Blog Archive

ಪಕ್ಷದಲ್ಲಿನ ಮೂಲ ಕಾರ್ಯಕರ್ತರಾಗಲೀ ನಾಯಕರಾಗಲೀ ಪಕ್ಷ ತೊರೆದಿಲ್ಲ : ಸುಶೀಲ್ ನೊರೊನ್ಹ

Tuesday, March 26th, 2013
Sushil Noronha

ಮಂಗಳೂರು : ಕರಾವಳಿಯಲ್ಲಿ ಜೆಡಿಎಸ್ ತನ್ನ ನೆಲೆಯನ್ನು ಕಂಡುಕೊಳ್ಳುವ ಸಮಯದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ. ಹೆಗಡೆ ಮತ್ತು ನಾಗರಾಜ ಶೆಟ್ಟಿ ಹಾಗು ಇತರೆ ನಾಯಕರು ಪಕ್ಷಕ್ಕೆ ರಾಜಿನಾಮೆ ನೀಡಿರುವುದರಿಂದ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಿಲ್ಲ, ಇದು ಕರಾವಳಿಯಲ್ಲಿ ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸಿ ಪಕ್ಷಕ್ಕೆ ಹಿನ್ನಡೆ ಉಂಟುಮಾಡಲು ನಡೆಸುತ್ತಿರುವ ಸಂಚು ಇದರಿಂದ ಪಕ್ಷಕ್ಕೆ ಯಾವುದೇ ರೀತಿಯ ಹಿನ್ನಡೆ ಉಂಟಾಗಲಾರದು ಎಂದು ಸುಶೀಲ್ ನೊರೊನ್ಹ ತಿಳಿಸಿದರು. ಸೋಮವಾರ ಎಂ.ಜಿ.ಹೆಗಡೆ ಪತ್ರಿಕಾ ಘೋಷ್ಠಿ ನಡೆಸಿ ರಾಜಿನಾಮೆ ಸಲ್ಲಿಸಿರುವ ಬಗ್ಗೆ […]

ಕರಾವಳಿಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಯಾರು ಹೊಣೆ

Monday, March 25th, 2013
Monappa Palemar

ಮಂಗಳೂರು : ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಉಸ್ತುವಾರಿಯನ್ನು ಎಂಎಲ್ ಸಿ ಮೋನಪ್ಪ ಭಂಡಾರಿ ಅವರಿಗೆ ನೀಡಿರುವುದು ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು ಎನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಅವರು ಕಲ್ಲಡ್ಕ ಭಟ್ಟರ ನಿಷ್ಠಾವಂತ ಎಂಬ ಒಂದೇ ಮಾನದಂಡದಲ್ಲಿ ಅವರಿಗೆ ಎಂಎಲ್ ಸಿ ಸ್ಥಾನ ನೀಡಲಾಗಿತ್ತು. ಅವರಲ್ಲಿ ಯಾವುದೇ ವಿಶೇಷ ಶಕ್ತಿ-ಸಾಮರ್ಥ್ಯ ಇಲ್ಲ ಎಂಬುದು ಈ ಚುನಾವಣಾ ಫಲಿತಾಂಶವೇ ಸಾರಿ ಹೇಳಿದೆ. ಅದರಲ್ಲೂ ಕಳೆದ ಬಾರಿ ಶಾಸಕ ಕೃಷ್ಣ ಜೆ.ಪಾಲೆಮಾರ್ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು ಮತ್ತು […]

ಎರಡನೇ ದಿನದ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಕರಾವಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

Thursday, February 21st, 2013
Strike mixed response in DK

ಮಂಗಳೂರು : ವಿವಿಧ ಕಾರ್ಮಿಕ ಸಂಘಟನೆಗಳು ನೀಡಿದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಆದರೆ ಎರಡನೇ ದಿನವಾದ ಇಂದು ಯಾವುದೇ ರೀತಿಯ ಮುಷ್ಕರಗಳು ನಡೆಯದೆ ಎಂದಿನಂತೆ ಜನರು ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಬಸ್ ಸಂಚಾರ ಆರಂಭವಾಗಿದೆ. ಬೆಲೆ ಏರಿಕೆ ವಿರುದ್ಧ ಭುಗಿಲೆದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳು ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಎಲ್ಲ ಕಾರ್ಮಿಕರು ಹತ್ತು ಸಾವಿರ ಕನಿಷ್ಠ ಕೂಲಿ ನಿಗದಿ ಪಡಿಸಿ, ಬೋನಸ್ ಗಿರುವ ಎಲ್ಲ ಮಿತಿಗಳನ್ನು ತೆಗೆದುಹಾಕಬೇಕು, ಆಟೋ ಚಾಲಕರ ನೋಂದಾವಣೆ […]

ಕರಾವಳಿಯೆಲ್ಲೆಡೆ ಸಂಭ್ರಮ ಸಡಗರದ ಕ್ರಿಸ್ ಮಸ್ ಹಬ್ಬ

Wednesday, December 26th, 2012
Chirstmas

ಮಂಗಳೂರು : ಕರಾವಳಿಯಲ್ಲಿ ಸೋಮವಾರ ರಾತ್ರಿ ಕ್ರಿಸ್ತನ ಜನ್ಮ ಸಂಭ್ರಮವನ್ನು ಆಚರಿಸಲಾಯಿತು. ಕ್ರೈಸ್ತ ಬಾಂಧವರು ಸೋಮವಾರ ಮಧ್ಯರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪೂಜೆ, ಪ್ರಾರ್ಥನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸ್ವಾಗತಿಸಿದರು. ಮಂಗಳವಾರ ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಬೆಂದೂರ್‌ವೆಲ್, ಬಿಜೈ, ಲೇಡಿಹಿಲ್, ಕೋಡಿಕಲ್, ಕೂಳೂರು, ಬೊಂದೆಲ್, ದೇರೆಬೈಲ್, ಕುಲಶೇಖರ, ಉರ್ವ, ಪಾಲ್ದನೆ, ವಾಮಂಜೂರು, ಪೆರ್ಮನ್ನೂರು, ಕುತ್ತಾರುಪದವು, ಕೋಡಿಕಲ್ ಮುಂತಾದ ಚರ್ಚ್‌ಗಳಲ್ಲಿ ಸಹಸ್ರಾರು ಕ್ರೈಸ್ತ ಬಾಂಧವರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಚರ್ಚ್‌ಗಳನ್ನು ದೀಪಗಳಿಂದ ಅಲಂಕರಿಸಲಾಗಿದ್ದು, ಎಲ್ಲರೂ […]

ಚುನಾವಣಾ ಗೆಲುವು, ಕರಾವಳಿಯಲ್ಲಿ ಬಿಜೆಪಿ ಸಂಭ್ರಮಾಚರಣೆ

Thursday, December 20th, 2012
BJP Vijayotsav

ಮಂಗಳೂರು :ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿ ಜಯಭೇರಿ ಭಾರಿಸಿದೆ ಈ ಹಿನ್ನಲೆಯಲ್ಲಿ ಮಂಗಳೂರು ಬಿಜೆಪಿ ಕಚೇರಿ ಮುಂಭಾಗದಲ್ಲಿ ನೆರೆದ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚುವುದದರ ಮೂಲಕ ಸಂಭ್ರಮ ಆಚರಿಸಿದರು. ಬಿಜೆಪಿ ನಗರಸಮಿತಿ ಅಧ್ಯಕ್ಷರಾದ ಶ್ರೀಕರ ಪ್ರಭು ಮಾತನಾಡಿ, ನರೇಂದ್ರ ಮೋದಿ ದೇಶ ಕಂಡ ಅಪರೂಪದ ರಾಜಕಾರಣಿಯಾಗಿದ್ದು, ತಮ್ಮ ಅಭಿವೃದ್ದಿ ಕಾರ್ಯಗಳಿಂದಲೇ ಗುಜರಾತಿನ ಹಾಗೂ ದೇಶದ ಜನರ ಮನಸ್ಸನ್ನು ಗೆದ್ದಿದ್ದಾರೆ. ವಿರೋಧ […]

ಕರಾವಳಿಯಲ್ಲಿ ಗರಿಕೆದರಿದ ಯಡ್ಡಿ ಪಕ್ಷ ಕುಂದಾಪುರದಲ್ಲಿ ಹಾಲಾಡಿ ಶೆಟ್ಟರಿಗೆ ಮಣೆ

Saturday, November 24th, 2012
Yadyurappa & Halaadi

ಮಂಗಳೂರು :ರಾಜ್ಯದ ಬಿಜೆಪಿ ಪಕ್ಷದ ಭವಿಷ್ಯ ಸಧ್ಯಕ್ಕಂತೂ ನೆಟ್ಟಗೆ ಇಲ್ಲ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿಸಿಕೊಳ್ಳಲು ಆರಂಭವಾಗಿದೆ. ಕಾರಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ಬಿಟ್ಟು ತನ್ನದೇ ಹೊಸ ಪಕ್ಷ ಕೆಜೆಪಿಯನ್ನು ಕಟ್ಟಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಹೊಸ ಪಕ್ಷ ಘೋಷಣೆ ಮಾಡಿರುವ ಯಡಿಯೂರಪ್ಪರ ನೂತನ ಪಕ್ಷದ ರಾಜಾಧ್ಯಕ್ಷರಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟ ಧನಂಜಯ ಕುಮಾರ್ ನೇಮಕವಾದ ಬೆನ್ನಲ್ಲೇ ರಾಜ್ಯದ ನಾನಾ ಕಡೆ ಕೆಜೆಪಿ ಪಕ್ಷಕ್ಕೆ ನಾಯಕರ ಹುಡುಕಾಟ ಶುರುವಾಗಿದೆ. ಅದರಲ್ಲೂ ಮುಖ್ಯವಾಗಿ ಡಿಸೆಂಬರ್ ತಿಂಗಳ 9ರಂದು […]

ಇದು ಕರಾವಳಿ “ಪೊಲಿ’ಟಿಕ್ಸ್”!

Tuesday, November 13th, 2012
Karavali Politics

ಮಂಗಳೂರು :2013ರಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಮತ್ತು 2014ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈಗಾಗಲೆ ಮಂಗಳೂರಿನಲ್ಲಿ ತನ್ನ ಚುನಾವಣಾ ಕಸರತ್ತು ಆರಂಭಿಸಿದೆ. ಅಕ್ಟೋಬರ್ 18ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳೂರಿಗೆ ಆಗಮಿಸಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವಂತೆ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರಕಾರವನ್ನು ಕಿತ್ತೊಗೆಯುವಂತೆ ಕರೆ ನೀಡಿದ್ದಾರೆ. ಸೋನಿಯಾರ ಮಂಗಳೂರು ಭೇಟಿಯ ಸಂಪೂರ್ಣ ಹೊಣೆ […]