ಆಳ್ವಾಸ್ ವಿರಾಸತ್ ನಲ್ಲಿ ಗಾನ ವೈಭವ, ಬಿದಿರೆ ನಾಡಲ್ಲಿ ‘ಬಿನ್ನಿ’ ಬಕ್ತಮೀಸ್ ದಿಲ್ ಜೋಶ್

Friday, December 15th, 2023
Alvas Virasath

ಮೂಡಬಿದಿರೆ : ಪಡುವಣದಲ್ಲಿ ನೇಸರ ಹೊಂಗಿರಣ ಬೀರಿ ಬೈ ಬೈ ಹೇಳುತ್ತಿದ್ದರೆ, ಇತ್ತ ಮೂಡಣ ದಿಕ್ಕಿನ ಬಿದಿರೆಯ ನಾಡಲ್ಲಿ, ಶಿಕ್ಷಣ- ಸಾಂಸ್ಕೃತಿಕ ಕಾಶಿಯ ಬೀಡಲ್ಲಿ ನಾದ ನಿನಾದ ‘ಗಾನ ವೈಭವ’ ಮೊಳಗಿತು. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ 19ಕ್ಕೂ ಅಧಿಕ ಭಾಷೆಗಳಲ್ಲಿ 3500 ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬಿನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಸೇರಿದಂತೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಸ್ವರ ಮಾಧುರ್ಯಕ್ಕೆ […]

ʼ ಆಸಕ್ತಿ, ಕನಸು, ದೂರದೃಷ್ಟಿ, ಹಾಸ್ಯಪ್ರಜ್ಞೆಯ ಸಂಗಮ ಯಶೋವರ್ಮ ʼ

Tuesday, December 5th, 2023
ʼ ಆಸಕ್ತಿ, ಕನಸು, ದೂರದೃಷ್ಟಿ, ಹಾಸ್ಯಪ್ರಜ್ಞೆಯ ಸಂಗಮ ಯಶೋವರ್ಮ ʼ

ಮಂಗಳೂರು: ಹೊಗಳಿಕೆಗೆ ಹಿಗ್ಗದೆ ಟೀಕೆಗೆ ಜಗ್ಗದೆ ಮೌಲ್ಯಾಧಾರಿತ ಶಿಸ್ತಿನ ಜೀವನ ನಡೆಸಿದ ಸಹೋದರನಂತಿದ್ದ ಡಾ. ಬಿ ಯಶೋವರ್ಮ ಅವರು ನಮಗೆ ಶ್ರೇಷ್ಠ ಜೀವನ ಮಾದರಿಯನ್ನು ಬಿಟ್ಟು ಹೋಗಿದ್ದಾರೆ, ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು. ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಸಂಘ ಇವರ ಜಂಟಿ […]

ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ – ವಿವೇಕ್ ಆಳ್ವ

Tuesday, September 12th, 2023
Vivek-Alva

ಮಂಗಳೂರು : “ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಇದನ್ನು ಇಂದಿನ ಯುವ ಸಮಾಜ ಅರಿತುಕೊಳ್ಳಬೇಕಾಗಿದೆ. ಯುವಕರೆಂದರೆ ಒಂದಷ್ಟು ಜನಾಂಗ ಅಥವಾ ವ್ಯಕ್ತಿಗಳಲ್ಲ. ಪ್ರತಿಯೊಂದು ವ್ಯಕ್ತಿ, ಸಂಸ್ಥೆ ಮತ್ತು ವಿಷಯಗಳಿಂದ ನಾವು ಸ್ಪೂರ್ತಿಗೊಳ್ಳಬೇಕು. ಸಮಾಜದ ಪ್ರಸಿದ್ಧ ವ್ಯಕ್ತಿಗಳಿಂದ ನಾವು ಸ್ಫೂರ್ತಿಗೊಳ್ಳಬೇಕು. ಸ್ಪೂರ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವಿಶ್ವಸ್ಥರಾದ ವಿವೇಕ್ ಆಳ್ವ ಅಭಿಪ್ರಾಯಪಟ್ಟರು ಮಂಗಳೂರು ರಾಮಕೃಷ್ಣ ಮಿಷನ್ ಆಯೋಜಿಸಿದ ಸ್ಪೂರ್ತಿ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು […]

‘ದೇಶಕ್ಕೆ ನಮ್ಮ ಕೊಡುಗೆ ಏನು?’: ನಿವೃತ್ತ ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ

Monday, January 27th, 2020
Alvas-Republicday

ಮೂಡುಬಿದಿರೆ : ದೇಶದಲ್ಲಿ ನೂರ ಮೂವತ್ತು ಕೋಟಿ ಜನಸಂಖ್ಯೆ ಇದ್ದರೂ ಅಬ್ದುಲ್ ಕಲಾಂ ಕಂಡ 2020 ಯ ಕನಸನ್ನು ಪೂರ್ಣವಾಗಿ ಸಾಕಾರಗೊಳಿಸಲು ವಿಫಲರಾಗಿದ್ದೇವೆ. ಸಾಧಿಸಬೇಕಾದ ವಿಷಯಗಳು ಇನ್ನು ತುಂಬಾ ಇವೆ. ಭಾರತದಲ್ಲಿ ಪ್ರತಿದಿನವು ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ದೇಶದಲ್ಲಿ 40 ಕೋಟಿಯಷ್ಟು ಜನರು ತಿನ್ನಲು ಅನ್ನ ಸಿಗದೆ ನರಳುತ್ತಿದ್ದಾರೆ. ನಮ್ಮ ರಕ್ಷಣೆಯಿಂದ ಹಿಡಿದು ದೇಹದ ಆರೋಗ್ಯವನ್ನು ಕಾಪಾಡಿ ಕೊಳ್ಳುವವರೆಗೆ ಪ್ರತೀ ವ್ಯವಸ್ಥೆಯನ್ನು ದೇಶ ಮಾಡಿಕೊಟ್ಟಿದೆ ಹೀಗಿರುವಾಗ ದೇಶ ಚೆನ್ನಾಗಿರಲು ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಚಿಂತಿಸುವ ಅನಿವಾರ್ಯತೆ ಇದೆ […]

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ಘೋಷಣೆ

Tuesday, October 1st, 2019
Alvas

ಮೂಡುಬಿದಿರೆ : ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ಘೋಷಣೆ ಮತ್ತು ಪ್ರತಿಷ್ಠಾನದ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆಗಳ ಲೋಕಾರ್ಪಣೆ ವಿದ್ಯಾಗಿರಿಯಲ್ಲಿ ಸೋಮವಾರ ಜರಗಿತು. ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ಸಮಾರಂಭವನ್ನು ಉದ್ಘಾಟಿಸಿ, ಸಮಗ್ರ ಶಿಕ್ಷಣದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣ ದೊಂದಿಗೆ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಾದರಿಯಾದ ಬದ್ಧತೆ ತೋರುತ್ತಿದೆ ಎಂದರು. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಾತನಾಡಿ, ಸಮಾಜಮುಖೀಯಾಗಿ ಶಿಕ್ಷಣ […]

ಹಿಂದಿನ ಕಾಲದ ಶಿಕ್ಷಕರು ಜೀವನ ಸಾಫಲ್ಯತೆಯ ಮಾರ್ಗಗಳನ್ನು ಬೋಧಿಸುತ್ತಿದ್ದರು : ಪಶುಪತಿ ಶಾಸ್ತ್ರಿ

Saturday, September 8th, 2018
Pashupati

ಮೂಡುಬಿದಿರೆ : ಒಬ್ಬ ಪರಿಪೂರ್ಣ ಶಿಕ್ಷಕನಿಂದ ಮಾತ್ರ ಉತ್ತಮ ವಿದ್ಯಾರ್ಥಿಯನ್ನು ನಿರ್ಮಿಸಲು ಸಾದ್ಯ. ಹಿಂದಿನ ಕಾಲದ ಶಿಕ್ಷಕರು ಮಕ್ಕಳಿಗೆ ಕೇವಲ ವಿದ್ಯೆಯನ್ನು ಧಾರೆಯೆರೆಯುತ್ತಿರಲಿಲ್ಲ, ಅವರಲ್ಲಿ ಮಾನವೀಯ ಮೌಲ್ಯದೊಂದಿಗೆ ಜೀವನ ಸಾಫಲ್ಯತೆಯ ಮಾರ್ಗಗಳನ್ನು ಬೋಧಿಸುತ್ತಿದ್ದರು ಎಂದು ನಿವೃತ್ತ ಶಿಕ್ಷಕ ಪಶುಪತಿ ಶಾಸ್ತ್ರಿ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಆ ಕಾಲದ ಶಿಕ್ಷಕರು ತಾವು ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡುತ್ತಿದ್ದರು. ತಮ್ಮ ವಿದ್ಯಾರ್ಥಿಗಳಿಗೆ ಪ್ರೀತಿಯ ಪೆಟ್ಟು ಹಾಗು ಶಿಕ್ಷಾ […]

ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆಳ್ವಾಸ್ ಪ್ರಗತಿ ವರದಾನವಾಗಿದೆ : ಸಂಸದ ನಳಿನ್

Friday, July 6th, 2018
Alvas pragathi

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ ಎರಡು ದಿನಗಳು ನಡೆಯುವ 10ನೇ ಆವೃತ್ತಿಯ ಅಳ್ವಾಸ್ ಪ್ರಗತಿ- ಬೃಹತ್ ಉದ್ಯೋಗ ಮೇಳಕ್ಕೆ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಆಳ್ವಾಸ್ ಪ್ರಗತಿಗೆ ಚಾಲನೆ ನೀಡಿ ಮಾತನಾಡಿ, ತಮ್ಮ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆಯಲು ನಾಡಿನ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆಳ್ವಾಸ್ ಪ್ರಗತಿ ವರದಾನವಾಗಿದೆ. ಪಾರದರ್ಶಕವಾಗಿ ನಡೆಯುವ ಉದ್ಯೋಗಮೇಳದಿಂದಾಗಿ ಯುವಜನರು ಉದ್ಯೋಗ ಪಡೆಯಲು ಬೇಕಾದ ಆತ್ಮವಿಶ್ವಾಸವನ್ನು […]

ಆಳ್ವಾಸ್‍ನಲ್ಲಿ ಕ್ರಿಸ್ಮಸ್ ಸಂಭ್ರಮ

Thursday, December 21st, 2017
alwas

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ಕ್ರಿಸ್ಮಸ್ 2017 ಕಾರ್ಯಕ್ರಮವನ್ನು ವಿದ್ಯಾಗಿರಿಯಲ್ಲಿರು ನುಡಿಸಿರಿ ವೇದಿಕೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು. ಮಂಗಳೂರು ಧರ್ಮ ಪ್ರಾಂತದ ಜ್ಯುಡಿಷಿಯಲ್ ವಿಕಾರ್ ವಂ. ವೋಲ್ಟರ್ ಡಿ’ಮೆಲ್ಲೊ ಕ್ರಿಸ್ಮಸ್ ಸಂದೇಶ ನೀಡಿ, ಭಯೋತ್ಪಾದನೆ, ಅಶಾಂತಿಯಂತಹ ಪರಿಸ್ಥಿತಿಯಲ್ಲಿ ಶಾಂತಿಯ ಮರು ಸ್ಥಾಪನೆಯಾಗಬೇಕು. ಹೃದಯಾಂತರಾಳದಲ್ಲಿ ಪ್ರೀತಿ, ವಿಶ್ವಾಸ, ಸಹೋದರತೆಯ ಭಾವನೆ ಪ್ರತಿಯೊಂದು ಮತದ ಜನರಲ್ಲಿ ಮೂಡಬೇಕು. ಹೃದಯವಂತರಾಗಿ ಶಾಂತಿಯನ್ನು ಅನುಭವಿಸುವುದು ಆದ್ಮಾತ್ಮದ ಅನುಭೂತಿ ಪಡೆಯಲು ಸಾಧ್ಯವಾಗುತ್ತದೆ. ದೇವರ ಮೇಲಿನ ಭಕ್ತಿ ಸುಮನಸ್ಸನ್ನು ನೀಡುತ್ತದೆ. ವಿಶ್ವದ ಶಾಂತಿಯ ಪ್ರತೀಕವಾಗಿರುವ […]

ಕೊಣಾಜೆಕಲ್ಲಿಗೆ ಎನ್‍ಸಿಸಿ ಚಾರಣ

Saturday, December 16th, 2017
Alwas-truck

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಭಾವೈಕ್ಯ ಶಿಬಿರಕ್ಕೆ ಪೂರಕವಾಗಿ ಮೂಡುಬಿದಿರೆ ಸಮೀಪದ ಕೊಣಾಜೆಕಲ್ಲಿಗೆ ಚಾರಣವನ್ನು ಹಮ್ಮಿಕೊಳ್ಳಲಾಯಿತು. ದೇಶದ ವಿವಿಧ ರಾಜ್ಯಗಳಿಂದ ಬಂದಂತಹ 600 ಮಂದಿ ಎನ್‍ಸಿಸಿ ಕೆಡೆಟ್‍ಗಳು ಎನ್‍ಸಿಸಿ ಶಿಬಿರ ಅಧಿಕಾರಿಗಳು, ವಿವಿಧ ವಿಭಾಗಗಳ ಪದಾಧಿಕಾರಿಗಳು ಹಾಗೂ ಯೋಧರ ಜೊತೆಗೂಡಿ ಔದಲ್ ಜಂಕ್ಷನ್‍ನಿಂದ ಕೊಣಾಜೆಕಲ್ಲು ಬೆಟ್ಟದವರೆಗೆ ಸುಮಾರು 5 ಮೀ ದೂರವನ್ನು ಕ್ರಮಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆ

Wednesday, April 19th, 2017
Alvas Mahaveera Jayanthi-

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ,  ನಮ್ಮ ಶಕ್ತಿಯನ್ನು ನಾವು ಒಳ್ಳೆ ಉದ್ದೇಶಕ್ಕೆ ಬಳಸಬೇಕೆಂದು ಮಹಾವೀರರ ಆಶಯವಾಗಿತ್ತು. ನಮ್ಮಲ್ಲಿರುವ ಮದ ಮೋಹ ಮತ್ಸರ. ಅವೆಲ್ಲವನ್ನು ತೊರೆದು ಶುದ್ಧಾತ್ಮನಾಗಬೇಕು ಎಂಬುವುದಕ್ಕೆ ಸಪ್ತ ತತ್ವಗಳನ್ನು ಬೋಧಿಸಿದ್ದಾರೆ. ನಾವು ಎಲ್ಲ ಜೀವಿಗಳಲ್ಲೂ ದಯೆ ಅನುಕಂಪಗಳನ್ನು ಬೆಳೆಸಿಕೊಳ್ಳಬೇಕು. ಶುದ್ಧ ಮನಸ್ಸನ್ನು ಹೊಂದಿರಬೇಕೆಂಬ ಮಹಾವೀರರ ಸಂದೇಶವನ್ನು ನಾವು […]