ಜಲಪಾತದ ವೀಕ್ಷಣೆಗೆ ಹೋಗಿದ್ದ ಯುವಕ ಮಣ್ಣಿನಡಿ ಸಿಲುಕಿ ನಾಪತ್ತೆ

Tuesday, January 26th, 2021
Bangar Palke

ಬೆಳ್ತಂಗಡಿ:  ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಅರಣ್ಯ ಪ್ರದೇಶದಲ್ಲಿರುವ ಜಲಪಾತಕ್ಕೆ ತೆರಳಿದ್ದ ಉಜಿರೆ ಮೂಲದ ಯುವಕ ಮಣ್ಣಿನಡಿ ಸಿಲುಕಿ  ನಾಪತ್ತೆಯಾಗಿರುವ  ಘಟನೆ ನಡೆದಿದೆ. ಜಲಪಾತದ  ವೀಕ್ಷಣೆಗೆ ಹೋಗಿದ್ದ ನಾಲ್ವರು ಯುವಕರ ಮೇಲೆ ದಿಢೀರನೆ ಕುಸಿದಿದೆ. ಘಟನೆಯಲ್ಲಿ ಮೂವರು ಯುವಕರು ಪಾರಾಗಿದ್ದು ಓರ್ವ ಮಣ್ಣಿನಡಿಯಲ್ಲಿ ಸಿಲುಕಿದ್ದಾನೆ. ನಾಪತ್ತೆಯಾದ ಯುವಕನ್ನು ಬೆಳ್ತಂಗಡಿ ಸಮೀಪದ ಕಾಶಿಬೆಟ್ಟು ಸಮೀಪದ ನಿವಾಸಿ ಎಂದು ಹೇಳಲಾಗಿದೆ. ಅರಣ್ಯದಂಚಿನಲ್ಲಿ ಇರುವ ಈ ಜಲಪಾತ ಜನವಸತಿಯಿಂದ ದೂರವಿದೆ. ಇತ್ತೀಚೆಗಷ್ಟೆ ಜಲಪಾತಕ್ಕೆ ನಿಷೇಧ ಹೇರುವಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಒತ್ತಡ […]

9ನೇ ತರಗತಿ ವಿದ್ಯಾರ್ಥಿನಿಯ ಬೆತ್ತಲೆ ಚಿತ್ರವನ್ನು ಪಡೆದು ಬ್ಲಾಕ್ ಮೇಲ್ ಮಾಡಿದ ವ್ಯಕ್ತಿ !

Saturday, January 23rd, 2021
mohammed Aman

ಉಜಿರೆ : ಸ್ನೇಹಿತೆಯ  ಮೂಲಕ ಪರಿಚಯವಾದ ಬೆಂಗಳೂರು ಮೂಲದ 9ನೇ ತರಗತಿ ವಿದ್ಯಾರ್ಥಿನಿಯ ಬೆತ್ತಲೆ ಚಿತ್ರವನ್ನು ಪಡೆದುಕೊಂಡು ಉಜಿರೆಯ ವ್ಯಕ್ತಿಯೊಬ್ಬ ಬ್ಲಾಕ್ ಮೇಲ್ ಮಾಡುತ್ತಿರುವುದಲ್ಲದೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ಮಹಮ್ಮದ್ ಅಮನ್ ಎಂದು ಹೇಳಲಾಗಿದೆ. ಈತ  ದೂರವಾಣಿ ಮೂಲಕ ಸಂಪರ್ಕಿಸಿ ಸ್ನೇಹ ಬೆಳೆಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಮೀನಿನ ವ್ಯಾಪಾರಿಯೊಬ್ಬರ ಪುತ್ರನಾಗಿರುವ ಈತ ತನ್ನ ಸ್ನೇಹಿತೆಯ ಮುಖಾಂತರ 9ನೇ ತರಗತಿ ವಿದ್ಯಾರ್ಥಿನಿಯ ಪರಿಚಯ ಮಾಡಿಕೊಂಡನು.  ಬಳಿಕ ಹೇಗೋ […]

ಉದ್ಯಮಿಯ 8 ವರ್ಷದ ಪುತ್ರನ ಅಪಹರಣ, 10 ಕೋಟಿ ಹಣದ ಬೇಡಿಕೆ

Friday, December 18th, 2020
Anubhav

ಉಜಿರೆ: ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಉಜಿರೆಯ ರಥಬೀದಿ ನಿವಾಸಿ, ಖ್ಯಾತ ಉದ್ಯಮಿ ಬಿಜೋಯ್ ಯವರ 8 ವರ್ಷದ ಪುತ್ರ ಅನುಭವ್ ನನ್ನು  ಗುರುವಾರ ಸಂಜೆ ಮನೆಯಂಗಳದಿಂದ  ಅಪಹರಿಸಲಾಗಿದ್ದು, ಅಪಹರಣಗಾರರ ಸುಳಿವು ಇನ್ನೂ ಲಭ್ಯವಾಗಿಲ್ಲ. ಆದರೆ ಅಪಹರಣಗಾರರು ಬಾಲಕನ ಬಿಡುಗಡೆಗೆ ರೂ.10 ಕೋಟಿ ಹಣದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಡಿ.17 ರಂದು ಮನೆಯ ಗೇಟಿನ ಬಳಿ ಆಟವಾಡುತ್ತಿದ್ದ ಅನುಭವ್ ನನ್ನು ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಈ ಸಂದರ್ಭ ಬಾಲಕನ ತಾತ ಶಿವನ್ ರವರು ಓಡಿ […]

ತಲೆಯ ಮೇಲೆ ಕಲ್ಲು ಬಿದ್ದು ಹಾಸ್ಯ ಕಲಾವಿದ ರಾಘವೇಂದ್ರ ಆಚಾರ್ಯ ಮೃತ್ಯು

Sunday, October 4th, 2020
Raghavendra Acharya

ಬೆಳ್ತಂಗಡಿ : ಯುವ ಕಲಾವಿದ ಹಾಗೂ ಚಲನಚಿತ್ರ ನಟರಾಗಿದ್ದ ರಾಘವೇಂದ್ರ ಆಚಾರ್ಯಗೋಳಿಕಟ್ಟೆ ಅವರು ತಲೆಯ ಮೇಲೆ ಕಲ್ಲು ಕುಸಿದು ಬಿದ್ದ ಪರಿಣಾಮ ಅ.4 ರಂದು ದಾರುಣವಾಗಿ ಮೃತಪಟ್ಟಿದ್ದಾರೆ. ರಾಘವೇಂದ್ರ ಆಚಾರ್ಯ ಅವರು ಬಳಪದ ಕಲ್ಲಿನಿಂದ ರೊಟ್ಟಿ ಮಾಡುವ ಹಂಚನ್ನು ತಯಾರಿಸುತ್ತಿದ್ದರು. ತನ್ನ ಪ್ಯಾಕ್ಟರಿಯಲ್ಲಿ  ಕೆಲಸ ಮಾಡುತ್ತಿದ್ದ ಸಂದರ್ಭ ಕುಲುಮೆಯ ಮೇಲಿನಿಂದ ಏಕಾಏಕಿ ಕಲ್ಲೊಂದು ಜಾರಿ ತಲೆ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯವಾಗಿ ಅವರು ಅಕಾಲಿಕವಾಗಿ ಸಾವನ್ನಪ್ಪಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ, ಉಜಿರೆಯಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನ, […]

ಕೃಷಿಯಲ್ಲಿ ಖುಷಿ ಕಂಡ ವಿದ್ಯಾರ್ಥಿಗಳು

Monday, January 13th, 2020
krishi

ಉಜಿರೆ : ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕಿ ಪರಿಮಳಾ ನೇತೃತ್ವದಲ್ಲಿ ಬೂಡುಜಾಲು ವಿಶ್ವನಾಥ ಗೌಡರ ಮನೆಗೆ ಭೇಟಿ ನೀಡಿ ಕೃಷಿ ಹಾಗೂ ಪೂರಕ ಚಟುವಟಿಕೆಗಳ ಬಗ್ಯೆ ಮಾಹಿತಿ ಕಲೆ ಹಾಕಿ ಖುಷಿ ಪಟ್ಟರು. ಶಿಕ್ಷಕಿಯರಾದ ಸೌಮ್ಯ, ಜಯಂತಿ ಮತ್ತು ಸಂತೋಷ ಸಹಕರಿಸಿದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಮತ್ತು ಅರಣ್ಯ ಇಲಾಖಾ ಅಧಿಕಾರಿ ಅಶೋಕ್ ಮಾಹಿತಿ, ಮಾರ್ಗದರ್ಶನ ನೀಡಿದರು. ಜೇನು ಸಾಕಣೆ, ಕಸಿ ಕಟ್ಟುವ ಬಗ್ಯೆ ಪ್ರಾತ್ಯಕ್ಷಿಕೆಯನ್ನು ಕುತೂಹಲದಿಂದ ವೀಕ್ಷಿಸಿದರು. ವಿವಿಧ […]

ಉಜಿರೆಯಲ್ಲಿ ವನರಂಗ ಬಯಲುರಂಗ ಮಂದಿರ ಉದ್ಘಾಟನೆ

Monday, December 9th, 2019
vanaranga

ಉಜಿರೆ: ಕಲಾವಿದರು ಮತ್ತು ಸಹೃದಯ ಕಲಾಭಿಮಾನಿಗಳಿಂದ ಕಲೆ ಉಳಿಯುತ್ತದೆ, ಬೆಳೆಯುತ್ತದೆ. ಕಲೆಗಳು ದೈವತ್ವದ ಕಲ್ಪನೆಯೊಂದಿಗೆ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿ ಸುಸಂಸ್ಕೃತ, ಸಭ್ಯ ನಾಗರಿಕರನ್ನು ರೂಪಿಸಿ ಮಾನಸಿಕ ನೆಮ್ಮದಿ ಹಾಗೂ ಸಂತೋಷವನ್ನು ನೀಡುತ್ತವೆ ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು. ಉಜಿರೆಯಲ್ಲಿ ನಿರ್ಮಿಸಲಾದ ವನರಂಗ ನೂತನ ಬಯಲುರಂಗಮಂದಿರವನ್ನುಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಮೊದಲಾದ ಕಲೆಗಳು ಮನೋರಂಜನೆಯೊಂದಿಗೆ ಸಾರ್ಥಕ ಬದುಕಿಗೆ ಉಪಯುಕ್ತವಾದ ಮೌಲಿಕ ಸಂದೇಶವನ್ನು ನೀಡುತ್ತವೆ. ನೂತನರಂಗಮಂದಿರದಿಂದಾಗಿ ಬಹುದಿನಗಳ ಕನಸು ನನಸಾಗಿದೆಎಂದುಅವರು ಸಂತಸ […]

ಉಜಿರೆ ಎಸ್.ಡಿ.ಎಂ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಜ್ಯಮಟ್ಟದ ವಿಜ್ಞಾನ ಮೇಳ

Saturday, November 30th, 2019
Ujire

ಉಜಿರೆ : ಮನದಲ್ಲಿ ಮೂಡಿದ ಯೋಚನೆಗಳಿಗೆ, ಯೋಜನೆಗಳಿಗೆ ಮೂರ್ತರೂಪ ನೀಡಿ ಪ್ರಾಯೋಗಿಕವಾಗಿ ಪರೀಕ್ಷೆಗೊಳಪಡಿಸಿ ತಜ್ಞರಿಂದಅರ್ಹತೆ ಮತ್ತು ಬಳಕೆ ಬಗ್ಯೆಅಧಿಕೃತ ಪ್ರಮಾಣ ಪತ್ರ ಪಡೆದಾಗ ಮಾತ್ರ ತಯಾರಿಸಿದ ಮಾದರಿಗಳು ಸಮಾಜಕ್ಕೆ ಉಪಯುಕ್ತವಾಗುತ್ತವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಪ್ರಾಧ್ಯಾಪಕ ಡಾ. ಎನ್. ಎಸ್. ದಿನೇಶ್ ಹೇಳಿದರು. ಅವರು ಉಜಿರೆಯಲ್ಲಿ ಎಸ್.ಡಿ.ಎಂ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಂಶೋಧನೆ ಮಾಡಿ, ಅನುಭವಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ ರಾಜ್ಯಮಟ್ಟದ ವಿಜ್ಞಾನ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತ ನಾಡಿದರು. ಯುವಜನತೆದೇಶದಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಹೊಸ […]

ಧರ್ಮಸ್ಥಳ ಲಕ್ಷದೀಪೋತ್ಸವ : ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಸ್ವಚ್ಛತಾ ಅಭಿಯಾನ

Monday, November 18th, 2019
Ujire

ಉಜಿರೆ : ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಇದೇ 22 ರಿಂದ 27ರ ವರೆಗೆ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ಭಾನುವಾರ ಬೆಳ್ತಂಗಡಿ ತಾಲ್ಲೂಕಿನಾದ್ಯಂತ ನಡೆದ ಸ್ವಚ್ಛತಾಕಾರ್ಯದಲ್ಲಿ ಸಹಸ್ರಾರುಜನ ಸ್ವಯಂ ಪ್ರೇರಣೆಯಿಂದ ಭಾಗವಸಿದರು. ಉಜಿರೆಯಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದತನಕ, ಬೆಳ್ತಂಗಡಿಯಿಂದ ಉಜಿರೆ ಪೇಟೆವರೆಗೆ, ಬೆಳ್ತಂಗಡಿ ಸಂತೆಕಟ್ಟೆಯಿಂದ ಬಸ್ ನಿಲ್ದಾಣದತನಕ, ಗುರುವಾಯನಕೆರೆ ಪೇಟೆಯಿಂದ ವಾಣಿ ವಿದ್ಯಾ ಸಂಸ್ಥೆಗಳ ವರೆಗೆ, ಮಡಂತ್ಯಾರು ಪೇಟೆ, ನಾರಾವಿ ಪೇಟೆ, ಹೊಸಂಗಡಿ, ಪಿಲ್ಯ, ಅಳದಂಗಡಿಯಲ್ಲಿ ಭಾನುವಾರ ಬೆಳಿಗ್ಯೆ ಏಳು ಗಂಟೆಯಿಂದಒಂಬತ್ತುಗಂಟೆವರೆಗೆಜಾತಿ-ಮತ, ವಯಸ್ಸಿನ […]

ಆರ್‌ಟಿಐ ಕಾರ್ಯಕರ್ತನ ಮೇಲೆ ಬಿಸಿನೀರು ಎರಚಿ ದಾಳಿ

Wednesday, December 5th, 2018
ujiri

ಉಜಿರೆ: ಉಜಿರೆಯ ಆರ್‌ಟಿಐ ಕಾರ್ಯಕರ್ತ ಬಾಲಸುಬ್ರಹ್ಮಣ್ಯ ಭಟ್(41) ಎಂಬುವರ ಮೈಮೇಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿನುತಾ ರಜತ್ ಗೌಡ ಬಿಸಿ ನೀರು ಎರಚಿ ದಾಳಿ ನಡೆಸಿರುವ ಆರೋಪ ಪ್ರಕರಣ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಉಜಿರೆ ಗ್ರಾಮದ ಮಲೆಬೆಟ್ಟಿನಲ್ಲಿರುವ ಉಪಾಧ್ಯಕ್ಷೆಯ ಮನೆಯಂಗಳದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವಸತಿ ಯೋಜನೆಯಲ್ಲಿ ನಡೆದ ಅವ್ಯವಹಾರ ನಡೆದ ಬಗ್ಗೆ ಆರ್.ಟಿ.ಐ ಮೂಲಕ ದಾಖಲೆ ಪಡೆದು ಬಾಲಸುಬ್ರಹ್ಮಣ್ಯ ಭಟ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ […]

ಜ್ಞಾನ ಆಧಾರಿತ ಆರ್ಥಿಕ ನೀತಿಯಿಂದ ದೇಶದ ಪ್ರಗತಿ: ಅನಂತ್‌ಕುಮಾರ್ ಹೆಗಡೆ

Wednesday, September 19th, 2018
veerendra-heggade

ಉಜಿರೆ: ಗ್ರಾಮೀಣ ಭಾರತ ನಿಜವಾದ ಭಾರತ. ಶೇ. 70 ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದರೆ, ಶೇ. 30 ರಷ್ಟು ಮಂದಿ ನಗರ ಪ್ರದೇಶದಲ್ಲಿದ್ದಾರೆ. ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕೌಶಾಲಾಭಿವೃದ್ಧಿ ಮತ್ತು ಉದ್ಯಮಶೀಲತಾಭಿವೃದ್ಧಿ ಮಾಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಸೂಪರ್ ಪವರ್ ಆಗಲಿದೆ. ಶ್ರಮ ಆಧಾರಿತ ಆರ್ಥಿಕ ನೀತಿಗಿಂತ ಜ್ಞಾನ ಆಧಾರಿತ ನೀತಿಯೊಂದಿಗೆ ಮಾನವ ಸಂಪನ್ಮೂಲ ಸದುಪಯೋಗ ಮಾಡಿದರೆ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ. ಇದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ಕೌಶಾಲಾಭಿವೃದ್ಧಿ ಮತ್ತು […]