Blog Archive

ಗೋವಾದಲ್ಲಿ ಕಪ್ಪೆಗೆ ಭಾರೀ ಬೇಡಿಕೆ, ಕರಾವಳಿಯಲ್ಲಿ ಅಕ್ರಮ ಬೇಟೆ ಆರಂಭ..!

Wednesday, June 13th, 2018
goa-frog

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಜಂಪಿಂಗ್ ಚಿಕನ್ ಗಾಗಿ ಬೇಟೆ ಆರಂಭವಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಗಿಡಗಂಟಿಗಳಲ್ಲಿ, ಕೆರೆ, ತೊರೆ, ನಾಲೆ, ಕಾಲುವೆ, ಸೇರಿದಂತೆ ಕಾಡಿನಂಚಿನಲ್ಲಿ ಒಟರಗುಟ್ಟುವ ಈ ಜಂಪಿಂಗ್ ಚಿಕನ್ ಗೆ ಗೋವಾದ ರೆಸ್ಟೋರೆಂಟ್ ಗಳಲ್ಲಿ ಭಾರೀ ಬೇಡಿಕೆ ಇದೆ. ಜಂಪಿಂಗ್ ಚಿಕನ್ ಅಂದ ಕೂಡಲೇ ಇದಾವ ಚಿಕನ್ ಎಂದು ಗೊಂದಲ ಬೇಡ . ಇಲ್ಲಿ ಜಂಪಿಂಗ್ ಚಿಕನ್ ಅಂದರ್ ಬೃಹತ್ ಗಾತ್ರದ ಕಪ್ಪೆಗಳು.ಕರಾವಳಿಯಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ನೆರೆಯ ರಾಜ್ಯ ಗೋವಾದ ರೆಸ್ಟೋರೆಂಟ್ ಗಳಲ್ಲಿ ಕಪ್ಪೆ ಖಾದ್ಯಗಳಿಗೆ […]

ಭಾರಿ ಮಳೆಗೆ ನದಿ ನೀರಿನ ಮಟ್ಟ ಏರಿಕೆ..ಶಾಲೆಗೆ ಇಂದು ಕೂಡ ರಜೆ‌‌ ಘೋಷಣೆ..!

Saturday, June 9th, 2018
heavy-rain

ಮಂಗಳೂರು: ಕರಾವಳಿ ಮಂಗಳೂರಿನಲ್ಲಿ ಎರಡು ದಿನಗಳಿಂದ ಆರಂಭವಾದ ಮಳೆಯ ಆರ್ಭಟ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಗಾಳಿ ಮಳೆಯ ರಭಸಕ್ಕೆ ಹಲವೆಡೆ ಮರಗಳು ನೆಲಕ್ಕುರುಳಿದೆ. ಭಾರಿ ಮಳೆಗೆ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲದೆ ಶಾಲೆಗೆ ಇಂದು ಕೂಡ ರಜೆ‌‌ ಘೋಷಿಸಲಾಗಿದೆ. ಇತ್ತ ಭಾರಿ ಮಳೆಗೆ ಹಳೆ ಕಟ್ಟಡ ಹಾಗೂ ಮರಗಳು ನೆಲಕ್ಕುರುಳಿದೆ. ಮಂಗಳೂರಿನ ಕಾರ್ ಸ್ಟ್ರೀಟ್‌‌ನಲ್ಲಿ ಹಳೆಯ ಕಟ್ಟಡವೊಂದರ ಮೇಲಿನ ಅಂತಸ್ತು ಕುಸಿದಿದ್ದು, ಕಟ್ಟಡದ ಹೊರಗೆ ನಿಲ್ಲಿಸಲಾಗಿದ್ದ ಎರಡು ಬೈಕ್ ಗಳಿಗೆ […]

ಕರಾವಳಿಯಲ್ಲಿ ಭಾರಿ ಮಳೆ ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ ಘೋಷಣೆ..!

Friday, June 8th, 2018
dakshina-kannada

ಮಂಗಳೂರು: ಕರಾವಳಿಯಲ್ಲಿ ಭಾರಿ ಮಳೆ ಮುಂದುವರೆದಿದ್ದು ಮುಂಜಾಗೃತಾ ಕ್ರಮವಾಗಿ ಇಂದು ಮತ್ತು ನಾಳೆ (ಜೂನ್ 08, ಜೂನ್ 9) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ರಾತ್ರಿಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿದ್ದು, ಬೆಳಿಗ್ಗೆ ಸಹ ಜೋರು ಮಳೆ ಬರುತ್ತಲೇ ಇರುವ ಕಾರಣ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ. ರಜೆಯನ್ನು ಶಾಲೆಗಳಿಗೆ ಮಾತ್ರವೇ ನೀಡಲಾಗಿದ್ದು ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಮುಂಬೈನಲ್ಲಿ ಭಾರಿ ಮಳೆ ನಿರೀಕ್ಷೆ, ಕಡಲಿಗೆ ಇಳಿಯದಂತೆ ಕೇರಳ ಮೀನುಗಾರರಿಗೆ […]

ಪ್ರಾಕೃತಿಕ ವಿಕೋಪ ಎದುರಿಸಲು ಸದಾ ಸನ್ನದ್ಧ : ಉಡುಪಿ ಡಿ.ಸಿ.

Thursday, May 31st, 2018
priyanka-mary-2

ಉಡುಪಿ: ಕರಾವಳಿ ಯಾದ್ಯಂತ ಮಂಗಳವಾರ ಭಾರೀ ಮಳೆಯಾಗಿದ್ದು ಉಡುಪಿ ಜಿಲ್ಲೆಯೂ ಸಾಕಷ್ಟು ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾತುಕತೆ ನಡೆಸಿದರು. ಮಂಗಳವಾರ ಬೆಳಗ್ಗೆ 9.30ಕ್ಕೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ವರದಿ ಬಂತು. ವಿಷಯ ಗೊತ್ತಾದಾಗಲೇ ನಾವು ನೋಡಲ್‌ ಅಧಿಕಾರಿಗಳನ್ನು ನೇಮಿಸಿ ಕ್ರಮ ಜರಗಿಸಿದ್ದೇವೆ, ಶಾಲೆಗಳಿಗೆ ರಜೆ ಸಾರಿ ದೆವು; ನಗರಸಭೆ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಗಳಿಗೂ ಜಾಗೃತರಾಗಿ ಇರುವಂತೆ ಸೂಚಿ ಸಿ ದೆವು. ನಾವು ಹೆಚ್ಚಿನ ಗಮನ ವನ್ನು ಉದ್ಯಾವರ […]

ಬ್ಯಾಂಕ್ ಮುಷ್ಕರ- ಗ್ರಾಹಕರ ಪರದಾಟ

Thursday, May 31st, 2018
bank

ಮಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳು ಹಮ್ಮಿಕೊಂಡಿರುವ ಮುಷ್ಕದಿಂದ ಗ್ರಾಹಕರು ಪರದಾಟ ನಡೆಸುವಂತಾಗಿದೆ. ಸಂಬಳ ಏರಿಕೆ ಪ್ರಮಾಣ ಹೆಚ್ಚಳಕ್ಕೆ ೨ ದಿನ ಮುಷ್ಕರ ನಡೆಯುತ್ತಿದ್ದು, ರಾಜ್ಯ ಸಹಿತ ದೇಶದೆಲ್ಲೆಡೆ ಬ್ಯಾಂಕಿಂಗ್ ಸೇವೆ ಸ್ಥಗಿತಗೊಂಡಿದೆ. ಕರಾವಳಿಯಲ್ಲೂ ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡಿದೆ.

ಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆಗೆ ಕಡ್ಡಾಯ ನಿಷೇಧ..!

Friday, May 25th, 2018
coastal-wood

ಕರಾವಳಿಯ ಪ್ರಮುಖ ವಾಣಿಜ್ಯ ವಹಿವಾಟದ ಮೀನುಗಾರಿಕೆಗೆ ಈ ಅವಧಿಯಲ್ಲಿ ಪ್ರತಿ ಬಾರಿ ಕಡ್ಡಾಯ ರಜೆ ನೀಡಲಾಗುತ್ತದೆ. ಅದರಂತೆ ಆಳ ಸಮುದ್ರ ಮೀನುಗಾರಿಕೆಯನ್ನು ನೀಷೇಧಿಸಿ ಸರ್ಕಾರ ಆದೇಶ ನೀಡಿದೆ. ಪ್ರತಿ ಬಾರಿ ಈ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧವನ್ನು ಹೇರಲು ಮುಖ್ಯ ಕಾರಣ ಈ ಅವಧಿಯಲ್ಲಿ ಮೀನುಗಳ ಸಂತಾನೋತ್ಪತ್ತಿ. ಜೂನ್‌ ತಿಂಗಳು ಮಳೆ ಆರಂಭವಾದೊಡನೆ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಮೀನುಗಳು ಮೊಟ್ಟೆ ಇಡುವ ಸಂದರ್ಭ ಇದಾಗಿದ್ದರಿಂದ ಮೀನುಗಳ ಬೇಟೆಯಾಡುವುದರಿಂದ ಅವುಗಳ ಸಂತತಿ ನಶಿಸಲು ಕಾರಣವಾಗುತ್ತದೆ. ಈ ಕಾರಣಕ್ಕಾಗಿ ಮೀನುಗಾರಿಕೆಯನ್ನು […]

ನಿಪಾಹ್ ವೈರಸ್ ಎಫೆಕ್ಟ್: ಹಣ್ಣು, ಮಾಂಸ ವ್ಯಾಪಾರದಲ್ಲಿ ಭಾರೀ ಕುಸಿತ!

Thursday, May 24th, 2018
nipah-virus

ಮಂಗಳೂರು: ನಿಪಾಹ್ ವೈರಸ್ ರಾಜ್ಯಕ್ಕೂ ಹರಡಿರುವ ಭೀತಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ವೈರಸ್ ಹರಡುವ ಭೀತಿ ಈಗ ಹಣ್ಣು ವ್ಯಾಪಾರದ ಮೇಲೂ ಪ್ರಭಾವ ಬೀರಿದೆ. ನಿಪಾಹ್ ವೈರಸ್ ಎಫೆಕ್ಟ್ ನಿಂದಾಗಿ ಮಂಗಳೂರಿನಲ್ಲಿ ಹಣ್ಣು ಮಾರಾಟ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. ರಂಜಾನ್ ತಿಂಗಳ ಉಪವಾಸ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಮುಸ್ಲಿಂ ಬಾಂಧವರು ಉಪವಾಸ ಬಿಡುವ ವೇಳೆ ಹೆಚ್ಚಾಗಿ ಹಣ್ಣುಗಳನ್ನು ಸೇವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ತೀವ್ರ ಏರಿಕೆ ಯಾಗಿತ್ತು. […]

‘ಮೆಕುನು’ ಚಂಡಮಾರುತ… ಕರಾವಳಿಯಲ್ಲಿ ಭಾರೀ ಗಾಳಿ, ಮಳೆ ಸಾಧ್ಯತೆ

Thursday, May 24th, 2018
floods

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ‘ಮೆಕುನು’ ಚಂಡಮಾರುತದ ಪರಿಣಾಮ ಮುಂದಿನ ಮೂರು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಗಾಳಿ, ಮಳೆ ಸಾಧ್ಯತೆಯಿದೆ. ಬಿರುಗಾಳಿ ಜತೆಗೆ ಮಿಂಚು, ಸಿಡಿಲು ಸಹಿತ ಭಾರೀ ಮಳೆ ಬೀಳುವ ಮುನ್ಸೂಚನೆ ಇದೆ. ಸಮುದ್ರದಲ್ಲೂ ಭಾರೀ ಅಲೆಗಳೇಳುವ ಸಾಧ್ಯತೆ ಇದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಬಂದರು ಮತ್ತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹತ್ತಾರು ಮಂದಿ ಬಲಿ ಪಡೆದ ನಿಫಾ ವೈರಸ್‌ ಮೊದಲು ಪತ್ತೆ ಹಚ್ಚಿದ್ದು ಮಣಿಪಾಲದ ವೈದ್ಯರು!

Wednesday, May 23rd, 2018
manipal

ಮಂಗಳೂರು: ಕೇರಳದಲ್ಲಿ ಹತ್ತು ಮಂದಿಯನ್ನು ಬಲಿ ಪಡೆದಿರುವ ಮಾರಕ ನಿಫಾ ವೈರಸ್‌‌‌‌‌‌ನ್ನು ಅತ್ಯಂತ ಕ್ಷಿಪ್ರವಾಗಿ ಪತ್ತೆ ಹಚ್ಚಿದ್ದು ಉಡುಪಿಯ ಮಣಿಪಾಲದ ವೈದ್ಯರು. ಅಪರೂಪದ ಈ ಕಾಯಿಲೆ ಬಗ್ಗೆ ಮಾಹಿತಿ ಬಂದ ಕೇವಲ ಹತ್ತೇ ತಾಸಿನಲ್ಲಿ ಮಣಿಪಾಲದ ವೈದ್ಯರ ತಂಡ ಈ ಕಾಯಿಲೆಯನ್ನು ಗುರುತಿಸುವಲ್ಲಿ ಯಶ ಕಂಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ನಿಫಾ ವೈರಸ್ ಕರ್ನಾಟಕ ಕರಾವಳಿಗೂ ಹಬ್ಬುವುದನ್ನು ತಡೆಯಲು ಸಾಧ್ಯವಾಗಿದೆ. ಮಣಿಪಾಲ್ ಸೆಂಟರ್ ಫಾರ್ ವೈರಸ್ ರೀಸರ್ಚ್‌ನ ಡಾ. ಅರುಣ್ ಕುಮಾರ್ ಈ ಕಾಯಿಲೆ ಚಿಕಿತ್ಸೆಯ […]

ಕರಾವಳಿಯಲ್ಲಿ ಇನ್ನೇನಿದ್ದರೂ ಸಚಿವ ಸ್ಥಾನದ ಲೆಕ್ಕಾಚಾರ

Thursday, May 17th, 2018
a-angara

ಮಂಗಳೂರು: ರಾಜ್ಯದಲ್ಲಿ ಹೊಸ ಸರಕಾರ ರಚನೆ ಕುರಿತಂತೆ ಬೆಂಗಳೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಸರ್ಕಸ್‌ ನಡೆಯುತ್ತಿದ್ದರೆ, ಕರಾವಳಿಯಲ್ಲಿ ಸಚಿವ ಸ್ಥಾನ ಯಾರಿಗೆ ಎಂಬ ಲೆಕ್ಕಾಚಾರ ಶುರುವಾಗಿದೆ. ಬಿಜೆಪಿ ಸರಕಾರ ರಚನೆಯಾದರೆ, ದಕ್ಷಿಣ ಕನ್ನಡದಲ್ಲಿ 7 ಸ್ಥಾನ ಹಾಗೂ ಉಡುಪಿ ಜಿಲ್ಲೆಯಲ್ಲಿ 5 ಸ್ಥಾನಗಳನ್ನು ಗೆದ್ದು ಕೊಂಡಿರುವ ಹಿನ್ನೆಲೆ ಯಲ್ಲಿ ಕನಿಷ್ಠ ನಾಲ್ಕು ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿ ಬರುತ್ತಿದೆ. ದಕ್ಷಿಣ ಕನ್ನಡದಲ್ಲಿ ಆರು ಶಾಸಕರದು ಹೊಸ ಮುಖ. ಹೀಗಾಗಿ 6ನೇ ಬಾರಿಗೆ ಆಯ್ಕೆಯಾದ […]