 ಲಕ್ಷ ಮೊತ್ತದ ಚೆಕ್ ನ್ನು ವಿತರಿಸಲಾಯಿತು. ದುರಂತದಲ್ಲಿ ಜೀವಹಾನಿ ಮತ್ತು  ಮನೆ ಅಪಾರ ಆಸ್ತಿ ನಷ್ಟ ಉಂಟಾಗಿತ್ತು.  ಸ್ಥಳೀಯ ನಿವಾಸಿಗಳಾದ ಸಂದರ ರೈ ಅವರಿಗೆ 7.43 ಲಕ್ಷ, […]

ಯೋಜನೆಗಳ ಪ್ರಗತಿ ಲೋಪಕ್ಕೆ ಅಧಿಕಾರಿಗಳೇ ಹೊಣೆಗಾರರು ; ಕೆಡಿಪಿ ಸಭೆಯಲ್ಲಿ ರಮಾನಾಥ ರೈ

Friday, July 12th, 2013
KDP review meeting

ಮಂಗಳೂರು: ದ.ಕ. ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾ ತ್ತೈಮಾಸಿಕ ಕೆಡಿಪಿ ಸಭೆ ಗುರುವಾರ ಸಚಿವ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಬಸವ ವಸತಿ ಯೋಜನೆ, ಅಂಬೇಡ್ಕರ್‌ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಪ್ರಗತಿ ತೀರಾ ಕಡಿಮೆಯಾಗಿದೆ. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ವಸತಿಗಳು ಬಡವರಿಗೆ ಸಕಾಲದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದರಲ್ಲಾಗುವ ಲೋಪಕ್ಕೆ ಅಧಿಕಾರಿಗಳೇ ಹೊಣೆಗಾರರು ಎಂದು ರಾಜ್ಯ ಅರಣ್ಯ, ಪರಿಸರ ಖಾತೆ ಮತ್ತು ದ. ಕ.ಜಿಲ್ಲಾ ಉಸ್ತುವಾರಿ ಸಚಿವಬಿ. ರಮಾನಾಥ ರೈ ಎಚ್ಚರಿಸಿದ್ದಾರೆ. ರಾಜೀವ ಗಾಂಧಿ […]

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವ ರ್ ಗೆ ಅದ್ದೂರಿ ಸ್ವಾಗತ

Tuesday, November 30th, 2010
ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತ

ಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ  ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಡಾ. ಜಿ. ಪರಮೇಶ್ವರ್ ರವರನ್ನು ಸ್ವಾಗತಿಸಲಾಯಿತು. ಡಾ. ಜಿ. ಪರಮೇಶ್ವರವರನ್ನು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರು ನಗರದ ಜ್ಯೋತಿ ವೃತ್ತದಿಂದ ಭವ್ಯ ಮರೆರವಣಿಗೆಯಲ್ಲಿ ಪುರಭವನಕ್ಕೆ ಕರೆ ತಂದರು. ಮೆರವಣಿಗೆ ಹೊರಡುವಾಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಡಾ. ಜಿ. ಪರಮೇಶ್ವರವರನ್ನು ಸ್ವಾಗತಿಸಿದರು. ದ.ಕ ಜಿಲ್ಲಾ ಶೈಲಿಯ ವಿವಿಧ […]