ಕರಾವಳಿ ಜಿಲ್ಲೆಗಳ ಪ್ರವಾಸಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ

Thursday, August 12th, 2021
Bommai Mangaluru

ಮಂಗಳೂರು :- ಜಿಲ್ಲೆಯಲ್ಲಿನ ಕೋವಿಡ್-19 ಸೋಂಕು ನಿರ್ವಹಣೆ ಕುರಿತ ಪ್ರಗತಿ ಪರಿಶೀಲನೆ ಹಾಗೂ ಗಡಿ ಭಾಗಗಳಲ್ಲಿ ತಪಾಸಣೆ ಮಾಡಲು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇದೇ ಆ.12 ಹಾಗೂ 13 ರಂದು ಎರಡು ದಿನಗಳ ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಆ.12 ರ ಗುರುವಾರ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.  ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಸಮಾಜ ಕಲ್ಯಾಣ ಹಾಗೂ […]

ಕರಾವಳಿ ಜಿಲ್ಲೆಯಲ್ಲಿ ಕೋಮುಸಾಮರಸ್ಯಕ್ಕೆ ಸಾಕ್ಷಿಯಾದ ಉಳ್ಳಾಲದ ಬ್ರಹ್ಮಕಲಶೋತ್ಸವ ಮೆರವಣಿಗೆ

Saturday, January 7th, 2017
Ullala

ಮಂಗಳೂರು: ಕೋಮು ಗಲಭೆಯಿಂದಲೇ ಸುದ್ದಿಯಲ್ಲಿರುವ ಕರಾವಳಿ ಜಿಲ್ಲೆ ಇದೀಗ ಕೋಮುಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೌದು, ಉಳ್ಳಾಲದ ಬ್ರಹ್ಮಕಲಶೋತ್ಸವ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ, ಭಕ್ತರಿಗೆ ತಂಪುಪಾನೀಯ ಪೂರೈಸಿದರು. ಉಳ್ಳಾಲದ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ತೊಕ್ಕೊಟ್ಟಿನಿಂದ ಕ್ಷೇತ್ರದವರೆಗೆ ಹಸಿರುವಾಣಿ ಹೊರೆಕಾಣಿಕೆ ವೈಭವದ ಮೆರವಣಿಗೆ ನಡೆಯಿತು. ಈ ವೇಳೆ ಮೆರವಣಿಗೆಯನ್ನು ಮಾಸ್ತಿಕಟ್ಟೆಯಲ್ಲಿ ಮುಸ್ಲಿಂ ಬಾಂಧವರು ಸ್ವಾಗತಿಸಿದರು. ಜೊತೆಗೆ ತಂಪುಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ […]

ವಾರ್ಧಾ ಚಂಡಮಾರುತದ ಪರಿಣಾಮವಾಗಿ ಕರಾವಳಿ ಜಿಲ್ಲೆಯಲ್ಲಿ ಮಳೆ

Thursday, December 15th, 2016
Vardha-cyclone

ಮಂಗಳೂರು: ವಾರ್ಧಾ ಚಂಡಮಾರುತದ ಪರಿಣಾಮವಾಗಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಎರಡು ದಿನಗಳ ಕಾಲ ಮಳೆಯಾಗಿದೆ. ನಿನ್ನೆಯಿಂದ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಜಿಲ್ಲೆಯ ಎಲ್ಲೆಡೆ ತುಂತುರು ಮಳೆಯಾಗಿದೆ. ನಿನ್ನೆ ತುಸು ಹೆಚ್ಚೇ ಮಳೆಯಾಗಿದೆ. ಮಧ್ಯಾಹ್ನದ ನಂತರ ಆರಂಭಗೊಂಡ ಮಳೆಗೆ ಜನ ಛತ್ರಿ ಹಿಡಿದೇ ತಿರುಗುವಂತಾಯಿತು.

ದೇವದಾಸ್ ಕಾಪಿಕಾಡ್ ನಿರ್ದೇಶನದ ’ಬರ್ಸ’ ತುಳು ಸಿನಿಮಾ ಅಕ್ಟೋಬರ್ 13 ರಂದು ತೆರೆಗೆ

Wednesday, October 5th, 2016
barsa-film

ಮಂಗಳೂರು: ಬೊಳ್ಳಿ ಮೂವೀಸ್ ಲಾಂಚನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದ ’ಬರ್ಸ’ ತುಳು ಸಿನಿಮಾ ಸೆನ್ಸಾರ್‌ನಲ್ಲಿ ಯು ಸರ್ಟಿಪಿಕೇಟ್ ಪಡೆದಿದೆ. ಕುಟುಂಬ ಸಮೇತರಾಗಿ ನೋಡಬಹುದಾದ ಉತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಬರ್ಸ ಪಾತ್ರವಾಗಿದೆ. ಇದೀಗ ಈ ಸಿನಿಮಾವನ್ನು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಗೆ ಭರದ ಸಿದ್ದತೆ ನಡೆಸಲಾಗಿದೆ. ಅಕ್ಟೋಬರ್ 13 ರಂದು ಕರವಳಿ ಜಿಲ್ಲೆಯಾದ್ಯಂತ ಸಿನಿಮಾತೆರೆಗೆ ಬರಲಿದೆ. ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿರುವ ಬರ್ಸ ಸಿನಿಮಾದಲ್ಲಿ ಲವ್ ಸೆಂಟಿಮೆಂಟ್, ಫೈಟ್ ಕ್ವಾಮಿಡಿ ಎಲ್ಲವೂ ಇದೆ. ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಈ ಸಿನಿಮಾದಲ್ಲಿ […]

ಕರಾವಳಿ ಜಿಲ್ಲೆಯ ವಿವಿದೆಡೆಯಲ್ಲಿ ನಾಗರ ಪಂಚಮಿ ಹಬ್ಬ

Monday, August 8th, 2016
Kudupu temple

ಮಂಗಳೂರು: ತುಳುವರ ಆಟಿ ಅಮಾವಾಸ್ಯೆ ಕಳೆದು ಬರುವುದೇ ನಾಗರ ಪಂಚಮಿ ಹಬ್ಬ. ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಬರುವ ಈ ಹಬ್ಬ, ಕೆಲವೊಮ್ಮೆ ಸೋನೆ ತಿಂಗಳಿನಲ್ಲಿ ಬರುವುದೂ ಇದೆ. ಅದೆನೇ ಆದರೂ ಆ ಬಳಿಕ ಬರುವ ಹಬ್ಬಗಳು ಸಾಲು ಸಾಲಾಗಿ ನಾಡಿಗೆ ಸಂಭ್ರಮ ತರಲಿವೆ. ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶಿಷ್ಟವಾದ ಸ್ಥಾನವಿದೆ. ನಾಗ ಪಂಚಮಿ ನಾಗಾರಾಧನೆಗೆ ಸಂಬಂಧಿಸಿದ ವಿಶಿಷ್ಟ ದಿನದಂದು ತುಳು ನಾಡಿನ ಉದ್ದಗಲಕ್ಕೂ ಎಲ್ಲಾ ಜಾತಿ-ಜನಾಂಗದವರೂ ನಾಗನಿಗೆ ಹಾಲೆರೆಯುತ್ತಾರೆ. ತುಳುನಾಡಿನ ಅಲ್ಲಲ್ಲಿ ನಾಗಂಡಗಳಿವೆ. ಅಂದರೆ ಇದರ ಅರ್ಥ […]

ಆಗಸ್ಟ್ 14ರಂದು ಸೂಪರ್ ಮರ್ಮಯೆ ತೆರೆಗೆ

Thursday, August 13th, 2015
super marmaye

ಮಂಗಳೂರು: ಆನಂದ್ ಫಿಲಂಸ್ ಲಾಂಛನದಲ್ಲಿ ಅಡ್ಯಾರ್ ಮಾಧವ ನಾಯ್ಕ್ ನಿರ್ಮಿಸುತ್ತಿರುವ ರಾಮ್‌ಶೆಟ್ಟಿ ನಿರ್ಮಾಣ ನಿರ್ದೇಶನದಲ್ಲಿ ತಯಾರಾದ ಸೂಪರ್ ಮರ್ಮಯೆ ತುಳುಚಲನ ಚಿತ್ರ ಆಗೋಸ್ಟ್ 14ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ 10ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ. ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನೆಮಾಸ್, ಸಿನಿಪೊಲಿಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಮೂಡಬಿದರೆಯಲ್ಲಿ ಅಮರ ಶ್ರೀ, ಕಾರ್ಕಳದಲ್ಲಿ ರಾಧಿಕಾ, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್ ಹಾಗೂ ಬಿ.ಸಿ.ರೋಡ್‌ನಲ್ಲಿ ನಕ್ಷತ್ರದಲ್ಲಿ ಬಿಡುಗಡೆಗೊಳ್ಳಲಿದೆ. ತುಳುವರು ಏನಿದ್ದರೂ ಹಾಸ್ಯದ ಆಟ್ರಾಕ್ಷನ್ ಎಂಬುದು ಮನದಟ್ಟಾಗಿರುವುದರಿಂದ ಸೂಪರ್ ಮರ್ಮಯೆ ಎಂಬ ಹೆಸರಿನಲ್ಲಿ […]

ಕರಾವಳಿ ಜಿಲ್ಲೆಯಾದ್ಯಂತ ಭಕ್ತಾದಿಗಳಿಂದ ಸಂಭ್ರಮೋಲ್ಲಾಸದ ನಾಗರಮಂಚಮಿ ಆಚರಣೆ

Monday, August 12th, 2013
Nagara panchami Kudupu Temple

ಮಂಗಳೂರು : ಸನಾತನ ಸಂಸ್ಕೃತಿಯಂತೆ ನಾಗರಮಂಚಮಿ ಹಬ್ಬವು ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ನಾಗರಪಂಚಮಿಯು ಮನೆ ಮನೆಗಳಲ್ಲಿ, ಪ್ರಕೃತಿಯ ಮಡಿಲ ಬನಗಳಲ್ಲಿ, ದೇವಾಲಯಗಳಲ್ಲಿ ಆಚರಿಸುವ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ತಿಂಗಳಿನ ಉಜ್ವಲ ಪಕ್ಷದ ಐದನೆಯ ದಿನವು ನಾಗರಪಂಚಮಿಯ ದಿನವಾಗಿದೆ. ಈ ಹಬ್ಬವನ್ನು ನಾಡಿನ ಜನರು ಭಕ್ತಿಯಿಂದ ಆಚರಿಸುತ್ತಾರೆ. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಜನರು ಸರ್ಪದೇವರಾದ ಶ್ರೀ ಸುಬ್ರಹ್ಮಣ್ಯನನ್ನು ಪೂಜಿಸುತ್ತಾರೆ. ನಾಗರಪಂಚಮಿಯ ದಿನದಂದು ಭಕ್ತಾಧಿಗಳಿಲ್ಲರೂ ಬೆಳಿಗ್ಗೆ ಎದ್ದು ನಾಗನಗುಡಿಗೆ ಹೋಗಿ ಸಿಯಾಳಭಿಷೇಕ […]

ಉದ್ಯಮಿ ಎ.ಸದಾನಂದ ಶೆಟ್ಟಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ

Tuesday, October 30th, 2012
JDS Townhall

ಮಂಗಳೂರು: ಸೋಮವಾರ ಮಂಗಳೂರು ಪುರಭವನದಲ್ಲಿ ನಡೆದ ಜೆಡಿಎಸ್ ನ ಸಮಾನ ಮನಸ್ಕರ ಸಮಾವೇಶದಲ್ಲಿ ಭಾಗವಹಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀ ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದರು. ಜೆಡಿಎಸ್ ಕರಾವಳಿ ಜಿಲ್ಲೆಗಳಲ್ಲಿ ತನ್ನ ಖಾತೆ ತೆರೆಯಲು ಶ್ರಮಿಸುತಿದ್ದು ಇತ್ತೀಚೆಗಷ್ಟೇ ಬಿಜೆಪಿ ಪಕ್ಷದಲ್ಲಿದ್ದ ನಾಗರಾಜ ಶೆಟ್ಟಿಯವರು ಪಕ್ಷವನ್ನು ತೊರೆದು ಜೆ.ಡಿ.ಎಸ್ ಸೇರಿದ್ದರು. ಇವರ ನೇತೃತ್ವದಲ್ಲಿ ಕರಾವಳಿಯ ಇನ್ನಷ್ಟು ನಾಯಕರು ಈ ಸಮಾರಂಭದಲ್ಲಿ ಜೆ.ಡಿ.ಎಸ್ […]