Blog Archive

ಒತ್ತಡದಿಂದ ಆರೋಗ್ಯ ಸಮಸ್ಯೆ : ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ

Wednesday, January 8th, 2020
ayush

ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ 2019-20ನೇ ಸಾಲಿನ ಐಇಸಿ ಯೋಜನೆಯಡಿ ಜಿಲ್ಲಾ ಮಟ್ಟದ ಆಯುಷ್ ವಿಚಾರ ಸಂಕಿರಣ(ಎಸ್.ಸಿ.ಪಿ) ಕಾರ್ಯಕ್ರಮವು ಮಂಗಳವಾರ ನಗರದ ಜಿಲ್ಲಾ ಆಯುಷ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ವಾತಾವರಣ ಹಾಗೂ ಆಹಾರ ಪದ್ಧತಿಗಳಿಂದ ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತಿವೆ. ದೈನಂದಿನ ಜೀವನದ ಒತ್ತಡದಲ್ಲಿ ಮನುಷ್ಯನ ಹೃದಯ ಬಡಿತದಿಂದ ಹಿಡಿದು ಎಲ್ಲಾ ಚಟುವಟಿಕೆಗಳಲ್ಲಿ ಏರುಪೇರು ಉಂಟಾಗುತ್ತದೆ ಎಂದು ತಿಳಿಸಿದರು. ಆಯುಷ್ […]

ಪೇಜಾವರ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಇನ್ನಷ್ಟು ಕಾಲಾವಕಾಶ ಬೇಕು : ಕೆಎಂಸಿ ವೈದ್ಯರು

Tuesday, December 24th, 2019
KMC

ಉಡುಪಿ : ಉಸಿರಾಟದ ಸಮಸ್ಯೆಯಿಂದ ಶುಕ್ರವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿರುವ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಪ್ರತಿ ಹಂತದಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನಿಂದ ತಜ್ಞ ವೈದ್ಯರು ಬಂದಿದ್ದಾರೆ. ಏಮ್ಸ್ ವೈದ್ಯರ ಜೊತೆಗೂ ನಿರಂತರ […]

ಗಾಳಿ ಸುದ್ದಿಗಳನ್ನು ನಂಬಿ ಯಾರೂ ಆತಂಕಪಡಬೇಡಿ, ನಾನು ಆರೋಗ್ಯವಾಗಿದ್ದೇನೆ : ಸಿದ್ದರಾಮಯ್ಯ

Wednesday, December 11th, 2019
Siddaramaiahh

ಬೆಂಗಳೂರು : ಗಾಳಿ ಸುದ್ದಿಗಳಿಗೆ ಆತಂಕಪಡಬೇಡಿ. ನಾನು ಆರೋಗ್ಯವಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆರೋಗ್ಯದ ಕುರಿತು ಟ್ವೀಟ್ ಮಾಡಿದ ಅವರು, ನಾನು ಆರೋಗ್ಯವಾಗಿದ್ದೇನೆ. ನಿಯಮಿತವಾದ ಆರೋಗ್ಯ ತಪಾಸಣೆಗಾಗಿ ವೈದ್ಯರ ಬಳಿ ಹೋಗಿದ್ದೇನೆ. ಗಾಳಿ ಸುದ್ದಿಗಳನ್ನು ನಂಬಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆ 6:30 ಸುಮಾರಿಗೆ ಸಿದ್ದರಾಮಯ್ಯಗೆ ರಕ್ತದೊತ್ತಡ ಜಾಸ್ತಿಯಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಎದೆನೋವು ಕೂಡ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತೀಚೆಗೆ ಉಪಚುನಾವಣೆಯಲ್ಲಿ […]

ಬಾಳೆಲೆಯಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ

Tuesday, November 5th, 2019
Kodagu

ಮಡಿಕೇರಿ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಧ್ಯೇಯ ವಾಕ್ಯವಾದ ’ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ’ ಯೋಜನೆಯಡಿಯಲ್ಲಿ ಬಾಳೆಲೆಯ ಕೊಡವ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೋಮವಾರ ನಡೆಯಿತು. ಬಾಳೆಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ಶಿಬಿರ ಜರುಗಿತು. ಶಿಬಿರದಲ್ಲಿ ಬಾಳೆಲೆ ಹಾಗೂ ಸುತ್ತಮುತ್ತಲಿನ ಸುಮಾರು 800 ಅಧಿಕ ಸಾರ್ವಜನಿಕರು ಹಾಗೂ ತೋಟಗಳಲ್ಲಿ ಕೆಲಸ […]

ಮೂಲಂಗಿ ಮತ್ತು ಪುದೀನಾದಿಂದ ಚರ್ಮಕ್ಕೆ ಯಾವ ರೀತಿ ರಕ್ಷಣೆ

Monday, October 21st, 2019
Pudeena

* ಪುದಿನಾ ಒಡೆದ ಚರ್ಮಕ್ಕೆ ರಾಮಬಾಣ. * ಕೀಟಗಳು ಕಚ್ಚಿದ ಜಾಗ ಅಥವಾ ಅಲರ್ಜಿಯಾದ ಭಾಗಕ್ಕೆ ಪುದಿನಾ ಸೊಪ್ಪನ್ನು ಜಜ್ಜಿ ಅದರ ರಸವನ್ನು ಹಚ್ಚಿದಲ್ಲಿ ಮಾಯವಾಗುತ್ತದೆ. * ಇದು ಸತ್ತ ಚರ್ಮಕೋಶಕ್ಕೆ ಜೀವ ನೀಡಲಿದ್ದು ಚರ್ಮ ಒಡೆದಿದ್ದಲ್ಲಿ ಹಚ್ಚಿ. * ಮೊಡವೆ ಕಲೆಗಳ ನಿವಾರಣೆಗೂ ಕೂಡ ಸೂಕ್ತ. * ಸ್ವಲ್ಪ ಎಲೆಗಳನ್ನು ನೀರಿಗೆ ಹಾಕಿ ಕಾಯಿಸಿ ಅದರಲ್ಲಿ ಪಾದಗಳನ್ನು ಇರಿಸಿ ಆಗ ಕಾಲಿನ ಒಡಕು ಮತ್ತು ದುರ್ವಾಸನೆ ಮಾಯವಾಗುತ್ತದೆ. ಹೀಗೆ ವಾರಕ್ಕೊಮ್ಮೆ ಮಾಡಿ. ಮೂಲಂಗಿ ಅನೇಕ ಖಾಯಿಲೆಗಳನ್ನು […]

ನೂಡಲ್ಸ್ ಮಾರಾಟವನ್ನು ವಾಪಸ್ ಪಡೆದ ನೆಸ್ಲೆ ಕಂಪನಿ

Friday, June 5th, 2015
Magi Ban

ಬೆಂಗಳೂರು : ಮ್ಯಾಗಿ ಬಗ್ಗೆ ವಿವಾದವೆದ್ದಿರುವ ಹಿನ್ನಲೆಯಲ್ಲಿ ನೆಸ್ಲೆ ಕಂಪನಿ ಭಾರತದಲ್ಲಿ ಮ್ಯಾಗಿ ನೂಡಲ್ಸ್ ಮಾರಾಟವನ್ನು ವಾಪಸ್ ಪಡೆದಿದೆ. ದುಡ್ಡು ಕೊಟ್ಟು ಖರೀದಿಸಿ ಬೆಯಿಸಿದ ಕೇವಲ ಎರಡು ನಿಮಿಷದಲ್ಲಿ ಆರೋಗ್ಯವನ್ನು ಹಾಳು ಮಾಡುತಿದ್ದ ಮ್ಯಾಗಿ ಈಗ ನಿಷೇಧದ ಭೀತಿ ಎದುರಿಸುತ್ತಿದೆ. ಶುಕ್ರವಾರ ಮುಂಜಾನೆ ಈ ಕುರಿತು ನೆಸ್ಲೆ ಕಂಪನಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ತಾತ್ಕಾಲಿಕವಾಗಿ ಭಾರತದಲ್ಲಿ ಮ್ಯಾಗಿ ಮಾರಾಟವನ್ನು ವಾಪಸ್ ಪಡೆಯಲಾಗುತ್ತಿದೆ. ಸದ್ಯಕ್ಕೆ ಕಂಪನಿ ಮ್ಯಾಗಿ ಮತ್ತು ಇದೇ ತರಹದ ಯಾವುದೇ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ […]

ಕೈದಿಗಳ ನಿಯಮಿತ ಆರೋಗ್ಯ ತಪಾಸಣೆ: ಜಿಲ್ಲಾಧಿಕಾರಿ ಸೂಚನೆ

Tuesday, March 24th, 2015
dc Jail

ಮಂಗಳೂರು : ಜೈಲಿನಲ್ಲಿರುವ ಖೈದಿಗಳ ಆರೋಗ್ಯವನ್ನು ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ನಿಯಮಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾ ಕಾರಾಗೃಹದಲ್ಲಿ ಸಂದರ್ಶಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಲ್ಲದೆ, ದಂತ ಕಾಲೇಜುಗಳ ನೆರವಿನೊಂದಿಗೆ ಕೈದಿಗಳ ದಂತ ಪರೀಕ್ಷೆಯನ್ನು ನಡೆಸಲು ಅವರು ತಿಳಿಸಿದರು. ಮೊದಲ ಬಾರಿಗೆ ಸಣ್ಣ ಪುಟ್ಟ ಅಪರಾಧಗಳನ್ನು ಎಸಗಿ ಬಂಧನಕ್ಕೊಳಗಾಗಿ ಜೈಲಿಗೆ ಬರುವವರನ್ನು ಮತ್ತು ವಿದ್ಯಾರ್ಥಿ ಆರೋಪಿಗಳನ್ನು ಜೈಲಿನಲ್ಲಿ ಕುಖ್ಯಾತ ಆರೋಪಿಗಳಿರುವ ಸೆಲ್‌ನಲ್ಲಿರಿಸದೆ, ಅವರನ್ನು ಪ್ರತ್ಯೇಕ ಸೆಲ್‌ನಲ್ಲಿಡಬೇಕು. ಅಂತರ್ ಜಿಲ್ಲಾ […]

ನಗರದ ಪುರಭವನದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಜಾಗೃತಿ ಕಾರ್ಯಕ್ರಮ

Monday, July 29th, 2013
Maleria Dengue

ಮಂಗಳೂರು : ಹೆಲ್ತ್  ಕನ್ಸೆರ್ನ್ ಪೌಂಡೇಶನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮವು ಜುಲೈ17 ರಂದು ಪುರಭವನದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಎಂಎಲ್ ಸಿ ಗಣೇಶ್ ಕಾರ್ಣಿಕ್ ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಕಾರ್ಣಿಕ್ ಅವರು ರೋಗಗಳ ಬಗ್ಗೆ ಜನರಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕು. ನಗರಗಳಲ್ಲಿ ಚರಂಡಿ ಮತ್ತು ಮನೆಯ ಆವರಣದಲ್ಲಿ ಕೊಳಕು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಮಲೇರಿಯಾ ಮತ್ತು ಡೆಂಗ್ಯೂವಿನಂತಹ ರೋಗಗಳ […]

ತೆಳ್ಳಗಾಗಲು ಆರೋಗ್ಯಕರ 10 ಟಿಪ್ಸ್

Saturday, October 27th, 2012
Weight loses tips

ದೇಹದ ತೂಕವನ್ನು ಸಮತೋಲನದಲ್ಲಿ ಇಡಬೇಕು. ದಪ್ಪವಾದರೆ ದೇಹದ ಸುಂದರ ಆಕಾರ ಹಾಳಾಗುವುದು ಮಾತ್ರವಲ್ಲ ಅನೇಕ ಕಾಯಿಲೆಗಳು ಬರಲಾರಂಭಿಸುತ್ತದೆ. ಕೆಲವರು ಸಣ್ಣಗಾಗಲು ಡಯಟ್ ಮಾಡಿ ತೆಳ್ಳಗಾಗುತ್ತಾರೆ, ಆದರೆ ಆ ಡಯಟ್ ನಿಲ್ಲಿಸಿದ ಸ್ವಲ್ಪ ದಿನದಲ್ಲಿಯೇ ಪುನಃ ದಪ್ಪಗಾಗುತ್ತಾರೆ. ಇನ್ನು ಕಟ್ಟುನಿಟ್ಟಿನಡಯಟ್ ಮಾಡಿದರಂತೂ ಪಥ್ಯದಲ್ಲಿರುವಂತೆ ಅನಿಸುವುದು, ಆದರೆ ಬಾಯಿಗೆ ರುಚಿಕರವಿಲ್ಲದೆ ಡಯಟ್ ಬಗ್ಗೆ ಬೇಸರಿಕೆ ಬಂದು ಬಿಡುತ್ತದೆ. ಆದರೆ ಈ ಕೆಳಗೆ ಸಮತೂಕಕ್ಕಾಗಿ 10 ಟಿಪ್ಸ್ ಹೇಳಲಾಗಿದೆ. ಅದನ್ನು ಪಾಲಿಸಿದರೆ ಪಥ್ಯವನ್ನು ಪಾಲಿಸಬೇಕಾಗಿಲ್ಲ, ಇಲ್ಲಿ ಹೇಳಿರುವ ಟಿಪ್ಸ್ ಗಳನ್ನು ಗಮನದಲ್ಲಿಟ್ಟು […]