ಉಡುಪಿ ಉದ್ಯಾವರ ಫಿಶ್ ಕಟಿಂಗ್ ಯೂನಿಟ್ ನಲ್ಲಿ ದೆವ್ವದ ಕಾಟ, ಕೆಲಸ ಬಿಟ್ಟು ಓಡಿ ಹೋದ ಕಾರ್ಮಿಕರು

Thursday, November 23rd, 2023
ssf-fish

ಉಡುಪಿ: ಎಸ್ ಎಸ್ ಫಿಶ್ ಕಟಿಂಗ್ ಯೂನಿಟ್ ನಲ್ಲಿ ಅಸ್ಸಾಂ ಯುವಕನೊಬ್ಬನಿಗೆ ದೆವ್ವದ ಆವೇಶ ಆಗಿ ಜೊತೆಯಲ್ಲಿದ್ದ ಕಾರ್ಮಿಕರ ತಂಡ ಓಡಿ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಡುಪಿ ಜಿಲ್ಲೆ ಕಾಪುವಿನ ಉದ್ಯಾವರ ಪಿತ್ರೋಡಿಯಲ್ಲಿ ಈ ಘಟನೆ ನಡೆದಿದ್ದು ಕೊಠಡಿಯಲ್ಲಿದ್ದ ಎಲ್ಲಾ ಕಾರ್ಮಿಕರು ದೆವ್ವ ಇದೆಯೆಂದು ಆತಂಕಪಟ್ಟಿದ್ದಾರೆ. ಅಸ್ಸಾಂ ಬಿಹಾರ ಪಶ್ಚಿಮ ಬಂಗಾಳದ ಕಾರ್ಮಿಕರು ಭಯ ಬಿದ್ದು ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಸ್ಥಳೀಯರು ಕೊಡುವ ಮಾಹಿತಿ ಪ್ರಕಾರ, ಫಿಶ್ ಕಟ್ಟಿಂಗ್ ಯೂನಿಟ್ […]

ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ

Monday, March 15th, 2021
Gunashree

ಬಂಟ್ವಾಳ : ಶಿಸ್ತುಬದ್ಧ ಕ್ರೀಡೆಯಲ್ಲಿ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈಚೆಗೆ ಅಸ್ಸಾಂ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಾವಲಿನ್ ಎಸೆತ ಪಂದ್ಯಾಟದಲ್ಲಿ ಇಲ್ಲಿನ ವಿದ್ಯಾಥರ್ಿನಿ ರಮ್ಯಶ್ರೀ ಜೈನ್ ಚಿನ್ನದ ಪದಕ ಗಳಿಸಿರುವುದು ಇದಕ್ಕೆ ಸೂಕ್ತ ಉದಾಹರಣೆ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದರು. ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ […]

ಕಾರ್ಕಳ : ಪ್ರೀತಿಸಿದ ಹುಡುಗನೊಂದಿಗೆ ಯುವತಿ ಪರಾರಿ; ಸುದ್ದಿ ಕೇಳಿ ತಂಗಿ ಸಾವು

Friday, September 4th, 2020
surakshita

ಉಡುಪಿ:  ಕಾರ್ಕಳದ  ಮಂಜಲ್ತಾರ್ ಎಂಬಲ್ಲಿ ಬಾಹುಬಲಿ ಸ್ವೀಟ್ ಫ್ಯಾಕ್ಟರಿ ಎಂಬ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುರಕ್ಷಾ ಎಂಬ 20  ವಯಸ್ಸಿನ  ಯುವತಿ ಎರಡು ದಿನಗಳಿಂದ ಕಾಣೆಯಾಗಿದ್ದಾಳೆ ಎಂದು  ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕು ಮಾಳ ಗ್ರಾಮದ ಮಂಜಲ್ತಾರ್ ಮಾರಿಗುಡಿ ಬಳಿ ವಾಸವಿದ್ದ ಯುವತಿ  ಸುರಕ್ಷಿತ ಅಸ್ಸಾಂ ಮೂಲದ ಭುವನ್ ಎಂಬ ಯುವಕನನ್ನು ಪ್ರೀತಿಸಿದ್ದಾಳೆ ಎನ್ನಲಾಗಿದ್ದು,  ಆಕೆ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ  ತಾಯಿ  ಸುನೀತಾ ನೀಡಿದ ದೂರಿನಲ್ಲಿ ಸೆಪ್ಟೆಂಬರ್ 2 ರಂದು ಬೆಳಿಗ್ಗೆ ಕೆಲಸಕ್ಕೆ ಹೋದವಳು ಮನೆಗೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಯುವತಿಗೆ  ಲಾಕ್ಡೌನ್ ಸಂದರ್ಭದಲ್ಲಿ ನಿಶ್ಚಿತಾರ್ಥ […]

ಪೌರತ್ವ ತಿದ್ದುಪಡಿ ವಿರೋಧಿ ಹೋರಾಟ : ಪೊಲೀಸರ ಗುಂಡಿಗೆ ಬಲಿಯಾದ 17 ವರ್ಷದ ಬಾಲಕ

Saturday, December 14th, 2019
assam

ಗುವಾಹಟಿ : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಈಶಾನ್ಯ ಭಾರತದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಗುರುವಾರ ನಡೆದ ಗೋಲಿಬಾರ್ನಲ್ಲಿ 17 ವರ್ಷದ ಯುವಕ ಮೃತಪಟ್ಟಿದ್ದ. ಈತನ ಸಾವು ಇಡೀ ಅಸ್ಸಾಂ ಜನ ಸಮೂಹದ ಭಾವನೆಯನ್ನು ಕೆರಳಿಸಿದ್ದು ಶುಕ್ರವಾರ ಈತನ ಅಂತ್ಯಕ್ರಿಯೆಯಲ್ಲಿ ಬಹುತೇಕ ಹೋರಾಟಗಾರರು ಪಾಲ್ಗೊಂಡಿದ್ದು “ಹುತಾತ್ಮ” ಎಂದು ಘೋಷಣೆ ಕೂಗಿ ಪ್ರಶಂಸಿಸಿದ್ದಾರೆ. ಕೇಂದ್ರ ಸರ್ಕಾರದ ನೂತನ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಸ್ಸಾಂ ರಾಜ್ಯದ ಪ್ರಸಿದ್ಧ ಗಾಯಕ ಜುಬೀನ್ ಗರ್ಗ್ ಇಲ್ಲಿನ ಲತಾಸಿಲ್ ಆಟದ ಮೈದಾನದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. […]

ಮಾದಕ ದ್ರವ್ಯದ ಚಟಕ್ಕೆ ಒಳಗಾದ ಅಸ್ಸಾಂ ಮೂಲದ ವ್ಯಕ್ತಿಗೆ ನವಜೀವನ ನೀಡಿದ ತಲಪಾಡಿ ತೂಮಿನಾಡಿನ ಸ್ನೇಹಾಲಯ

Saturday, February 16th, 2013
Snehalaya Charitable Trust

ಮಂಗಳೂರು : ಮಾದಕ ದ್ರವ್ಯದ ಚಟಕ್ಕೆ ಒಳಗಾಗಿ, ಮನೆ ಬಿಟ್ಟು ಬೀದಿಪಾಲದ  ಅಸ್ಸಾಂ ಮೂಲದ ದೀಪಕ್ ಛಾತ್ರಿ ಎಂಬಾತನಿಗೆ ತಲಪಾಡಿ ತೂಮಿನಾಡಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನೀಡಿದ  ಆಶ್ರಯದಿಂದಾಗಿ  ಇದೀಗ ಗುಣಮುಖನಾದ ಈತ ಸುಮಾರು ೬ ವರ್ಷಗಳ ಬಳಿಕ ತನ್ನ ಮನೆ ಸೇರುವಂತಾಗಿದೆ. ಮೂಲತಃ ಅಸ್ಸಾಂ ರಾಜ್ಯದ ಅಫ್ಲಾಂಗ್ ನಿವಾಸಿ, ದಿ. ಅಮೃತ್ ಬಹದ್ದೂರ್ ಛಾತ್ರಿ ಹಾಗೂ ರಾಧಾ ಛಾತ್ರಿ ದಂಪತಿ ಪುತ್ರ ದೀಪಕ್ ಛಾತ್ರಿ (26)  ಎಳೆವಯಸ್ಸಿನಲ್ಲಿಯೇ ಸ್ನೇಹಿತರ ಸಹವಾಸದಿಂದ ಗಾಂಜಾ, ಕುಡಿತ ಇನ್ನಿತರ ದುರಾಭ್ಯಾಸಗಳನ್ನು […]