ವಿಶಾಲಾ ಗಾಣಿಗ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿ ಮುಂಬೈನಲ್ಲಿ ವಶಕ್ಕೆ

Saturday, July 24th, 2021
Vishala Ganiga

ಉಡುಪಿ  :  ವಿಶಾಲಾ ಗಾಣಿಗ ಕೊಲೆ ಪ್ರಕರಣದ ಆರೋಪಿ ರಾಮಕೃಷ್ಣ ಗಾಣಿಗನ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಶುಕ್ರವಾರ ಕೊನೆಗೊಂಡಿದ್ದು ಆತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಉಪ್ಪಿನಕೋಟೆಯ ಕುಮ್ರಗೋಡಿನ ಪ್ಲ್ಯಾಟ್ ನಲ್ಲಿ ನಡೆದ ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ತನಿಖಾಧಿಕಾರಿ ಬ್ರಹ್ಮಾವರ ಸಿ.ಪಿ.ಐ ಅನಂತಪದ್ಮನಾಭ ಮತ್ತು ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿತು. ತಲೆಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಇದೀಗ ತನಿಖಾ ತಂಡ ಮುಂಬೈನಲ್ಲಿ ವಶಕ್ಕೆ ಪಡೆದಿದೆ ಎನ್ನಲಾಗಿದೆ. ಹಾಗೂ ಕೊಲೆಯ ಸಂದರ್ಭ ವಿಶಾಲಾ ಧರಿಸಿದ್ದ ಸುಮಾರು […]

ಮೊಬೈಲ್ ದಾಖಲೆ ಆಧಾರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಶಂಕಿತ ಆರೋಪಿ ವಶಕ್ಕೆ

Thursday, December 3rd, 2020
Terorist

ಮಂಗಳೂರು : ಮೊಬೈಲ್ ದಾಖಲೆ ಆಧಾರದಲ್ಲಿ ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ತೀರ್ಥಹಳ್ಳಿಯ ನಝೀರ್ ಮುಹಮ್ಮದ್ (26)ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಕದ್ರಿ ಪೊಲೀಸರು ಆತನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈತ ನಗರದಲ್ಲಿ ಆನ್ ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ. ಮೊಬೈಲ್ ದಾಖಲೆ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ನ.27ರಂದು ಕದ್ರಿ‌ […]

ಅಕ್ರಮವಾಗಿ ಕರುಗಳನ್ನು ಸಾಗಾಟ : ಆರೋಪಿಗಳಿಬ್ಬರು ಪರಾರಿ

Thursday, September 24th, 2020
calf

ಮಂಗಳೂರು  : ಅಕ್ರಮವಾಗಿ  ಕರುಗಳನ್ನು ಸಾಗಾಟ ನಡೆಸುತ್ತಿದ್ದ ಕಾರನ್ನು ಉಳ್ಳಾಲ ಪೊಲೀಸರು ಕಲ್ಲಾಪು ಸಮೀಪ ಅಡ್ಡ ಗಟ್ಟಿ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ವೇಳೆ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ ಜಾನುವಾರು ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕಲ್ಲಾಪು ಸಮೀಪ ಅಡ್ಡಗಟ್ಟಿದ್ದರು. ಈ ಸಂದರ್ಭ ಕಾರಿನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ‌. ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಅಂಗಡಿಯಿಂದ ಹಾಡಹಗಲೇ ಒಂದು ಲಕ್ಷ ರೂ. ಹಣ ಕದ್ದ ಆರೋಪಿಯ ಬಂಧನ

Wednesday, September 16th, 2020
safi

ಮಂಗಳೂರು : ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ತಿಂಗಳಾಡಿ ಎಂಬಲ್ಲಿ ಅಂಗಡಿಯಿಂದ ಹಾಡಹಗಲೇ ಹಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು  ಬುಧವಾರ ಬಂಧಿಸಿದ್ದಾರೆ. ಆರೋಪಿ ಮಹಮ್ಮದ್ ಶಾಫಿ ( 28 ) ಯನ್ನು ಮನೆಯಿಂದ  ದಸ್ತಗಿರಿ ಮಾಡಿ ಕಳುವಾಗಿದ್ದ ಒಂದು ಲಕ್ಷ ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬಂಧನಸೆ. 14 ರಂದು ಮಧ್ಯಾಹ್ನ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ಮಾತೃಶ್ರೀ ಕಾಂಪ್ಲೆಕ್ಸ್ನ ಅಂಗಡಿಯೊಂದರಿಂದ ಆರೋಪಿ 1 ಲಕ್ಷ ಹಣ ಕಳವು […]

ಎರಡನೇ ಬಾರೀ ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡ ಕಳವು ಪ್ರಕರಣದ ಆರೋಪಿ

Monday, August 24th, 2020
shainuddin

ಕಾಸರಗೋಡು : ವಾಹನ ಕಳವು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಗುರುತಿಸಿಕೊಂಡ ಆರೋಪಿ ಕೊರೊನಾ ಸೋಂಕಿತ  ವ್ಯಕ್ತಿ ಕ್ವಾರಂಟೈನ್ ಕೇಂದ್ರದಿಂದ ಎರಡನೇ ಬಾರೀ  ಪರಾರಿಯಾ ಘಟನೆ ನಡೆದಿದೆ. ಕಾಸರಗೋಡು ತೆಕ್ಕಿಲ್ ಮಾಂಗಾಡ್ ನ ರಂಶಾನ್ ಸೈನುದ್ದೀನ್(20) ಪರಾರಿಯಾದವನು. ಕೆಲ ದಿನಗಳ ಹಿಂದೆ ಕಣ್ಣೂರು ಎಡಕ್ಕಾಡ್ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ  ಈತನನ್ನು ಹಿಡಿದು ಬಳಿಕ ಅಂಜರ ಕಂಡಿಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು. ಈ ಕೆಂದ್ರದಿಂದಲೂ ಈತ ತಪ್ಪಿಸಿಕೊಂಡಿದ್ದು, ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಈತನಿಗಾಗಿ ಶೋಧ ನಡೆಯುತ್ತಿದೆ. ಈತನನ್ನು ಎಡಕ್ಕಾಡ್ ಪೊಲೀಸರು ಬಂಧಿಸಿ ಕ್ವಾರಂಟೈನ್ […]

ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಅಕ್ರಮವಾಗಿ ಸಾಗಾಟ, ಇಬ್ಬರು ಆರೋಪಿಗಳ ಸೆರೆ

Saturday, August 22nd, 2020
ganja

ಉಡುಪಿ : ಕಂಟೈನರ್ ಲಾರಿಯಲ್ಲಿ ಉತ್ತರಪ್ರದೇಶದಿಂದ ಮಂಗಳೂರಿಗೆ ಬಿದಿರು ತುಂಬಿಸಿಕೊಂಡು ಅದರೊಳಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 49 ಕೆಜಿ ಗಾಂಜಾವನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬ್ರಹ್ಮಾವರ ತಾಲೂಕು ಹೇರೂರು ಬಳಿ ಪೊಲೀಸರು ತಡೆದು ತಪಾಸಣೆ ನಡೆಸಿ ಸುಮಾರು 49 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ತಮಿಳುನಾಡಿನ ತಿರುವನ್ ವೆಲ್ಲಿ ಜಿಲ್ಲೆಯ ಕರುತಪಾಂಡಿ (40) ಮತ್ತು ಪಶ್ಚಿಮ ಬಂಗಾಳದ ವಾನು ಹಲ್ ದಾರ್ (30) ಎಂದು ಗುರುತಿಸಲಾಗಿದೆ. ಆರೋಪಿಗಳು  ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಅಕ್ರಮವಾಗಿ […]

ಧಾರವಾಡ : ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

Tuesday, August 11th, 2020
karave

ಧಾರವಾಡ : ಜಿಲ್ಲೆಯ ಬೇಗೂರು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಸಾವು ಧಾರವಾಡ ಜಿಲ್ಲೆ ಜನತೆಗೆ ಹೆಣ್ಣು ಮಕ್ಕಳನ್ನು ಕಾಪಾಡುವ ಭಯದ ವಾತಾವರಣ ಬಂದಿದೆ, ಆರೋಪಿಗೆ ಶೀಘ್ರವೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ನೇಹ ಬಳಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದೆ. ಅಪರಾಧಿಯನ್ನು ಮಾತ್ರ ಬಂಧಿಸಿದ್ದೀರಿ ಆದರೆ ಅಪರಾಧಿ ಬಶೀರ ನ ಸಂಬಂಧಿಕರು ಪೂಜಾಳಾ ಕುಟುಂಬಕ್ಕೆ ಜೀವ ಬೆದರಿಕೆ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. […]

ದ.ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

Wednesday, July 29th, 2020
sindhubroopesh

ಮಂಗಳೂರು :  ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಬಜ್ಪೆ ಸಮೀಪದ ನಿವಾಸಿ ರಂಜಿತ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ಮಾಡಿದರೆ  ಕಾನೂನು ಕ್ರಮ ಕೈಗೊಳ್ಳುವುದಾಗಿ  ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ […]

ಓಮ್ನಿ ವಾಹನದಲ್ಲಿ ಅಕ್ರಮ ಗೋಸಾಗಟ, ಆರೋಪಿಗಳು ಪರಾರಿ

Tuesday, July 28th, 2020
cattle transport

ಬಂಟ್ವಾಳ: ಅಕ್ರಮವಾಗಿ  ಓಮ್ನಿ ವಾಹನದಲ್ಲಿ ಗೋಸಾಗಟ ನಡೆಸುತ್ತಿದ್ದ ತಂಡವನ್ನು ಸೋಮವಾರ ರಾತ್ರಿ ಬಂಟ್ವಾಳ ನಗರ ಪೊಲೀಸರು ತಡೆದಿದ್ದು, ಓಮ್ನಿ ಮತ್ತು ಒಂದು ದನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾರ್ನಬೈಲು ಎಂಬಲ್ಲಿ ಒಮ್ನಿ ಕಾರೊಂದು ವೇಗವಾಗಿ ಬರುತ್ತಿದ್ದು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸಿದೆ ನಂದವಾರ ರಸ್ತೆಯ ಮೂಲಕ ವೇಗವಾಗಿ ಕಾರು ಮುಂದೆ ಹೋಗಿದೆ. ಪೊಲೀಸರು ವಾಹನವನ್ನು ಬೆನ್ನಟ್ಟಿ ಕೊಂಡು ಹೋದಾಗ ನಂದಾವರ ಎಂಬಲ್ಲಿ ಅಂಗಡಿಯೊಂದಕ್ಕೆ ಕಾರು ಡಿಕ್ಕಿ ಹೊಡೆದು ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ವಾಹನದೊಳಗೆ ಒಂದು […]

ಐಕಳ ಹರೀಶ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಪೋಸ್ಟ್, ಆರೋಪಿಯ ಬಂಧನಕ್ಕೆ ಒತ್ತಾಯ

Tuesday, July 21st, 2020
ikala harish shetty

ಉಡುಪಿ : ಕೆಲವು ದಿನಗಳ ಹಿಂದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಬಗ್ಗೆ ಅವರ ಘನತೆಗೆ ಧಕ್ಕೆ ಬರುವಂತೆ ಅವಹೇಳನಕಾರಿ ಸುದ್ದಿಯನ್ನು ವಾಟ್ಸಪ್ ಸೋಷಿಯಲ್ ಮೀಡಿಯಾ ಮುಖಾಂತರ ಯಾರೋ ವಿಕೃತ ಮನಸ್ಸಿನ ವ್ಯಕ್ತಿ ವೈರಲ್. ಈ ಬಗ್ಗೆ ವಿಶ್ವದಾದ್ಯಂತ ಇರುವ ಎಲ್ಲಾ ಬಂಟರ ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಲು ಆಕೋಶ ವ್ಯಕ್ತಪಡಿಸಿ ಈ ಕೃತ್ಯವನ್ನು ಖಂಡಿಸಿದ್ದು ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಬೇಕು ಎಂದು ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ ಈ ಎಲ್ಲಾ […]