223 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 46 ಪಾರಂಪರಿಕ ತಾಣಗಳ ಅಭಿವೃದ್ಧಿ

Wednesday, July 7th, 2021
Kempegowda

ಬೆಂಗಳೂರು :  ನಾಡಪ್ರಭು ಕೆಂಪೇಗೌಡರ ಕಾಲದ ಸುಮಾರು 46 ಪಾರಂಪರಿಕ ತಾಣಗಳನ್ನು ಮೂರು ಸರ್ಕ್ಯುಟ್ ಗಳಲ್ಲಿ ಗುರುತಿಸಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯನ್ನೂ ದೃಷ್ಟಿಯಲ್ಲಿರಿಸಿಕೊಂಡು ಈ ತಾಣಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದರು. ಅವರು ಇಂದು ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಪರಿಕಲ್ಪನಾ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ 132 […]

ಕೆಂಪೇಗೌಡರ ಕನಸಿನ ಬೆಂಗಳೂರನ್ನ ಸಾಕಾರಗೊಳಿಸಲು ಸರ್ಕಾರ ಬದ್ಧ: ಸಚಿವ ಆರ್ ಅಶೋಕ

Sunday, June 27th, 2021
Kempe Gowda

ಬೆಂಗಳೂರು  : ನಾಡಪ್ರಭು ಕೆಂಪೇಗೌಡ ಅವರ ಬೆಂಗಳೂರಿನ ಕುರಿತು ಹೊಂದಿದ್ದ ಕನಸುಗಳನ್ನು ಸಾಕಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ನಗರಕ್ಕೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಅಗತ್ಯ ಯೋಜನೆಗಳನ್ನು ಜಾರಿ ತರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು. ಬಾನುವಾರ ಕೆ.ಆರ್‌.ಪುರಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ನಗರ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡ ಅವರ 512ನೇ ಜನ್ಮ ಶತಮಾನೋತ್ಸವದಲ್ಲಿ ಪಾಲ್ಗೊಂಡು, ಕೆಂಪೇಗೌಡ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೇಂಪೇಗೌಡರು ಓರ್ವ ದೂರದೃಷ್ಟಿಯ […]

ಕೆಂಪೇಗೌಡರ 512 ನೇ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಅಂಚೆ ಚೀಟಿಯನ್ನು ಲೋಕಾರ್ಪಣೆ

Sunday, June 27th, 2021
Kempe Gowda

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 512 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ  ನಡೆದ ನಾಡಪ್ರಭುಗಳ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಅಂಚೆ ಚೀಟಿಯನ್ನು ಲೋಕಾರ್ಪಣೆಗೊಳಿಸಿದರು. ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಹಿನ್ನೆಲೆ, ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ. ವ್ಯಾಪಾರ ವಹಿವಾಟಿಗೆ ಅನೇಕ ಪೇಟೆಗಳನ್ನು ಕಟ್ಟಿ. ಅತ್ಯಂತ ಯೋಜನಾಬದ್ಧವಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಸಂಸ್ಮರಣೆಗಳ ಜೊತೆಗೆ ಆ ಧೀಮಂತ […]

ಆಗಸ್ಟ್ 16 ಕ್ಕೆ ಕೆಂಪೇಗೌಡ ದಿನಾಚರಣೆ..!

Friday, August 10th, 2018
kempegowda

ಬೆಂಗಳೂರು: ಬಿಬಿಎಂಪಿ ವತಿಯಿಂದ ಆಚರಿಸಲಾಗುವ ಕೆಂಪೇಗೌಡ ದಿನಾಚರಣೆಗೆ ದಿನಾಂಕ ಮರುನಿಗದಿಯಾಗಿದೆ. ಆಗಸ್ಟ್ 16 ರಸಂಜೆ 6-30 ಕ್ಕೆ ಕೆಂಪೇಗೌಡ ದಿನಾಚರಣೆಗೆ ಸಿಎಂ ಕುಮಾರಸ್ವಾಮಿ ದಿನಾಂಕ ನೀಡಿರುವ ಹಿನ್ನಲೆಯಲ್ಲಿ ಆಗಸ್ಟ್ 16 ರಂದು ಕೆಂಪೇಗೌಡ ದಿನಾಚರಣೆ ನಡೆಯಲಿದೆ. ಈಗಾಗಲೆ ಮೂರು ಬಾರಿ ಮುಂದೂಡಿಕೆಯಾಗಿದೆ. ಚುನಾವಣಾ ನೀತಿ ಸಹಿಂತೆಯಿಂದಾಗಿ, ಸಿಎಂ ದೆಹಲಿ ಪ್ರವಾಸದ ಹಿನ್ನೆಲೆ, ಮಾಜಿ ಸಿಎಂ ಕರುಣಾನಿಧಿ ನಿಧನ ಹಿನ್ನೆಲೆ ಒಟ್ಟು ಮೂರು ಬಾರಿ ಮುಂದೂಡಿಕೆಯಾಗಿದ್ದ ದಿನಾಚರಣೆಗೆ ಕಡೆಗೂ ದಿನಾಂಕ ನಿಗದಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆ ಮರುದಿನವೇ ನಾಡಪ್ರಭು ಕೆಂಪೇಗೌಡ […]

ನವ ದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ

Monday, July 30th, 2018
new-delhi

ಬೆಂಗಳೂರು: ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ.ಆರ್.ಪುರಂ, ಬೆಂಗಳೂರು ವತಿಯಿಂದ ನಾಡ ಪ್ರಭುಕೆಂಪೇಗೌಡ ಫೌಂಡೇಷನ್, ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಕಾರದಲ್ಲಿದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿಜುಲೈ 28, 2018ರಂದು ನಡೆದ ನಾಡಪ್ರಭುಕೆಂಪೇಗೌಡರಾಷ್ಟ್ರೀಯ ಸಾಂಸ್ಕೃತಿಕಉತ್ಸವವು ವಿಜೃಂಭಣೆಯಾಗಿ ನಡೆಯಿತು. ಕರ್‌ಕರ್‌ಡೂಮ್‌ಕೋರ್ಟ್‌ನಮುಖ್ಯ ನ್ಯಾಯಾಧೀಶರಾದ ಶ್ರೀ ಎ.ಎಸ್. ಜಯಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಎಚ್.ವಿಶ್ವನಾಥ, ಮಾಜಿ ಸಚಿವರು ಹಾಗೂ ಶಾಸಕರು ಕರ್ನಾಟಕ ಸರ್ಕಾರಇವರು ವಹಿಸಿದ್ದರು. ಮುಖ್ಯಅತಿಥಿಗಳಾಗಿ ಶ್ರೀ ಎಸ್. ರಾಘವೇಂದ್ರರಾವ್, ಪ್ರಧಾನ ಕಾರ್ಯದರ್ಶಿ, ವಿಜ್ಞಾನ […]

ರಂಗೇರಿದ ಚುನಾವಣೆ… ರಾಮನಗರದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Saturday, March 31st, 2018
D-K-shivkumar

ರಾಮನಗರ: ರಾಜ್ಯ ವಿಧಾನಸಭಾ ಸಾರ್ವತಿಕ ಚುನಾವಣೆಯ ದಿನಾಂಕ ಘೊಷಣೆಯಾಗುತ್ತಿದಂತೆ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿವೆ. ಮಾಗಡಿಯಲ್ಲಿ ಕಳೆದ ಭಾನುವಾರ ಜೆಡಿಎಸ್ ಪಕ್ಷ ಪಟ್ಟಣದ ನಾಡಪ್ರಭು ಕೆಂಪೇಗೌಡರ ಕೋಟೆ ಮೈದಾನದಲ್ಲಿ ವಿಕಾಸ ಪರ್ವ ಸಮಾವೇಶ ಏರ್ಪಡಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿತ್ತು. ಈಗ ಕಾಂಗ್ರೆಸ್ ಕೂಡ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಏಪ್ರಿಲ್ 4 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಗಡಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ರಾಮನಗರ ಜಿಲ್ಲೆಯ […]

ಸಂಗೀತ ನಿರ್ದೇಶಕ ಗುರುಕಿರಣ್‌ಗೆ ಕೆಂಪೇಗೌಡ ಪ್ರಶಸ್ತಿ

Wednesday, May 3rd, 2017
Guru Kiran

ಮಂಗಳೂರು  :  ಚಿತ್ರರಂಗಕ್ಕೆ ಹಲವಾರು ಖ್ಯಾತನಾಮರನ್ನು ಕೊಟ್ಟಿರುವ ತುಳುನಾಡಿನ ಓರ್ವ ಪ್ರಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಈ ಬಾರಿ ಅತ್ಯಂತ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ ಲಭಿಸುವ ಮೂಲಕ ಅವರ ಪ್ರತಿಭೆಗೆ ಹೊಸದೊಂದು ಮನ್ನಣೆ ಸಿಕ್ಕಂತಾಗಿದೆ. ಈಗಾಗಲೇ ಮೂರು ಬಾರಿ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿರುವ ಅವರು ರಾಜ್ಯ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಈಗ ಕೆಂಪೇಗೌಡ ಪ್ರಶಸ್ತಿ ಸಂದಿರುವುದು ಆ ಸಾಲಿಗೆ ಮತ್ತೊಂದು ಸೇರ್ಪಡೆ. ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಗುರುಕಿರಣ್ ಅವರು ಹಲವಾರು ಟೀವಿ ರಿಯಾಲಿಟಿ […]

ಉಪೇಂದ್ರ ಹೊಸ ಚಿತ್ರ ‘ಶ್ರೀಮತಿ’

Wednesday, July 6th, 2011
srimathi/ ಶ್ರೀಮತಿ

ಹಿಂದಿಯ ‘ಐತ್‌ರಾಜ್’ ಚಿತ್ರದ ರೀಮೇಕ್ ‘ಶ್ರೀಮತಿ’ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದಲ್ಲಿ ತಯಾರಾಗಿದೆ. ಅಂದ ಹಾಗೆ ಈ  ಚಿತ್ರ ವಯಸ್ಕರಿಗೆ ಮಾತ್ರ. ಉಪ್ಪಿ ಜೊತೆ ಅವರ ಶ್ರೀಮತಿ ಪ್ರಿಯಾಂಕಾ ಉಪೇಂದ್ರಕೂಡಾ ಅಭಿನಯಿಸಿದ್ದಾರೆ.  ಸೆಲೀನಾ ಜೇಟ್ಲಿ, ಪ್ರೇಮ್ ಚೋಪ್ರಾ, ಕೋಟ, ಸಯ್ಯಾಜಿ ಶಿಂಧೆ ತಾರಾಗಣದ ಈ  ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹದಿ ಹರೆಯದ ಯುವಕರನ್ನು ಬೆಚ್ಚಗೆ ಮಾಡುವ ಕೆಲವು ದೃಶ್ಯಗಳಿರುವುದೇ “ವಯಸ್ಕರ ಚಿತ್ರ”ದ ಹಣೆಪಟ್ಟಿ ಬೀಳಲು ಕಾರಣ ಎನ್ನಲಾಗಿದೆ. ಜುಲೈ 8ಕ್ಕೆ ಉಪೇಂದ್ರ […]