Blog Archive

ಕೊರೊನಾ ರೋಗಿಯ ಚಿಕಿತ್ಸೆಗೆ ಇಂಡಿಯಾನ ಆಸ್ಪತ್ರೆಯ ಬಿಲ್ 1,98,664 ರೂಪಾಯಿ

Thursday, July 16th, 2020
indiana Hospital

ಮಂಗಳೂರು : ಬಡವರನ್ನ ಹಿಂಡಿ ಹಿಪ್ಪೆ ಮಾಡುವ ಆಸ್ಪತ್ರೆಗಳು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಉಸಿರಾಟ ದ ತೊಂದರೆಯಿಂದ ಇಲ್ಲಿನ ಆಸ್ಪತ್ರೆಗಳಿಗೆ ದಾಖಲಾಗ ಬೇಕಾದರೆ ಕನಿಷ್ಠ ಒಂದು ಲಕ್ಷ ಡೆಪಾಸಿಟ್ ಇಡಬೇಕು, ಮತ್ತೆ ರೋಗಿ ಗುಣ ಮುಖನಾಗಿ ಹೊರಬರಬೇಕಾದರೆ  ಬಿಲ್ ಕಟ್ಟಲು ತನ್ನ ಅಸ್ತಿಯನ್ನೇ ಮಾರಬೇಕಾದ ಪರಿಸ್ಥಿತಿ ಬರಬಹುದು. ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಇಂಡಿಯಾನ ಆಸ್ಪತ್ರೆಯು ಕೊರೊನಾ ರೋಗಿಗಳಿಂದ ಅಧಿಕ ಮೊತ್ತದ ಹಣವನ್ನು ಪಡೆಯುತ್ತಿರುವುದಾಗಿ ಆರೋಪ ಕೇಳಿಬಂದಿತ್ತು. ಕೊರೊನಾ ರೋಗಿಗೆ 1,98,664 ರೂಪಾಯಿ ಬಿಲ್ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ […]

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ವೆನ್ಲಾಕ್ ಗೆ ದಾಖಲಾದ ಯುವ ಜಾದೂಗಾರ ಕೊರೋನಾಗೆ ಮೃತ್ಯು

Saturday, July 11th, 2020
yatish

ಮಂಗಳೂರು: ಶ್ವಾಸಕೋಶದ ತೊಂದರೆಯಿಂದ ಬಳಲಿದ ಯುವ ಜಾದು ಕಲಾವಿದನೊಬ್ಬ ಖಾಸಗಿ ಆಸ್ಪತ್ರೆಯಲ್ಲಿ 1.5 ಲಕ್ಷ ರೂಪಾಯಿ ಚಿಕಿತ್ಸೆಗೆ ಖರ್ಚು ಮಾಡಿ ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ಚಿಕಿತ್ಸೆ ಫಲಿಸದೆ  ನಿಧನರಾಗಿದ್ದಾರೆ. ಮಾರ್ಗಸೂಚಿಯ ಅನುಸಾರ ಮರಣದ ಬಳಿಕ ಸ್ವಾಬ್‌ ಟೆಸ್ಟ್‌ ನಡೆಸಲಾಗಿತ್ತು. ಅದರ ವರದಿ ಬಂದಿದ್ದು ಕೊರೋನಾ ಸೋಂಕು ಇರುವುದು ಖಚಿತವಾಗಿದೆ. ಮಂಗಳೂರು ನಗರದ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರ ಹೊಸಬೆಟ್ಟು ನಿವಾಸಿ ಯತೀಶ್ ಸಾಲ್ಯಾನ್(35) ಅಕಾಲಿಕವಾಗಿ ಸಾವನ್ನಪ್ಪಿದ್ದವರು. ನಾಲ್ಕು ದಿನಗಳ ಮೊದಲು ಶ್ವಾಸಕೋಶದ ತೊಂದರೆಯಿಂದ ಬಳಲಿದ ಇವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ 1.5 ಲಕ್ಷ ರೂಪಾಯಿ ಚಿಕಿತ್ಸೆಯ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬುಧವಾರ ಮೂವರು ಬಲಿ

Wednesday, July 8th, 2020
covid-death

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬುಧವಾರ  ಬೆಳಿಗ್ಗೆ ಮೂವರು ಸಾವನ್ನಪ್ಪಿದ್ದು. ಜಿಲ್ಲೆಯಲ್ಲಿ ಕೋವಿಡ್  ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಉಳ್ಳಾಲ ಅಜಾದ್ ನಗರದ 56 ವರ್ಷದ ಮಹಿಳೆ, ಪುತ್ತೂರು ಮೂಲದ 32 ವರ್ಷದ ಮಹಿಳೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೋವಿಡ್ ವೈರಸ್ ಗೆ ಅಸುನೀಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅಜಾದ್ ನಗರದ 56 ವರ್ಷದ ಪ್ರಥಮ ಸೋಂಕಿತ ಮಹಿಳೆ ಜೂನ್ 19 […]

ಕೋವಿಡ್ ಪಾಸಿಟಿವ್ ಇರುವ ಗರ್ಭೀಣಿಗೆ ಚಿಕಿತ್ಸೆ ನಿರಾಕರಿಸಿ ಮತ್ತೆ ಒಪ್ಪಿಕೊಂಡ ಖಾಸಗಿ ಆಸ್ಪತ್ರೆ

Monday, July 6th, 2020
scs-hospital

ಮಂಗಳೂರು:  ಖಾಸಗಿ ಆಸ್ಪತ್ರೆಯೊಂದು ಕೋವಿಡ್ ಪಾಸಿಟಿವ್ ಇರುವ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಗೆ ಕೋವಿಡ್ ತಪಾಸಣೆ ಮಾಡಿದಾಗ ಪಾಸಿಟಿವ್‌ ಬಂದ ಕಾರಣ ಹೆರಿಗೆ ಮಾಡಿಸಲು ನಿರಾಕರಿಸಿದ ಎಸ್.ಸಿ.ಎಸ್ ಖಾಸಗಿ ಆಸ್ಪತ್ರೆ ಬಳಿಕ ಶಾಸಕ ಯು.ಟಿ. ಖಾದರ್‌ ಅವರ ಸೂಚನೆಯಂತೆ ಹೆರಿಗೆ ಮಾಡಿಸಲು ಸಮ್ಮತಿಸಿದ ಘಟನೆ ರವಿವಾರ ಮಂಗಳೂರಿನಲ್ಲಿ ನಡೆದಿದೆ. ಗರ್ಭಿಣಿ ಹೆರಿಗೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ಕೋವಿಡ್ ಟೆಸ್ಟ್‌ ಮಾಡಿದಾಗ ಪಾಸಿಟಿವ್‌ ಬಂದಿತ್ತು. ಆಗ ಆಸ್ಪತ್ರೆಯವರು ಹೆರಿಗೆ ಮಾಡಿಸಲು […]

ಕೋವಿಡ್ 19ರೋಗಿಗೆ ಚಿಕಿತ್ಸೆ ನೀಡಿದ ಬಂಟ್ವಾಳದ ಮಹಿಳೆಗೆ ಸೋಂಕು ದೃಢ

Sunday, April 26th, 2020
corona-narikombu

ಬಂಟ್ವಾಳ: ರಾಜ್ಯದಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಮತ್ತೋರ್ವಮಹಿಳೆಗೆ ಸೋಂಕು ದೃಢವಾಗಿದೆ. ಈಕೆ ಕೋವಿಡ್ ಸೋಂಕಿನಿಂದ ಮೃತರಾದ ಬಂತಲಾದ ಮಹಿಳೆಗೆ ಪಡೀಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಸಿಬ್ಬಂದಿಯಾಗಿರುತ್ತಾರೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ನಿವಾಸಿಯಾದ 47 ವರ್ಷದ ಮಹಿಳೆಗೆ ಸೋಂಕು ತಾಗಿರುವುದ ದೃಢವಾಗಿದೆ. ಈಕೆಗೆ ಸೋಂಕಿತ ಸಂಖ್ಯೆ 432ರ ಸಂಪರ್ಕದಿಂದ ಈ ಮಹಿಳೆಗೆ ಸೋಂಕು ತಾಗಿರುವುದು ಖಚಿತವಾಗಿದೆ. ಬಂಟ್ವಾಳದ ವೃದ್ದೆಯೋರ್ವರು ಇದೇ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಪಾರ್ಶ್ವವಾಯುಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ಧರು. […]

ವೆನ್ಲಾಕ್ ಆಸ್ಪತ್ರೆ ಕೋವಿಡ್-19 ಆಸ್ಪತ್ರೆಯನ್ನಾಗಿ ಮಾರ್ಪಾಡು, ಅಲ್ಲಿದ್ದ ಹೋರ ರೋಗಿಗಳು ಖಾಸಗಿ ಆಸ್ಪತ್ರೆಗೆ ವರ್ಗಾವಣೆ

Thursday, March 26th, 2020
Wenlock Corona

ಮಂಗಳೂರು:  ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-19 ರೋಗಿಗಳ ಆಸ್ಪತ್ರೆಯನ್ನಾಗಿ ಮಾರ್ಪಾಡುಗೊಳಿಸಿ ಇಲ್ಲಿರುವ ಇತರ ಹೋರ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ ನೀಡಿದ್ದಾರೆ. ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಈ ಮಾಹಿತಿ ನೀಡಿದ ಉಸ್ತುವಾರಿ ಸಚಿವರು, ವೆನ್ಲಾಕ್ ಆಸ್ಪತ್ರೆಯಲ್ಲಿರುವ ಇತರ ರೋಗಿಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಮತ್ತು ಉಚಿತವಾಗಿಯೇ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ. ವೆನ್ಲಾಕ್ ಆಸ್ಪತ್ರೆಯ 250 ಹಾಸಿಗೆಗಳ ಕಟ್ಟಡವನ್ನು ಸಂಪೂರ್ಣವಾಗಿ ಕೋವಿಡ್-19 ಪಾಸಿಟಿವ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗುವುದು. ಆಸ್ಪತ್ರೆಯ […]

ಮನೆಗೆ ನುಗ್ಗಿ ನಾಲ್ಕು ಮಂದಿಗೆ ಹಲ್ಲೆಗೈದ ತಂಡ, ಪೊಲೀಸರು ಗಾಯಾಳುಗಳನ್ನು ದಾರಿಯಲ್ಲಿಯೇ ಬಿಟ್ಟು ಹೋದರು

Tuesday, February 7th, 2017
Bengre Dispute

ಮಂಗಳೂರು: ಮನೆಗೆ ನುಗ್ಗಿದ ತಂಡವೊಂದು ನಾಲ್ಕು ಮಂದಿಗೆ ಹಲ್ಲೆಗೈದ ಘಟನೆ ಬೆಂಗ್ರೆಯಲ್ಲಿ ನಡೆದಿದ್ದು, ಹಲ್ಲೆಗೊಳಗಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ಸಾಗಿಸುವ ದಾರಿ ನಡುವೆ ಅರ್ಧದಲ್ಲಿಯೇ ಕೆಳಗಿಳಿಸಿ ಪೊಲೀಸರು ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗ್ರೆಯ ಮಹಮ್ಮೂದ್, ಫಮೀನಾ ದಂಪತಿ ಹಾಗೂ ಮಕ್ಕಳಾದ ಸಲ್ಮಾನ್ ಫಾರಿಶ್, ಸಮ್ನಾನ ಎಂಬವರ ಮೇಲೆ ತಂಡವೊಂದು ಮಾರಾಣಾಂತಿಕ ಜಾಗದ ವಿವಾದದ ಹಿನ್ನೆಲೆಯಲ್ಲಿ  ಹಲ್ಲೆ ನಡೆಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೆಂಗ್ರೆಯ ಅನ್ವರ್ ಹುಸೈನ್, ಮುಮ್ತಾಝ್, ಶಮೀಮಾ, ಹಂಝ ಎಂಬವರು […]

ಸಾಮಾನ್ಯ ಜನರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು: ರಮೇಶ್ ಕುಮಾರ್

Saturday, December 10th, 2016
D C office

ಮಂಗಳೂರು: ಕೇಂದ್ರ ಸರ್ಕಾರ ನೋಟ್‌ ಬ್ಯಾನ್ ಮಾಡಿದ ಬಳಿಕ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಡಿಸ್ಚಾರ್ಜ್‌ ಮಾಡುವ ವೇಳೆ ಹಳೆಯ ನೋಟು ಸ್ವೀಕರಿಸದಿರುವ ಬಗ್ಗೆ ರಾಜ್ಯದೆಲ್ಲೆಡೆ ದೂರುಗಳು ಬಂದಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಅಂಕುಶ ಹಾಕಲು ಸಜ್ಜಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಸರ್ವಾಧಿಕಾರಿ ಧೋರಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಪಿಎಂಡಿಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್) ಕಾಯ್ದೆಗೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ […]

ಕಾರು ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ: ಸಹೋದರ, ಸಹೋದರಿ ಸಾವು

Tuesday, November 8th, 2016
Car- bike Accident

ಮಂಗಳೂರು: ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರ ಹಾಗೂ ಸಹೋದರಿ ಸಾವನ್ನಪ್ಪಿರುವ ಘಟನೆ ಬಜತ್ತೂರು ಗ್ರಾಮದ ಬೆದ್ರೋಡಿ ಬಳಿ ನಡೆದಿದೆ. ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ನೀರಪಾದೆ ಜನಾರ್ದನ ಆಚಾರ್ಯ ಎಂಬುವರ ಮಗ ಶಿವಾನಂದ (19) ಹಾಗೂ ಆತನ ಅಕ್ಕ ಅಕ್ಷತಾ (25) ಮೃತರು. ಇನ್ನು, ಅಪಘಾತದಿಂದಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಹಾಸನ ಮೂಲದ ಹರ್ಷ (30), ಅವರ ಪತ್ನಿ […]

ಮೀಂಜ ಪಂ. ಸದಸ್ಯೆ ಯಶೋಧ ಆಳ್ವ ನಿಧನ

Thursday, September 1st, 2016
Yashodha-alwa

ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತ್‌ನ ಸದಸ್ಯೆ, ಹೊಸಂಗಡಿ ಬಳಿಯ ಕೊಡ್ಡ್ಡೆ ಮಜಿಬೈಲು ನಿವಾಸಿ ಚಂದ್ರಹಾಸ ಆಳ್ವರ ಪತ್ನಿ ಯಶೋಧ ಆಳ್ವ(57) ಮಂಗಳವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ ಕೆಲವು ತಿಂಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಪತಿ, ಇಬ್ಬರು ಪುತ್ರಿಯರು,ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಕಳೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಮೀಂಜ ಗ್ರಾಮ ಪಂಚಾಯತ್‌ನ 11ನೇ ವಾರ್ಡ್ ಮಜಿಬೈಲ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯರಾಗಿದ್ದ […]