Blog Archive

ಈಟ್‌ ರಿಪೀಟ್ ಎಂದು ಹೆಸರಿಟ್ಟು ಕಬಾಬ್ ಜೊತೆ ಗಾಂಜಾ ಮಾರಾಟ – ಇಬ್ಬರು ಪೊಲೀಸರ ವಶಕ್ಕೆ

Monday, August 17th, 2020
Kabab shop

ಉಡುಪಿ : ಈಟ್‌ ರಿಪೀಟ್ ಎಂಬ ಕಬಾಬ್ ಅಂಗಡಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ 1 ಕೆ.ಜಿ. 50 ಗ್ರಾಂ ಗಾಂಜಾವನ್ನು ಪಾನಕದಕಟ್ಟೆ ಎಂಬಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಪಾನಕದಕಟ್ಟೆ ಎಂಬಲ್ಲಿ ಈ ರೀತಿ ಕಬಾಬ್ ಜೊತೆ ಗಾಂಜಾವನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ಕಾವ್ರಾಡಿ ಗ್ರಾಮದ ಮಹ್ಮದ್ ತನ್ವೀರ್ (36) ಹಾಗೂ ಕಾವ್ರಾಡಿಯ ಜನತಾ ಕಾಲೋನಿಯ ಸಬೀಬ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು  ಅಕ್ರಮವಾಗಿ […]

ಗಾಂಜಾ ಸಾಗಾಟ : ಸುಂಟಿಕೊಪ್ಪದ ನಾಲ್ವರ ಬಂಧನ; 1.50ಲಕ್ಷ ರೂ. ಮೌಲ್ಯದ ಮಾಲು ವಶ

Saturday, February 22nd, 2020
sunti-koppa

ಮಡಿಕೇರಿ : ಮೈಸೂರಿನ ಮಂಡಿ ಮೊಹಲ್ಲಾದಿಂದ ಗಾಂಜಾವನ್ನು ತಂದು ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಂಟಿಕೊಪ್ಪದ ಕೆ.ಇ.ಬಿ ಬಳಿಯ ನಿವಾಸಿ, ಪೈಂಟಿಂಗ್ ಕೆಲಸ ಮಾಡುವ ಅಮ್ಜದ್ ಶರೀಫ್(31), ಚೆಟ್ಟಳ್ಳಿ ರಸ್ತೆ ನಿವಾಸಿ, ಕೂಲಿ ಕೆಲಸ ಮಾಡುವ ಸಮೀರ್(30), ಅಪ್ಪಾರಂಡ ಬಡಾವಣೆ ನಿವಾಸಿ, ಪೈಟಿಂಗ್ ಕೆಲಸ ಮಾಡುತ್ತಿದ್ದ ಅಫ್ರಿದ್(27), ಕೆ.ಇ.ಬಿ ಬಳಿಯ ನಿವಾಸಿ ಪೈಂಟಿಂಗ್ ಕೆಲಸ ಮಾಡುವ ರವಿ(27) ಎಂಬವರುಗಳೇ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ. ಬಂಧಿತರಿಂದ 1.50ಲಕ್ಷ ರೂ.ಮೌಲ್ಯದ 6 […]

ಪುತ್ತೂರು : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಬಂಧನ; 120 ಗ್ರಾಂ ಗಾಂಜಾ ವಶ

Saturday, November 9th, 2019
Haris

ಪುತ್ತೂರು : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೊರ್ವನನ್ನು ಪುತ್ತೂರು ಡಿವೈಎಸ್ಪಿ ನೇತೃತ್ವದ ವಿಶೇಷ ತಂಡವು ಗಾಂಜಾ ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕಂಬಳಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮುಹಮ್ಮದ್ ಹಾರಿಸ್ ಯಾನೆ ಹೌರಾ ಹಾರಿಸ್(26) ಬಂಧಿತ ಆರೋಪಿ. ಖಚಿತ ಮಾಹಿತಿಯನ್ನು ಆಧರಿಸಿ ಪುತ್ತೂರು ನಗರದ ಹೊರ ವಲಯದ ನೆಹರೂ ನಗರ ಎಂಬಲ್ಲಿ ಆರೋಪಿಯನ್ನು ಸೊತ್ತುಗಳ ಸಹಿತ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ನೆಹರೂ ನಗರದ ರೈಲ್ವೆ ಸೇತುವೆ ಬಳಿಯ ಅಡ್ಡರಸ್ತೆಯಲ್ಲಿ ಈತ ಗಾಂಜಾ […]

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಬಂಧನ

Friday, November 8th, 2019
Asheer

ಮಂಗಳೂರು : ಕಾವೂರಿನ ಪಂಜಿಮೊಗರು ಸಮೀಪ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಕಾವೂರು ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ನಗದು ಸಹಿತ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಪಂಜಿಮೊಗರು ನಿವಾಸಿ ಆಶಿರ್ (23) ಎಂದು ಗುರುತಿಸಲಾಗಿದೆ. ಆತನಿಂದ ಗಾಂಜಾ ಸಹಿತಿ ನಗದು ಹಾಗು ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ತೊಕ್ಕೊಟ್ಟು : ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ

Wednesday, November 6th, 2019
tokkottu

ಮಂಗಳೂರು : ಮಂಗಳೂರು ನಗರದ ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಮಿಷನರ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಗೋಡು ಕೊಡ್ಲಮೊಗರು ನಿವಾಸಿ ಅಬೂಬಕರ್ ಸಮದ್ (24), ಕಾಸರಗೋಡು ಕಡಂಬಾರು ನಿವಾಸಿಗಳಾದ ಮುಹಮ್ಮದ್ ಅಶ್ರಫ್ (30), ಮುಹಮ್ಮದ್ ಅಫ್ರಿದ್ (22) ಹಾಗೂ ಮುಹಮ್ಮದ್ ಅರ್ಷದ್ (18) ಬಂಧಿತ ಆರೋಪಿಗಳು. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ವಿವರಿಸಿದರು. ಬಂಧಿತ ಆರೋಪಿಗಳಿಂದ ಎರಡು […]

ಮಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

Friday, October 18th, 2019
Pairoz

ಮಂಗಳೂರು : ಮಂಗಳೂರು ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿ ಇರುವ ಪೆಟ್ರೋಲ್ ಪಂಪ್ ಎದುರು ಸಾರ್ವಜನಿಕ ಸ್ಥಳದಲ್ಲಿ ಗುರುವಾರದಂದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗುರುಪುರ ಕೈಕಂಬದ ನಿವಾಸಿ ಮಹಮ್ಮದ್ ಪೈರೋಜ್ (23) ಎಂದು ಗುರುತಿಸಲಾಗಿದ್ದು, ಇತನಿಂದ ಸುಮಾರು 127 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನನ್ನು ವಶಕ್ಕೆ ಪಡೆಯಲಾಗಿದೆ.    

ಬೆಂಗಳೂರು : ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ಪೊಲೀಸರ ದಾಳಿ

Wednesday, October 9th, 2019
parappana

ಬೆಂಗಳೂರು : ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಜೈಲಿನಲ್ಲೂ ಅಕ್ರಮ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ನಗರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಈ ದಾಳಿ ನಡೆದಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ 60 ಮಂದಿ ತಂಡ ದಾಳಿ ನಡೆಸಿ ಕೈದಿಗಳ ವಿಚಾರಣೆ ನಡೆಸಿದೆ. ಜೈಲಿನೊಳಗೆ ಗಾಂಜಾ ಬಳಕೆಯಾಗುತ್ತಿದೆ ಎಂಬ ಆರೋಪದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಜೈಲಿನೊಳಗೆ ಮಾರಕಾಯುಧಗಳು […]

ತಪಾಸಣೆ ಸಮಯದಲ್ಲಿ ಕಾರವಾರ ರೈಲ್ವೆಯಲ್ಲಿ 6.30 ಕೆಜಿ ಗಾಂಜಾ ಪತ್ತೆ

Thursday, October 3rd, 2019
karavara

ಕಾರವಾರ : ರೈಲ್ವೆಯಲ್ಲಿ ತಪಾಸಣೆ ವೇಳೆಯಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪರಿಶೀಲನೆ ನಡೆಸಿದಾಗ ಸುಮಾರು 6.30 ಕೆಜಿ ಗಾಂಜಾ ರೈಲ್ವೆ ಪೊಲೀಸರಿಗೆ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮುಂಬಯಿ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲು ಕಾರವಾರದ ಶಿರವಾಡ ಬಳಿ ನಿಂತಾಗ ಕರ್ತವ್ಯದಲ್ಲಿದ್ದ ಆರ್ಪಿಎಫ್ ಕಾನ್ಸ್ ಸ್ಟೇಬಲ್ ಸಾಜಿರ್ ಅವರು ಸಾಮಾನ್ಯ ಬೋಗಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸೇನಾ ಬ್ಯಾಗಿನ ಬಣ್ಣದಂಥ ಬ್ಯಾಗೊಂದು ಲಗೇಜ್ ಇಡುವ […]

ಉಡುಪಿಯಲ್ಲಿ ಪೊಲೀಸರ ಕಾರ್ಯಾಚರಣೆ : ಗಾಂಜಾ ಸಹಿತ ಇಬ್ಬರು ಆರೋಪಿಗಳ ಬಂಧನ

Wednesday, September 25th, 2019
udupi

ಉಡುಪಿ : ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಪೊಲೀಸರು, ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗಾಂಜಾ ಸೇರಿದಂತೆ ಅಂದಾಜು 6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಉತ್ತರಪ್ರದೇಶ ಮೂಲದ ಪಿಯೂಷ್ ಅಗರ್‌ವಾಲ್(20 ವರ್ಷ), ರಿಷಬ್ ರಾಜ್‌ಸಿಂಗ್ (21 ವರ್ಷ) ಎಂದು ಗುರುತಿಸಲಾಗಿದೆ. ಆರೋಪಿಗಳು ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪದ ಮನೆಯೊಂದರಲ್ಲಿ ಕಾನೂನು ಬಾಹಿರವಾಗಿ 3,50,000/- ಮೌಲ್ಯದ ಗಾಂಜಾ ಮಾರಾಟ ಮಾಡಲು ದಾಸ್ತಾನು ಇರಿಸಿದ್ದರು. ಅಂದಾಜು 300 ರೂಪಾಯಿ ಮೌಲ್ಯದ ತೂಕ […]

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕ ಬಂಧನ

Saturday, September 21st, 2019
Pradeep-poojari

ಬೆಳ್ತಂಗಡಿ : ಇಲ್ಲಿನ ಗಂಗೋತ್ರಿ ವಸತಿ ಗ್ರಹದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು, ಮಂಗಳೂರಿನ ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (26) ಎಂದು ಗುರುತಿಸಲಾಗಿದೆ. ವಸತಿ ಗ್ರಹದ ಬಳಿ ತನ್ನ ದ್ವಿಚಕ್ರ ವಾಹನದೊಂದಿಗೆ ಅನುಮಾನಸ್ಪದವಾಗಿ ನಿಂತಿದ್ದ ಯುವಕನನ್ನು ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಆತನ ದ್ವಿಚಕ್ರ ವಾಹನದಲ್ಲಿದ್ದ ಸುಮಾರು 6೦ ಗ್ರಾಂ ಗಾಂಜಾ ಪತ್ತೆಯಾಗಿದೆ. ಗಾಂಜಾ ಸಮೇತ ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಮಂಗಳೂರು ಸಬ್ ಜೈಲ್ […]